ETV Bharat / state

ಶರಾವತಿ ಹಿನ್ನೀರಿನ ಅಧಿದೇವತೆ ಸಿಗಂದೂರು ಚೌಡೇಶ್ವರಿ ಜಾತ್ರಾ ಮಹೋತ್ಸವ: ಹರಿದು ಬಂದ ಭಕ್ತರ ದಂಡು - SIGANDUR CHOUDESHWARI JATRA

ಮಕರ ಸಂಕ್ರಾಂತಿಯಾದ ಇಂದು ಆರಂಭಗೊಂಡು ಎರಡು ದಿನಗಳಕಾಲ ಚೌಡೇಶ್ವರಿ ದೇವಿಯ ಜಾತ್ರೆ ನಡೆಯಲಿದೆ.

ಚೌಡೇಶ್ವರಿ ಜಾತ್ರಾ ಮಹೋತ್ಸವ
ಚೌಡೇಶ್ವರಿ ಜಾತ್ರಾ ಮಹೋತ್ಸವ (ETV Bharat)
author img

By ETV Bharat Karnataka Team

Published : Jan 14, 2025, 7:00 PM IST

Updated : Jan 14, 2025, 7:48 PM IST

ಶಿವಮೊಗ್ಗ: ಶರಾವತಿ ಹಿನ್ನೀರಿನ ಅಧಿದೇವತೆ ಸಿಗಂದೂರಿನ ಚೌಡೇಶ್ವರಿ ದೇವಿಯ ಜಾತ್ರೆಯು ಮಂಗಳವಾರ ಅತ್ಯಂತ ವಿಜೃಂಭಣೆಯಿಂದ ಪ್ರಾರಂಭವಾಗಿದೆ. ಮಕರ ಸಂಕ್ರಾಂತಿಯಿಂದ ಎರಡು ದಿನಗಳ ಕಾಲ ನಡೆಯುವ ಜಾತ್ರಾ ಮಹೋತ್ಸವಕ್ಕೆ ನಾಡಿನಾದ್ಯಂತದಿಂದ ಭಕ್ತರು ಆಗಮಿಸುತ್ತಾರೆ. ಮಕರ ಸಂಕ್ರಮಣ ಜಾತ್ರಾ ಮಹೋತ್ಸವದ ಮೊದಲ ದಿನ ದೇವಿಗೆ ವಿಶೇಷ ಪೂಜೆ ನೇರವೇರಿತು.

ಮಂಗಳವಾರ ಬೆಳಗ್ಗೆ 5 ಗಂಟೆಯಿಂದಲೇ ಚೌಡೇಶ್ವರಿ ದೇವಿಗೆ ಪಂಚಾಮೃತ ಅಭಿಷೇಕ, ಮಹಾಭಿಷೇಕ, ಅರ್ಚನೆ ನಡೆಸಲಾಯಿತು‌. ನಂತರ ದೇವಿಯ ಮೂಲ ಸ್ಥಾನವಾದ ಸಿಗೇ‌ ಕಣಿವೆಯಲ್ಲಿ ನವ ಚಂಡಿಕಾ ಹೋಮ ನೆರವೇರಿತು. ಹೋಮ ಹವನ ಪೂರ್ವಾಹುತಿಯಲ್ಲಿ ಧರ್ಮಾಧಿಕಾರಿ ಡಾ.ಎಸ್.ರಾಮಪ್ಪ ಕುಟುಂಬ ಸಮೇತರಾಗಿ ಭಾಗವಹಿಸಿ, ವಿವಿಧ ಧಾರ್ಮಿಕ ವಿಧಿ ವಿಧಾನಗಳಲ್ಲಿ ಭಾಗಿಯಾದರು. ಸಿಗೇ ಕಣಿವೆಯ ಮೂಲ ಸ್ಥಳದಿಂದ ನೂರಾರು ಮಹಿಳೆಯರು ಪೂರ್ಣಕುಂಭ ಕಳಶ ಹೊತ್ತು ಚೌಡೇಶ್ವರಿ ದೇವಿಗೆ ಉಘೇ ಉಘೇ ಎಂದು ಈಗಿನ ಸಿಗಂದೂರು ಗ್ರಾಮದತ್ತ ಹೆಜ್ಜೆ ಹಾಕಿದರು. ಸಿಗೇ ಕಣಿವೆಯ ಮೂಲ ಸ್ಥಾನದಲ್ಲಿ ದೇವಿಯ ಉದ್ಭವ ಸ್ಥಳದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು.

