ETV Bharat / sports

ಸಾಯಿ ಕಿಶೋರ್​ ಬೌಲಿಂಗ್​ ದಾಳಿಗೆ ನಲುಗಿದ ಪಂಜಾಬ್: ಗುಜರಾತ್​ಗೆ​ ನಾಲ್ಕನೇ ಗೆಲುವು - GT Beat PBKS - GT BEAT PBKS

ಗುಜರಾತ್​ ಟೈಟಾನ್ಸ್​ ವಿರುದ್ದ ಪಂಜಾಬ್​ ಕಿಂಗ್ಸ್​ ಹೀನಾಯ ಸೋಲು ಕಂಡಿದೆ.

ಸಾಯಿ ಕಿಶೋರ್​ ಬೌಲಿಂಗ್​ ದಾಳಿಗೆ ನಲುಗಿದ ಪಂಜಾಬ್: ಗುಜರಾತ್​ ವಿರುದ್ದ 3 ವಿಕೆಟ್​ಗಳ ಸೋಲು

author img

By PTI

Published : Apr 22, 2024, 6:46 AM IST

Updated : Apr 22, 2024, 7:23 AM IST

ಚಂಢೀಗಡ: ಭಾನುವಾರ ಇಲ್ಲಿಯ ಮಹಾರಾಜ ಯಾದವೀಂದ್ರ ಸಿಂಗ್ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ, ಮುಲ್ಲನ್ಪುರ್​ನಲ್ಲಿ ನಡೆದ ಐಪಿಎಲ್​ನ 37ನೇ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ದ ಗುಜರಾತ್ ಟೈಟಾನ್ಸ್ ಮೂರು ವಿಕೆಟ್​ಗಳಿಂದ ಗೆಲುವು ಸಾಧಿಸಿತು. ಈ ಗೆಲುವಿನೊಂದಿಗೆ ಗುಜರಾತ್ ಎಂಟು ಅಂಕಗಳೊಂದಿಗೆ ಆರನೇ ಸ್ಥಾನಕ್ಕೆ ತಲುಪಿದೆ. ಪಂಜಾಬ್ ಕಿಂಗ್ಸ್ ಒಂಬತ್ತನೇ ಸ್ಥಾನಕ್ಕೆ ಕುಸಿದಿದೆ.

ಇದಕ್ಕೂ ಮೊದಲು ಟಾಸ್​ ಗೆದ್ದು ಬ್ಯಾಟ್​ ಮಾಡಿದ ಪಂಜಾಬ್​ ನಿಗದಿತ 20 ಓವರ್​ಗಳಲ್ಲಿ 142 ರನ್​ಗಳಗೆ ಸರ್ವಪತನ ಕಂಡಿತು. ಮೊದಲಿಗೆ ತಂಡವು ಉತ್ತಮ ಆರಂಭ ಪಡೆದಿತ್ತು. ಆರಂಭಿಕ ಬ್ಯಾಟರ್​ ಸ್ಯಾಮ್​ ಕರ್ರನ್​, ಪ್ರಭಾಸಿಮ್ರಾನ್ 52 ರನ್​ಗಳ ಜೊತೆಯಾಟವಾಡಿ ತಂಡಕ್ಕೆ ಭದ್ರ ಅಡಿಪಾಯ ಹಾಕಿದ್ದರು. ಈ ವೇಳೆ ಮೊಹಿತ್​ ಶರ್ಮಾ ಎಸೆತದಲ್ಲಿ ತಂಡ ಮೊದಲ ವಿಕೆಟ್​ ಕಳೆದುಕೊಂಡಿತು. ಇಲ್ಲಿಂದ ಪಂಜಾಬ್​ ಬ್ಯಾಟರ್​ಗಳು ಪೆವಿಲಿಯನ್​ ಪರೇಡ್​ ಆರಂಭಿಸಿದರು. ಪ್ರಭಾಸಿಮ್ರಾನ್​ ನಿರ್ಗಮನದ ನಂತರ ರೊಸ್ಸೌವ್​(9), ಸ್ಯಾಮ್​ ಕರ್ರನ್ (20), ಲಿವಿಂಗ್​ಸ್ಟನ್​ (6), ಜಿತೇಶ್​ ಶರ್ಮಾ (13), ಅಷ್ಟೋಶ್​ ಶರ್ಮಾ (3), ಶಶಾಂಕ್​ ಸಿಂಗ್​ (8), ಹರ್​ಪ್ರೀತ್​ (14), ಹರ್ಷಲ್​ ಪಾಟೇಲ್​ ಕ್ರೀಸ್​ ಕಾಯ್ದುಕೊಳ್ಳದೆ ತಮ್ಮ ವಿಕೆಟ್​ಗಳ ಒಪ್ಪಿಸಿ ಹೊರನಡೆದರು.

ಕೊನೆಯಲ್ಲಿ ಹರ್​ಪ್ರೀತ್​​ ಬ್ರರ್​ 12 ಎಸೆತಗಳಲ್ಲಿ 29 ರನ್​ ಚಚ್ಚಿ ತಂಡದ ಸ್ಕೋರ್​ಗೆ ಕಾಣಿಕೆ ನೀಡಿದರು. ಗುಜರಾತ್​ ಪರ ಸಾಯಿ ಕಿಶೋರ್​ 4, ನೂರ್​ ಅಹಮದ್​, ಮೋಹಿತ್​ ಶರ್ಮಾ ತಲಾ 2, ರಾಶೀದ್​ ಖಾನ್​ ಒಂದು ವಿಕೆಟ್​ ಪಡೆದರು.

ಸಾಮಾನ್ಯ ಗುರಿಯನ್ನು ಬೆನ್ನಟ್ಟಿದ ಗುಜರಾತ್​ ಶುಭಮನ್​ ಗಿಲ್​ (35), ಸಾಯಿ ಸುದರ್ಶನ್​ (31), ರಾಹುಲ್​ ತೆವಾಟಿಯ (36*) ಬ್ಯಾಟಿಂಗ್​ ನೆರವಿನಿಂದ 7 ವಿಕೆಟ್​ ಕಳೆದುಕೊಂಡು 5 ಎಸೆತಗಳು ಬಾಕಿ ಇರುವಾಗಲೇ ಗೆಲುವಿನ ದಡ ಸೇರಿತು. ಪಂಜಾಬ್​ ಪರ ಹರ್ಷಲ್​ ಪಾಟೇಲ್​ 3, ಲಿವಿಂಗ್​ಸ್ಟನ್​ 2, ಸ್ಯಾಮ್​ ಕರ್ರನ್​, ಹರ್ಷದೀಪ್​ ಸಿಂಗ್​ ತಲಾ ಒಂದು ವಿಕೆಟ್​ ಪಡೆದರು.

ಇದನ್ನೂ ಓದಿ: ಕೆಕೆಆರ್​ ವಿರುದ್ಧ ಆರ್​ಸಿಬಿಗೆ 1 ರನ್​ ವಿರೋಚಿತ ಸೋಲು: 7ನೇ ಪರಾಜಯ, ಮುಚ್ಚಿದ ಪ್ಲೇಆಫ್​ ಹಾದಿ - IPL 2024

Last Updated : Apr 22, 2024, 7:23 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.