ETV Bharat / sports

ಐಪಿಎಲ್​ 2024: ಮೋಹಿತ್​ ಶರ್ಮಾ ಅದ್ಭುತ ಸ್ಪೆಲ್;​ ಗುಜರಾತ್ ಬೌಲಿಂಗ್​ ಎದುರು ಪತರುಗುಟ್ಟಿದ​ ​ಹೈದರಾಬಾದ್ ಬ್ಯಾಟರ್ಸ್ - IPL 2024 - IPL 2024

ಸನ್ ರೈಸರ್ಸ್ ಹೈದರಾಬಾದ್ 162 ರನ್​ಗಳ ಸಾಧಾರಣ ಟಾರ್ಗೆಟ್​ ಅನ್ನು ಗುಜರಾತ್ ಟೈಟಾನ್ಸ್ ತಂಡಕ್ಕೆ ನೀಡಿದೆ.

ಸನ್ ರೈಸರ್ಸ್ ಹೈದರಾಬಾದ್ ಮತ್ತು ಗುಜರಾತ್ ಟೈಟನ್ಸ್

author img

By ETV Bharat Karnataka Team

Published : Mar 31, 2024, 3:49 PM IST

Updated : Apr 2, 2024, 3:50 PM IST

ಅಹಮದಾಬಾದ್ :​ ಗುಜರಾತ್ ಟೈಟಾನ್ಸ್​ ಬೌಲಿಂಗ್​ಗೆ ತತ್ತರಿಸಿದ ಸನ್ ರೈಸರ್ಸ್ ಹೈದರಾಬಾದ್ 161ರನ್​ಗಳನ್ನು ಗಳಿಸಲು ಮಾತ್ರ ಶಕ್ತವಾಗಿದೆ. ಪಂದ್ಯ ಗೆಲ್ಲಲು ಗುಜರಾತ್​ ತಂಡಕ್ಕೆ 162 ರನ್​ಗಳ ಗುರಿ ನೀಡಿದೆ.

ಕಳೆದ ಪಂದ್ಯದಲ್ಲಿ ಹೈದರಾಬಾದ್ ಪರ ಸ್ಫೋಟಕ ಬ್ಯಾಟಿಂಗ್​ ಮಾಡಿದ ಯಾವೊಬ್ಬ ಆಟಗಾರರು ಸಹ ಇಂದು ತಂಡಕ್ಕೆ ಆಸರೆಯಾಗಲಿಲ್ಲ. ಗುಜರಾತ್​ಗಾಗಿ ಡೆತ್​ ಓವರ್​ ಸ್ಪೆಷಲಿಸ್ಟ್​​ ಮೋಹಿತ್​ ಶರ್ಮಾ ರನ್​ ವೇಗಕ್ಕೆ ಬ್ರೇಕ್​ ಹಾಕುವುದರ ಜೊತೆಗೆ 3 ವಿಕೆಟ್​ಗಳನ್ನು ಪಡೆದು ಮಿಂಚಿದರು. ದೇಶದ ಅತಿ ದೊಡ್ಡದಾದ ಅಹಮದಬಾದ್​ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಪಂದ್ಯ ನಡೆಯುತ್ತಿದೆ.

ಟಾಸ್​ ಗೆದ್ದು ಮತ್ತೊಮ್ಮೆ ಬೃಹತ್​ ರನ್​ ಮಳೆ ಹರಿಸುವ ಭರದಲ್ಲಿ ಮೊದಲು ಹೈದರಾಬಾದ್​ ಇನ್ನಿಂಗ್ಸ್​ ಆರಂಭಿಸಿತು. ಆದರೆ ಗುಜರಾತ್​ನ ಆಕ್ರಮಣಕಾರಿ ಮತ್ತು ಸಂಘಟಿತ ಬೌಲಿಂಗ್​ ದಾಳಿಗೆ ತತ್ತರಿಸಿದ ಬ್ಯಾಟರ್ಸ್​​ ವಿಕೆಟ್​ ಕಳೆದುಕೊಂಡು ಪೆವಿಲಿಯನ್​ ಹಾದಿ ಹಿಡಿದರು. ಆರಂಭಿಕರಾಗಿ ಕ್ರೀಸ್​ಗೆ ಬಂದ ಟ್ರಾವಿಸ್​ ಹೆಡ್​ ಮತ್ತು ಮಯಾಂಕ್ ಅಗರ್ವಾಲ್ ಜೋಡಿ ಉತ್ತಮ ಅಡಿಪಾಯ ಹಾಕುವಲ್ಲಿ ಎಡವಿತು. ಟೂರ್ನಿ ಆರಂಭದಿಂದಲೂ ಫಾರ್ಮ್​ ಸಮಸ್ಯೆ ಎದುರಿಸುತ್ತಿರುವ ಮಯಾಂಕ್​ ಈ ಬಾರಿಯೂ ತಂಡಕ್ಕೆ ಆಸರೆಯಾಗಲಿಲ್ಲ.

