ETV Bharat / state

ದಾವಣಗೆರೆ: ಕಾಶಿ ವಿಶ್ವನಾಥ ದೇಗುಲ ಮಾದರಿ ಮಹಾಮಂಟಪದಲ್ಲಿ ಹಿಂದೂ ಮಹಾಗಣಪತಿ - Davanagere Hindu Mahaganapati

author img

By ETV Bharat Karnataka Team

Published : Sep 7, 2024, 9:56 PM IST

ಕಾಶಿ ವಿಶ್ವನಾಥ ದೇವಾಲಯ ಹೋಲುವ ಮಹಾಮಂಟಪದಲ್ಲಿ ಶಿವನ ಆವತಾರದಲ್ಲಿ ವಿಘ್ನವಿನಾಶಕ ವಿಜೃಂಭಿಸುತ್ತಿದ್ದಾನೆ. ಕೋಲ್ಕತ್ತಾ ಮೂಲದ ಕಾರ್ಮಿಕರ ಕೈ ಚಳಕದಲ್ಲಿ ಆಕರ್ಷಕ ಮಹಾಮಂಟಪ ತಲೆ ಎತ್ತಿದೆ.

hindu mahaganapati
ಹಿಂದೂ ಮಹಾಗಣಪತಿ (ETV Bharat)

ದಾವಣಗೆರೆ: ಇಲ್ಲಿನ ಹಿಂದೂ ಮಹಾಗಣಪತಿಯ ಮಹಾಮಂಟಪವು ಈ ಬಾರಿ ವಿಶೇಷವಾಗಿ ವಾರಾಣಸಿ ಶ್ರೀ ಕಾಶಿ ವಿಶ್ವನಾಥ ದೇವಾಲಯದ ಮಾದರಿಯಲ್ಲಿ ನಿರ್ಮಾಣಗೊಂಡಿದ್ದು, ಭಕ್ತರ ಆಕರ್ಷಣೆಯ ಕೇಂದ್ರಬಿಂದುವಾಗಿದೆ. ಮಹಾಮಂಟಪದಲ್ಲಿ ಗಣೇಶ ಚತುರ್ಥಿಯ ಇಂದು ವಿನಾಯಕ ವಿರಾಜಮಾನನಾಗಿದ್ದಾನೆ. ಪಶ್ಚಿಮ ಬಂಗಾಳದ ಕೋಲ್ಕತ್ತಾದ ಮಹಾ ಪೆಂಡಾಲ್​ನ ಕಾರ್ಮಿಕರ ಕೈಯಲ್ಲಿ ಬೃಹತ್ ಮಹಾಮಂಟಪ ಅರಳಿ ನಿಂತಿದೆ.‌

ಮಹಾಮಂಟಪವನ್ನು ಗಣೇಶ ಚತುರ್ಥಿಯ ಇಂದು‌ ಸಂಜೆ ಉದ್ಘಾಟನೆ ಮಾಡಲಾಗಿದೆ. ಶಿವನ ಅವತಾರದಲ್ಲಿ ಮಂಟಪಕ್ಕೆ ಹೋಲಿಕೆಯಾಗುವಂತೆ ಹಿಂದೂ ಮಹಾಗಣಪತಿಯಯನ್ನು ಪ್ರತಿಷ್ಠಾಪನೆ ಮಾಡಲಾಗಿದೆ.

ಮಹಾಮಂಟಪದ ವಿಶೇಷಗಳು: ಮಹಾಮಂಟಪದಲ್ಲಿನ ಮಂಟಪಗಳು, ಕಮಾನುಗಳು ಜನಾಕರ್ಷಕವಾಗಿವೆ. ಮಂಟಪವನ್ನು ನಾಲ್ಕು ಸಾವಿರ ಪೋಲ್​ಗಳನ್ನು ಬಳಸಿ ನಿರ್ಮಿಸಲಾಗಿದೆ. ಅಲ್ಲದೇ, ಒಂದೂವರೆ ಲಕ್ಷ ಅಡಿ ಉದ್ದ ರೀಪ್, 10 ಸಾವಿರ ಮೀಟರ್ ಬಟ್ಟೆ, ಥರ್ಮಕೋಲ್, ಫೆವಿಕೊಲ್ ಬಳಕೆ ಮಾಡಲಾಗಿದೆ.‌ ಕೊಲ್ಕತ್ತಾದ ಒಟ್ಟು 25 ಮಂದಿ ಕಾರ್ಮಿಕರು ಈ ಮಂಟಪವನ್ನು ನಿರ್ಮಿಸಲು ಶ್ರಮಿಸಿದ್ದಾರೆ.

