ETV Bharat / state

ದೇವರಾಜ ಅರಸ್ ಟ್ರಕ್ ಟರ್ಮಿನಲ್‌ನಲ್ಲಿ ಅಕ್ರಮ ಆರೋಪ: ಮತ್ತೋರ್ವ ಆರೋಪಿ ಬಂಧನ - Devaraj Urs Truck Terminal Scam - DEVARAJ URS TRUCK TERMINAL SCAM

ದೇವರಾಜ ಅರಸ್ ಟ್ರಕ್ ಟರ್ಮಿನಲ್‌ನಲ್ಲಿ ನಡೆದಿದೆ ಎನ್ನಲಾದ ಅಕ್ರಮ ಪ್ರಕರಣದ ಕುರಿತು ಮತ್ತೋರ್ವ ಆರೋಪಿಯನ್ನು ಸಿಐಡಿ ಅಧಿಕಾರಿಗಳು ಬಂಧಿಸಿದ್ದಾರೆ.

ದೇವರಾಜ ಅರಸ್ ಟ್ರಕ್ ಟರ್ಮಿನಲ್‌ ಅಕ್ರಮ ಪ್ರಕರಣದಲ್ಲಿ ಮತ್ತೋರ್ವ ಆರೋಪಿ ಬಂಧನ
ದೇವರಾಜ ಅರಸ್ ಟ್ರಕ್ ಟರ್ಮಿನಲ್‌ ಪ್ರಕರಣದಲ್ಲಿ ಮತ್ತೋರ್ವ ಆರೋಪಿ ಬಂಧನ (ETV Bharat)
author img

By ETV Bharat Karnataka Team

Published : Sep 29, 2024, 6:54 AM IST

ಬೆಂಗಳೂರು: ಡಿ.ದೇವರಾಜ ಅರಸ್ ಟ್ರಕ್ ಟರ್ಮಿನಲ್‌ನಲ್ಲಿ ನಡೆದಿದೆ ಎನ್ನಲಾದ 47 ಕೋಟಿ ರೂ. ಅಕ್ರಮ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೊಬ್ಬ ಆರೋಪಿಯನ್ನು ಸಿಐಡಿ ಅಧಿಕಾರಿಗಳು ಬಂಧಿಸಿದ್ದಾರೆ. ರಾಮನಗರ ಜಿಲ್ಲೆಯ ಹೊನ್ನಪ್ಪ(55) ಬಂಧಿತ ವ್ಯಕ್ತಿ. ಇವರು ಪ್ರಕರಣದಲ್ಲಿ ಈಗಾಗಲೇ ಬಂಧಿಸಲ್ಪಟ್ಟ ಮಾಹಿತಿ ಮತ್ತು ಪ್ರಸಾರ ಇಲಾಖೆಯ ಉಪನಿರ್ದೇಶಕ ಎಸ್.ಶಂಕರಪ್ಪ ಅವರ ಸಹೋದರ ಎಂದು ತಿಳಿದು ಬಂದಿದೆ.

ಆರೋಪಿ ಶಂಕರಪ್ಪ ಕಾಮಗಾರಿಗಳನ್ನು ಅನುಷ್ಠಾನಗೊಳಿಸದೆ, ಆ ಬಿಲ್‌ಗಳ ಹಿಂಭಾಗದಲ್ಲಿ ಕಾಮಗಾರಿ ತೃಪ್ತಿಕರವಾಗಿದೆ ಎಂದು 2.06 ಕೋಟಿ ರೂ.ನಲ್ಲಿ 8.75 ಲಕ್ಷ ರೂ. ಅನ್ನು ಜಿಎಸ್‌ಟಿ ತೆರಿಗೆ ಮತ್ತು ಉಪಕರ ಕಟ್ಟಿ ಉಳಿದಂತೆ 1.97 ಕೋಟಿ ರೂ. ಹಣವನ್ನು ಕಂಪನಿಯ ಬ್ಯಾಂಕ್ ಖಾತೆ ಮೂಲಕ ಎಸ್.ಎಸ್.ಎಂಟರ್‌ಪ್ರೈಸಸ್ ಅವರ ಬ್ಯಾಂಕ್ ಖಾತೆಗೆ ವರ್ಗಾವಣೆ ಮಾಡಿದ್ದರು. ಈ ಎಸ್.ಎಸ್.ಎಂಟರ್ ಪ್ರೈಸಸ್ 2022ರ ಮಾ.17ರಂದು ದಂಕಾ ಟ್ರೇಡರ್ಸ್ ಆ್ಯಂಡ್ ಸೇಲ್ಸ್ ಎಂಬ ಮಧ್ಯವರ್ತಿ ವರ್ತಕನಿಗೆ 31.09 ಲಕ್ಷ ರೂ. ವರ್ಗಾವಣೆ ಮಾಡಿದೆ. ಮಧ್ಯವರ್ತಿ ವರ್ತಕರು, ಈ ಹಣದ ಪೈಕಿ 20 ಲಕ್ಷ ರೂ. ಅನ್ನು ಅದೇ ದಿನ ಎಂ.ಎಸ್.ಹೊನ್ನಪ್ಪ ಎಂಬವರ ಖಾತೆಗೆ ವರ್ಗಾಯಿಸಿದ್ದಾರೆ. ಹೀಗಾಗಿ ಹೊನ್ನಪ್ಪರನ್ನು ಬಂಧಿಸಲಾಗಿದೆ ಎಂದು ಸಿಐಡಿ ಮೂಲಗಳು ತಿಳಿಸಿವೆ.

ಈಗಾಗಲೇ ಬಿಜೆಪಿ ಮಾಜಿ ಎಂಎಲ್‌ಸಿ ವೀರಯ್ಯ ಹಾಗೂ ಇತರರನ್ನು ಬಂಧಿಸಲಾಗಿದೆ. ವಿಲ್ಸನ್‌ ಗಾರ್ಡನ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.