ETV Bharat / state

ಪಿಎಸ್ಐ ಪರಶುರಾಮ್​ ಹೃದಯಾಘಾತದಿಂದ ಸಾವು: ಸ್ವಗ್ರಾಮದಲ್ಲಿ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ - PSI Parashuram - PSI PARASHURAM

ಶನಿವಾರ ಹೃದಯಾಘಾತದಿಂದ ಮೃತಪಟ್ಟ ಪಿಎಸ್ಐ ಪರಶುರಾಮ್​ ಅವರ ಅಂತ್ಯಕ್ರಿಯೆ ಸರ್ಕಾರಿ ಗೌರವಗಳೊಂದಿಗೆ ಕಾರಟಗಿ ತಾಲೂಕಿನ ಸೋಮನಾಳ ಗ್ರಾಮದಲ್ಲಿ ನಡೆಯಿತು.

ಸ್ವಗ್ರಾಮದಲ್ಲಿ ಪಿಎಸ್ಐ ಪರಶುರಾಮ್​ಗೆ  ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ
ಸ್ವಗ್ರಾಮದಲ್ಲಿ ಪಿಎಸ್ಐ ಪರಶುರಾಮ್​ಗೆ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ (ETV Bharat)
author img

By ETV Bharat Karnataka Team

Published : Aug 3, 2024, 10:48 PM IST

Updated : Aug 3, 2024, 11:01 PM IST

ಪರುಶುರಾಮ್​ ಪತ್ನಿ ಶ್ವೇತಾ (ETV Bharat)

ಕೊಪ್ಪಳ: ಜಿಲ್ಲೆಯ ಕಾರಟಗಿ ತಾಲೂಕಿನ ಸೋಮನಾಳ ಗ್ರಾಮದ ನಿವಾಸಿಯಾಗಿದ್ದ ಯಾದಗಿರಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ಪಿಎಸ್ಐ ಪರಶುರಾಮ ಹೃದಯಾಘಾತದಿಂದ ಶನಿವಾರ ಮೃತಪಟ್ಟಿದ್ದಾರೆ. ಆದರೆ ಅವರ ಸಾವಿಗೆ ಯಾದಗಿರಿ ಶಾಸಕ ಮತ್ತು ಅವರ ಪುತ್ರನೇ ಕಾರಣ ಅಂತ ಕುಟುಂಬದವರು ಆರೋಪಿಸುತ್ತಿದ್ದಾರೆ.

ಯಾದಗಿರಿ ಶಾಸಕನನ್ನು ಬಂಧಿಸಲು ಆಗ್ರಹ: ಪರುಶುರಾಮ್​ ಸಾವಿಗೆ ಯಾದಗಿರಿ ಶಾಶಕ ಚೆನ್ನಾರಡ್ಡಿ ಪಾಟೀಲ್ ಮತ್ತು ಅವರ ಮಗ ಸನ್ನಿಗೌಡ ಕಾರಣರಾಗಿದ್ದಾರೆ ಎಂದು ಪರುಶುರಾಮ್​ ಪತ್ನಿ ಶ್ವೇತಾ ಆರೋಪಿಸಿದ್ದು, ಅವರನ್ನು ಬಂಧಿಸುವಂತೆ ಆಗ್ರಹಿಸಿದ್ದಾರೆ. ''ವರ್ಗಾವಣೆಗೆ ಅವರು 30 ರಿಂದ 40 ಲಕ್ಷ ರೂ. ನೀಡುವಂತೆ ನನ್ನ ಗಂಡನನ್ನು ಪೀಡಿಸುತ್ತಿದ್ದರು. ಅವರ ಕಾಟ ತಾಳಲಾರದೆ ನನ್ನ ಪತಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದು ಕೇವಲ ಇವರೊಬ್ಬರ ಸಮಸ್ಯೆ ಅಲ್ಲ, ವರ್ಗಾವಣೆ ಬಯಸಿದ ಎಲ್ಲಾ ಪಿಎಸ್ಐ ಗಳಿಗೂ ಹಣ ಕೇಳಿದ್ದಾರೆ. ಜನರನ್ನ ಕಾಯೋ ಪೊಲೀಸರಿಗೆ ಹೀಗಾದ್ರೆ, ಜನಸಾಮಾನ್ಯರ ಪಾಡೇನು'' ಎಂದು ಶ್ವೇತಾ ಕಣ್ಣೀರು ಹಾಕಿದರು.

ಸ್ವಗ್ರಾಮದಲ್ಲಿ ಪಿಎಸ್ಐ ಪರಶುರಾಮ್​ಗೆ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ (ETV Bharat)

ಮೃತ ಪರುಶುರಾಮ ಕುಟುಂಬದ ಹಿನ್ನೆಲೆ: ಮೃತ ಪರಶುರಾಮ್ ಮೂಲತಃ ಕೊಪ್ಪಳ ಜಿಲ್ಲೆಯ ಕಾರಟಗಿ ತಾಲೂಕಿನ ಸೋಮನಾಳ ಗ್ರಾಮದವರು. ಪರಶುರಾಮ್​ ಹೆತ್ತವರು ಗ್ರಾಮದಲ್ಲಿ ಕೃಷಿ ಮತ್ತು ಕೂಲಿ ಕೆಲಸ ಮಾಡುತ್ತಿದ್ದಾರೆ. ಕಡುಬಡತನದಲ್ಲಿ ಬೆಳೆದಿದ್ದ ಪರಶುರಾಮ್​, ಧಾರವಾಡದ ಕೆಸಿಡಿ ಕಾಲೇಜಿನಲ್ಲಿ ಪದವಿ ಮುಗಿಸಿದ್ದು, ಓದುತ್ತಿದ್ದಾಗಲೇ ಅನೇಕ ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ಮಾಡಿಕೊಂಡಿದ್ದರು.

