ETV Bharat / spiritual

ವಾರದ ರಾಶಿ ಭವಿಷ್ಯ: ಹಲವರಿಗೆ ಅದೃಷ್ಟ ಬಲ, ಕೆಲವರಿಗೆ ಮಿಶ್ರ ಫಲ - Weekly Horoscope

author img

By ETV Bharat Karnataka Team

Published : May 12, 2024, 8:14 AM IST

ಮೇ 12ರಿಂದ 18ರವರೆಗಿನ ವಾರದ ರಾಶಿ ಭವಿಷ್ಯ ಹೀಗಿದೆ.

Weekly Horoscope
Weekly Horoscope (ETV Bharat)

ಮೇಷ: ಈ ರಾಶಿಯಲ್ಲಿ ಹುಟ್ಟಿದ ಜನರು ವೃತ್ತಿ, ವ್ಯವಹಾರ, ಪರೀಕ್ಷೆಗಳು, ಸ್ಪರ್ಧೆಗಳು ಇತ್ಯಾದಿಗಳಲ್ಲಿ ವಾರದ ಕೊನೆಗೆ ಶುಭ ಸುದ್ದಿಯನ್ನು ಪಡೆಯಲಿದ್ದಾರೆ. ದೀರ್ಘ ಕಾಲದಿಂದ ನೀವು ಕೆಲಸಕ್ಕಾಗಿ ಎದುರು ನೋಡುತ್ತಿದ್ದರೆ ನಿಮ್ಮ ಇಚ್ಛೆಯು ಈ ವಾರದಲ್ಲಿ ಈಡೇರಲಿದೆ. ಈ ವಾರದ ಆರಂಭದಲ್ಲಿ ಧಾರ್ಮಿಕ ಮತ್ತು ಸಾಮಾಜಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವ ಅವಕಾಶ ದೊರೆಯಲಿದೆ. ಈ ವಾರದ ಉತ್ತರಾರ್ಧದಲ್ಲಿ ಆಯಾಸ, ಆಲಸ್ಯ ಮತ್ತು ಋತುಮಾನಕ್ಕೆ ಸಂಬಂಧಿಸಿದ ರೋಗಗಳನ್ನು ದೂರವಿಡುವ ಅಗತ್ಯವಿದೆ. ಈ ಅವಧಿಯಲ್ಲಿ ನಿಮ್ಮ ಬದುಕಿನಲ್ಲಿ ಬರುವ ಅವಕಾಶವನ್ನು ಸರಿಯಾಗಿ ಬಳಸಿಕೊಳ್ಳದೆ ಇದ್ದರೆ ನೀವು ದೀರ್ಘ ಕಾಲದವರೆಗೆ ಕಾಯಬೇಕಾದ ಅನಿವಾರ್ಯತೆ ಉಂಟಾಗಬಹುದು. ಕೆಲಸದ ಸ್ಥಳದಲ್ಲಿ ಹಿರಿಯರು ನಿಮ್ಮ ಕೆಲಸವನ್ನು ಪ್ರಶಂಸಿಸಲಿದ್ದಾರೆ ಹಾಗೂ ಕಿರಿಯರು ನಿಮಗೆ ಸಂಪೂರ್ಣ ಬೆಂಬಲವನ್ನು ನೀಡಲಿದ್ದಾರೆ. ವ್ಯಾಪಾರೋದ್ಯಮಿಗಳು ನಿರೀಕ್ಷಿತ ಲಾಭವನ್ನು ಪಡೆಯಲಿದ್ದಾರೆ. ರಾಜಕೀಯದಲ್ಲಿರುವ ವ್ಯಕ್ತಿಯು ಉನ್ನತ ಸ್ಥಾನ, ಪ್ರಶಂಸೆ ಮತ್ತು ಗೌರವವನ್ನು ಪಡೆಯಲಿದ್ದಾರೆ. ಪ್ರೇಮ ಸಂಬಂಧದಲ್ಲಿ ಭಾವ ತೀವ್ರತೆ ಇರಲಿದ್ದು ಪರಸ್ಪರ ನಂಬಿಕೆ ಹೆಚ್ಚಾಗಲಿದೆ.

