ಸಿಂಗಾಪುರ್: ಇಲ್ಲಿ ನಡೆಯುತ್ತಿರುವ ಮಹಿಳೆಯರ ವಿಶ್ವ ಚಾಂಪಿಯನ್‌ಶಿಪ್ ಕ್ರೀಡಾಕೂಟದಲ್ಲಿ ಕರ್ನಾಟಕದ ಗಾಲ್ಫರ್ ಅದಿತಿ ಅಶೋಕ್ 21ನೇ ಸ್ಥಾನಕ್ಕೆ ತೃಪ್ತಿಪಟ್ಟರು. ಮೊದಲ ಎರಡು ದಿನಗಳಲ್ಲಿ ಅಗ್ರ 10 ರೊಳಗೆ ಸ್ಥಾನ ಪಡೆದಿದ್ದ ಅದಿತಿ ಅಶೋಕ್ ಅವರು ಭಾನುವಾರ ಬೆಳಗ್ಗೆ ನಡೆದ ಗಾಲ್ಫ್ ಅಂತಿಮ ಸುತ್ತಿನಲ್ಲಿ ಕುಸಿತ ಕಂಡರು. ಈವೆಂಟ್‌ನಲ್ಲಿ ಪಾದಾರ್ಪಣೆ ಮಾಡಿದ ಅದಿತಿ ತನ್ನ ಹಿಂದಿನ ಸುತ್ತಿನಲ್ಲಿ 72, 69, 73 ಅಂಕಗಳನ್ನು ಗಳಿಸುವುದರ ಮೂಲಕ ಪ್ರಬಲ ಪೈಪೋಟಿ ನೀಡಿದ್ದರು.
ಆಸ್ಟ್ರೇಲಿಯಾದ ಹನ್ನಾ ಗ್ರೀನ್ ಮೊದಲ ಸುತ್ತಿನಲ್ಲಿ 74 ಅಂಕಗಳನ್ನು ಪಡೆದು ಹಿನ್ನಡೆ ಅನುಭವಿಸಿದರು. ಬಳಿಕ ಪ್ರಬಲ ಪೈಟೋಟಿ ನೀಡಿದ ಗ್ರೀನ್ ಒಟ್ಟು 67 ಅಂಕ ಗಳಿಸುವ ಮೂಲಕ ಫ್ರೆಂಚ್ ಗಾಲ್ಫ್ ಆಟಗಾರ್ತಿ ಸೆಲೀನ್ ಬೌಟಿಯರ್ ಅವರನ್ನು ಸೋಲಿಸಿ ಪ್ರಶಸ್ತಿಗೆ ಮುತ್ತಿಕ್ಕಿದರು.
ನಾಲ್ವರು ಆಟಗಾರರಾದ ಜಪಾನಿನ ಜೋಡಿ ಯುನಾ ನಿಶಿಮುರಾ ಮತ್ತು ನಾಸಾ ಹಟಾವೊಕಾ, ಕೊರಿಯಾದ ಮಿ ಹಯಾಂಗ್ ಲೀ ಮತ್ತು ಕೆನಡಾದ ಬ್ರೂಕ್ ಹೆಂಡರ್ಸನ್ ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟರು.
ಒಂದು ವಾರದ ಹಿಂದೆ ಅದಿತಿ ಹೋಂಡಾ LPGA ನಲ್ಲಿ T-31 ಸ್ಥಾನ ಪಡೆದಿದ್ದರು. ಐದು ಬಾರಿ ಲೇಡಿಸ್ ಯುರೋಪಿಯನ್ ಟೂರ್ ವಿಜೇತೆಯಾಗಿರುವ ಅದಿತಿ, ಈ ವರ್ಷ ಪ್ಯಾರಿಸ್‌ನಲ್ಲಿ ತನ್ನ ಮೂರನೇ ಒಲಿಂಪಿಕ್ ಕ್ರೀಡಾಕೂಟವನ್ನು ಆಡುವುದು ಈಗಾಗಲೇ ಖಚಿತವಾಗಿದೆ.
ಓದಿ: ಐಪಿಎಲ್ 2024ರ ಪ್ರೋಮೋ ರಿಲೀಸ್: ಪಂತ್, ಅಯ್ಯರ್, ಪಾಂಡ್ಯ, ರಾಹುಲ್ ಮಿಂಚು