ETV Bharat / state

ಭೂಸ್ವಾಧೀನಕ್ಕೆ ಪರಿಹಾರ ನೀಡದ್ದಕ್ಕೆ ದಾವಣಗೆರೆ ಕೆಐಎಡಿಬಿ ಕಚೇರಿ ವಶಕ್ಕೆ ಪಡೆದ ರೈತರು - KIADB office seized

ಭೂಸ್ವಾಧೀನ ಮಾಡಿಕೊಂಡು ಪರಿಹಾರ ನೀಡದ್ದಕ್ಕೆ ದಾವಣಗೆರೆಯ ಕೆಐಎಡಿಬಿ ಕಚೇರಿ ಪೀಠೋಪಕರಣಗಳನ್ನು ರೈತರು ವಶಕ್ಕೆ ಪಡೆದಿದ್ದಾರೆ.

author img

By ETV Bharat Karnataka Team

Published : Jun 11, 2024, 3:58 PM IST

ಕೆಐಎಡಿಬಿ ಕಚೇರಿ
ಕೆಐಎಡಿಬಿ ಕಚೇರಿ (ETV Bharat)

ದಾವಣಗೆರೆ: ಭೂಸ್ವಾಧೀನ ಮಾಡಿಕೊಂಡು ಪರಿಹಾರ ನೀಡದ್ದಕ್ಕೆ ದಾವಣಗೆರೆಯ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಕಚೇರಿ (ಕೆಐಎಡಿಬಿ)ಯನ್ನು ರೈತರು ವಶಪಡಿಸಿಕೊಂಡಿದ್ದಾರೆ.

ಕೋರ್ಟ್ ಆದೇಶದ ಅನ್ವಯ ಕೆಐಎಡಿಬಿ ಕಚೇರಿಯ ಪೀಠೋಪಕರಣಗಳನ್ನು ಬಳ್ಳಾರಿ ರೈತರು ಜಪ್ತಿ ಮಾಡಿದ್ದಾರೆ. ಸುಮಾರು 63 ಕೋಟಿ‌ ರೂಪಾಯಿ ಪರಿಹಾರ ಬಾಕಿ‌ ‌ಉಳಿದಿದೆ. ಈ ಸಂಬಂಧ ದಾಖಲಾದ ಪ್ರಕರಣವೊಂದರಲ್ಲಿ ಕಚೇರಿ ಜಪ್ತಿ ಮಾಡಲಾಗಿದೆ. ಬಳ್ಳಾರಿ, ಹಾವೇರಿ ಹಾಗೂ ಚಿತ್ರದುರ್ಗ ಜಿಲ್ಲೆಗಳು ದಾವಣಗೆರೆಯ ಕೆಐಎಡಿಬಿ ಕಚೇರಿ ವ್ಯಾಪ್ತಿಗೆ ಸೇರಿವೆ. ಜಪ್ತಿ ಆದೇಶದ ಬೆನ್ನಲ್ಲೇ ಕಚೇರಿಯಲ್ಲಿದ್ದ ಕುರ್ಚಿ, ಟೇಬಲ್, ಅಲ್ಮೆರಾ ಸೇರಿದಂತೆ ಕಚೇರಿಯ ಸಮಗ್ರ ವಸ್ತುಗಳನ್ನು ರೈತರು ಲಾರಿಗೆ ತುಂಬಿಸಿಕೊಂಡು ಹೋಗಿದ್ದಾರೆ.

2010ರಲ್ಲಿ ಮಾಜಿ ಸಚಿವ ಹಾಗೂ ಗಂಗಾವತಿ ಹಾಲಿ ಶಾಸಕ ಜನಾರ್ದನ ರೆಡ್ಡಿ ಮಾಲೀಕತ್ವದ ಭ್ರಹ್ಮಿಣಿ ಸ್ಟೀಲ್ಸ್, ಉತ್ತಮ್ ಗ್ಯಾಲೋ, ಎನ್​ಎಮ್​ಡಿಸಿ ಕಂಪನಿಗಳಿಗೆ ಕೆಐಎಡಿಬಿ ಭೂಮಿಯನ್ನು ಪರಭಾರೆ ಮಾಡಿತ್ತು. ಇದಕ್ಕೆ ಬಳ್ಳಾರಿ ತಾಲೂಕಿನ ಕುಡಿತಿನಿ ಗ್ರಾಮ ಸೇರಿದಂತೆ ಹತ್ತು ಗ್ರಾಮಗಳ ರೈತರು ಜಮೀನು ನೀಡಿದ್ದರು. ಪ್ರತಿ ಒಂದು ಎಕರೆಗೆ ಐದು ಲಕ್ಷ ರೂಪಾಯಿಗೆ ನಿಗದಿಪಡಿಸಿ ಕೆಐಡಿಇಬಿಗೆ ರೈತರು ಮಾರಾಟ ಮಾಡಿದ್ದರು.‌ ಸುಮಾರು 1500 ಎಕರೆ ಭೂಮಿಯನ್ನು ರೈತರಿಂದ ಸ್ವಾಧೀನ ಪಡಿಸಿಕೊಂಡಿದ್ದ ಕೆಐಎಡಿಬಿ ಪ್ರತಿ ಎಕರೆಗೆ 5 ಲಕ್ಷ ರೂ. ಘೋಷಿಸಿತ್ತು.

ಜಮೀನು ಬೆಲೆ ತಾರತಮ್ಯ ಹಿನ್ನೆಲೆ 2013ರಲ್ಲಿ ರೈತರು ಕೋರ್ಟ್​ನ ಮೊರೆ ಹೋಗಿದ್ದರು. 2023ರಲ್ಲಿ ರೈತರಿಗೆ ಪರಿಹಾರ ಧನ ನೀಡುವಂತೆ ಕೋರ್ಟ್ ಆದೇಶ ನೀಡಿತ್ತು. ಈ ಆದೇಶದ ಬಳಿಕವೂ ಪರಿಹಾರ ಪಾವತಿಯಾಗಿಲ್ಲ.‌ ಈ ಹಿನ್ನೆಲೆ ಕೆಐಡಿಬಿ ಕಚೇರಿಯ ಪ್ರಾಪರ್ಟಿ ಮುಟ್ಟುಗೊಲು ಹಾಕಿಕೊಳ್ಳುವಂತೆ ಕೋರ್ಟ್​ ಆದೇಶ ಹೊರಡಿಸಿದೆ. ಪರಿಹಾರ ಧನ ಬರಬೇಕಿದ್ದ ರೈತರು ಕಚೇರಿ ಜಪ್ತಿ ಮಾಡಿದ್ದಾರೆ.

ಕೋರ್ಟ್ ಆದೇಶದ ಹಿನ್ನೆಲೆ ಬಳ್ಳಾರಿಯ ಕುಡುತಿನಿ, ವೇಣುವೀರಾಪುರ, ಕೊಳಗಲ್ಲು, ಹರಗಿನ ದೋಣಿ ಮತ್ತು ಸುತ್ತಮುತ್ತಲಿನ ಗ್ರಾಮದ ರೈತರು ಪೀಠೋಪಕರಣ ಜಪ್ತಿ ಮಾಡಿದ್ದಾರೆ.

ಇದನ್ನೂ ಓದಿ: ವೈಲ್ಡ್ ಕರ್ನಾಟಕ ಸಾಕ್ಷ್ಯಚಿತ್ರ ನಿರ್ಮಾಪಕರ ವಿರುದ್ಧ ಆರೋಪ ನಿಗದಿಗೆ ಹೈಕೋರ್ಟ್ ನಿರ್ಧಾರ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.