ETV Bharat / state

ರಾಜ್ಯದಲ್ಲಿ ಆರ್ಥಿಕ ಅಪರಾಧ ಹೆಚ್ಚಳ: 700 ಕೇಸ್‌ಗಳ ತನಿಖೆಗೆ ಆರ್ಥಿಕ ತಜ್ಞರ ನಿಯೋಜಿಸಲು ಸಿಐಡಿ ನಿರ್ಧಾರ - Economic Offence Cases - ECONOMIC OFFENCE CASES

ರಾಜ್ಯದಲ್ಲಿ ಆರ್ಥಿಕ ಅಪರಾಧಗಳು ಹೆಚ್ಚಾಗುತ್ತಿದ್ದು, ದಾಖಲಾಗಿರುವ ಪ್ರಕರಣಗಳ ತನಿಖೆಗೆ ನೆರವಾಗಲು ನಾಲ್ವರು ಆರ್ಥಿಕ ತಜ್ಞರನ್ನು ನಿಯೋಜಿಸಲು ಅಪರಾಧ ತನಿಖಾ ಇಲಾಖೆ(ಸಿಐಡಿ) ಮುಂದಾಗಿದೆ.

cid
ಸಾಂದರ್ಭಿಕ ಚಿತ್ರ (ETV Bharat)
author img

By ETV Bharat Karnataka Team

Published : Sep 25, 2024, 9:45 AM IST

ಬೆಂಗಳೂರು: ರಾಜ್ಯದಲ್ಲಿ ದಿನೇ ದಿನೆ ಹಣಕಾಸು ವಂಚನೆ ಪ್ರಕರಣಗಳು ಅಧಿಕವಾಗುತ್ತಿದ್ದು, ಕೋಟ್ಯಂತರ ರೂಪಾಯಿ ಮೋಸ ಮಾಡಿರುವ ಕೇಸ್​ಗಳು ಬಹುತೇಕ ಸಿಐಡಿಗೆ ವರ್ಗಾವಣೆಯಾಗಿವೆ. ಹೀಗಾಗಿ, ಆರ್ಥಿಕ ಅಪರಾಧ ಪ್ರಕರಣಗಳ ತನಿಖೆಯಲ್ಲಿ ನೆರವಾಗಲು ಆರ್ಥಿಕ ತಜ್ಞ ಹಾಗೂ ಲೆಕ್ಕಪರಿಶೋಧಕರನ್ನು ನಿಯೋಜಿಸಲು ಅಪರಾಧ ತನಿಖಾ ಇಲಾಖೆ (ಸಿಐಡಿ) ನಿರ್ಧರಿಸಿದೆ.

ಪ್ರಕರಣಗಳ ತ್ವರಿತಗತಿ ತನಿಖೆಗೆ ಸಹಕಾರಿಯಾಗಬಲ್ಲ ನಾಲ್ವರನ್ನು ನೇಮಿಸಲು ಸಿಐಡಿ ಮುಂದಾಗಿದೆ. ಸಿಐಡಿಯ ಆರ್ಥಿಕ ಅಪರಾಧದಡಿ ಬರುವ ಹಣಕಾಸು ವಂಚನೆ, ಠೇವಣಿದಾರರ ವಂಚನೆ ತನಿಖೆ ಹಾಗೂ ಆರ್ಥಿಕ ಅಪರಾಧ ವಿಭಾಗಗಳಲ್ಲಿ ಈವರೆಗೂ ಸುಮಾರು 700 ಪ್ರಕರಣಗಳು ದಾಖಲಾಗಿವೆ.

ಹಣ ವರ್ಗಾವಣೆ ಜಾಲ ಬೇಧಿಸುವ ಗುರಿ: ಈ ಪೈಕಿ ಕರ್ನಾಟಕ ಹಣಕಾಸು ಸಂಸ್ಥೆಗಳಲ್ಲಿನ ಠೇವಣಿದಾರರ ಹಿತರಕ್ಷಣಾ ಕಾಯ್ದಯಡಿ (ಕೆಪಿಐಡಿಎಫ್ಇ) ಹಾಗೂ ಅನಿಯಂತ್ರಿತ ಠೇವಣಿ ಯೋಜನೆಗಳ ಕಾಯ್ದೆ-2019ರಡಿ 210 ಪ್ರಕರಣಗಳ ತನಿಖೆ ನಡೆಯುತ್ತಿದೆ. ಹಣಕಾಸು ವಂಚನೆಯಂತಹ ಪ್ರಕರಣಗಳಲ್ಲಿ ತನಿಖೆ ನಡೆಸುವುದು ಸವಾಲಾಗಿದೆ. ಬಿಟ್ ಕಾಯಿನ್ ಹಾಗೂ ಬ್ಯಾಂಕಿಂಗ್ ವಲಯಗಳಲ್ಲಿ ಕೋಟ್ಯಂತರ ರೂ. ಅವ್ಯವಹಾರದಂತಹ ಪ್ರಕರಣಗಳಲ್ಲಿ ಸಿಐಡಿ ಪೊಲೀಸರಿಗೆ ಹಣದ ಮೂಲದ ವರ್ಗಾವಣೆ ಅರಿಯುವುದೇ ತ್ರಾಸದಾಯಕವಾಗಿದೆ. ಇದು ತನಿಖೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ಆರೋಪಿಗಳಿಗೆ ಕಾನೂನಿನ ಕುಣಿಕೆ ಬಿಗಿಯಾಗಿಸಲು ಹಾಗೂ ತನಿಖೆ ಚುರುಕುಗೊಳಿಸಲು ನಾಲ್ವರನ್ನು ಗುತ್ತಿಗೆ ಆಧಾರದ ಮೇರೆಗೆ ನಿಯೋಜಿಸಿ, ಹಣದ ವರ್ಗಾವಣೆ ಜಾಲ ಬೇಧಿಸುವ ಗುರಿ ಸಿಐಡಿಯದ್ದು.

