ಚಾಮರಾಜನಗರ: ತಾಯಿ ಮೃತಪಟ್ಟಿರುವ ಬಗ್ಗೆ ಮರಣ ಪ್ರಮಾಣ ಪತ್ರ ಕೋರಿ ಅರ್ಜಿ ಸಲ್ಲಿಸಿದ್ದ ಮಗನ ಹೆಸರಲ್ಲೇ ಮರಣ ಪ್ರಮಾಣ ಪತ್ರ ನೀಡಿರುವ ಘಟನೆ ಕೊಳ್ಳೇಗಾಲದಲ್ಲಿ ನಡೆದಿದೆ.
ಕೊಳ್ಳೇಗಾಲ ಪಟ್ಟಣದ ಹಳೇ ಕುರುಬರ ಬೀದಿಯ ನಿವಾಸಿ ಶಂಕರ್ ಅವರು ತಾಯಿ ಪುಟ್ಟಮ್ಮ ಅವರ ಮರಣ ಪ್ರಮಾಣ ಪತ್ರ ನೀಡುವಂತೆ ನಗರಸಭೆಗೆ ಅರ್ಜಿ ಸಲ್ಲಿಸಿದ್ದರು. ಆದರೆ, ಕೊಳ್ಳೇಗಾಲ ನಗರಸಭೆಯ ಜನನ - ಮರಣ ನೋಂದಣಿ ವಿಭಾಗದ ಸಿಬ್ಬಂದಿ ಮಹಾದೇವಸ್ವಾಮಿ ಎಂಬವರು ನಿಧನ ಹೊಂದಿದ ಪುಟ್ಟಮ್ಮ ಬದಲಾಗಿ ಬದುಕಿರುವ ಶಂಕರ್‌ಗೆ ಮರಣ ಪ್ರಮಾಣ ಪತ್ರ ಕೊಟ್ಟು ಎಡವಟ್ಟು ಮಾಡಿದ್ದಾರೆ.
ಅರ್ಜಿಯಲ್ಲಿ ಪುಟ್ಟಮ್ಮ ಎಂದು ಬರೆಯಲಾಗಿತ್ತು. ಆದರೂ ಸಿಬ್ಬಂದಿ ಕರ್ತವ್ಯ ಲೋಪ ಎಸಗಿ ನನ್ನ ಹೆಸರಿನಲ್ಲಿ ಮರಣ ಪ್ರಮಾಣ ಪತ್ರ ಕೊಟ್ಟಿದ್ದು, ಕೂಡಲೇ ಸರಿಪಡಿಸಬೇಕು ಎಂದು ಶಂಕರ್ ಆಗ್ರಹಿಸಿದ್ದಾರೆ. ಬಳಿಕ ನಗರಸಭೆ ಮೇಲಧಿಕಾರಿಗಳು ಮರಣ ಪ್ರಮಾಣ ಪತ್ರದಲ್ಲಿನ ದೋಷವನ್ನು ಸರಿಪಡಿಸುವುದಾಗಿ ಶಂಕರ್‌ಗೆ ಭರವಸೆ ಕೊಟ್ಟಿದ್ದಾರೆ.
ಇದನ್ನೂ ಓದಿ: ಸಿನಿಮಾ ನಿರ್ದೇಶಕನಾಗಬೇಕಿದ್ದವ ಪತ್ನಿಯ ಗೆಳೆಯನ ಕೊಂದು ಜೈಲು ಸೇರಿದ್ದ: ಈಗ 42 ಕಳ್ಳತನ ಕೇಸ್ನಲ್ಲಿ ಮತ್ತೆ ಅರೆಸ್ಟ್