ಹೈದರಾಬಾದ್​ 108 ರನ್​ಗಳಿಸುವಷ್ಟರಲ್ಲಿ ಪ್ರಮುಖ 4 ವಿಕೆಟ್​ಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಮಯಾಂಕ್ ಅಗರ್ವಾಲ್ (16) ಟ್ರಾವಿಸ್ ಹೆಡ್(19), ಅಭಿಷೇಕ್ ಶರ್ಮಾ(29), ಮತ್ತು ಐಡೆನ್ ಮರ್ಕ್ರಾಮ್ (17) ರನ್​ಗಳನ್ನು ಗಳಿಸಿ ಗುಜರಾತ್​ ಬೌಲರ್ಸ್​ ಗೆ ವಿಕೆಟ್ ಒಪ್ಪಿಸಿದರು.​ ಕಳೆದ ಪಂದ್ಯದ ಹೀರೋ ಹೆನ್ರಿಚ್​ ಕ್ಲಾಸೆನ್​ ಎರಡು ಸಿಕ್ಸರ್​ ಸಿಡಿಸಿ ಬೃಹತ್​ ರನ್​ ಕಲೆ ಹಾಕುವ ಸೂಚನೆ ಕೊಟ್ಟರೂ 24 ರನ್​ಗಳಿಗೆ ರಶೀದ್​ ಖಾನ್​ ಬೌಲಿಂಗ್​ನಲ್ಲಿ ವಿಕೆಟ್​ ಒಪ್ಪಿಸಿದರು. ಬಳಿಕ ಆಗಮಿಸಿದ ಯಾವೊಬ್ಬ ಆಟಗಾರ ಕೂಡ ಗಮನ ಸೆಳೆಯುವಂತ ಪ್ರದರ್ಶನ ನೀಡಲಿಲ್ಲ.

ಮಂದಗತಿಯ ಆಟವಾಡಿದ ಶಹಬಾಜ್ ಅಹ್ಮದ್ (22) ಕೊನೆ ಹಂತದಲ್ಲಿ ವಿಕೆಟ್​ ಕಳೆದುಕೊಂಡು ತನ್ನ ಸಾಮರ್ಥ್ಯ ತೋರಲಿಲ್ಲ. ಇಂಪ್ಯಾಕ್ಟ್​ ಆಟಗಾರನಾಗಿ ಬಂದ ವಾಷಿಂಗ್ಟನ್ ಸುಂದರ್​ ಶೂನ್ಯಕ್ಕೆ ಔಟ್​ ಆಗಿ ನಿರ್ಗಮಿಸಿದರು. ಕೇವಲ 14 ಚೆಂಡುಗಳಲ್ಲಿ ಮೂರು ಬೌಂಡರಿ ಮತ್ತು ಒಂದು ಸಿಕ್ಸರ್​ ಹೊಡೆದು 29 ರನ್​ಗಳಿಸಿದ ಅಬ್ದುಲ್ ಸಮದ್ ಡೆತ್​ ಓವರ್​ನಲ್ಲಿ ರನ್​ ಔಟ್​ಗೆ ಬಲಿಯಾದರು. ಕೊನೆಯಲ್ಲಿ ನಾಯಕ ಪ್ಯಾಟ್ ಕಮಿನ್ಸ್ 2 ರನ್​ ಗಳಿಸಿ ಅಜೇಯರಾಗಿ ಉಳಿದರು. ನಿಗದಿತ 20 ಓವರ್​ಗಳಲ್ಲಿ 8 ವಿಕೆಟ್​ಗಳ ನಷ್ಟಕ್ಕೆ 161 ರನ್​ಗಳನ್ನು ಹೈದರಾಬಾದ್​ ಕಲೆ ಹಾಕಿತು.

