ಹೈದರಾಬಾದ್: ಕ್ರಿಕೆಟ್ ಕಂಡ ಶ್ರೇಷ್ಠ ಆಟಗಾರರಲ್ಲಿ ಒಬ್ಬರಾಗಿರುವ ಶಿಖರ್ ಧವನ್ ಇಂದು ಮಾಜಿ ಆಟಗಾರರ ಪಟ್ಟಿಗೆ ಸೇರ್ಪಡೆಗೊಂಡಿದ್ದಾರೆ.
ಕಳೆದ 14 ವರ್ಷಗಳ ಕಾಲ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ತಮ್ಮದೇ ಆದ ಛಾಪು ಮೂಡಿಸಿದ ಎಡಗೈ ಬ್ಯಾಟರ್ ಶನಿವಾರ ಬೆಳಗ್ಗೆ ಎಲ್ಲಾ ಸ್ವರೂಪದ ಕ್ರಿಕೆಟ್‌ಗೆ ನಿವೃತ್ತಿ ಘೋಷಣೆ ಮಾಡಿದ್ದಾರೆ. ಆದ್ರೆ ಕ್ರಿಕೆಟ್ನಲ್ಲಿ ಆಡಿದಷ್ಟು ದಿನ ಈ ಬ್ಯಾಟರ್ ಹಲವಾರು ದಾಖಲೆಗಳನ್ನು ಬರೆದಿದ್ದಾರೆ. ಈ ಪೈಕಿ ಅವರು ನಿರ್ಮಿಸಿರುವ ಈ 5 ದಾಖಲೆಗಳನ್ನು ಮುರಿಯಲು ಈವರೆಗೆ ಯಾರಿಂದಲೂ ಸಾಧ್ಯವಾಗಿಲ್ಲ.
100ನೇ ಪಂದ್ಯದಲ್ಲಿ ಶತಕ: ಶಿಖರ್ ಧವನ್ ಅವರು ತಮ್ಮ 100ನೇ ಏಕದಿನ ಪಂದ್ಯದಲ್ಲಿ ಶತಕವನ್ನು ಸಿಡಿಸಿದ ಮೊದಲ ಭಾರತೀಯ ಬ್ಯಾಟರ್ ಎನಿಸಿಕೊಂಡಿದ್ದಾರೆ. 2018 ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ಪಂದ್ಯದಲ್ಲಿ ಧವನ್ ಈ ದಾಖಲೆ ಬರೆದಿದ್ದಾರೆ.
ಏಕದಿನ ಪಂದ್ಯಗಳಲ್ಲಿ ವೇಗದ ರನ್ ಗಳಿಸಿದ ಬ್ಯಾಟರ್: ಏಕದಿನ ಸ್ವರೂಪದ ಕ್ರಿಕೆಟ್ನಲ್ಲೂ ಧವನ್ ವಿಶೇಷ ದಾಖಲೆಯನ್ನು ಬರೆದಿದ್ದಾರೆ. ಅವರು ಏಕದಿನ ಪಂದ್ಯಗಳಲ್ಲಿ 1000, 2000 ಮತ್ತು 3000 ರನ್ ಪೂರೈಸಿದ ಬ್ಯಾಟರ್ ಎನಿಸಿಕೊಂಡಿದ್ದಾರೆ.
