ETV Bharat / state

ಮೋದಿ ಕ್ಯಾಬಿನೆಟ್​: ರಾಜ್ಯದ ಐವರಿಗೆ ಯಾವ ಖಾತೆ ಗೊತ್ತಾ? - Modi Cabinet

author img

By ETV Bharat Karnataka Team

Published : Jun 10, 2024, 9:23 PM IST

ಪ್ರಧಾನಿ ನರೇಂದ್ರ ಮೋದಿ ಅವರ 3.0 ಕ್ಯಾಬಿನೆಟ್ ರಚನೆಯಾಗಿದ್ದು, ಇಂದು ಮೊದಲ ಸಚಿವ ಸಂಪುಟ ಸಭೆ ನಡೆಸಿ ಖಾತೆ ಹಂಚಿಕೆ ಮಾಡಲಾಯಿತು. ಹೆಚ್‌ಡಿಕೆ, ಪ್ರಹ್ಲಾದ್ ಜೋಶಿ, ನಿರ್ಮಲಾ ಸೀತಾರಾಮನ್, ಶೋಭಾ ಕರಂದ್ಲಾಜೆ ಮತ್ತು ವಿ.ಸೋಮಣ್ಣಗೆ ಖಾತೆ ಹಂಚಿಕೆಯಾಗಿದೆೆ.

ಹೆಚ್​ಡಿಕೆ, ನಿರ್ಮಲಾ ಸೀತಾರಾಮನ್, ಜೋಶಿ, ವಿ ಸೋಮಣ್ಣ, ಶೋಭಾ ಕರಂದ್ಲಾಜೆ
ಹೆಚ್​ಡಿಕೆ, ನಿರ್ಮಲಾ ಸೀತಾರಾಮನ್, ಜೋಶಿ, ವಿ.ಸೋಮಣ್ಣ, ಶೋಭಾ ಕರಂದ್ಲಾಜೆ (ETV Bharat)

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಸತತ ಮೂರನೇ ಬಾರಿ ಎನ್​ಡಿಎ ಸರ್ಕಾರ ರಚನೆಯಾಗಿದೆ. ಕೇಂದ್ರ ಸರ್ಕಾರದಲ್ಲಿ ಕರ್ನಾಟಕದಿಂದ ಆಯ್ಕೆಯಾದ ಐವರು ಸಂಸದರು ಸಚಿವರಾಗಿದ್ದು, ಇಂದು ಖಾತೆ ಹಂಚಿಕೆಯಾಗಿದೆ. ಐವರಲ್ಲಿ ಮೂವರಿಗೆ ಕ್ಯಾಬಿನೆಟ್ ದರ್ಜೆ ಮತ್ತು ಇಬ್ಬರಿಗೆ ರಾಜ್ಯ ಸಚಿವ ಖಾತೆ ಒಲಿದಿದೆ.

ಯಾರಿಗೆ ಯಾವ ಖಾತೆ?: ಮಾಜಿ ಸಿಎಂ ಹೆಚ್​.ಡಿ.ಕುಮಾರಸ್ವಾಮಿ, ಪ್ರಲ್ಹಾದ್ ಜೋಶಿ, ಶೋಭಾ ಕರಂದ್ಲಾಜೆ, ವಿ.ಸೋಮಣ್ಣ ಮತ್ತು ಕರ್ನಾಟಕದಿಂದ ರಾಜ್ಯಸಭೆ ಸದಸ್ಯೆಯಾಗಿರುವ ನಿರ್ಮಲಾ ಸೀತಾರಾಮನ್​ ಅವರಿಗೆ ಖಾತೆ ಹಂಚಿಕೆಯಾಗಿದೆ.

ಹೆಚ್​ಡಿಕೆಗೆ ಸಂಪುಟ ದರ್ಜೆ: ಮೋದಿ‌ 3.0 ಸರ್ಕಾರದಲ್ಲಿ ಎನ್​ಡಿಎ ಮೈತ್ರಿ ಪಕ್ಷವಾಗಿರುವ ಜೆಡಿಎಸ್​ಗೆ ಒಂದು ಸಚಿವ ಸಂಪುಟ ದರ್ಜೆ ಸ್ಥಾನ ನೀಡಲಾಗಿದೆ. ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ.ಕುಮಾರಸ್ವಾಮಿ ಕೇಂದ್ರ ಸಚಿವರಾಗಿದ್ದಾರೆ. ಇವರಿಗೆ ಉಕ್ಕು ಮತ್ತು ಬೃಹತ್ ಕೈಗಾರಿಕೆ ಖಾತೆ ಒಲಿದಿದೆ.

