ETV Bharat / state

ವಿಚಾರಣೆಯಲ್ಲಿ ಕೇಳಿದ ಎಲ್ಲ ಪ್ರಶ್ನೆಗಳಿಗೆ ಉತ್ತರ ನೀಡಿರುವೆ: ಸಿದ್ದರಾಮಯ್ಯ

ಮುಡಾ ಹಗರಣಕ್ಕೆ ಸಂಬಂಧಪಟ್ಟಂತೆ ಇಂದು ಮೈಸೂರಿನಲ್ಲಿರುವ ಲೋಕಾಯುಕ್ತ ಕಚೇರಿಗೆ ತೆರಳಿ ವಿಚಾರಣೆ ಎದುರಿಸಿ ಹೊರಬಂದ ಬಳಿಕ ಸಿಎಂ ಸಿದ್ದರಾಮಯ್ಯ ಮೊದಲ ಪ್ರತಿಕ್ರಿಯೆ ನೀಡಿದರು.

ಸಿಎಂ ಸಿದ್ದರಾಮಯ್ಯ
ಸಿಎಂ ಸಿದ್ದರಾಮಯ್ಯ (ETV Bharat)
author img

By ETV Bharat Karnataka Team

Published : 2 hours ago

Updated : 1 hours ago

ಮೈಸೂರು: ಅಧಿಕಾರಿಗಳು ಕೇಳಿದ ಎಲ್ಲ ಪ್ರಶ್ನೆಗಳಿಗೂ ಉತ್ತರ ನೀಡಿದ್ದೇನೆ. ಪ್ರಕರಣಕ್ಕೆ ಸಂಬಂಧಪಟ್ಟಂತೆ ಮತ್ತೆ ವಿಚಾರಣೆಗೆ ಬರಲು ಹೇಳಿಲ್ಲ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.

ಮುಡಾ (ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ) ಹಗರಣಕ್ಕೆ ಸಂಬಂಧಪಟ್ಟಂತೆ ಇಂದು ಲೋಕಾಯುಕ್ತ ಕಚೇರಿಗೆ ತೆರಳಿ ವಿಚಾರಣೆ ಎದುರಿಸಿ ಹೊರಬಂದ ಬಳಿಕ ಸರ್ಕಾರಿ ಅಥಿತಿ ಗೃಹದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಮೈಸೂರು ಲೋಕಾಯುಕ್ತ ಪೊಲೀಸರು ವಿಚಾರಣೆ ಮಾಡಿದರು. ಅವರು ಕೇಳಿದ ಪ್ರಶ್ನೆಗಳಿಗೆ ಉತ್ತರ ನೀಡಿದ್ದೇನೆ. ಎಲ್ಲ ಹೇಳಿಕೆಗಳನ್ನು ರೆರ್ಕಾಡ್‌ ಮಾಡಿಕೊಂಡು ಅದನ್ನು ಓದಿ ಹೇಳಿದ್ದಾರೆ. ಸರಿಯಾಗಿದೆ ಅಂತಲೂ ತಿಳಿಸಿದ್ದಾರೆ ಎಂದರು.

ಸಿಎಂ ಸಿದ್ದರಾಮಯ್ಯ (ETV Bharat)

ನಿಮಗೆ ಹೇಳುವುದಿಲ್ಲ: ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿ, ನನಗೆ ಮುಜುಗರ ಆಗಿಲ್ಲ. ಸುಳ್ಳು ಕೇಸ್‌ ಹಾಕಿದ್ದು, ವಿಚಾರಣೆ ಎದುರಿಸುವೆ. ನಾನು ಸತ್ಯವನ್ನೇ ಹೇಳಿರುವೆ. ಮತ್ತೆ ವಿಚಾರಣೆಗೆ ಬರಲು ಹೇಳಿಲ್ಲ. ಆದರೆ, ಲೋಕಾಯುಕ್ತ ಕಚೇರಿಯಲ್ಲಿ ಏನೆಲ್ಲಾ ಆಯಿತು ಎಂಬುದನ್ನು ನಿಮಗೆ (ಮಾಧ್ಯಮ) ಹೇಳುವುದಿಲ್ಲ ಎಂದರು.

ತನಿಖೆಯನ್ನು ಸಿಬಿಐಗೆ ವಹಿಸುವಂತೆ ಬಿಜೆಪಿ ಆಗ್ರಹಕ್ಕೆ ಕಿಡಿಕಾರಿದ ಸಿಎಂ, ಯಾರು ಲೋಕಾಯುಕ್ತದ ಬಗ್ಗೆ ನಂಬಿಕೆ ಕಳೆದುಕೊಂಡಿದ್ದಾರೋ ಅವರು ಯಾವುದಾದರೂ ಹಗರಣವನ್ನು ಸಿಬಿಐಗೆ ಕೊಟ್ಟಿದ್ದಾರಾ? ಎಂದು ಪ್ರ‍ಶ್ನಿಸಿದರು. ರಾಜ್ಯಪಾಲರು ಕೂಡ ತನಿಖೆಯನ್ನು ಲೋಕಾಯುಕ್ತ ತನಿಖಾ ಸಂಸ್ಥೆಗೆ ನೀಡುವಂತೆ ಶಿಫಾರಸ್ಸು ಮಾಡಿದ್ದಾರೆ ಎಂದು ತಿಳಿಸಿದರು.