ಚೊಚ್ಚಲ ಟೆಸ್ಟ್ನಲ್ಲಿ ಶತಕ: 2013ರಲ್ಲಿ ಚೊಚ್ಚಲ ಟೆಸ್ಟ್ ಆಡಿದ್ದ ಶಿಖರ್ ತಮ್ಮ ಬ್ಯಾಟಿಂಗ್ ಕೌಶಲ್ಯವನ್ನು ಇಡೀ ಜಗತ್ತಿಗೆ ತೋರಿಸಿದ್ದರು. ಮಾರ್ಚ್‌ನಲ್ಲಿ ಮೊಹಾಲಿಯಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ ಚೊಚ್ಚಲ ಟೆಸ್ಟ್ ಪಂದ್ಯದಲ್ಲಿ ಅವರು 85 ಎಸೆತಗಳಲ್ಲಿ ಶತಕ ಸಿಡಿಸಿದ್ದರು. ಇದರೊಂದಿಗೆ ಚೊಚ್ಚಲ ಪಂದ್ಯದಲ್ಲೇ ವೇಗದ ಶತಕ ಸಿಡಿಸಿದ ಬ್ಯಾಟರ್ ಎಂಬ ದಾಖಲೆಯನ್ನು ಬರೆದಿದ್ದಾರೆ. ಅವರ ಈ ಶ್ರೇಷ್ಠ ದಾಖಲೆಯನ್ನು ಮುರಿಯಲು ಇದುವರೆಗೆ ಯಾವುದೇ ಆಟಗಾರನಿಗೆ ಸಾಧ್ಯವಾಗಿಲ್ಲ.
ಟಿ20 ಕ್ರಿಕೆಟ್ನಲ್ಲಿ ಅತೀ ಹೆಚ್ಚು ರನ್ ಗಳಿಸಿದ ಬ್ಯಾಟರ್: ಟಿ20 ಸ್ವರೂಪದಲ್ಲಿ ಅತೀ ಹೆಚ್ಚು ರನ್ಗಳಿಸಿದ ದಾಖಲೆ ಶಿಖರ್ ಹೆಸರಲ್ಲಿದೆ. ಒಂದೇ ಕ್ಯಾಲೆಂಡರ್ ವರ್ಷದಲ್ಲಿ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್ನಲ್ಲಿ 689 ರನ್ಗಳಿಸಿದ ಭಾರತದ ಮೊದಲ ಬ್ಯಾಟರ್ ಎನಿಸಿಕೊಂಡಿದ್ದಾರೆ. ಭಾರತೀಯ ಯಾವೊಬ್ಬ ಬ್ಯಾಟರ್ ಇದೂವರೆಗೂ ಈ ಸಾಧನೆ ಮಾಡಲು ಸಾಧ್ಯವಾಗಿಲ್ಲ.
ಚೊಚ್ಚಲ ಟೆಸ್ಟ್ನಲ್ಲಿ ವೇಗದ ಇನ್ನಿಂಗ್ಸ್: ಚೊಚ್ಚಲ ಟೆಸ್ಟ್ ಪಂದ್ಯದಲ್ಲಿ ಶಿಖರ್ 174 ಎಸೆತಗಳಲ್ಲಿ 187 ರನ್ ಕಲೆ ಹಾಕಿದ ಬ್ಯಾಟರ್ ಎಂಬ ದಾಖಲೆ ಬರೆದಿದ್ದಾರೆ. ಇದು ಕ್ರಿಕೆಟ್ ಇತಿಹಾಸದಲ್ಲಿ ವೇಗದ ಇನ್ನಿಂಗ್ಸ್ ಆಗಿದೆ.
ಐಸಿಸಿ ಟೂರ್ನಿಗಳಲ್ಲಿ ವೇಗವಾಗಿ 1000ರನ್ ಗಳಿಸಿದ ದಾಖಲೆ ಧವನ್ ಹೆಸರಲ್ಲಿದೆ. ಅವರು ಕೇವಲ 16 ಇನ್ನಿಂಗ್ಸ್‌ಗಳಲ್ಲಿ ಸಹಸ್ರ ರನ್ ಪೂರೈಸಿದ್ದಾರೆ.