ಪದವಿ ಮುಗಿಯುತ್ತಲೇ ಜೈಲ್ ವಾರ್ಡರ್ ಆಗಿ ಸರ್ಕಾರಿ ನೌಕರಿ ಸೇರಿ ಐದು ವರ್ಷಗಳ ಕಾಲ ಬೆಂಗಳೂರು ಪರಪ್ಪನ ಅಗ್ರಹಾರ ಜೈಲಿನಲ್ಲಿ ವಾರ್ಡರ್ ಆಗಿ ಕೆಲಸ ನಿರ್ವಹಿಸಿದ್ದರು. ನಂತರ ಬಳ್ಳಾರಿ ಮಹಾನಗರ ಪಾಲಿಕೆಯಲ್ಲಿ ಒಂದು ವರ್ಷ ಎಫ್​ಡಿಎ ಆಗಿ ಸೇವೆ ಸಲ್ಲಿಸಿದ್ದರು. ಈ ಸಮಯದಲ್ಲಿ ಅವರು ಟ್ರಾಫಿಕ್ ಇನ್ಸ್​ಪೆಕ್ಟರ್​, ಪಿಡಿಒ ಸೇರಿದಂತೆ ಇನ್ನೂ ಅನೇಕ ಸರ್ಕಾರಿ ಹುದ್ದೆಗಳಿಗೆ ಆಯ್ಕೆಯಾಗಿದ್ದರು. ಆದ್ರೆ ಪಿಎಸ್ಐ ಆಗಬೇಕು ಅಂತ ಕನಸು ಕಂಡಿದ್ದ ಪರಶುರಾಮ್​, ಕೆಲಸ ಮಾಡುತ್ತಿದ್ದಾಗಲೇ ಪಿಎಸ್ಐ ಪರೀಕ್ಷೆಗೆ ತಯಾರಿ ಮಾಡಿಕೊಂಡಿದ್ದರು. ಹಗಲಿರುಳು ಕಠಿಣ ಪರಿಶ್ರಮದಿಂದ ಅಧ್ಯಯನ ಮಾಡಿದ್ದ ಪರಶುರಾಮ್​, 2017 ರಲ್ಲಿ ಪಿಎಸ್ಐ ಆಗಿ ಆಯ್ಕೆಯಾಗಿದ್ದರು. ಒಂದಲ್ಲಾ, ಎರಡರಲ್ಲಾ ಎಂಟು ಸರ್ಕಾರಿ ನೌಕರಿಗೆ ಆಯ್ಕೆಯಾಗಿದ್ದ ಪರಶುರಾಮ್​, ಅನೇಕರಿಗೆ ಮಾದರಿಯಾಗಿದ್ದರು. ಅನೇಕ ಯುವಕರಿಗೆ ಓದಿನ ಬಗ್ಗೆ ಸದಾ ಪ್ರೇರಣೆಯನ್ನು ನೀಡುತ್ತಿದ್ದರು.

ಘಟನೆ ಖಂಡಿಸಿ ಪರಶುರಾಮ್​ ಸ್ವಗ್ರಾಮದಲ್ಲಿ ಪ್ರತಿಭಟನೆ: ಸೋಮನಾಳ ಗ್ರಾಮದ ಸರ್ಕಾರಿ ಶಾಲೆ ಮುಂದೆ ಛಲವಾದಿ ಸಂಘಟನೆಯಿಂದ ಶನಿವಾರ ಪ್ರತಿಭಟಿಸಲಾಯಿತು. ಪರಶುರಾಮ್​ ಕುಟುಂಬಕ್ಕೆ ನ್ಯಾಯ ದೊರಕಿಸಿಕೊಡಬೇಕೆಂದು ಸರ್ಕಾರಕ್ಕೆ ಪ್ರತಿಭಟನಾಕಾರರು ಆಗ್ರಹಿಸಿದರು.

ಪೊಲೀಸರಿಂದ ಗೌರವ ವಂದನೆ: ಸೋಮನಾಳ ಗ್ರಾಮಕ್ಕೆ ಪರುಶುರಾಮ ಪಾರ್ಥಿವ ಶರೀರವನ್ನು ತರಲಾಗಿದ್ದು, ಸೋಮನಾಳ ಗ್ರಾಮದ ಸರ್ಕಾರಿ ಶಾಲೆಯ ಆವರಣದಲ್ಲಿ ಜಿಲ್ಲಾ ಪೊಲೀಸರು ಮೂರು ಸುತ್ತಿನ ಗುಂಡು ಹಾರಿಸಿ‌ ಗೌರವ ವಂದನೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ್ ತಂಗಡಗಿ ಸೇರಿದಂತೆ ಪೊಲೀಸ್ ಇಲಾಖೆ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

ಇದನ್ನೂ ಓದಿ: ಪಿಎಸ್​ಐ ಪರಶುರಾಮ್​ ಸಾವು: ಯಾದಗಿರಿ ಶಾಸಕ, ಪುತ್ರನ ವಿರುದ್ಧ ದೂರು - PSI Death Case

Last Updated : Aug 3, 2024, 11:01 PM IST

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.