ETV Bharat / state

'ನಿಮಗಾಗಿ ತ್ಯಾಗ ಮಾಡಿದ್ದೇನೆ ಸರ್': ಸಿದ್ದರಾಮಯ್ಯಗೆ ಕರೆ ಮಾಡಿದ ಅಜ್ಜಂಪೀರ್ ಖಾದ್ರಿ - AJJAMPIR QADRI

ಶಿಗ್ಗಾಂವಿ ಉಪಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವು ಖಚಿತವಾಗುತ್ತಿದ್ದಂತೆ, ಬಂಡಾಯ ಘೋಷಿಸಿ ಬಳಿಕ ನಾಮಪತ್ರ ವಾಪಸ್​ ಪಡೆದಿದ್ದ ಪಕ್ಷದ ಮುಖಂಡ ಮುಖಂಡ ಅಜ್ಜಂಪೀರ್ ಖಾದ್ರಿ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಕರೆ ಮಾಡಿದ್ದರು.

ajjampir qadri
ಅಜ್ಜಂಪೀರ್ ಖಾದ್ರಿ, ಸಿದ್ದರಾಮಯ್ಯ (ETV Bharat)
author img

By ETV Bharat Karnataka Team

Published : Nov 23, 2024, 8:51 PM IST

ಹಾವೇರಿ: ಜಿಲ್ಲೆಯ ಶಿಗ್ಗಾಂವಿ ವಿಧಾನಸಭೆ ಉಪಚುನಾವಣೆಯಲ್ಲಿ ಬಿಜೆಪಿಯ ಭರತ್​ ಬೊಮ್ಮಾಯಿ ವಿರುದ್ಧ ಕಾಂಗ್ರೆಸ್ ಅಭ್ಯರ್ಥಿ ಯಾಸೀರ್​ ಖಾನ್ ಪಠಾಣ್ ಜಯಭೇರಿ ಬಾರಿಸಿದ್ದಾರೆ. ಪಠಾಣ ಬೆಂಬಲಿಸಿ, ನಾಮಪತ್ರ ವಾಪಸ್ ಪಡೆದು ಪ್ರಚಾರ ಕೈಗೊಂಡ ಕಾಂಗ್ರೆಸ್ ಮುಖಂಡ ಅಜ್ಜಂಪೀರ್ ಖಾದ್ರಿ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಕರೆ ಮಾಡಿ ಸಂತಸ ಹಂಚಿಕೊಂಡರು.

ಅಜ್ಜಂಪೀರ್ ಖಾದ್ರಿ ಸಿಎಂ ಸಿದ್ದರಾಮಯ್ಯ ಜೊತೆ ಮಾತನಾಡಿರುವ ವಿಡಿಯೋ ವೈರಲ್ ಆಗಿದೆ. ಅಜ್ಜಂಪೀರ್ ಖಾದ್ರಿ ಕರೆ ಸ್ವೀಕರಿಸಿದ ಸಿಎಂ ಸಿದ್ದರಾಮಯ್ಯ ಖಾದ್ರಿಗೆ ಶುಭಾಶಯ ಹೇಳಿದ್ದಾರೆ. ಮತ ಏಣಿಕೆ ಮುಗಿತು ಸರ್, 13,000 ಲೀಡ್​​ನಿಂದ ಪಠಾಣ್ ಗೆದ್ದಿದ್ದಾರೆ ಎಂದು ಖಾದ್ರಿ ತಿಳಿಸಿದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಸಿಎಂ ಸಿದ್ದರಾಮಯ್ಯ, ''ಖಾದ್ರಿ ನೀನು ಶ್ರಮಪಟ್ಟಿದ್ದು ಸಾರ್ಥಕವಾಗಿತು'' ಎಂದು ತಿಳಿಸಿದ್ದಾರೆ.

ಸಿಎಂ ಸಿದ್ದರಾಮಯ್ಯಗೆ ಕರೆ ಮಾಡಿದ ಅಜ್ಜಂಪೀರ್ ಖಾದ್ರಿ (Viral Video)

ನಂತರ ಮಾತನಾಡಿದ ಅಜ್ಜಂಪೀರ್ ಖಾದ್ರಿ, ''ನಿಮಗಾಗಿ ಸರ್, ನಮ್ಮ ತಾಯಿಗಾಗಿ ತ್ಯಾಗ ಮಾಡಿದ್ದೇನೆ ಸರ್'' ಎಂದು ಭಾವುಕರಾದರು. ''ನಿಮಗಾಗಿ ತ್ಯಾಗ ಮಾಡಿದ್ದೇನೆ ಸರ್. ನೀವು ಸದಾ ನಗುತ್ತಾ ಇರಬೇಕು. ಅಷ್ಟು ಸಾಕು ಸರ್ ನನಗೆ'' ಎಂದು ಖಾದ್ರಿ ಹೇಳುತ್ತಿದ್ದಂತೆ ಸಿಎಂ ಸಿದ್ದರಾಮಯ್ಯ ನಕ್ಕಿದ್ದಾರೆ.

ಇದನ್ನೂ ಓದಿ: ಶಿಗ್ಗಾಂವಿ ಉಪಚುನಾವಣೆ: ಯಾಸಿರ್​ ಪಠಾಣ್ ಗೆಲುವು​, ಕಾಂಗ್ರೆಸ್ ಹಣದ ಹೊಳೆ ಹರಿಸಿದೆ ಎಂದ ಭರತ್ ಬೊಮ್ಮಾಯಿ

''ನಿನಗೆ ಮತ್ತು ಕಾರ್ಯಕರ್ತರಿಗೆ ಧನ್ಯವಾದ'' ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಕಾಂಗ್ರೆಸ್ ಅಭ್ಯರ್ಥಿ ಯಾಸೀರ್ ಖಾನ್ ಪಠಾಣ್ ಶಿಗ್ಗಾಂವಿ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ 1,00,756 ಮತಗಳನ್ನು ಪಡೆದಿದ್ದಾರೆ. 13,448 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಎದುರಾಳಿ ಬಿಜೆಪಿ ಅಭ್ಯರ್ಥಿ ಭರತ್​ ಬೊಮ್ಮಾಯಿ 87308 ಪಡೆದು ಸೋಲು ಕಂಡಿದ್ದಾರೆ.

ಇದನ್ನೂ ಓದಿ: ''ಆ ಒಂದು ಸಮುದಾಯ ನಮ್ಮ ಕೈ ಹಿಡಿಯಲಿಲ್ಲ'': ದೇವೇಗೌಡರನ್ನ ಭೇಟಿಯಾದ ನಿಖಿಲ್ ಕುಮಾರಸ್ವಾಮಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.