ಚೌಡೇಶ್ವರಿ ಜಾತ್ರಾ ಮಹೋತ್ಸವ (ETV Bharat)

ಸಿಗೇ ಕಣಿವೆಯಿಂದ ಅಖಂಡ ಜ್ಯೋತಿ ಮೆರವಣಿಗೆ: ಸಿಗೇ ಕಣಿವೆಯಿಂದ ದೇವಾಲಯದ ತನಕ ಪ್ರತಿ ವರ್ಷ ಜರುಗುವ ಅಖಂಡ ಜ್ಯೋತಿ ಮೆರವಣಿಗೆಗೆ ಸಿಗಂದೂರು ದೇವಾಲಯದ ಧರ್ಮಾಧಿಕಾರಿ ಡಾ.ಎಸ್. ಧರ್ಮಪ್ಪನವರ ಸಮ್ಮುಖದಲ್ಲಿ ಬೆಂಗಳೂರು ನಗರ ಜಿಲ್ಲಾಧಿಕಾರಿ ಜಗದೀಶ್​ ಜಿ. ಚಾಲನೆ ನೀಡಿದರು. ಜಾತ್ರಾ ಮಹೋತ್ಸವಕ್ಕೆ ಸಾಗರ ಶಾಸಕ ಗೋಪಾಲಕೃಷ್ಣ ಬೇಳೂರು ಚಾಲನೆ ನೀಡಿದರು. ಅಥಿತಿಗಳಾಗಿ ಚಿಕ್ಕಬಳ್ಳಾಪುರ ಲೋಕಾಯುಕ್ತ ಡಿವೈಎಸ್​ಪಿ ಪಿ.ವೀರೇಂದ್ರ ಕುಮಾರ್, ಮಾಜಿ ಸಚಿವ ಕಾಗೋಡು ತಿಮ್ಮಪ್ಪ, ಈಡೀಗ ಸಂಘದ ರಾಜ್ಯ ಘಟಕದ ಅಧ್ಯಕ್ಷ ತಿಮ್ಮೇಗೌಡ, ಈಡೀಗ ಸಂಘದ ಜಿಲ್ಲಾಧ್ಯಕ್ಷ ಶ್ರೀಧರ್ ಹುಲ್ತಿಕೊಪ್ಪ, ಕೆಡಿಪಿ ಸದಸ್ಯ ಸತ್ಯನಾರಾಯಣ ಸತ್ಯನಾರಾಯಣ ಜಿ.ಟಿ., ತಾಲೂಕು ಪಶು ವೈದ್ಯಕೀಯ ನಾಮ ನಿರ್ದೇಶಕ ಸದಸ್ಯ ಗಣೇಶ ಜಾಕಿ, ಶ್ರೀದೇವಿ ರಾಮಚಂದ್ರ, ಜಿಲ್ಲಾ ಮಟ್ಟದ ವಿವಿಧ ಸದಸ್ಯರು, ಕರೂರು ಹೋಬಳಿಯ ಹಲವು ಗ್ರಾಮ ಪಂಚಾಯಿತಿಗಳ ಅಧ್ಯಕ್ಷರು, ಸದಸ್ಯರು ಗಣ್ಯರು ಉಪಸ್ಥಿತರಿದ್ದರು.

ಚೌಡೇಶ್ವರಿ ಜಾತ್ರಾ ಮಹೋತ್ಸವ
ಚೌಡೇಶ್ವರಿ ಜಾತ್ರಾ ಮಹೋತ್ಸವ (ETV Bharat)

ಸಿಗಂದೂರಿಗೆ ಹರಿದು ಬಂದ ಭಕ್ತ ಸಾಗರ: ಸಿಗಂದೂರು ಜಾತ್ರಾ ಮಹೋತ್ಸವದ ಮೂದಲ ದಿನವಾದ ಇಂದು ರಾಜ್ಯದ ವಿವಿಧೆಡೆಯಿಂದ ಸಾವಿರಾರು ಭಕ್ತರು ಆಗಮಿಸಿದ್ದರು. ಹೆಚ್ಚಿನ ಸಂಖ್ಯೆಯಲ್ಲಿ ಮಹಿಳಾ ಭಕ್ತರು ಆಗಮಿಸಿ ದೇವಿಗೆ ಹೂವು, ಅಕ್ಕಿ, ಬೆಲ್ಲ, ವಿವಿಧ ಸೇವೆ ನೀಡಿ ಹರಕೆ ಪೂಜೆ ಸಲ್ಲಿಸಿ, ಮುಡಿಗಂಧ ಪ್ರಸಾದ ಸ್ವೀಕರಿಸಿದರು.

