ಶಿವಮೊಗ್ಗ: ರಾಜ್ಯದ ಗಮನ ಸೆಳೆದಿರುವ ಶಿವಮೊಗ್ಗ ಹಿಂದು ಮಹಾಮಂಡಳದ ಗಣಪನ ಮೆರವಣಿಗೆ ಶಾಂತಯುತವಾಗಿ ಸಾಗುತ್ತಿದೆ. ಬೆಳಗ್ಗೆ 11 ಗಂಟೆಗೆ ವಿಸರ್ಜನಾ ಪೂರ್ವ ಮೆರವಣಿಗೆಯು ಸಂಜೆ 5:30 ರ ಸುಮಾರಿಗೆ ಗಾಂಧಿ ಬಜಾರ್ ದಾಟಿ ಮುಂದೆ ಸಾಗಿತು. ಈ ವೇಳೆ ಯುವ ಸಮೂಹ ಸೇರಿದಂತೆ ಮಹಿಳೆಯರು ಹಾಗೂ ಮಕ್ಕಳು ಮೆರವಣಿಗೆಯಲ್ಲಿ ಸಾಗಿದ್ದು ವಿಶೇಷವಾಗಿತ್ತು.
ಶಿವಮೊಗ್ಗ: ಶಾಂತಿಯುತವಾಗಿ ಸಾಗುತ್ತಿರುವ ಹಿಂದೂ ಮಹಾಮಂಡಳ ಗಣಪನ ಮೆರವಣಿಗೆ (ETV Bharat) ದಾರಿ ಉದ್ದಕ್ಕೂ ಭಜನೆ, ಡ್ಯಾನ್ಸ್ ನೊಂದಿಗೆ ಯುವ ಸಮೂಹ ಸಾಗಿತ್ತು. ಗಾಂಧಿ ಬಜಾರ್ ನಲ್ಲಿ ಯುವಕರು ಕರ್ಪೂರ ಹಚ್ಚಿ ಡ್ಯಾನ್ಸ್ ಮಾಡಿದರು. ಗಾಂಧಿ ಬಜಾರ್ ನಲ್ಲಿ ರಾಷ್ಟ್ರ ಭಕ್ತ ಬಳಗದ ಕೆ.ಎಸ್.ಈಶ್ವರಪ್ಪ ಹಾಗೂ ಇವರ ಪುತ್ರ ಕೆ.ಈ.ಕಾಂತೇಶ್ ಅವರು ಸಾಗಿದಾಗ ಅಭಿಮಾನಿಗಳು ಅವರನ್ನು ಎತ್ತಿಕೊಂಡು ಕುಣಿದರು. ಇದೇ ವೇಳೆ, ಭಜನೆ ಮಾಡುತ್ತಿದ್ದ ಯುವಕರೊಂದಿಗೆ ಸಂಸದ ಬಿ.ವೈ.ರಾಘವೇಂದ್ರ ಸಾಗಿದರು. ಅಲ್ಲಲ್ಲಿ ಸೆಲ್ಪಿಗೆ ನಗು ಬಿರಿದರು.
ಶಿವಪ್ಪ ನಾಯಕ ವೃತ್ತದಲ್ಲಿ ಪಟಾಕಿ ಸಿಡಿಸಿ, ಆಕಾಶದಲ್ಲಿ ಬಣ್ಣ ಬಣ್ಣದ ಚಿತ್ತಾರ (ETV Bharat) ಇನ್ನು ಗಣಪ ಗಾಂಧಿ ಬಜಾರ್ ದಾಟುತ್ತಿದ್ದಂತಯೇ ಶಿವಪ್ಪ ನಾಯಕ ವೃತ್ತದಲ್ಲಿ ಪಟಾಕಿ ಸಿಡಿಸಿ, ಆಕಾಶದಲ್ಲಿ ಬಣ್ಣ ಬಣ್ಣದ ಚಿತ್ತಾರವನ್ನು ಮೂಡಿಸಿದರು. ಅಮೀರ್ ಅಹಮದ್ ವೃತ್ತದಿಂದ ಗಣಪ ನೆಹರೂ ರಸ್ತೆಯ ಕಡೆ ಸಾಗಿತು. ಟಿ.ಶೀನಪ್ಪ ಶೆಟ್ಟಿ ವೃತ್ತದಲ್ಲಿ ಡಿಜೆಗೆ ಯುವಕ- ಯುವತಿಯರು ಕುಣಿದು ಕುಪ್ಪಳಿಸಿದರು. ಗಣಪತಿಯನ್ನು ಬೆಳಗಿನ ಜಾವ ಭೀಮನ ಮಡುವಿನಲ್ಲಿ ವಿಸರ್ಜನೆ ಮಾಡುವ ಸಾಧ್ಯತೆ ಇದೆ. ಮೆರವಣಿಗೆ ಉದ್ದಕ್ಕೂ ಎಸ್ಪಿ ಜಿ.ಕೆ.ಮಿಥುನ್ ಕುಮಾರ್ ಪೊಲೀಸ್ ಬಿಗಿ ಬಂದೋ ಬಸ್ತ್ ವ್ಯವಸ್ಥೆ ಮಾಡಿದ್ದರು. ಮೆರವಣಿಗೆಯಲ್ಲಿ ಡಿಸಿ ಗುರುದತ್ತ ಹೆಗಡೆ ಸಹ ಹಾಜರಿದ್ದರು.
ಶಿವಮೊಗ್ಗ: ಶಾಂತಿಯುತವಾಗಿ ಸಾಗುತ್ತಿರುವ ಹಿಂದೂ ಮಹಾಮಂಡಳ ಗಣಪನ ಮೆರವಣಿಗೆ (ETV Bharat) ಇದನ್ನು ಓದಿ: ಐತಿಹಾಸಿಕ ಬೆಳಗಾವಿ ಗಣೇಶೋತ್ಸವದಲ್ಲಿ ರೈತ ಗಲ್ಲಿ ಹವಾ; ಮನೆ ಮುಂದೆ ಸರತಿ ಸಾಲಿನಲ್ಲಿ ಬೆನಕನ ದರ್ಶನ - Raitha Galli Ganeshotsava