ETV Bharat / state

ಮೈಸೂರು: ಸಕಲ ಸರ್ಕಾರಿ​ ಗೌರವದೊಂದಿಗೆ ಪಂಡಿತ್‌ ರಾಜೀವ್‌ ತಾರಾನಾಥ್‌ ಅಂತ್ಯಕ್ರಿಯೆ - Funeral of Rajiv Taranath - FUNERAL OF RAJIV TARANATH

ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿರುವ ವಿದ್ಯುತ್‌ ಚಿತಾಗಾರದಲ್ಲಿ ಪಂಡಿತ್ ರಾಜೀವ್ ತಾರಾನಾಥ್ ಅವರ ಅಂತ್ಯಕ್ರಿಯೆ ನಡೆಸಲಾಯಿತು.

Funeral of Pandit Rajeev Taranath with full police honors
ಪೊಲೀಸ್​ ಗೌರವದೊಂದಿಗೆ ಪಂಡಿತ್‌ ರಾಜೀವ್‌ ತಾರಾನಾಥ್‌ ಅಂತ್ಯಕ್ರಿಯೆ (ETV Bharat)
author img

By ETV Bharat Karnataka Team

Published : Jun 12, 2024, 7:22 PM IST

ಮೈಸೂರು: ಅನಾರೋಗ್ಯದಿಂದ ಮಂಗಳವಾರ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಪಂಡಿತ್ ರಾಜೀವ್ ತಾರಾನಾಥ್ (92) ಅವರ ಅಂತ್ಯಕ್ರಿಯೆ ಇಂದು ಸಕಲ ಪೊಲೀಸ್​ ಗೌರವ ವಂದನೆಯೊಂದಿಗೆ ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿರುವ ವಿದ್ಯುತ್‌ ಚಿತಾಗಾರದಲ್ಲಿ ನಡೆಯಿತು. ಈ ವೇಳೆ ಅವರ ಕುಟುಂಬಸ್ಥರು, ಸಾಹಿತಿಗಳು, ಅಪಾರ ಸಂಖ್ಯೆಯ ಅಭಿಮಾನಿಗಳು ಹಾಜರಿದ್ದರು.

Funeral of Pandit Rajeev Taranath with full police honors
ಪೊಲೀಸ್​ ಗೌರವದೊಂದಿಗೆ ಪಂಡಿತ್‌ ರಾಜೀವ್‌ ತಾರಾನಾಥ್‌ ಅಂತ್ಯಕ್ರಿಯೆ (ETV Bharat)

ಇದಕ್ಕೂ ಮುನ್ನ ಕುವೆಂಪು ನಗರದಲ್ಲಿರುವ ಅವರ ನಿವಾಸದಲ್ಲಿ ಸಾರ್ವಜನಿಕರಿಗಾಗಿ ಬೆಳಗ್ಗೆ 9 ಗಂಟೆಯಿಂದ ಮಧ್ಯಾಹ್ನ 12 ಗಂಟೆವರೆಗೆ ಅವರ ಪಾರ್ಥಿವ ಶರೀರವನ್ನು ಅಂತಿಮ ದರ್ಶನಕ್ಕಾಗಿ ಇಡಲಾಗಿತ್ತು. ಬಳಿಕ ಚಾಮುಂಡಿ ಬೆಟ್ಟ ತಪ್ಪಲಿರುವ ವಿದ್ಯುತ್‌ ಚಿತಾಗಾರಕ್ಕೆ ತೆಗೆದುಕೊಂಡು ಹೋಗಿ ಅಂತ್ಯ ಸಂಸ್ಕಾರ ನೆರವೇರಿಸಲಾಯಿತು. ಜಿಲ್ಲಾ ಉಸ್ತುವಾರಿ ಸಚಿವ ಡಾ. ಹೆಚ್.ಸಿ. ಮಹದೇವಪ್ಪ, ಸಾಹಿತಿಗಳಾದ ಜಯಂತ್‌ ಕಾಯ್ಕಿಣಿ, ಚಂದ್ರಶೇಖರ್‌ ಕಂಬಾರ್‌ ಸೇರಿದಂತೆ ಹಲವರು ರಾಜೀವ್ ತಾರಾನಾಥ್ ಅವರ ಅಂತಿಮ ದರ್ಶನ ಪಡೆದರು.

ಅಂತಿಮ ದರ್ಶನದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಸಚಿವ ಡಾ. ಹೆಚ್.ಸಿ. ಮಹದೇವಪ್ಪ, ತಾರಾನಾಥ್ ಅವರ ನಿಧನ ಸಂಗೀತ ಲೋಕಕ್ಕೆ ತುಂಬಲಾರದ ನಷ್ಟ. ಅವರ ಸ್ಥಾನ ತುಂಬಲು ಮತ್ತೊಬ್ಬರಿಗೆ ಸಾಧ್ಯವಿಲ್ಲ. ಅವರು ಚಿಕಿತ್ಸೆ ಪಡೆಯುತ್ತಿದ್ದ ಖಾಸಗಿ ಆಸ್ಪತ್ರೆಗೆ ನಾನು ಭೇಟಿ ನೀಡಿದ್ದೆ. ಆಗ ಅವರ ಆರೋಗ್ಯವನ್ನು ವಿಚಾರಿಸಿದ್ದೆ. ಸರ್ಕಾರವೇ ಅವರ ಆಸ್ಪತ್ರೆಯ ಚಿಕಿತ್ಸಾ ವೆಚ್ಚ ಭರಿಸಲು ನಿರ್ಧರಿಸಿದೆ. ಅವರ ಸಾವು ನಮಗೆಲ್ಲ ದಿಗ್ಬ್ರಮೆ ಉಂಟುಮಾಡಿದೆ ಎಂದು ಸಂತಾಪ ಸೂಚಿಸಿದರು.

ಪಂಡಿತ್‌ ರಾಜೀವ್‌ ತಾರಾನಾಥ್‌ (ETV Bharat)

ತಾರಾನಾಥ್ ಅವರು ನಮ್ಮ ಹಿತೈಷಿಯಾಗಿದ್ದರು. ಮೈಸೂರಿಗೆ ಬಂದಾಗಲೆಲ್ಲ ಅವರನ್ನು ಭೇಟಿ ಮಾಡುತ್ತಿದ್ದೆವು. ಈ ವೇಳೆ ನನ್ನ ಸಾಹಿತ್ಯ, ಹೊಸ ಗೀತೆಗಳ ಬಗ್ಗೆ ಮಾತನಾಡುತ್ತಿದ್ದರು. ಅವರ ಸಾವು ತುಂಬಲಾರದ ನಷ್ಟ ಎಂದು ಸಾಹಿತಿ ಜಯಂತ್ ಕಾಯ್ಕಿಣಿ ಕೂಡ ಸರೋದ್ ವಾದಕನ ಗುಣಗಾನ ಮಾಡಿದರು.

ಇದನ್ನೂ ಓದಿ: ಖ್ಯಾತ ಸರೋದ್ ವಾದಕ ಪಂಡಿತ್ ರಾಜೀವ್ ತಾರಾನಾಥ್ ನಿಧನ - Sarod Maestro Pandit Taranath

ETV Bharat Logo

Copyright © 2025 Ushodaya Enterprises Pvt. Ltd., All Rights Reserved.