ಬೆಂಗಳೂರು: ಅಂತಾರಾಷ್ಟ್ರೀಯ ಸಂಕೇತ ಭಾಷೆ ದಿನವಾದ ಇಂದು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ ಅವರ ವಾರದ ಪತ್ರಿಕಾಗೋಷ್ಠಿಯ ಮಾಹಿತಿಯನ್ನು ಸಂಕೇತ ಭಾಷೆಯ ನಿರೂಪಕಿ ವಿವರಿಸಿದ್ದು ವಿಶೇಷವಾಗಿತ್ತು.
ಪತ್ರಿಕಾಗೋಷ್ಠಿಯ ಮಾಹಿತಿಗಳನ್ನು ನಿರೂಪಕಿ ಮೋಕ್ಷಾ ಅವರು ಸಂಜ್ಞೆ ಭಾಷೆಯಲ್ಲಿ ವಿವರಿಸಿದರು. ಅಲ್ಲದೆ, ಸಂಕೇತ ಭಾಷೆಯ ಕುರಿತು 'ವಿಶೇಷ ಎನ್‌ಜಿಒ' ಆಯೋಜಿಸಿದ್ದ ಕಾರ್ಯಾಗಾರದಲ್ಲಿ ನಗರದ ಎಲ್ಲಾ ವಿಭಾಗಗಳ ಡಿಸಿಪಿಗಳು ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಭಾಗಿಯಾಗಿದ್ದರು.
ನಗರದಲ್ಲಿರುವ ಎಲ್ಲಾ ವರ್ಗಗಳ ಜನರನ್ನು ಅವರ ಜಾತಿ, ಧರ್ಮ, ಲಿಂಗ ಹಾಗೂ ದೈಹಿಕ ನ್ಯೂನತೆಗಳನ್ನು ಹೊರತುಪಡಿಸಿ ರಕ್ಷಿಸುವ ಜವಾಬ್ದಾರಿ ಬೆಂಗಳೂರು ನಗರ ಪೊಲೀಸ್ ಇಲಾಖೆಯ ಮೇಲಿದೆ. ಅಲ್ಲದೆ, ಪೊಲೀಸ್ ಇಲಾಖೆಯಿಂದ ನೀಡುವ ಮಾಹಿತಿಗಳು ಎಲ್ಲಾ ವರ್ಗಗಳನ್ನು ತಲುಪುವುದು ಸಹ ಅಷ್ಟೇ ಮುಖ್ಯವಾಗುತ್ತದೆ. ಆ ನಿಟ್ಟಿನಲ್ಲಿ ಎಲ್ಲಾ ವರ್ಗಗಳ ಜನರ ಅಹವಾಲುಗಳನ್ನು ಅರ್ಥೈಸಿಕೊಳ್ಳುವುದು, ಸಂವಹನ ಸಾಧಿಸುವ ಉದ್ದೇಶದಿಂದ ಅಂತಾರಾಷ್ಟ್ರೀಯ ಸಂಕೇತ ಭಾಷೆ ದಿನವಾದ ಇಂದು ಈ ನೂತನ ಪ್ರಯತ್ನ ಮಾಡಲಾಗಿದೆ ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ. ದಯಾನಂದ ತಿಳಿಸಿದರು.
At today's weekly press briefing, in observance of International Sign Language Day, Moksha Kumari from V-Shesh NGO delivered the briefing in sign language while @CPBlr , provided updates on several solved cases. Hulimavu PS has arrested 2 suspects involved in multiple vehicle and… pic.twitter.com/TmKCvzwcSN
— ಬೆಂಗಳೂರು ನಗರ ಪೊಲೀಸ್ BengaluruCityPolice (@BlrCityPolice) September 23, 2024
ಇದನ್ನೂ ಓದಿ: ಬೆಂಗಳೂರಿನಲ್ಲಿ ಯುವತಿಯ ಬರ್ಬರ ಕೊಲೆ ಕೇಸ್: ಆರೋಪಿಯ ಸುಳಿವು ಲಭ್ಯ- ಕಮಿಷನರ್ - Bengaluru Woman Murder Case