ರಾಜ್ಯದಲ್ಲಿ ಆರ್ಥಿಕ ಅಪರಾಧಗಳು ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಲೇ ಇವೆ. ಇತ್ತೀಚೆಗೆ ಗೋಕಾಕ್ ಮಹಾಲಕ್ಷ್ಮೀ ಅರ್ಬನ್ ಕೋ-ಆಪರೇಟಿವ್ ಬ್ಯಾಂಕ್​ನಲ್ಲಿ 74.89 ಕೋಟಿ ವಂಚನೆ ಪ್ರಕರಣ ದಾಖಲಾಗಿರುವುದು ಇದಕ್ಕೆ ನಿದರ್ಶನ. ಆರೋಪಿಗಳ ವಿರುದ್ಧ ಕೆಪಿಐಡಿಎಫ್ಇ ಪ್ರಕರಣ ದಾಖಲಾಗಿದ್ದು, ಸಿಐಡಿ ತನಿಖೆಗೆ ಬೆಳಗಾವಿ ಎಸ್​​ಪಿ ಭೀಮಾಶಂಕರ್ ಗುಳೇದ್ ಕೋರಿದ್ದಾರೆ.

ವಂಚನೆ ಅರಿಯಲು ಆಡಿಟ್ ವರದಿ: ಸಿಐಡಿಯಲ್ಲಿ ಇದುವರೆಗೂ ದಾಖಲಾದ ಸಾವಿರಾರು ಪ್ರಕರಣಗಳ ಪೈಕಿ ಆರ್ಥಿಕ ಅಪರಾಧ ಪ್ರಕರಣಗಳೇ ಸಿಂಹಪಾಲು ಪಡೆದಿವೆ. ಹೆಚ್ಚು ಲಾಭಾಂಶ ಅಥವಾ ಬಡ್ಡಿ ಆಸೆ ತೋರಿಸಿ ವಂಚನೆ, ಸಹಕಾರ ಬ್ಯಾಂಕ್​​ಗಳಿಂದ ಬಹುಕೋಟಿ ಹಗರಣ, ಮುಗ್ಧ ಜನರನ್ನು ನಂಬಿಸಿ ಮೋಸ ಮಾಡುವ ವಂಚನೆ ಪ್ರಕರಣಗಳೇ ಹೆಚ್ಚಾಗಿ ದಾಖಲಾಗಿವೆ. ಬಹುತೇಕ ಪ್ರಕರಣಗಳಲ್ಲಿ ಕಂಪನಿಗಳು ಎಷ್ಟು ಹಣ ವಂಚಿಸಿವೆ ಎಂಬುದನ್ನು ಅರಿಯಲು ಆಡಿಟ್ ವರದಿ ಅಗತ್ಯವಾಗಿದೆ. ಆದರೆ, ಕೆಲ ಪ್ರಕರಣಗಳನ್ನು ಹೊರತುಪಡಿಸಿ ಬಹುತೇಕ ಪ್ರಕರಣಗಳಲ್ಲಿ ಆಡಿಟ್ ವರದಿ ತನಿಖಾಧಿಕಾರಿಗಳ ಕೈ ಸೇರದ ಪರಿಣಾಮ ತನಿಖೆಗೆ ಹಿನ್ನಡೆಯಾಗಿದೆ.

