ETV Bharat / state

ದ್ವಾರಕೀಶ್‌ ನೆನಪಿನಲ್ಲಿ ದಸರಾ ಚಲನಚಿತ್ರೋತ್ಸವ: ಸಿಎಂ ಜೊತೆ ಭಾಗಿಯಾಗಲಿದ್ದಾರೆ ರಮೇಶ್​, ಡಾಲಿ, ಸಪ್ತಮಿಗೌಡ - Dasara Film Festival - DASARA FILM FESTIVAL

ಅಕ್ಟೋಬರ್‌ 3ರಂದು ದಸರಾ ಚಲನಚಿತ್ರೋತ್ಸವಕ್ಕೆ ಚಾಲನೆ ಸಿಗಲಿದೆ. ಮುಖ್ಯಮಂತ್ರಿಗಳು ಕಾರ್ಯಕ್ರಮ ಉದ್ಘಾಟನೆ ಮಾಡಲಿದ್ದು, ಈ ಕಾರ್ಯಕ್ರಮದಲ್ಲಿ ಕನ್ನಡ ಚಿತ್ರರಂಗದ ಖ್ಯಾತ ಕಲಾವಿದರಾದ ರಮೇಶ್‌ ಅರವಿಂದ್‌, ಡಾಲಿ ಧನಂಜಯ್‌, ಸಪ್ತಮಿಗೌಡ, ಶರಣ್ಯ ಶೆಟ್ಟಿ, ಅಂಕಿತ ಬೋಪಯ್ಯ ಸೇರಿದಂತೆ ಹಲವು ನಟನಟಿಯರು ಭಾಗವಹಿಸಲಿದ್ದಾರೆ.

Dussehra film festival
ಅಕ್ಟೋಬರ್‌ 3ರಿಂದ ದಸರಾ ಚಲನಚಿತ್ರೋತ್ಸವ (ETV Bharat)
author img

By ETV Bharat Karnataka Team

Published : Sep 24, 2024, 5:21 PM IST

ಮೈಸೂರು: ಅಕ್ಟೋಬರ್‌ 3ರಿಂದ ನಾಡಹಬ್ಬ ದಸರಾ ಮಹೋತ್ಸವದ ನಿಮಿತ್ತ ದಸರಾ ಚಲನಚಿತ್ರೋತ್ಸವ ನಡೆಯಲಿದ್ದು, ಈ ಕಾರ್ಯಕ್ರಮವನ್ನು ಮುಖ್ಯಮಂತ್ರಿಗಳು ಉದ್ಘಾಟನೆ ಮಾಡಲಿದ್ದಾರೆ ಎಂದು ದಸರಾ ಚಲನಚಿತ್ರೋತ್ಸವದ ಉಪಸಮಿತಿ ವಿಶೇಷ ಅಧಿಕಾರಿ ಡಾ. ಬಸವರಾಜ್‌ ಮಾಹಿತಿ ನೀಡಿದರು.

ಇಂದು ಮೈಸೂರಿನ ಅರಣ್ಯ ಭವನದಲ್ಲಿ ದಸರಾ ಚಲನಚಿತ್ರೋತ್ಸವದ ಬಗ್ಗೆ ಮಾಹಿತಿ ನೀಡಿದ ಅವರು, ಅಕ್ಟೋಬರ್‌ 3ರಂದು ಕರ್ನಾಟಕ ರಾಜ್ಯ ಮುಕ್ತ ವಿ‍ಶ್ವವಿದ್ಯಾನಿಲಯದ ಘಟಿಕೋತ್ಸವ ಭವನದಲ್ಲಿ ದಸರಾ ಚಲನಚಿತ್ರೋತ್ಸವಕ್ಕೆ ಚಾಲನೆ ನೀಡಲಾಗುವುದು. ಈ ಕಾರ್ಯಕ್ರಮದಲ್ಲಿ ಕನ್ನಡ ಚಿತ್ರರಂಗದ ಖ್ಯಾತ ಕಲಾವಿದರಾದ ರಮೇಶ್‌ ಅರವಿಂದ್‌, ಡಾಲಿ ಧನಂಜಯ್‌, ಸಪ್ತಮಿಗೌಡ, ಶರಣ್ಯ ಶೆಟ್ಟಿ, ಅಂಕಿತ ಬೋಪಯ್ಯ ಸೇರಿದಂತೆ ಹಲವು ನಟನಟಿಯರು ಭಾಗವಹಿಸಲಿದ್ದಾರೆ. ಸಾಧುಕೋಕಿಲ ತಂಡದಿಂದ ಸಂಗೀತ ಹಾಗೂ ಮನರಂಜನಾ ಕಾರ್ಯಕ್ರಮಗಳು ನಡೆಯಲಿವೆ ಎಂದು ತಿಳಿಸಿದರು.

