ETV Bharat / sports

ಆರ್​ಸಿಬಿ ಪ್ಲೇಆಫ್​​ ಕಿಚ್ಚಿಗೆ ಮುದುಡಿದ ಡೆಲ್ಲಿ: 47 ರನ್​ ಜಯದೊಂದಿಗೆ 5ನೇ ಸ್ಥಾನಕ್ಕೇರಿದ ಡುಪ್ಲೆಸಿಸ್ ಬಳಗ - RCB VS DC - RCB VS DC

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ 187 ರನ್​ ದೊಡ್ಡ ಮೊತ್ತವಲ್ಲವಾದರೂ, ಅದನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾದ ಆರ್​ಸಿಬಿ, ಡೆಲ್ಲಿ ವಿರುದ್ಧ 47 ರನ್‌ಗಳ ಗೆಲುವು ಸಾಧಿಸಿದೆ.

ಗೆಲುವಿನ ಪಾಲುದಾರಿಕೆ ನೀಡಿದ ರಜತ್​ ಪಾಟೀದಾರ್​-ವಿಲ್​ ಜಾಕ್ಸ್​
ಗೆಲುವಿನ ಪಾಲುದಾರಿಕೆ ನೀಡಿದ ರಜತ್​ ಪಾಟೀದಾರ್​-ವಿಲ್​ ಜಾಕ್ಸ್​ (ಫೋಟೋ: IANS)
author img

By PTI

Published : May 13, 2024, 7:10 AM IST

ಬೆಂಗಳೂರು: ಪ್ಲೇಆಫ್​​ ತಲುಪುವ ಹಠದಲ್ಲಿ ಆರ್​ಸಿಬಿ ಪ್ರತೀ ಪಂದ್ಯದಲ್ಲೂ ಕೆಚ್ಚೆದೆಯ ಆಟವಾಡುತ್ತಿದೆ. ಸತತ ಸೋಲುಗಳಿಂದ ವ್ಯಾಪಕ ಟೀಕೆಗೆ ಗುರಿಯಾಗಿದ್ದ ತಂಡ ಎಲ್ಲ ವೈಫಲ್ಯಗಳನ್ನು ಮೆಟ್ಟಿನಿಂತು ಅಭೂತಪೂರ್ವ ಗೆಲುವಿನ ಓಟ ಮುಂದುವರಿಸಿದೆ.

ಡೆಲ್ಲಿ ಕ್ಯಾಪಿಟಲ್ಸ್​ ವಿರುದ್ಧ ಭಾನುವಾರ ರಾತ್ರಿ ನಡೆದ ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ 47 ರನ್​ಗಳ ಅಂತರದಲ್ಲಿ ಗೆಲುವು ಸಾಧಿಸುವ ಮೂಲಕ ಪ್ಲೇಆಫ್​ ಹತ್ತಿರಕ್ಕೆ ಬಂದಿದೆ. ಸತತ ಐದನೇ ಗೆಲುವಿನೊಂದಿಗೆ ಪಾಯಿಂಟ್ಸ್ ಪಟ್ಟಿಯಲ್ಲಿ 5ನೇ ಸ್ಥಾನಕ್ಕೇರಿದೆ.

ಮೊದಲು ಬ್ಯಾಟ್​ ಮಾಡಿದ ಆರ್​ಸಿಬಿ 9 ವಿಕೆಟ್​ಗೆ 187 ರನ್​ ಗಳಿಸಿತು. ಇದಕ್ಕುತ್ತರವಾಗಿ ಡೆಲ್ಲಿ 19.1 ಓವರ್​ನಲ್ಲಿ 140 ರನ್​ಗೆ ಆಲೌಟ್​ ಆಯಿತು.

ಆರ್​ಸಿಬಿ ಅಚ್ಚರಿಯ ಬೌಲಿಂಗ್​ ಪ್ರದರ್ಶನ: ಭಾರೀ ಟೀಕೆಗೆ ಗುರಿಯಾಗಿದ್ದ ಆರ್​ಸಿಬಿಯ ಬೌಲಿಂಗ್​ ವಿಭಾಗ ಕಳೆದೆರಡು ಪಂದ್ಯಗಳಲ್ಲಿ ಸುಧಾರಿಸಿದೆ. ಅಚ್ಚರಿ ರೀತಿಯ ಫೀಲ್ಡಿಂಗ್​ ಕೂಡ ಕಂಡುಬರುತ್ತಿದೆ. ಡೆಲ್ಲಿ 3.3 ಓವರ್​ಗಳಲ್ಲಿ 30 ರನ್​ಗೆ ಪ್ರಮುಖ 4 ವಿಕೆಟ್​ ಕಳೆದುಕೊಂಡಿತು. ಸಿಡಿಲಮರಿ ಜೇಕ್​ ಫ್ರೇಸರ್​ 21 ರನ್​ಗೆ ವಿಕೆಟ್​ ನೀಡಿದರೆ, ಗಾಯದಿಂದ ಚೇತರಿಸಿಕೊಂಡು ತಂಡಕ್ಕೆ ಮರಳಿದ ಡೇವಿಡ್​ ವಾರ್ನರ್​ 1, ಅಭಿಷೇಕ್​ ಪೊರೆಲ್​ 2 ರನ್​ಗೆ ಪೆವಿಲಿಯನ್​ ಸೇರಿದರು.