ಚೌಡೇಶ್ವರಿ ಜಾತ್ರಾ ಮಹೋತ್ಸವ
ಚೌಡೇಶ್ವರಿ ಜಾತ್ರಾ ಮಹೋತ್ಸವ (ETV Bharat)

ಅನ್ನ ದಾಸೋಹದಲ್ಲಿ ತುಂಬಿ ತುಳಿಕಿದ ಭಕ್ತರು: ಸಹಸ್ರಾರು ಭಕ್ತರು ಸರತಿ ಸಾಲಿನಲ್ಲಿ ನಿಂತು ದೇವಿಯ ಅನ್ನ ಪ್ರಸಾದ ಪಡೆದರು. ಭಕ್ತಾದಿಗಳು ಸಂಖ್ಯೆ ಹೆಚ್ಚಳ ಹಿನ್ನೆಲೆ ನಿರಂತರವಾಗಿ ಬೆಳಗ್ಗೆ, ಮಧ್ಯಾಹ್ನ, ಸಂಜೆ ದೇವಸ್ಥಾನ ಸಮಿತಿ ಪ್ರಸಾದ ವಿನಿಯೋಗ ವ್ಯವಸ್ಥೆ ಮಾಡಿದೆ.

ಚೌಡೇಶ್ವರಿ ಜಾತ್ರಾ ಮಹೋತ್ಸವ
ಚೌಡೇಶ್ವರಿ ಜಾತ್ರಾ ಮಹೋತ್ಸವ (ETV Bharat)

ಲಾಂಚ್​​ನಲ್ಲಿ ಹೆಚ್ಚಿದ ಜನ ದಟ್ಟಣೆ: ಮಂಗಳವಾರ ಜಾತ್ರಾ ಮಹೋತ್ಸವದ ಪ್ರಥಮ ದಿನ ರಾಜ್ಯದ ಮೂಲೆ ಮೂಲೆಯಿಂದ ಆಗಮಿಸಿದ ಭಕ್ತರು ಟ್ಯಾಕ್ಸಿ, ಬಸ್​ ದ್ವಿಚಕ್ರ ವಾಹನದಲ್ಲಿ ಆಗಮಿಸಿ, ಅಂಬಾರಗೊಡ್ಲು ತಟದಲ್ಲಿ ವಾಹನ ನಿಲ್ಲಿಸಿ, ಹೊಳೆಬಾಗಿಲು ಲಾಂಚ್ ಮೂಲಕ ಸಿಗಂದೂರು ದೇವಸ್ಥಾನ ಭಾಗಕ್ಕೆ ಬಂದರು. ಜನ ದಟ್ಟಣೆ ಹೆಚ್ಚಾದ ಹಿನ್ನೆಲೆಯಲ್ಲಿ ಭಕ್ತರು, ಸ್ಥಳೀಯರು ಪ್ರಯಾಣ ಮಾಡಲು ಹರಸಾಹಸ ಪಟ್ಟರು.

ಚೌಡೇಶ್ವರಿ ಜಾತ್ರಾ ಮಹೋತ್ಸವ
ಚೌಡೇಶ್ವರಿ ಜಾತ್ರಾ ಮಹೋತ್ಸವ (ETV Bharat)

ಧರ್ಮಾಧಿಕಾರಿ ಡಾ.ರಾಮಪ್ಪ ಮಾತನಾಡಿ, ಇದು ನಮ್ಮ ಮನೆ ದೇವರು. ಲಿಂಗನಮಕ್ಕಿ ಅಣೆಕಟ್ಟೆಯಿಂದ ಮುಳುಗಡೆಯಾದ ಮೇಲೆ ನಾವೆಲ್ಲ ಬೇರೆ ಕಡೆ ನೆಲಸಬೇಕಾಯಿತು. ಈ ವೇಳೆ ನಮ್ಮ ಮನೆ ದೇವರಾದ ಚೌಡೇಶ್ವರಿ ದೇವಿಯನ್ನು ಅಲ್ಲೆ ಬಿಟ್ಟು ಬರಬೇಕಾಯಿತು. ನಂತರ ಪುನಃ ಇಲ್ಲಿ ಪ್ರತಿಷ್ಠಾಪಿಸಿ ಪೂಜಿಸಲು ಪ್ರಾರಂಭಿಸಿದೆವು. ದೇವಿಯ ಕೃಪೆಯಿಂದ ಭಕ್ತರು ಬರುವುದೂ ಹೆಚ್ಚಾಯಿತು. ಮೊದಲು ಮಕರ ಸಂಕ್ರಾಂತಿಯಂದು ಮಾತ್ರ ಒಂದೇ ದಿನ ಜಾತ್ರೆ ನಡೆಸುತ್ತಿದ್ದೆವು. ಆದರೆ, ಭಕ್ತರು ಹೆಚ್ಚಿಗೆ ಅಗಮಿಸುವ ಕಾರಣಕ್ಕೆ ಎರಡು ದಿನ ಜಾತ್ರೆ ನಡೆಸುತ್ತಿದ್ಧೇವೆ. ದೇವಿಗೆ ವಿಶೇಷ ಪೂಜೆ, ವಿಶೇಷ ಅಲಂಕಾರ ಮಾಡಲಾಗುತ್ತದೆ. ಸಂಜೆ ವೇಳೆ ಸಾಂಸ್ಕೃತಿಕ‌ ಕಾರ್ಯಕ್ರಮ ಹಾಗೂ ಭಕ್ತರಿಗೆ ಪ್ರತಿ ದಿನ ಪ್ರಸಾದದ ವ್ಯವಸ್ಥೆ ಮಾಡಲಾಗಿದೆ ಎಂದರು.

