0, 0, 0ಯಿಂದ 152 ರನ್: ಭಾರತದ ವಿರುದ್ಧ ಮತ್ತೊಂದು ಶತಕ ಸಿಡಿಸಿದ ಟ್ರಾವಿಸ್ ಹೆಡ್ - TRAVIS HEAD
ಭಾರತದ ವಿರುದ್ಧ ನಡೆಯುತ್ತಿರುವ 3ನೇ ಟೆಸ್ಟ್‌ನಲ್ಲಿ ಆಸ್ಟ್ರೇಲಿಯಾದ ಬ್ಯಾಟರ್ ಟ್ರಾವಿಸ್ ಹೆಡ್ ಮತ್ತೊಂದು ಶತಕ ಸಿಡಿಸಿ ದಾಖಲೆ ಬರೆದರು.
Published : Dec 15, 2024, 12:49 PM IST
Ind vs Aus, 3rd Test: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಮೂರನೇ ಟೆಸ್ಟ್ ಪಂದ್ಯದಲ್ಲಿ ಟ್ರಾವಿಸ್ ಹೆಡ್ ಮತ್ತೊಮ್ಮೆ ಅಬ್ಬರಿಸಿದ್ದಾರೆ. ಎರಡನೇ ದಿನವಾದ ಇಂದು 76 ರನ್ಗಳಿಗೆ 3 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ಆಸ್ಟ್ರೇಲಿಯಾಗೆ ಅವರು ಆಸರೆಯಾದರು. ಭಾರತೀಯ ಬೌಲರ್‌ಗಳನ್ನು ದಂಡಿಸಿ, 152 ರನ್ ಬಾರಿಸಿ ಬಾರ್ಡರ್-ಗವಾಸ್ಕರ್ ಟ್ರೋಫಿಯಲ್ಲಿ ಎರಡನೇ ಶತಕ ಸಂಪಾದಿಸಿದರು. ಕಳೆದ ಒಂದೂವರೆ ವರ್ಷದಲ್ಲಿ ಭಾರತದ ವಿರುದ್ಧ ಹೆಡ್ ಸಿಡಿಸಿದ ನಾಲ್ಕನೇ ಶತಕ ಇದಾಗಿದೆ.
ಟೆಸ್ಟ್ ಕ್ರಿಕೆಟ್‌ನಲ್ಲಿ ಒಟ್ಟಾರೆ 9ನೇ ಶತಕ: 2023ರ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ನಲ್ಲಿ ಶತಕ, 2023ರ ವಿಶ್ವಕಪ್‌ನ ಫೈನಲ್‌ನಲ್ಲಿ ಶತಕ, ಪಿಂಕ್ ಬಾಲ್ ಟೆಸ್ಟ್‌ನಲ್ಲಿ ಶತಕ ಸಿಡಿಸಿದ ಹೆಡ್, ಇದೀಗ ಬ್ರಿಸ್ಬೇನ್‌ನ ಗಬ್ಬಾದಲ್ಲಿಯೂ ತಮ್ಮ ಬ್ಯಾಟಿಂಗ್ ಪರಾಕ್ರಮ ತೋರಿದ್ದಾರೆ. ಟೆಸ್ಟ್ ಕ್ರಿಕೆಟ್‌ನಲ್ಲಿ ಒಟ್ಟಾರೆ 9ನೇ ಶತಕ ಪೂರ್ಣಗೊಳಿಸಿದ್ದಾರೆ.
HE'S DONE IT AGAIN!
