ETV Bharat / state

15 ವರ್ಷಗಳ ಹಿಂದೆ ಸ್ಥಗಿತಗೊಂಡಿದ್ದ ಶನಿವಾರ ಸಂತೆ ಮತ್ತೆ ಆರಂಭ: ಕುರಿ, ಮೇಕೆಗಳ ಮಾರಾಟಕ್ಕೆ ವೇದಿಕೆ ಸಿದ್ಧ - SATURDAY FAIR RESUMED

ಕಡಕೋಳದಲ್ಲಿ 1 ಎಕರೆ ಪ್ರದೇಶದಲ್ಲಿ ಸುಮಾರು 15 ಲಕ್ಷ ರೂ. ವೆಚ್ಚದಲ್ಲಿ ಕುರಿ, ಮೇಕೆ ಮತ್ತು ಜಾನುವಾರಗಳ ಉಪ ಮಾರುಕಟ್ಟೆ ಪ್ರಾಂಗಣ ತೆರೆಯಲಾಗಿದೆ.

SATURDAY FAIR RESUMED
ಶನಿವಾರ ಸಂತೆ ಮತ್ತೆ ಆರಂಭ (ETV Bharat)
author img

By ETV Bharat Karnataka Team

Published : 3 hours ago

ಮೈಸೂರು: ಮೈಸೂರು ತಾಲೂಕಿನ ವ್ಯಾಪ್ತಿಯಲ್ಲಿ ಸುಮಾರು 15 ವರ್ಷಗಳ ಹಿಂದೆ ನಿಂತು ಹೋಗಿದ್ದ, ಶನಿವಾರ ಸಂತೆ ಈಗ ಮತ್ತೆ ಪುನರಾರಂಭವಾಗಲಿದೆ. ಈ ಮೂಲಕ ಕುರಿ, ಮೇಕೆ ಹಾಗೂ ಜಾನುವಾರಗಳ ಮಾರಾಟ ಹಾಗೂ ಖರೀದಿಗೆ ಬೇರೆ ಬೇರೆ ತಾಲೂಕಿಗೆ ತೆರಳುತಿದ್ದ ಕುರಿಗಾಹಿಗಳು ಹಾಗೂ ಗ್ರಾಹಕರು ಹತ್ತಿರದ ಸ್ಥಳದಲ್ಲಿಯೇ ಭೇಟಿಯಾಗಿ, ವ್ಯಾಪಾರ ವಾಹಿವಾಟು ಮಾಡಲಿದ್ದಾರೆ.

ಮಹದೇಶ್ವರ ಕುರಿ ಮತ್ತು ಉಣ್ಣೆ ಉತ್ಪನ್ನ ಸಹಕಾರ ಸಂಘದ ಸದಸ್ಯರು ಹಾಗೂ ಸ್ಥಳೀಯ ರೈತರ ಒತ್ತಾಯದ ಮೇರೆಗೆ ಕೃಷಿ ಮಾರಾಟ ಇಲಾಖೆ, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (ಎಪಿಎಂಸಿ, ಬಂಡಿಪಾಳ್ಯ), ಕಡಕೋಳದಲ್ಲಿ 15 ಲಕ್ಷ ರೂ. ವೆಚ್ಚದಲ್ಲಿ 1 ಎಕರೆ ಪ್ರದೇಶದಲ್ಲಿ ಸುಸಜ್ಜಿತವಾದ ಕುರಿ, ಮೇಕೆ ಮತ್ತು ಜಾನುವಾರಗಳ ಉಪ ಮಾರುಕಟ್ಟೆ ಪ್ರಾಂಗಣ ತೆರೆಯುವ ಮೂಲಕ ನಿಂತು ಹೋಗಿದ್ದ ಶನಿವಾರ ಸಂತೆಗೆ ಮರುಜೀವ ನೀಡಿದೆ.

ಇದೇ ಸ್ಥಳದಲ್ಲಿ 50 ವರ್ಷಗಳಿಂದ ಶನಿವಾರ ಸಂತೆ ನಡೆಯುತ್ತಿತ್ತು. ಮೈಸೂರಿನ ನಂಜನಗೂಡು, ಹುಣಸೂರು, ಪಿರಿಯಾಪಟ್ಟಣ, ತಿ.ನರಸೀಪುರ, ಎಚ್.ಡಿ.ಕೋಟೆ, ಕೆ.ಆರ್.ನಗರ ತಾಲೂಕು ಸೇರಿದಂತೆ ಸುತ್ತಮುತ್ತ ಜಿಲ್ಲೆಗಳಿಂದ ಕುರಿ, ಮೇಕೆ ಹಾಗೂ ಜಾನುವಾರು ಮಾರಾಟ ಹಾಗೂ ಖರೀದಿ ಇಲ್ಲಿ ನಡೆಯುತ್ತಿತ್ತು. ಆದರೆ, 15 ವರ್ಷಗಳ ಹಿಂದೆ ಇಲ್ಲಿ ನಡೆಯುತ್ತಿದ್ದ ವ್ಯಾಪಾರ ಏಕಾಏಕಿ ನಿಂತು ಹೋಯಿತು.