ಹಿಂದೂ ಮಹಾಗಣಪತಿ ಟ್ರಸ್ಟ್​​ನವರು ಹೇಳುವುದೇನು?: ಈ ಬಗ್ಗೆ ಹಿಂದೂ ಮಹಾಗಣಪತಿ ಟ್ರಸ್ಟ್ ಅಧ್ಯಕ್ಷ ಜೊಳ್ಳಿ ಗುರು ಈಟಿವಿ ಭಾರತದ ಜೊತೆ ಮಾತನಾಡಿ, "ಶ್ರೀ ಕಾಶಿ ವಿಶ್ವನಾಥ ದೇವಸ್ಥಾನದ ಮಾದರಿಯ ಮಹಾಮಂಟಪ ನಿರ್ಮಾಣ ಮಾಡಿದ್ದೇವೆ. ನಾವು 2018ರಿಂದಲೂ ಇದೇ ರೀತಿ ವಿವಿಧ ದೇವಾಯಲಗಳ ಮಾದರಿಯ ಮಂಟಪಗಳಲ್ಲಿ ಗಣಪತಿಯನ್ನು ಕೂರಿಸುತ್ತಿದ್ದೇವೆ. 2018ರಲ್ಲಿ ಅಸ್ಸಾಂನ ದೇಗುಲ, 2019ರಲ್ಲಿ ಧರ್ಮಸ್ಥಳ ದೇವಾಲಯ ಹೋಲುವ ಮಹಾಮಂಟಪದಲ್ಲಿ ಗಣೇಶನನ್ನು ಪ್ರತಿಷ್ಠಾಪಿಸಿ ಆರಾಧಿಸಲಾಗಿತ್ತು. 2020-21ರಲ್ಲಿ ಕೊರೊನಾ ಹಿನ್ನೆಲೆಯಲ್ಲಿ ಏನೂ ಮಾಡಲು ಆಗಲಿಲ್ಲ'' ಎಂದರು.

''2022ರಲ್ಲಿ ತರಳಬಾಳು ಮಂಟಪ, 2023ರಲ್ಲಿ ಕೇದಾರನಾಥ ದೇಗುಲ ಹಾಗೂ ಇದೀಗ 2024ರಲ್ಲಿ ಕಾಶಿ ವಿಶ್ವನಾಥ ದೇವಾಲಯದ ಮಾದರಿಯ ಮಹಾಮಂಟಪ ಸಜ್ಜುಗೊಳಿಸಿದ್ದೇವೆ. ಶಿವನ ಅವತಾರದಲ್ಲಿ ಇದು ಮಂಟಪಕ್ಕೆ ಹೋಲಿಕೆಯಾಗುವಂತೆ ಗಣೇಶವನ್ನು ಪ್ರತಿಷ್ಠಾಪನೆ ಮಾಡಲಾಗಿದೆ. ಕೋಲ್ಕತ್ತಾದ ಮಹಾ ಪೆಂಡಾಲ್ ಅವರಿಗೆ ನಿರ್ಮಾಣದ ಜವಾಬ್ದಾರಿ ವಹಿಸಲಾಗಿತ್ತು. ಒಟ್ಟು 25 ಜನ ಕೆಲಸ ಮಾಡಿದ್ದಾರೆ'' ಎಂದು ತಿಳಿಸಿದರು.

ಇದನ್ನೂ ಓದಿ: ಹಿಂದೂ ಮಹಾಸಭಾ ಗಣಪತಿ ತರುವ ವೇಳೆ ಎಂಎಲ್​ಸಿ ಸಿಟಿ ರವಿ ಭರ್ಜರಿ ಡ್ಯಾನ್ಸ್ - MLC C T Ravi Dance

ETV Bharat Logo

Copyright © 2024 Ushodaya Enterprises Pvt. Ltd., All Rights Reserved.