ETV Bharat / state

ದೊಡ್ಡಬಳ್ಳಾಪುರ: ಎಂಆರ್​ಪಿಗಿಂತ ಹೆಚ್ಚುವರಿ ಹಣ; 10 ಸಾವಿರ ರೂ. ದಂಡ - water bottle and chips

ನೀರಿನ ಬಾಟಲಿ ಮತ್ತು ಚಿಪ್ಸ್ ಖರೀದಿಸಿದ ಗ್ರಾಹಕನಿಗೆ ಎಂಆರ್​ಪಿ ದರಕ್ಕಿಂತ 40 ರೂ.ಗಿಂತ ಅಧಿಕ ಶುಲ್ಕವನ್ನು ಪಡೆದಿದ್ದಕ್ಕೆ ಬೆಂಗಳೂರು ಗ್ರಾಮಾಂತರ ಹಾಗೂ 1ನೇ ಹೆಚ್ಚುವರಿ ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗವು 10 ಸಾವಿರ ದಂಡ ವಿಧಿಸಿದೆ.

ದೊಡ್ಡಬಳ್ಳಾಪುರ
ದೊಡ್ಡಬಳ್ಳಾಪುರ
author img

By ETV Bharat Karnataka Team

Published : Mar 4, 2024, 7:21 PM IST

Updated : Mar 4, 2024, 8:43 PM IST

ದೂರುದಾರರಾದ ಗಿರೀಶ್ ಎನ್ ಪಿ

ದೊಡ್ಡಬಳ್ಳಾಪುರ : ಎಂಆರ್​ಪಿ ಬೆಲೆಗಿಂತ ಹೆಚ್ಚಿಗೆ ಹಣ ಪಡೆದ ಚಿತ್ರಮಂದಿರಕ್ಕೆ ಬೆಂಗಳೂರು ಗ್ರಾಮಾಂತರ ಹಾಗೂ 1ನೇ ಹೆಚ್ಚುವರಿ ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗವು 10 ಸಾವಿರ ದಂಡ ವಿಧಿಸಿದೆ. ಚಿತ್ರಮಂದಿರದಲ್ಲಿ ನೀರಿನ ಬಾಟಲಿ ಮತ್ತು ಚಿಪ್ಸ್ ಖರೀದಿಸಿದ ಗ್ರಾಹಕನಿಗೆ ಎಂಆರ್​ಪಿ ದರಕ್ಕಿಂತ 40 ರೂ. ಅಧಿಕ ಶುಲ್ಕ ಪಡೆದಿದ್ದಕ್ಕೆ ಈ ದಂಡ ವಿಧಿಸಲಾಗಿದೆ.

ಆಯೋಗವು ಹೆಚ್ಚುವರಿಯಾಗಿ ಪಡೆದಿದ್ದ 40 ರೂಪಾಯಿಗಳನ್ನು ಮರುಪಾವತಿ ಮಾಡುವಂತೆ, ಪರಿಹಾರವಾಗಿ 5 ಸಾವಿರ ರೂಪಾಯಿಗಳನ್ನು ಹಾಗೂ ಪ್ರಕರಣದ ಖರ್ಚನ್ನು 5000 ರೂಪಾಯಿಗಳೊಂದಿಗೆ ಫಿರ್ಯಾದುದಾರರಿಗೆ ನೀಡಲು ಆದೇಶಿಸಿದೆ. ನ್ಯಾ ಬಿ ನಾರಾಯಣಪ್ಪ ನೇತೃತ್ವದಲ್ಲಿ ನ್ಯಾ. ಜ್ಯೋತಿ ಹಾಗೂ ನ್ಯಾ. ಶರಾವತಿ, ಎಸ್. ಎಂ ಅವರನ್ನೊಳಗೊಂಡ ತ್ರಿಸದಸ್ಯ ಪೀಠ ಈ ಆದೇಶ ಹೊರಡಿಸಿದೆ.