ದಸರಾ ಚಲನಚಿತ್ರೋತ್ಸವ ಮಾಹಿತಿ (ETV Bharat)

ದ್ವಾರಕೀಶ್‌ ನೆನಪಿನಲ್ಲಿ ಚಲನಚಿತ್ರೋತ್ಸವ: ಇತ್ತೀಚೆಗೆ ನಿಧನರಾದ ಕನ್ನಡ ಖ್ಯಾತ ನಟ, ನಿರ್ದೇಶಕ ಹಾಗೂ ನಿರ್ಮಾಪಕ ದ್ವಾರಕೀಶ್‌ ಸವಿನೆನಪಿಗಾಗಿ ಈ ಬಾರಿಯ ದಸರಾ ಚಲನಚಿತ್ರೋತ್ಸ ಆಯೋಜನೆ ಮಾಡಲಾಗಿದೆ. ದ್ವಾರಕೀಶ್‌ ಅಭಿನಯದ ಚಲನಚಿತ್ರಗಳನ್ನು ಪ್ರದರ್ಶನ ಮಾಡಲಾಗುವುದು. ಜೊತೆಗೆ ಸಾಮಾಜಿಕ ಸಂದೇಶ ಹಾಗೂ ರಾಷ್ಟ್ರಪ್ರಶಸ್ತಿ ಪಡೆದ ಚಿತ್ರಗಳನ್ನು ಸಹ ಪ್ರದರ್ಶನ ಮಾಡಲಾಗುವುದು.

ಅಕ್ಟೋಬರ್‌ 4 ರಿಂದ 10ರವರೆಗೆ ಬಿಎಂ ಹ್ಯಾಬಿಟೇಟ್‌ ಮಾಲ್​​​ನ ಡಿಆರ್​ಸಿಸಿ ನಲ್ಲಿ ಒಂದು ಸ್ಕ್ರೀನ್​​, ಮಾಲ್‌ ಆಫ್‌ ಮೈಸೂರ್‌ ಐನಾಕ್ಸ್‌ (INOX)ನ ಮೂರು ಸ್ಕ್ರೀನ್​​ನಲ್ಲಿ ಚಲನಚಿತ್ರಗಳು ಪ್ರದರ್ಶನವಾಗಲಿದೆ. ಈ ಬಾರಿ 112 ಸಿನಿಮಾಗಳು ಪ್ರದರ್ಶನಗೊಳ್ಳಲಿದೆ. ಓಲ್ಡ್‌ ಇಸ್‌ ಗೋಲ್ಡ್‌ ಶೀರ್ಷಿಕೆಯಲ್ಲಿ ಡಾ.ರಾಜ್​​ಕುಮಾರ್‌, ವಿಷ್ಣುವರ್ಧನ್‌, ಅಂಬರೀಶ್‌, ಶಂಕರ್‌ ನಾಗ್‌, ಪುನೀತ್‌ ರಾಜ್​​ಕುಮಾರ್‌, ರಮೇಶ್‌ ಅರವಿಂದ್‌ ಸೇರಿದಂತೆ ಇತರರ ಸಿನಿಮಾಗಳ ಜತೆಗೆ ಈ ಬಾರಿ ವಿಶೇಷ ಸಿನಿಮಾಗಳಲ್ಲಿ ಭಾರತೀಯ ಅಧಿಕೃತ ಭಾಷೆಗಳ ಹಾಗೂ ಬುಡಕಟ್ಟು ಚಲನಚಿತ್ರಗಳು ಪ್ರದರ್ಶನ ಆಗಲಿವೆ.

ಮಾಲ್ ಆಫ್ ಮೈಸೂರಿನಲ್ಲಿ ಸಿನಿ-ಫೋಟೋ ಪ್ರದರ್ಶನ: ಈ ಬಾರಿ ವಿಶೇಷವಾಗಿ ಸಿನಿ ಫೋಟೋ ಪ್ರದರ್ಶನವನ್ನು ಐನಾಕ್ಸ್ ಸಿನಿಮಾಸ್ ಹೊರ ಆವರಣದಲ್ಲಿ ದಿನಾಂಕ 04-10- 2024 ರಿಂದ 10-10-2024ರವರೆಗೆ ಆಯೋಜನೆ ಮಾಡಲಾಗುವುದು.