— cricket.com.au (@cricketcomau) December 15, 2024
Travis Head brings up another hundred ⭐️#AUSvIND | #PlayOfTheDay | @nrmainsurance pic.twitter.com/10yBuL883X
0,0,0ಯಿಂದ 152 ರನ್: 115 ಎಸೆತಗಳನ್ನು ಎದುರಿಸಿದ ಹೆಡ್, 13 ಬೌಂಡರಿಗಳ ನೆರವಿನಿಂದ ಶತಕದಾಟವಾಡಿದರು. ಇದು ಟೆಸ್ಟ್ ಕ್ರಿಕೆಟ್‌ನಲ್ಲಿ ಭಾರತದ ವಿರುದ್ಧ ಅವರ ಮೂರನೇ ಶತಕ. ಗಬ್ಬಾದಲ್ಲಿ ಕಳೆದ ಮೂರು ಇನ್ನಿಂಗ್ಸ್‌ಗಳಲ್ಲಿ ಒಂದೇ ಒಂದು ರನ್ ಗಳಿಸಿದೇ ಶೂನ್ಯಕ್ಕೆ ನಿರ್ಗಮಿಸಿದ್ದರು. ಮೊದಲ ಎಸೆತದಲ್ಲಿ ಮೂರು ಬಾರಿ ರಾಯಲ್ ಡಕ್ ಔಟ್ ಆಗಿದ್ದರು. ಇದೀಗ ಶತಕ ಬಾರಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಇದಲ್ಲದೇ, ಭಾರತದ ವಿರುದ್ಧ ಮೂರು ಶತಕ ಮತ್ತು ನಾಲ್ಕು ಅರ್ಧಶತಕಗಳನ್ನು ಒಳಗೊಂಡಂತೆ 53.05 ಸರಾಸರಿಯಲ್ಲಿ ಟೆಸ್ಟ್ ಕ್ರಿಕೆಟ್‌ನಲ್ಲಿ 1,000 ರನ್‌ಗಳನ್ನೂ ತಲುಪಿದರು. ಇದರೊಂದಿಗೆ ಭಾರತದ ವಿರುದ್ಧ ಟೆಸ್ಟ್‌ನಲ್ಲಿ ವೇಗದ 150 ರನ್ ಗಳಿಸಿದ ಆಸೀಸ್‌ನ ಎರಡನೇ ಬ್ಯಾಟರ್ ಎನಿಸಿಕೊಂಡಿದ್ದಾರೆ. ಹೆಡ್ 157 ಎಸೆತಗಳಲ್ಲಿ 150 ಪೇರಿಸಿದರೆ, ಡೇವಿಡ್ ವಾರ್ನರ್ 128 ಎಸೆತಗಳಲ್ಲಿ ಈ ಸಾಧನೆ ಮಾಡಿದ್ದರು.
Ninth Test ton for Travis Head and his second in this #AUSvIND series 🔥#WTC25 | 📝: https://t.co/KYHykss9xJ pic.twitter.com/w7Qs0d5aQh
— ICC (@ICC) December 15, 2024
ಟ್ರಾವಿಸ್ ಹೆಡ್ ಗಬ್ಬಾ ದಾಖಲೆ: ಗಬ್ಬಾ ಮೈದಾನದಲ್ಲಿ ಹೆಡ್, ಕಳೆದ 8 ಟೆಸ್ಟ್ ಇನ್ನಿಂಗ್ಸ್‌ನಲ್ಲಿ ಬಾರಿಸಿದ ರನ್ಗಳು ಹೀಗಿವೆ- 84(187), 24(29), 152(148), 92(96), 0(1), 0(1), 0(1), 152*(157)
ಹೆಡ್ ಆಟಕ್ಕೆ ಬುಮ್ರಾ ಬ್ರೇಕ್: ಶತಕ ಸಿಡಿಸಿದ ಮೇಲೂ ಭರ್ಜರಿ ಬ್ಯಾಟಿಂಗ್ ಮುಂದುವರೆಸುತ್ತಿದ್ದ ಹೆಡ್, 152 ರನ್ ಗಳಿಸಿದ್ದ ವೇಳೆ ಬುಮ್ರಾ ಎಸೆತದಲ್ಲಿ ಕ್ಯಾಚ್ಔಟ್ ಆದರು.
ಇದನ್ನೂ ಓದಿ: IPL 2025: ಈ ಮೂವರಲ್ಲಿ ಒಬ್ಬರು RCB ತಂಡದ ನಾಯಕರಾಗುವುದು ಫಿಕ್ಸ್?