ಗಿರೀಶ್ ಎನ್ ಪಿ ಮತ್ತು ಅವರ ಸ್ನೇಹಿತರು ಅಕ್ಟೋಬರ್ 2022ರಲ್ಲಿ ವೈಭವ್ ಚಿತ್ರಮಂದಿರ ಹಾಗೂ ಸೌಂದರ್ಯ ಮಹಲ್ ಚಿತ್ರಮಂದಿರದಲ್ಲಿ ಸಿನಿಮಾ ನೋಡಲು ಹೋಗಿದ್ದರು. ಈ ವೇಳೆ, ಅವರು ನೀರಿನ ಬಾಟಲಿ ಮತ್ತು ಚಿಪ್ಸ್ ಖರೀದಿಸಿದ್ದರು. ಹೀಗೆ ಖರೀದಿಸಿದ ಪ್ರತಿ ಪದಾರ್ಥಗಳ ಮೇಲೆ ಎಂಆರ್​ಪಿಗಿಂತ 10 ರೂಪಾಯಿ ಅಧಿಕ ಹಣ ತೆಗೆದುಕೊಳ್ಳಲಾಗಿತ್ತು. ಇದರ ವಿರುದ್ಧ ಗಿರೀಶ್ ಆಡಳಿತ ಸುಧಾರಣೆಗಳು ಮತ್ತು ಸಾರ್ವಜನಿಕ ಕುಂದು ಕೊರತೆಗಳ ಇಲಾಖೆಗೆ ದೂರು ನೀಡಿದ್ದರು. ಅಲ್ಲಿಂದ ಸಕರಾತ್ಮಕ ಉತ್ತರ ಬಾರದ ಹಿನ್ನೆಲೆ, ನವೆಂಬರ್ 2022ರಲ್ಲಿ ಕಾನೂನು ಮಾಪನಶಾಸ್ತ್ರ ಇಲಾಖೆಗೆ ದೂರು ನೀಡಿದ್ದರು.

ಜನವರಿ 2023ರಲ್ಲಿ ಕಾನೂನು ಮಾಪನಶಾಸ್ತ್ರ ಇಲಾಖೆಯ ಅಧಿಕಾರಿಗಳು ಚಿತ್ರಮಂದಿರಗಳಿಗೆ ಅನಿರೀಕ್ಷಿತ ಭೇಟಿ ನೀಡಿ, 20 ಸಾವಿರ ರೂಪಾಯಿಗಳ ದಂಡವನ್ನು ವಿಧಿಸಿರುತ್ತಾರೆ. ಆದರೂ ಚಿತ್ರಮಂದಿರಗಳಲ್ಲಿ ಎಂದಿನಂತೆ ಹೆಚ್ಚುವರಿ 10 ರೂಪಾಯಿ ಹಣ ಪಡೆಯುತ್ತಿದ್ದರು. ಇದನ್ನು ಪ್ರಶ್ನಿಸಿ ಆಗಸ್ಟ್ 2023 ರಂದು ಆಯೋಗದಲ್ಲಿ ಪ್ರಕರಣ ದಾಖಲಿಸಿದ್ದೆ. ಕೇವಲ 6 ತಿಂಗಳಲ್ಲಿ ಪ್ರಕರಣವನ್ನು ಇತ್ಯರ್ಥಪಡಿಸಲಾಗಿದೆ ಎಂದು ದೂರುದಾರ ಗಿರೀಶ್ ತಿಳಿಸಿದ್ದಾರೆ.

ಇದನ್ನೂ ಓದಿ : ಅಧಿಕ ದರ ವಸೂಲಿ ಮಾಡಿದ ಆಸ್ಪತ್ರೆಗೆ 5 ಲಕ್ಷ ದಂಡ ವಿಧಿಸಿದ ಜಿಲ್ಲಾ ಗ್ರಾಹಕ ನ್ಯಾಯಾಲಯ

Last Updated : Mar 4, 2024, 8:43 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.