ETV Bharat / sports

ಐಸಿಸಿ ವರ್ಷದ ಏಕದಿನ ಆಟಗಾರ 2023 ಪ್ರಶಸ್ತಿ ಸ್ವೀಕರಿಸಿದ ವಿರಾಟ್ ಕೊಹ್ಲಿ - Virat Kohli - VIRAT KOHLI

ಟೀಂ ಇಂಡಿಯಾ ಸ್ಟಾರ್ ಬ್ಯಾಟರ್​ ವಿರಾಟ್ ಕೊಹ್ಲಿ 2023ರ ಐಸಿಸಿ ವರ್ಷದ ಏಕದಿನ ಆಟಗಾರ ಪ್ರಶಸ್ತಿಯನ್ನು ಸ್ವೀಕರಿಸಿದ್ದಾರೆ.

Virat Kohli
ವಿರಾಟ್ ಕೊಹ್ಲಿ (IANS)
author img

By ANI

Published : Jun 2, 2024, 7:36 AM IST

Updated : Jun 2, 2024, 7:46 AM IST

ನ್ಯೂಯಾರ್ಕ್​: ಭಾರತದ ಸ್ಟಾರ್ ಬ್ಯಾಟರ್​ ವಿರಾಟ್ ಕೊಹ್ಲಿ ಐಸಿಸಿ ವರ್ಷದ ಏಕದಿನ ಆಟಗಾರ ಪ್ರಶಸ್ತಿ ಪಡೆದಿದ್ದಾರೆ. ಕೊಹ್ಲಿ 2023ರ ಐಸಿಸಿ ಪುರುಷರ ಏಕದಿನ ತಂಡದಲ್ಲೂ ಕೂಡ ಸ್ಥಾನ ಗಳಿಸಿದ್ದಾರೆ. ಸದ್ಯ ಭಾರತ ತಂಡವು ಜೂನ್ 5ರಂದು ಐರ್ಲೆಂಡ್ ವಿರುದ್ಧ ನ್ಯೂಯಾರ್ಕ್‌ನಲ್ಲಿ ಟಿ20 ವಿಶ್ವಕಪ್ ಪಂದ್ಯವನ್ನಾಡಲು ತಯಾರಿ ನಡೆಸುತ್ತಿದೆ.

ವಿರಾಟ್‌ಗೆ ಟ್ರೋಫಿ ಮತ್ತು ಕ್ಯಾಪ್ ನೀಡಿದ ವಿಡಿಯೋವನ್ನು ಐಸಿಸಿಯ ಅಧಿಕೃತ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಪೋಸ್ಟ್ ಮಾಡಲಾಗಿದೆ. ರನ್​ ಮಷಿನ್​ ಎಂದೇ ಖ್ಯಾತರಾದ ಕೊಹ್ಲಿ 2023ರಲ್ಲಿ ಅದ್ಭುತ ಬ್ಯಾಟಿಂಗ್ ಪ್ರದರ್ಶನ​ ತೋರಿದ್ದರು. 35 ವರ್ಷ ವಯಸ್ಸಿನ ವಿರಾಟ್ ತಮ್ಮ ಅದ್ಭುತ ವೃತ್ತಿಜೀವನದಲ್ಲಿ ಮತ್ತೊಂದು ಬೃಹತ್ ಉತ್ತುಂಗಕ್ಕೆ ಏರಿದ್ದರು.

2023ರಲ್ಲಿ ಕೊಹ್ಲಿ 27 ಏಕದಿನ ಪಂದ್ಯಗಳ 24 ಇನ್ನಿಂಗ್ಸ್‌ಗಳಲ್ಲಿ 6 ಶತಕಗಳು ಮತ್ತು 8 ಅರ್ಧಶತಕಗಳೊಂದಿಗೆ 72.47ರ ಸರಾಸರಿ ಮತ್ತು 99.13 ರ ಸ್ಟ್ರೈಕ್ ರೇಟ್‌ನಲ್ಲಿ 1,377 ರನ್ ಬಾರಿಸಿದ್ದರು. ವಿರಾಟ್​ ಉತ್ತಮ ಸ್ಕೋರ್ 166* ಆಗಿತ್ತು. ಭಾರತದ ಏಷ್ಯಾ ಕಪ್ 2023ರ ವಿಜಯೋತ್ಸವದಲ್ಲಿ ಕೊಹ್ಲಿ ಮಹತ್ವದ ಪಾತ್ರ ವಹಿಸಿದ್ದರು. ನಿರ್ಣಾಯಕ ಸೂಪರ್-4 ಹಂತದ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ವಿರುದ್ಧ 94 ಎಸೆತಗಳಲ್ಲಿ ಅಜೇಯ 122* ರನ್ ಕಲೆ ಹಾಕಿದ್ದರು.