''10 ಕೋಟಿ ರೂ.ಗಿಂತ ಹೆಚ್ಚು ಹಣ ವಂಚನೆ, ರಾಜ್ಯ ಸರ್ಕಾರ ಅಥವಾ ನ್ಯಾಯಾಲಯದ ನಿರ್ದೇಶನ ಮೇರೆಗೆ ಸಿಐಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ನಡೆಸಲಾಗುತ್ತದೆ. ಹಣಕಾಸು ವಂಚನೆ ಸೇರಿದಂತೆ ಇದುವರೆಗೂ ಒಟ್ಟು 1,130 ಪ್ರಕರಣ ದಾಖಲಾಗಿವೆ. ಈ ಪೈಕಿ 750 ಪ್ರಕರಣಗಳಲ್ಲಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದೆ. ಚಾರ್ಜ್​​​ಶೀಟ್ ಸಲ್ಲಿಸಿದ 750 ಕೇಸ್​​ಗಳಲ್ಲಿ 600 ಪ್ರಕರಣಗಳು ಆರ್ಥಿಕ ಅಪರಾಧ ಸ್ವರೂಪದ ಪ್ರಕರಣಗಳಾಗಿವೆ'' ಎಂದು ಸಿಐಡಿ ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಬೆಂಗಳೂರು: ತನ್ನ ಲವರ್‌ಗೆ ಆಪ್ತನಾಗುತ್ತಿದ್ದಾನೆ ಎಂದು ಬಾಲ್ಯ ಸ್ನೇಹಿತನನ್ನ ಹತ್ಯೆಗೈದಿದ್ದ ಆರೋಪಿಯ ಬಂಧನ - Accused killed his friend

''ಆರ್ಥಿಕ ವಿಶೇಷ ಅಪರಾಧ ಪ್ರಕರಣ ತನಿಖೆ ಭಾಗವಾಗಿ ಆರ್ಥಿಕ ತಜ್ಞರು ಹಾಗೂ ಲೆಕ್ಕಪರಿಶೋಧಕರು ಒಳಗೊಂಡಂತೆ ನಾಲ್ವರನ್ನು ನಿಯೋಜಿಸಲಾಗುತ್ತಿದೆ. ಇವರು ಪೂರ್ಣ ಪ್ರಮಾಣದಲ್ಲಿ ಕಾರ್ಯನಿರ್ವಹಿಸಲಿದ್ದಾರೆ. ಬ್ಯಾಂಕಿಂಗ್ ಅವ್ಯವಹಾರಗಳು, ಅಕ್ರಮವಾಗಿ ಹಣ ವರ್ಗಾವಣೆಯಾದ ಅಸಂಖ್ಯಾತ ಬ್ಯಾಂಕ್ ಖಾತೆಗಳು, ಬಿಟ್‌ಕಾಯಿನ್ ಹಣ ಮೂಲ ಪತ್ತೆ ಸೇರಿದಂತೆ ಇನ್ನಿತರ ಆರ್ಥಿಕ ಅವ್ಯವಹಾರಗಳನ್ನು ಪತ್ತೆ ಹಚ್ಚಿ ವರದಿ ನೀಡಿದರೆ, ತ್ವರಿತ ತನಿಖೆಗೆ ನೆರವಾಗಲಿದೆ" ಎಂದು ಸಿಐಡಿ ಪೊಲೀಸ್ ಮಹಾನಿರ್ದೇಶಕ ಎಂ.ಎಂ.ಸಲೀಂ ತಿಳಿಸಿದ್ದಾರೆ.

ರಾಜ್ಯದಲ್ಲಿ ತೀವ್ರ ಸಂಚಲನ ಮೂಡಿಸಿದ್ದ ವಾಲ್ಮೀಕಿ ಅಭಿವೃದ್ಧಿ ನಿಗಮದ ಬಹುಕೋಟಿ ವಂಚನೆ, ಬಿಟ್‌ಕಾಯಿನ್ ಹಗರಣಗಳನ್ನು ವಿಶೇಷ ತನಿಖಾ ತಂಡ (ಎಸ್ಐಟಿ) ರಚಿಸಿ ಸಿಐಡಿ ತನಿಖೆ ನಡೆಸುತ್ತಿದೆ. ಅಲ್ಲದೆ, ಆ್ಯಂಬಿಡೆಂಟ್, ಕಣ್ವ, ಗುರುರಾಘವೇಂದ್ರ ಹಾಗೂ ವಸಿಷ್ಟ ಕೋ-ಆಪರೇಟಿವ್ ಬ್ಯಾಂಕ್​ನಲ್ಲಿ ನಡೆದ ಅವ್ಯವಹಾರ ಸೇರಿದಂತೆ ಇನ್ನಿತರ ಪೂಂಜಿ ಸ್ಕೀಮ್ ಕಂಪನಿಗಳು ಒಳಗೊಂಡಂತೆ ಸುಮಾರು 700 ಪ್ರಕರಣಗಳು ಸಿಐಡಿ ಬಳಿ ಇವೆ.

ಇದನ್ನೂ ಓದಿ: ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣದ ಆರೋಪಿಗಳ ವಿರುದ್ಧ ಮತ್ತೊಂದು ಚಾರ್ಜ್‌ಶೀಟ್ - Rameswaram cafe blast case

ETV Bharat Logo

Copyright © 2025 Ushodaya Enterprises Pvt. Ltd., All Rights Reserved.