ಮೈಸೂರು ತಾಲೂಕಿನ ಕುರಿಗಾಹಿಗಳು ಹಾಗೂ ಕುರಿ, ಮೇಕೆ, ಜಾನುವಾರುಗಳನ್ನು ಖರೀದಿ ಮಾಡಲು ಬೇರೆ ಬೇರೆ ತಾಲೂಕುಗಳಲ್ಲಿ ನಡೆಯುತ್ತಿದ್ದ ಶನಿವಾರ ಸಂತೆ ತೆರಳುತ್ತಿದ್ದ ಗ್ರಾಹಕರಿಗೆ ಇದು ತುಂಬಾ ಅನುಕೂಲವಾಗಿದೆ. ಕಡಕೋಳದಲ್ಲಿ ಕೈಗಾರಿಕಾ ಪ್ರದೇಶದ ಜೊತೆಯಲ್ಲಿ ಇನ್ನು ಹಳ್ಳಿಯ ವಾತಾವರಣ ಇರುವುದರಿಂದ ಕುರಿ, ಮೇಕೆ ಸಾಕಾಣೆ ಮಾಡುತ್ತಿದ್ದ ಸ್ಥಳೀಯರಿಗೂ ಅನುಕೂಲವಾಗಿದೆ.

2017ರಲ್ಲಿ ನಿರ್ಮಾಣಕ್ಕೆ ಆದೇಶ: 2017ರ ಜನವರಿ 24ರಂದು ಉಪ ಮಾರುಕಟ್ಟೆ ಪ್ರಾಂಗಣ ನಿರ್ಮಾಣ ಮಾಡಲು ಆದೇಶ ಮಾಡಲಾಯಿತು. ಹಲವಾರು ತೊಡಕುಗಳಿಂದಾಗಿ ಈ ವರ್ಷ ಸಂಪೂರ್ಣವಾಗಿ ನಿರ್ಮಾಣಗೊಂಡು ಉದ್ಘಾಟನೆಗೆ ತಯಾರಾಗಿದೆ. ಇದರ ಉಸ್ತುವಾರಿ ಮಹದೇಶ್ವರ ಕುರಿ ಮತ್ತು ಉಣ್ಣೆ ಉತ್ಪನ್ನ ಸಹಕಾರ ಸಂಘಕ್ಕೆ ನೀಡಲಾಗಿದೆ. ಈ ಸಂಘದವರು ಮಾರಾಟಗಾರರಿಗೆ ಹಾಗೂ ಗ್ರಾಹಕರಿಗೆ ಸೌಲಭ್ಯ ಒದಗಿಸಿಕೊಡಲಿದ್ದಾರೆ.

ಈಟಿವಿ ಭಾರತ ಜೊತೆಗೆ ಮಾತನಾಡಿದ ಬಂಡಿಪಾಳ್ಯ ಎಪಿಎಂಸಿ ಕಾರ್ಯದರ್ಶಿ ಕುಮಾರಸ್ವಾಮಿ, "ಕಡಕೋಳದಲ್ಲಿ ಕುರಿ, ಮೇಕೆ ಮತ್ತು ಜಾನುವಾರಗಳ ಉಪ ಮಾರುಕಟ್ಟೆ ಪ್ರಾಂಗಣ ನಿರ್ಮಾಣ ಮಾಡಲಾಗಿದ್ದು, ಇದರಿಂದ ಸ್ಥಳೀಯ ರೈತರಿಗೆ ಮತ್ತಷ್ಟು ಅನುಕೂಲವಾಗಲಿದೆ. ಎಪಿಎಂಸಿಯಿಂದ ಸ್ಥಳ ಹಾಗೂ ಸೌಲಭ್ಯ ನೀಡಲಾಗಿದ್ದು, ಉಸ್ತುವಾರಿಯನ್ನು ಸಂಘದವರೇ ನೋಡಿಕೊಳ್ಳುತ್ತಾರೆ" ಎಂದು ತಿಳಿಸಿದರು.

ಮಹದೇಶ್ವರ ಕುರಿ ಮತ್ತು ಉಣ್ಣೆ ಉತ್ಪನ್ನ ಉತ್ಪಾದಕರ ಸಹಕಾರ ಸಂಘದ ಕಾರ್ಯದರ್ಶಿ ಚಂದ್ರಶೇಖರ್ ಮಾತನಾಡಿ, "15 ವರ್ಷಗಳ ಹಿಂದೆ ಕಡಕೋಳದಲ್ಲಿ ಶನಿವಾರ ಸಂತೆ ನಿಂತು ಹೋಗಿದ್ದ ಪರಿಣಾಮ, ಸ್ಥಳೀಯರು ಬೇರೆ ಬೇರೆ ಕಡೆಗೆ ಹೋಗಬೇಕಾಗಿತ್ತು. ಆದರೀಗ ಮತ್ತೆ ಉತ್ತಮ ವಾತಾವರಣದಲ್ಲಿ ಶನಿವಾರ ಸಂತೆ ಪ್ರಾರಂಭವಾಗುತ್ತಿರುವುದರಿಂದ, ಕುರಿಗಾಹಿಗಳು ಹಾಗೂ ಗ್ರಾಹಕರಿಗೂ ಅನುಕೂಲವಾಗಲಿದೆ. 15 ವರ್ಷಗಳ ಹಿಂದೆ ಅದ್ಧೂರಿಯಾಗಿ ಶನಿವಾರ ಸಂತೆ ನಡೆಯುತ್ತಿತ್ತು. ನಿಂತಿದ್ದ ಶನಿವಾರ ಸಂತೆಗೆ ಮತ್ತೆ ಸಿದ್ಧತೆಯಾಗಿದೆ" ಎಂದು ಹೇಳಿದರು.

ಇದನ್ನೂ ಓದಿ: ಹಾಸನ: ಬಾಲ್ಯ ನೆನಪಿಸಿದ ಅರಸೀಕೆರೆಯ ಚಿಣ್ಣರ ಸಂತೆ- ಪೋಷಕರಿಂದ ಪ್ರೋತ್ಸಾಹ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.