Dussehra film festival
ಅಕ್ಟೋಬರ್‌ 3ರಿಂದ ದಸರಾ ಚಲನಚಿತ್ರೋತ್ಸವ (ETV Bharat)

ಐನಾಕ್ಸ್​​​ನಲ್ಲಿ ಅತ್ಯುತ್ತಮ ಕಿರುಚಿತ್ರಗಳ (ಶಾರ್ಟ್​ ಫಿಲ್ಮ್) ಪ್ರದರ್ಶನ: ಯುವಜನಾಂಗಕ್ಕೆ ಪ್ರೋತ್ಸಾಹ ನೀಡಲು ಕಿರುಚಿತ್ರ ಸ್ಪರ್ಧೆ ಏರ್ಪಡಿಸಲಾಗಿದ್ದು, ಆಯ್ಕೆಗೊಂಡ ಅತ್ಯುತ್ತಮ 10 ಕಿರುಚಿತ್ರಗಳನ್ನು ಸಹ ದೊಡ್ಡ ಪರದೆಯಲ್ಲಿ ಪ್ರದರ್ಶನ ಮಾಡಲಾಗುವುದು.

ದಿನಾಂಕ 08.10.2024ರಂದು ಕಿರುಚಿತ್ರಗಳಲ್ಲಿ ಪ್ರಥಮ, ದ್ವಿತೀಯ, ತೃತೀಯ ಬಹುಮಾನಗಳನ್ನು ಹಾಗೂ ಅತ್ಯುತ್ತಮ ಸಂಕಲನಗಾರ ಹಾಗೂ ಅತ್ಯುತ್ತಮ ಛಾಯಾಗ್ರಾಹಕರಿಗೂ ಬಹುಮಾನ ವಿತರಣೆ ಮಾಡಲಿದ್ದು, ಕಾರ್ಯಕ್ರಮದಲ್ಲಿ ಖ್ಯಾತ ನಟರಾದ ಮಂಡ್ಯ ರಮೇಶ್ ಅವರು ಭಾಗವಹಿಸಲಿದ್ದಾರೆ.

ದಸರಾ ಚಲನಚಿತ್ರೋತ್ಸವದ ಟಿಕೆಟ್ ದರಗಳು: ಸಿನಿಪ್ರಿಯರು ಅನ್​​ಲೈನ್ ಮೂಲಕ ನೋಂದಣಿ ಮಾಡಬಹುದು. ವಿದ್ಯಾರ್ಥಿಗಳು ಮತ್ತು ನಾಗರಿಕರಿಗೆ 300 ರೂ. ಹಾಗೂ ಇತರರಿಗೆ 500 ರೂ. ಪಾವತಿ ಮಾಡಿ ಪಾಸ್ ಪಡೆಯಬಹುದು. ದಸರಾ ಚಿತ್ರೋತ್ಸವದ 7 ದಿನವೂ ಸಿನಿಮಾಗಳನ್ನು ವೀಕ್ಷಿಸಬಹುದು ಹಾಗೂ ಪಾಸ್ ಜೊತೆಯಲ್ಲಿ ಚಲನಚಿತ್ರಗಳ ಮಾಹಿತಿ ಹೊಂದಿರುವ ಕಿರು ಹೊತ್ತಿಗೆ ನೀಡಲಾಗುತ್ತದೆ.

ಆನ್​ಲೈನ್ ನೋಂದಣಿ ಮಾಡುವ ದಿನಾಂಕ:

  • 26.09.2024 ರಿಂದ 10.10.2024 ರವರೆಗೆ ಪಾಸ್ ಪಡೆಯಬಹುದಾಗಿರುತ್ತದೆ.
  • ಆಫ್​​ಲೈನ್​ನಲ್ಲಿ 26-09-2024ರಿಂದ ಮೈಸೂರಿನ ವಾರ್ತಾ ಭವನದಲ್ಲಿ ಲಭ್ಯವಿರುತ್ತದೆ.

ಈ ಬಾರಿಯ ವಿಶೇಷಗಳು

1. ಆನೆ ಮಾವುತ, ಕಾವಡಿಗರಿಗೆ ವಿಶೇಷ ಚಲನಚಿತ್ರ ಪ್ರದರ್ಶನ.

2. ವಿಕಲಚೇತನರಿಗೆ ವಿಶೇಷ ಚಲನಚಿತ್ರ ಪ್ರದರ್ಶನ.

3. ಮಾಧ್ಯಮ ಮಿತ್ರರಿಗೂ ವಿಶೇಷ ಚಲನಚಿತ್ರ ಪ್ರದರ್ಶನ.

ಇದನ್ನೂ ಓದಿ: 'ಲಡ್ಡು ಸೂಕ್ಷ್ಮ ವಿಷಯ': ಪವನ್​ ಕಲ್ಯಾಣ್​ ಆಕ್ರೋಶಕ್ಕೆ ಗುರಿಯಾಯ್ತು ಕಾರ್ತಿ ಹೇಳಿಕೆ; ಡಿಸಿಎಂ ಬಳಿ ಕ್ಷಮೆಯಾಚಿಸಿದ ನಟ - Karthi Apologises To Pawan Kalyan

ETV Bharat Logo

Copyright © 2025 Ushodaya Enterprises Pvt. Ltd., All Rights Reserved.