ಗೋಲ್ಡನ್ ಬ್ಯಾಟ್ ಪ್ರಶಸ್ತಿ: ಬಳಿಕ ಚಾಂಪಿಯನ್ಸ್ ಟ್ರೋಫಿ ಪಂದ್ಯವನ್ನಾಡಿದ್ದ ಧವನ್ ಅಗ್ರ ರನ್-ಸ್ಕೋರರ್ ಆಗಿ ಹೊರಹೊಮ್ಮಿದ್ದ ಅವರು ಮ್ಯಾನ್ ಆಫ್ ದಿ ಸಿರಿಸ್ ಅವಾರ್ಡ್ಗೆ ಭಾಜನರಾಗಿದ್ದರು. ಇದರೊಂದಿಗೆ ಗೋಲ್ಡನ್ ಬ್ಯಾಟ್ ಪ್ರಶಸ್ತಿಯನ್ನು ಪಡೆದ ಆಟಗಾರ ಎಂಬ ದಾಖಲೆಯನ್ನು ಬರೆದಿದ್ದಾರೆ.
ಶಿಖರ್ ಧವನ್ ಅವರ ಶ್ರೇಷ್ಠ ದಾಖಲೆಗಳು
- ಚೊಚ್ಚಲ ಟೆಸ್ಟ್ ಪಂದ್ಯದಲ್ಲಿ ವೇಗದ ಶತಕ (174 ಎಸೆತಗಳಲ್ಲಿ 187 ರನ್)
- ಐಸಿಸಿ ವಿಶ್ವಕಪ್ 2015ರಲ್ಲಿ ಭಾರತದ ಪರ ಅತಿ ಹೆಚ್ಚು ರನ್ ಗಳಿಸಿದ ಆಟಗಾರ
- 2013ರಲ್ಲಿ ಅತಿ ಹೆಚ್ಚು ODI ಶತಕಗಳು
- ವಿಸ್ಡನ್ 2014ರ ವರ್ಷದ ಕ್ರಿಕೆಟಿಗ
- ಟೆಸ್ಟ್ ಪಂದ್ಯದಲ್ಲಿ ಮೊದಲ ದಿನದ ಪಂದ್ಯದಲ್ಲಿ ಲಂಚ್ ಬ್ರೇಕ್ಗೂ ಮೊದಲು ಶತಕ ಸಿಡಿಸಿದ ಮೊದಲ ಭಾರತೀಯ ಬ್ಯಾಟ್ಸ್‌ಮನ್
- ಐಸಿಸಿ ಚಾಂಪಿಯನ್ಸ್ ಟ್ರೋಫಿ 2013 ಮತ್ತು 2017ರಲ್ಲಿ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟರ್
- ಐಸಿಸಿ ಟೂರ್ನಮೆಂಟ್‌ನಲ್ಲಿ 1000 ರನ್‌ಗಳನ್ನು ತಲುಪಿದ ವೇಗದ ಬ್ಯಾಟ್ಸ್‌ಮನ್
- ಏಷ್ಯಾಕಪ್ 2018ರಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರ
- ಐಪಿಎಲ್ ಇತಿಹಾಸದಲ್ಲಿ ಸತತ ಎರಡು ಶತಕ ಸಿಡಿಸಿದ ಮೊದಲ ಆಟಗಾರ
- ಐಸಿಸಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಸತತ ಎರಡು ಬಾರಿ ಗೋಲ್ಡನ್ ಬ್ಯಾಟ್ ಪಡೆದ ಆಟಗಾರ (2013 ಮತ್ತು 2017)
ಪ್ರಶಸ್ತಿ: ಧವನ್ ಅವರ ಅಸಾಮಾನ್ಯ ಸಾಧನೆಗಳು ಮತ್ತು ಕ್ರಿಕೆಟ್ ಆಟಕ್ಕೆ ನೀಡಿದ ಕೊಡುಗೆಗಳನ್ನು ಗುರುತಿಸಿ 2021 ರಲ್ಲಿ ಭಾರತ ಸರ್ಕಾರವು ಅರ್ಜುನ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.
ಇದನ್ನೂ ಓದಿ: ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ಶಿಖರ್ ಧವನ್: ಭಾವುಕ ವಿಡಿಯೋ ಹಂಚಿಕೊಂಡ 'ಗಬ್ಬರ್' - Shikhar Dhawan Retirement