ಚೌಡೇಶ್ವರಿ ಜಾತ್ರಾ ಮಹೋತ್ಸವ
ಚೌಡೇಶ್ವರಿ ಜಾತ್ರಾ ಮಹೋತ್ಸವ (ETV Bharat)

ಬೆಂಗಳೂರಿನಿಂದ ಆಗಮಿಸಿದ ಭಕ್ತೆ ನಾಗಜ್ಯೋತಿ ಮಾತನಾಡಿ, ನಾವು ಇಲ್ಲಿಗೆ ಕಳೆದ 10 ವರ್ಷಗಳಿಂದ ಆಗಮಿಸುತ್ತಿದ್ದೇವೆ. ಇಲ್ಲಿಗೆ ವರ್ಷಕ್ಕೆರಡು ಭಾರಿ ನಮ್ಮ ಕುಟುಂಬ ಸಮೇತ ಬರುತ್ತೇವೆ. ಇಂದು ನಮ್ಮ‌ ಕುಟುಂಬದವರು ಚಂಡಿಕಾಯಾಗ ನಡೆಸಿದೆವು. ಇಲ್ಲಿಗೆ ಬಂದ ಮೇಲೆ ಒಂದು ರೀತಿಯ ಶಾಂತಿ, ನೆಮ್ಮದಿ ಸಿಗುತ್ತದೆ. ಮೊದಲು ಸಣ್ಣದಾಗಿದ್ದ ದೇವಾಲಯ ಈಗ ದೊಡ್ಡದಾಗಿದೆ ಎಂದರು.

ಚೌಡೇಶ್ವರಿ ಜಾತ್ರಾ ಮಹೋತ್ಸವ
ಚೌಡೇಶ್ವರಿ ಜಾತ್ರಾ ಮಹೋತ್ಸವ (ETV Bharat)

ಭಕ್ತ ದಾವಣಗೆರೆಯ ನಾಗಣ್ಣ ಮಾತನಾಡಿ,‌ ನಾನು ದಾವಣಗೆರೆಯಿಂದ ಇಲ್ಲಿಗೆ ಪ್ರತಿ ವರ್ಷ ಬರುತ್ತೇನೆ. ನಾನು‌ ಇಲ್ಲಿಗೆ ಬಂದಾಗ ಏನೂ ಇರಲಿಲ್ಲ. ನಾನು‌ ಮೊದಲು ರಸ್ತೆ ಬದಿ ಗಾಡಿ ಹೋಟೆಲ್ ಮಾಡಿ‌ಕೊಂಡಿದ್ದೆ. ಈಗ ಸಿಗಂದೂರು ಹೋಟೆಲ್ ಮಾಡಿಕೊಂಡಿದ್ದೇೆ. ಸಿಗಂದೂರಿಗೆ ಬಂದು ಹೋದ ಮೇಲೆ ಹೋಟೆಲ್ ಮಾಡಿದೆ. ಜಮೀನು ಖರೀದಿಸಿದೆ. ಮನೆ ಕಟ್ಟಿಸಿದೆ‌. ನನ್ನ ಮಗ ಈಗ ಇಂಜಿನಿಯರಿಂಗ್ ಓದುತ್ತಿದ್ದಾನೆ. ತಾಯಿ ಕ್ಷೇತ್ರಕ್ಕೆ ಬಂದು ಹೋದ ಮೇಲೆ ನನಗೆ ತುಂಬ ಅನುಕೂಲವಾಗಿದೆ ಎಂದರು.

ಇದನ್ನೂ ಓದಿ: ಹಾವೇರಿಯ ತೋಪಿನ ದುರ್ಗಾದೇವಿಗಿಲ್ಲ ಪ್ರಾಣಿ ಬಲಿ: ಇಲ್ಲಿ ಹಣ್ಣುಕಾಯಿಯೇ ನೈವೇದ್ಯ

Last Updated : Jan 14, 2025, 7:48 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.