ಇನ್ನು ಗುಜರಾತ್​ ಪರ ಅದ್ಭುತ ಬೌಲಿಂಗ್​ ಪ್ರದರ್ಶನ ಕಂಡುಬಂತು. ದರ್ಶನ್​ ನಲ್ಕಂಡೆ ಹೊರೆತುಪಡಿಸಿದರೆ ಉಳಿದೆಲ್ಲ ಬೌಲರ್ಸ್​ ವಿಕೆಟ್​ ಪಡೆಯುವಲ್ಲಿ ಯಶಸ್ವಿಯಾದರು. ಅಜ್ಮತ್​ಉಲ್ಲಾ ಒಮರ್ಜಾಯ್, ರಶೀದ್ ಖಾನ್, ಉಮೇಶ್ ಯಾದವ್ ಮತ್ತು ನೂರ್ ಅಹ್ಮದ್ ಎಲಾ ಒಂದೊಂದು ವಿಕೆಟ್​ ಪಡೆದರು. ಆದರೇ ತಮ್ಮ ವಿಶೇಷವಾದ ಸ್ಪೆಲ್​ನಿಂದಲ್ಲೇ ಮೋಹಿತ್​ ಶರ್ಮಾ 3 ವಿಕೆಟ್​ ಕಬಳಿಸಿದರು.

ತಂಡಗಳು: ಗುಜರಾತ್ ಟೈಟಾನ್ಸ್ : ವೃದ್ಧಿಮಾನ್ ಸಹಾ(ವಿ.ಕೀ), ಶುಭಮನ್ ಗಿಲ್(ನಾಯಕ), ಅಜ್ಮತ್​ಉಲ್ಲಾ ಒಮರ್ಜಾಯ್, ಡೇವಿಡ್ ಮಿಲ್ಲರ್, ವಿಜಯ್ ಶಂಕರ್, ರಾಹುಲ್ ತೆವಾಟಿಯಾ, ರಶೀದ್ ಖಾನ್, ಉಮೇಶ್ ಯಾದವ್, ನೂರ್ ಅಹ್ಮದ್, ಮೋಹಿತ್ ಶರ್ಮಾ, ದರ್ಶನ್ ನಲ್ಕಂಡೆ

ಸನ್‌ರೈಸರ್ಸ್ ಹೈದರಾಬಾದ್ : ಮಯಾಂಕ್ ಅಗರ್ವಾಲ್, ಟ್ರಾವಿಸ್ ಹೆಡ್, ಅಭಿಷೇಕ್ ಶರ್ಮಾ, ಐಡೆನ್ ಮರ್ಕ್ರಾಮ್, ಹೆನ್ರಿಚ್ ಕ್ಲಾಸೆನ್(ವಿ.ಕೀ.), ಅಬ್ದುಲ್ ಸಮದ್, ಶಹಬಾಜ್ ಅಹ್ಮದ್, ಪ್ಯಾಟ್ ಕಮಿನ್ಸ್(ನಾಯಕ), ಭುವನೇಶ್ವರ್ ಕುಮಾರ್, ಮಯಾಂಕ್ ಮಾರ್ಕಾಂಡೆ, ಜಯದೇವ್ ಉನದ್ಕತ್

ಇದನ್ನೂ ಓದಿ : IPL: ಪಂಜಾಬ್ ವಿರುದ್ಧ 21 ರನ್‌ಗಳ ಜಯ ಸಾಧಿಸಿದ ಲಕ್ನೋ; ಗಮನ ಸೆಳೆದ ಮಯಾಂಕ್ ಯಾದವ್ ಬೌಲಿಂಗ್ - Lucknow Super Giants

Last Updated : Apr 2, 2024, 3:50 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.