ಪ್ರಲ್ಹಾದ್ ಜೋಶಿ ಖಾತೆ ಬದಲು: ಕಳೆದ ಬಾರಿ ಸಂಸದೀಯ ವ್ಯವಹಾರಗಳ ಖಾತೆ ಸಚಿವರಾಗಿದ್ದ ಪ್ರಲ್ಹಾದ್ ಜೋಶಿ ಅವರಿಗೆ ಈ ಬಾರಿ ಬೇರೆ ಖಾತೆ ನೀಡಲಾಗಿದೆ. ಈ ಬಾರಿ ಗ್ರಾಹಕ, ಆಹಾರ ಮತ್ತು ವಿತರಣೆ, ನವೀಕರಿಸಬಹುದಾದ ಇಂಧನ ಖಾತೆ ಹಂಚಿಕೆ ಮಾಡಲಾಗಿದೆ.

ನಿರ್ಮಲಾ ಸೀತಾರಾಮನ್​ಗೆ ಹಣಕಾಸು: ರಾಜ್ಯದಿಂದ ರಾಜ್ಯಸಭೆಗೆ ಆಯ್ಕೆಯಾಗಿರುವ ನಿರ್ಮಲಾ ಸೀತಾರಾಮನ್​ ಅವರಿಗೆ ಹಣಕಾಸು ಖಾತೆಯನ್ನೇ ಮುಂದುವರಿಸಲಾಗಿದೆ. ಕಳೆದ ಬಾರಿ ಕೂಡ ಇದೇ ಖಾತೆಯನ್ನು ನಿರ್ವಹಿಸಿದ್ದರು.

ಶೋಭಾಗೆ ಮತ್ತೆ ರಾಜ್ಯ ಖಾತೆ: ಕಳೆದ ಬಾರಿ ರಾಜ್ಯ ಖಾತೆ ಸಚಿವೆಯಾಗಿದ್ದ ಶೋಭಾ ಕರಂದ್ಲಾಜೆ ಅವರಿಗೆ ಈ ಬಾರಿಗೂ ರಾಜ್ಯ ಖಾತೆಯನ್ನು ಹಂಚಿಕೆ ಮಾಡಲಾಗಿದೆ. ಈ ಬಾರಿ ಅತೀ ಸಣ್ಣ, ಸಣ್ಣ ಕೈಗಾರಿಕೆ ಮತ್ತು ಕಾರ್ಮಿಕ ಇಲಾಖೆ ರಾಜ್ಯ ಖಾತೆಯ ಹೊಣೆ ನೀಡಲಾಗಿದೆ.

ವಿ.ಸೋಮಣ್ಣಗೆ ರಾಜ್ಯ ಖಾತೆ: ಮೊದಲ ಬಾರಿಗೆ ಸಂಸದರಾಗಿರುವ ವಿ.ಸೋಮಣ್ಣಗೆ ಜಲ ಶಕ್ತಿ ಮತ್ತು ರೈಲ್ವೆ ರಾಜ್ಯ ಖಾತೆ ಹಂಚಿಕೆಯಾಗಿದೆ.

ಪ್ರಧಾನಿ ಮೋದಿ ಸೇರಿ 72 ಸಂಪುಟ ಸದಸ್ಯರಲ್ಲಿ 30 ಕ್ಯಾಬಿನೆಟ್ ಸಚಿವರು, ಐದು ಸ್ವತಂತ್ರ ಉಸ್ತುವಾರಿ ಮತ್ತು 36 ರಾಜ್ಯ ಸಚಿವರಿದ್ದಾರೆ.

ಇದನ್ನೂ ಓದಿ: ಮೋದಿ 3.0 ಕ್ಯಾಬಿನೆಟ್: ಅಮಿತ್ ಶಾಗೆ ಗೃಹ, ಹೆಚ್​ಡಿಕೆಗೆ ಉಕ್ಕು ಮತ್ತು ಬೃಹತ್ ಕೈಗಾರಿಕೆ - ಯಾರಿಗೆ, ಯಾವ ಖಾತೆ? - MODI NEW CABINET LIVE UPDATE

ETV Bharat Logo

Copyright © 2024 Ushodaya Enterprises Pvt. Ltd., All Rights Reserved.