ಫಲ ನೀಡದ ಅಕ್ಷರ್ ಅಬ್ಬರ: ಸತತ ವಿಕೆಟ್​ ಉರುಳಿಸಿದ ಆರ್​ಸಿಬಿಗೆ ಸವಾಲಾಗಿದ್ದು ಅಕ್ಷರ್​ ಪಟೇಲ್​. ರಿಷಬ್​ ಪಂತ್​ ಅನುಪಸ್ಥಿತಿಯಲ್ಲಿ ತಂಡದ ನಾಯಕತ್ವ ವಹಿಸಿದ್ದ ಅಕ್ಷರ್​ 57 ರನ್​ ಸಿಡಿಸಿದರು. ಶಾಯ್​ ಹೋಪ್​ 29 ರನ್​ ಗಳಿಸಿದ್ದು ಎರಡನೇ ಅತ್ಯಧಿಕವಾಗಿತ್ತು. ಇಬ್ಬರೂ ಔಟಾದ ಬಳಿಕ ತಂಡ 140 ರನ್​ಗೆ ದಿಢೀರ್​ ಪತನಗೊಂಡಿತು.

ಗೆಲುವಿನ ಗುರಿಯೊಂದಿಗೆ ಇನಿಂಗ್ಸ್​ ಆರಂಭಿಸಿದ ಆರ್​ಸಿಬಿ, 3 ಸಿಕ್ಸರ್​ ಸಿಡಿಸುವ ಮೂಲಕ ರನ್​ ಮಶಿನ್​ ವಿರಾಟ್​ ಕೊಹ್ಲಿ ದೊಡ್ಡ ಇನಿಂಗ್ಸ್​ ಕಟ್ಟುವ ನಿರೀಕ್ಷೆ ಮೂಡಿಸಿದರು. ಆದರೆ, ಇಶಾಂತ್​ ಶರ್ಮಾ ಬೌಲಿಂಗ್​ನಲ್ಲಿ ವಿಕೆಟ್​ ನೀಡಿದರು. ಡುಪ್ಲೆಸಿಸ್​ 6 ರನ್​ಗೆ ಬಲಿಯಾದರು.

ಬಳಿಕ ಜೊತೆಗೂಡಿದ ವಿಲ್​ ಜಾಕ್ಸ್​ 41, ರಜತ್​ ಪಾಟೀದಾರ್​​ 52 ಭರ್ಜರಿ ಬ್ಯಾಟ್​ ಬೀಸಿದರು. ಕ್ಯಾಮರೂನ್​ ಗ್ರೀನ್​ 32 ರನ್​ಗಳ ಕಾಣಿಕೆ ನೀಡಿದರು. ಬಳಿಕ ವಿಕೆಟ್​ ಕಳೆದುಕೊಂಡಿದ್ದರಿಂದ 187 ರನ್​ ಗಳಿಸಲಷ್ಟೇ ಶಕ್ತವಾಯಿತು.

ಆರ್‌ಸಿಬಿ ಪ್ಲೇಆಫ್​ ಹಾದಿ ಹೇಗಿದೆ?: ಅಂಕಪಟ್ಟಿಯಲ್ಲಿ 5ನೇ ಸ್ಥಾನದಲ್ಲಿರುವ ಆರ್​ಸಿಬಿಗೆ ಅದೃಷ್ಟವೇ ಕೈಹಿಡಿಯಬೇಕು. ಲೀಗ್​ನಲ್ಲಿ ಇನ್ನೊಂದು ಪಂದ್ಯ ಬಾಕಿ ಇದ್ದು, ಸಿಎಸ್​ಕೆ ವಿರುದ್ಧ ಆಡಲಿದೆ. ಇಲ್ಲಿ ದೊಡ್ಡ ಅಂತರದಲ್ಲಿ ಗೆಲ್ಲುವುದು ಅನಿವಾರ್ಯ. ಜೊತೆಗೆ ಲಖನೌ 2 ಪಂದ್ಯಗಳಲ್ಲಿ ಒಂದರಲ್ಲಿ ಕಡ್ಡಾಯವಾಗಿ ಸೋಲಬೇಕು.

ಇದನ್ನೂ ಓದಿ: IPL: ರಾಜಸ್ಥಾನ್ ವಿರುದ್ಧ ಗೆದ್ದ ಚೆನ್ನೈ ಪ್ಲೇಆಫ್​ಗೆ ಮತ್ತಷ್ಟು ಸನಿಹ - CSK VS RR

ETV Bharat Logo

Copyright © 2025 Ushodaya Enterprises Pvt. Ltd., All Rights Reserved.