ಸೈಟ್‌ ವಾಪಸ್‌ ಬಗ್ಗೆ ಮಾತನಾಡಿದ ಸಿಎಂ, 14 ಸೈಟ್‌ ಕಾನೂನು ಪ್ರಕಾರವಾಗಿ ನಡೆದಿದೆ. ಬಿಜೆಪಿ-ಜೆಡಿಎಸ್​ನವರು ಸುಳ್ಳು ಆರೋಪಗಳನ್ನು ಮಾಡಿದ್ದಾರೆ. ಸುಳ್ಳು ಆರೋಪಗಳಿಗೆ ಸೈಟ್‌ ವಾಪಸ್‌ ನೀಡುವ ತೀರ್ಮಾನ ತೆಗೆದುಕೊಂಡೆ. ಹೈಕೋರ್ಟ್​ನಿಂದ ಸಿಬಿಐ ತನಿಖೆಗೆ ಯಾವುದೇ ಸಮನ್ಸ್‌ ಬಂದಿಲ್ಲ ಎಂದು ಇದೇ ವೇಳೆ ಸಿಎಂ ಸ್ಪಷ್ಟಪಡಿಸಿದರು.

ನನ್ನ ಮೇಲೆ ಯಾವುದೇ ಕಪ್ಪು ಮಸಿ ಇಲ್ಲ. ಇದೂಂದು ಸುಳ್ಳು ಆರೋಪ. ಸುಳ್ಳು ಕೇಸ್​ನಲ್ಲಿ ನನ್ನನ್ನು ಆರೋಪಿ ಮಾಡಿದ್ದಾರೆ. ಕೋರ್ಟ್​ನಲ್ಲಿ ಇದಕ್ಕೆಲ್ಲ ಉತ್ತರ ನೀಡುತ್ತೇವೆ ಎಂದ ಸಿಎಂ, ನನ್ನ ಬಳಿ ಯಾವುದೇ ದಾಖಲಾತಿಯನ್ನು ಲೋಕಾಯುಕ್ತರು ಕೇಳಿಲ್ಲ ಎಂದು ಹೇಳಿದರು.

ಬಿಜೆಪಿಯಿಂದ ಗೋಬ್ಯಾಕ್‌ ಸಿಎಂ ಪ್ರತಿಭಟನೆಗೆ ಪ್ರತಿಕ್ರಿಯಿಸಿ ಸ್ನೇಹಮಯಿ ಕೃಷ್ಣ ಏನಂತ ಕೇಸ್‌ ಹಾಕಿರೋದು? ರಾಜ್ಯಪಾಲರು ಏನು ಅಂತ ಕೊಟ್ಟಿರೋದು? ಗೋ ಬ್ಯಾಕ್‌ ಸಿಎಂ ಸಿದ್ದರಾಮಯ್ಯ ಅಂತ ಪ್ರತಿಭಟನೆ ಮಾಡಿದರೇ ಇವರು ತನಿಖೆಗೆ ವಿರುದ್ಧ ಇದ್ದಾರಾ? ತನಿಖೆ ಆಗಬಾರದು ಅಂತ ಇದ್ದಾರಾ? ಎಂದು ಪ್ರಶ್ನೆ ಮಾಡಿದ ಸಿಎಂ, ಸುಳ್ಳು ಕೇಸ್‌ ಹಾಗೂ ಸುಳ್ಳು ಆರೋಪ ಮಾಡಿರುವುದು ಸ್ಪಷ್ಟವಾಗಿ ಗೊತ್ತಾಗುತ್ತದೆ ಎಂದು ಬಿಜೆಪಿ ಮೇಲೆ ವಾಗ್ದಾಳಿ ಮಾಡಿದರು.

ಸಿಬಿಐ ಯಾರ ಕೈಯಲ್ಲಿದೆ: ಸಿಬಿಐಗೆ ತನಿಖೆ ವಹಿಸುವಂತೆ ಬಿಜೆಪಿ ಆಗ್ರಹಕ್ಕೆ ಪ್ರತಿಕ್ರಿಯಿಸಿದ ಸಿಎಂ, ಸಿಬಿಐ ಯಾರ ಕೈಯಲ್ಲಿದೆ? ಬಿಜೆಪಿಯವರು ಯಾವತ್ತಾದರೂ ಯಾವುದಾದರೂ ಹಗರಣವನ್ನು ಸಿಬಿಐ ತನಿಖೆಗೆ ನೀಡಿದ್ದಾರಾ? ಎಂದು ಮರು ಪ್ರಶ್ನೆ ಹಾಕಿದರು.

ಲೋಕಾಯುಕ್ತ ತನಿಖೆ ತಮ್ಮ ಮೂಗಿನ ನೇರಕ್ಕೆ ನಡಿಯುತ್ತಿದೆ ಎಂದು ಬಿಜೆಪಿ ಆರೋಪ ಮಾಡುತ್ತಿದೆ ಎಂಬ ಪ್ರಶ್ನೆಗೆ, ಲೋಕಾಯುಕ್ತ ಮಾಡಿದವರು ಯಾರು? ಅದೊಂದು ಸ್ವತಂತ್ರ ತನಿಖಾ ಸಂಸ್ಥೆ. ಸಿಬಿಐ ಹೇಗೆ ಕಾರ್ಯನಿರ್ವಹಿಸುತ್ತದೋ ಹಾಗೆಯೇ ರಾಜ್ಯದಲ್ಲಿ ಲೋಕಾಯುಕ್ತ ಪೊಲೀಸ್​ ಕೆಲಸ ಮಾಡುತ್ತದೆ ಎಂದರು.

ಇದನ್ನೂ ಓದಿ: ಎರಡು ಗಂಟೆ ತನಿಖೆ ಮುಗಿಸಿ ಲೋಕಾಯುಕ್ತ ಸಂಸ್ಥೆಯಿಂದ ಹೊರಗೆ ಬಂದ ಸಿಎಂ ಸಿದ್ದರಾಮಯ್ಯ

Last Updated : 1 hours ago
ETV Bharat Logo

Copyright © 2024 Ushodaya Enterprises Pvt. Ltd., All Rights Reserved.