ಹೈದರಾಬಾದ್: ಪ್ರತಿಷ್ಠಿತ ಬಾರ್ಡರ್ ಗವಾಸ್ಕರ್ ಟೆಸ್ಟ್ ಸರಣಿಗೂ ಮುನ್ನ ಆಸ್ಟ್ರೇಲಿಯಾ ಪ್ರವಾಸಕ್ಕಾಗಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) 15 ಸದಸ್ಯರ ಭಾರತ-ಎ ತಂಡವನ್ನು ಸೋಮವಾರ ಪ್ರಕಟಿಸಿದೆ. ಋತುರಾಜ್ ಗಾಯಕ್ವಾಡ್ಗೆ ನಾಯಕತ್ವದ ಜವಾಬ್ದಾರಿ ನೀಡಲಾಗಿದ್ದು, ಅಭಿಮನ್ಯು ಈಶ್ವರನ್ಗೆ ಉಪನಾಯಕ ಆಗಿದ್ದಾರೆ.
ತಂಡದಿಂದ ಒಂದು ವರ್ಷ ಹೊರಗುಳಿದಿದ್ದ ಇಶಾನ್ ಕಿಶನ್ ಬಿಸಿಸಿಐ ಪ್ರಕಟಿಸಿರುವ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಮುಂಬೈ ಯುವ ಆಲ್‌ರೌಂಡರ್ ತನುಷ್ ಕೋಟ್ಯಾನ್ ಕೂಡ ತಂಡ ಸೇರ್ಪಡೆಯಾಗಿದ್ದಾರೆ.
ಎಷ್ಟು ಪಂದ್ಯಗಳು?: ಭಾರತ-ಎ ತಂಡವು ಆಸ್ಟ್ರೇಲಿಯಾ-ಎ ತಂಡದ ವಿರುದ್ಧ ಎರಡು ಪ್ರಥಮ ದರ್ಜೆ ಪಂದ್ಯಗಳು ಮತ್ತು ಭಾರತ ಹಿರಿಯರ ತಂಡದ ವಿರುದ್ಧ ಒಂದು ಇಂಟ್ರಾ-ಸ್ಕ್ವಾಡ್ ಪಂದ್ಯ ಆಡಲಿದೆ.
ತಂಡದಲ್ಲಿ ಯುವ ಆಟಗಾರರಾದ ನಿತೀಶ್ ಕುಮಾರ್ ರೆಡ್ಡಿ, ಸಾಯಿ ಸುದರ್ಶನ್, ದೇವದತ್ ಪಡಿಕ್ಕಲ್, ಖಲೀಲ್ ಅಹ್ಮದ್, ಯಶ್ ದಯಾಳ್, ಮುಖೇಶ್ ಕುಮಾರ್, ಇಶಾನ್ ಕಿಶನ್, ನವದೀಪ್ ಸೈನಿ, ಅಭಿಷೇಕ್ ಪೊರೆಲ್ ಇದ್ದಾರೆ.
🚨 NEWS 🚨
— BCCI (@BCCI) October 21, 2024
Ruturaj Gaikwad to lead India A for tour of Australia.
Squad details 🔽 #TeamIndia
ಇದನ್ನೂ ಓದಿ: ವಿರಾಟ್ ಕೊಹ್ಲಿ, ಧೋನಿ ಅಲ್ಲವೇ ಅಲ್ಲ: ಈ ಕ್ರಿಕೆಟರ್ ಬಳಿ ಇದೆ ಅತ್ಯಂತ ದುಬಾರಿ ಕಾರು!
ಪಂದ್ಯಗಳು ಎಲ್ಲಿ ನಡೆಯುತ್ತವೆ?: ಭಾರತ-ಎ ತಂಡ ಆಸ್ಟ್ರೇಲಿಯಾ-ಎ ವಿರುದ್ಧ ಮ್ಯಾಕೆ ಮತ್ತು ಮೆಲ್ಬೋರ್ನ್‌ನಲ್ಲಿ ಎರಡು ಪ್ರಥಮ ದರ್ಜೆ ಪಂದ್ಯ ಆಡಲಿದೆ. ಪರ್ತ್‌ನಲ್ಲಿ ಟೀಂ ಇಂಡಿಯಾ (ಹಿರಿಯರ ತಂಡ) ವಿರುದ್ಧ ಒಂದು ಪಂದ್ಯ ಆಡಲಿದೆ. ಹಿರಿಯರ ತಂಡದೊಂದಿಗಿನ ಪಂದ್ಯ ಮೂರು ದಿನಗಳದ್ದಾಗಿರಲಿದೆ ಎಂದು ಬಿಸಿಸಿಐ ಕಾರ್ಯದರ್ಶಿ ಜೈ ಶಾ ತಿಳಿಸಿದ್ದಾರೆ.
ಭಾರತ-ಎ ತಂಡ: ರುತುರಾಜ್ ಗಾಯಕ್ವಾಡ್ (ನಾಯಕ), ಅಭಿಮನ್ಯು ಈಶ್ವರನ್ (ಉಪ ನಾಯಕ), ನಿತೀಶ್ ಕುಮಾರ್ ರೆಡ್ಡಿ, ಸಾಯಿ ಸುದರ್ಶನ್, ರಿಕಿ ಭುಯಿ, ದೇವದತ್ ಪಡಿಕ್ಕಲ್, ಇಶಾನ್ ಕಿಶನ್ (ವಿಕೆಟ್ ಕೀಪರ್), ಬಾಬಾ ಇಂದ್ರಜಿತ್, ಅಭಿಷೇಕ್ ಪೊರೆಲ್ (ವಿಕೆಟ್ ಕೀಪರ್), ಖಲೀಲ್ ಅಹ್ಮದ್, ಮುಖೇಶ್ ಕುಮಾರ್, ನವದೀಪ್ ಸೈನಿ, ಯಶ್ ದಯಾಳ್, ಮಾನವ್ ಸುತಾರ್ ಮತ್ತು ತನುಷ್ ಕೋಟ್ಯಾನ್.
ವೇಳಾಪಟ್ಟಿ:
- ಅ.31ರಿಂದ ನ.3: 1ನೇ ಪ್ರಥಮ ದರ್ಜೆ ಪಂದ್ಯ - ಮ್ಯಾಕೆ
- ನ.7 ರಿಂದ 10: 2ನೇ ಪ್ರಥಮ ದರ್ಜೆ ಪಂದ್ಯ - ಮೆಲ್ಬೋರ್ನ್
- ನವೆಂಬರ್ 15 ರಿಂದ 17: ಇಂಟ್ರಾ-ಸ್ಕ್ವಾಡ್ ಪಂದ್ಯ - ಪರ್ತ್
ಇದನ್ನೂ ಓದಿ: ’ಕೊಬ್ಬು’ ಜಾಸ್ತಿ.. ತಂಡಕ್ಕೆ ಆಯ್ಕೆ ಮಾಡಲ್ಲ: ಟೀಂ ಇಂಡಿಯಾ ಆರಂಭಿಕ ಬ್ಯಾಟರ್ಗೆ ಶಾಕ್ ನೀಡಿದ ಆಯ್ಕೆ ಸಮಿತಿ!