ಬಳಿಕ ಕಳೆದ ವರ್ಷ ತವರಿನಲ್ಲಿ ನಡೆದ ಏಕದಿನ ವಿಶ್ವಕಪ್‌ನಲ್ಲಿ, ವಿರಾಟ್ 11 ಪಂದ್ಯಗಳಲ್ಲಿ 95.62ರ ಸರಾಸರಿಯಲ್ಲಿ 765 ರನ್ ಪೇರಿಸಿದ್ದರು. ಮೂರು ಶತಕಗಳು ಹಾಗೂ ಆರು ಅರ್ಧ ಶತಕಗಳನ್ನು ಸಿಡಿಸಿದ್ದರು. ಟೂರ್ನಿಯುದ್ದಕ್ಕೂ ಮಿಂಚಿದ್ದ ಕೊಹ್ಲಿಯ 117 ರನ್ ಅಭಿಯಾನದಲ್ಲಿ ಅವರ​​ ಅತ್ಯುತ್ತಮ ಸ್ಕೋರ್‌ ಆಗಿತ್ತು.

ಟೂರ್ನಿಯ ಅಗ್ರ ರನ್​ ಗಳಿಸಿದ್ದರಲ್ಲದೆ, ಏಕದಿನ ವಿಶ್ವಕಪ್​ವೊಂದರಲ್ಲಿ ಅತ್ಯಧಿಕ ರನ್​ ಬಾರಿಸಿದ ದಾಖಲೆ ಬರೆದಿದ್ದರು. ಈ ಹಿಂದೆ 2003ರ ವಿಶ್ವಕಪ್​ನಲ್ಲಿ ಸಚಿನ್​ ತೆಂಡೂಲ್ಕರ್​ ಗಳಿಸಿದ್ದ 673 ರನ್​ಗಳ ದಾಖಲೆ ಮುರಿದಿದ್ದರು. ಜೊತೆಗೆ ಸಚಿನ್ ಅವರ 49 ಏಕದಿನ ಶತಕಗಳ ದಾಖಲೆಯನ್ನೂ ಕೂಡ ಮುರಿದಿದ್ದ ಕೊಹ್ಲಿ 50ನೇ ಶತಕ ದಾಖಲಿಸಿ ಸಂಭ್ರಮಿಸಿದ್ದರು. ಸೆಮಿಫೈನಲ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧ 50ನೇ ಏಕದಿನ ಶತಕ ಮೂಡಿಬಂದಿತ್ತು.

ಈಗ, ವೆಸ್ಟ್ ಇಂಡೀಸ್ ಮತ್ತು ಯುಎಸ್​ಎನಲ್ಲಿ ನಡೆಯಲಿರುವ ಐಸಿಸಿ ಟಿ20 ವಿಶ್ವಕಪ್‌ಗೆ ವಿರಾಟ್ ಕೊಹ್ಲಿ ಸಿದ್ಧತೆ ಕೈಗೊಂಡಿದ್ದಾರೆ. ಇತ್ತೀಚೆಗೆ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನಲ್ಲಿ ಅತಿ ಹೆಚ್ಚು ರನ್‌ ಬಾರಿಸಿ ಆರೆಂಜ್ ಕ್ಯಾಪ್ ಗೆದ್ದಿದ್ದರು. 15 ಪಂದ್ಯಗಳಲ್ಲಿ 61.75ರ ಸರಾಸರಿಯಲ್ಲಿ 741 ರನ್ ಗಳಿಸಿದ್ದರು. 154ಕ್ಕಿಂತ ಹೆಚ್ಚು ಸ್ಟ್ರೈಕ್ ರೇಟ್​​ನಲ್ಲಿ ಒಂದು ಶತಕ ಮತ್ತು 5 ಅರ್ಧಶತಕ ಬಾರಿಸಿದ್ದ ಅವರ ಅತ್ಯುತ್ತಮ ಸ್ಕೋರ್ 113* ಆಗಿತ್ತು.

ಇದನ್ನೂ ಓದಿ: ಕೆನಡಾ ಕ್ರಿಕೆಟ್​ ತಂಡದಲ್ಲಿ ದಾವಣಗೆರೆಯ ಹುಡುಗ: ವಿಶ್ವಕಪ್​ನಲ್ಲಿ ಸಿಗುತ್ತಾ 'ಶ್ರೇಯಸ್​' - Shreyas Moa

Last Updated : Jun 2, 2024, 7:46 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.