ವೃಷಭ: ಈ ವಾರದಲ್ಲಿ ಸಾಕಷ್ಟು ಮಿಶ್ರ ಫಲ ಉಂಟಾಗಲಿದೆ. ವಾರದ ಮೊದಲ ಕೆಲವು ದಿನಗಳಲ್ಲಿ ನೀವು ನವ ಚೈತನ್ಯದಿಂದ ತುಂಬಿರಲಿದ್ದು, ಕಠಿಣ ಶ್ರಮ ಪಡಲು ಮತ್ತು ವ್ಯವಹಾರದಲ್ಲಿ ಮುಂದೆ ಸಾಗಲು ನಿಮಗೆ ಇದರಿಂದ ಪ್ರೇರಣೆ ದೊರೆಯಲಿದೆ. ಇದರ ಪ್ರಭಾವದ ಕಾರಣ ನಿಮ್ಮ ವೃತ್ತಿಯಲ್ಲಿ ನೀವು ಯಶಸ್ಸನ್ನು ಸಾಧಿಸಲಿದ್ದೀರಿ. ಪ್ರೀತಿಯ ವ್ಯಕ್ತಿಯನ್ನು ಭೇಟಿಯಾಗುವ ಉತ್ಸುಕತೆಯನ್ನು ನೀವು ತೋರಲಿದ್ದೀರಿ. ಆದರೆ ವಾರದ ದ್ವಿತೀಯಾರ್ಧದದಲ್ಲಿ ಕೆಲವೊಂದು ಕೌಟುಂಬಿಕ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಉದ್ಯೋಗಿಗಳು ಅನಪೇಕ್ಷಿತ ತಾಣಕ್ಕೆ ವರ್ಗಾವಣೆಯಾದಾಗ ಒತ್ತಡ ಉಂಟಾಗಬಹುದು. ಈ ವಾರದಲ್ಲಿ ಸಾಕಷ್ಟು ಎಚ್ಚರಿಕೆ ವಹಿಸಬೇಕು. ವರ್ತನೆ ಮತ್ತು ಮಾತಿನಲ್ಲಿ ನಿಯಂತ್ರಣವಿಡುವುದು ಅಗತ್ಯ. ಅನಿರೀಕ್ಷಿತ ಸನ್ನಿವೇಶ ಉಂಟಾದಾಗ ಇನ್ನಷ್ಟು ಎಚ್ಚರಿಕೆ ವಹಿಸಿ. ನಿಮ್ಮ ಪ್ರೇಮ ಸಂಬಂಧದಲ್ಲಿ ಮುಂದೆ ಸಾಗುವಾಗ ಜಾಗರೂಕತೆ ವಹಿಸಿ. ನಿಮ್ಮ ಪ್ರೇಮ ಸಂಬಂಧವನ್ನು ಗಟ್ಟಿಯಾಗಿರಿಸಬೇಕಾದರೆ ನಿಮ್ಮ ಜೀವನ ಸಂಗಾತಿಯ ಭಾವನೆಗಳನ್ನು ನಿರ್ಲಕ್ಷಿಸಬೇಡಿ. ವೈವಾಹಿಕ ಜೀವನದಲ್ಲಿ ಸಂತಸ ಇರಲಿದೆ. ಆದರೆ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳು ಕಾಣಿಸಿಕೊಳ್ಳಬಹುದು.

ಮಿಥುನ: ವಾರದ ಮೊದಲಾರ್ಧದಲ್ಲಿ ಯಾವುದೇ ರೀತಿಯ ನಿರ್ಲಕ್ಷ್ಯವನ್ನು ತೋರಬಾರದು. ಆದರೆ ನಿಮ್ಮೊಂದಿಗೆ ಸ್ಪರ್ಧಿಸುವ ಎದುರಾಳಿಗಳ ಕುರಿತು ಸಾಕಷ್ಟು ಎಚ್ಚರಿಕೆ ವಹಿಸಿ. ಏಕೆಂದರೆ ನಿಮ್ಮ ಉದ್ದೇಶವನ್ನು ವಿಫಲಗೊಳಿಸಲು ಅವರು ಯತ್ನಿಸಲಿದ್ದು, ಇದು ನಿಮ್ಮ ಪಾಲಿಗೆ ಅನಾಹುತಕಾರಿ ಎನಿಸಬಹುದು. ಈ ಅವಧಿಯಲ್ಲಿ ನಿಮ್ಮ ಮಾತಿನ ಮೇಲೆ ನಿಗಾ ಇರಿಸಿ. ಅನಗತ್ಯ ವಾದಗಳಿಂದ ದೂರವಿರಿ. ಕ್ಷುಲ್ಲಕ ವಿಷಯಗಳಲ್ಲಿ ತಲೆ ಕೆಡಿಸಿಕೊಳ್ಳಬೇಡಿ. ವ್ಯವಹಾರದಲ್ಲಿ ತೊಡಗಿಸಿಕೊಂಡಿರುವವರು ಮತ್ತು ಉದ್ಯೋಗದಲ್ಲಿರುವವರು ಈ ವಾರದ ದ್ವಿತೀಯಾರ್ಧದಲ್ಲಿ ಸಂತೃಪ್ತಿ ಅನುಭವಿಸಲಿದ್ದಾರೆ. ಏಕೆಂದರೆ ಈ ಸಂದರ್ಭದಲ್ಲಿ ಪರಿಸ್ಥಿತಿಯು ಪೂರ್ವಯೋಜನೆಯಂತೆಯೇ ಮುಂದುವರಿಯಲಿದೆ. ವ್ಯಾಪಾರೋದ್ಯಮಿಗಳು ಈ ವಾರದಲ್ಲಿ ಹೊಸ ಚೈತನ್ಯದಿಂದ ಪುಟಿದೇಳಲಿದ್ದಾರೆ. ನೀವು ಮತ್ತು ನಿಮ್ಮ ಪ್ರೇಮಿಯು ಜೊತೆಗೂಡಿ ಅನುರಾಗದ ಸಮಯವನ್ನು ಕಳೆಯಲಿದ್ದು, ಪ್ರೇಮ ಸಂಬಂಧವು ಗಟ್ಟಿಗೊಳ್ಳಲಿದೆ. ಜೀವನ ಸಂಗಾತಿಯ ಆರೋಗ್ಯವು ಚಿಂತೆಗೆ ಕಾರಣವೆನಿಸಬಹುದು.

ಕರ್ಕಾಟಕ: ಪ್ರೇಮಿಯಿಂದ ಅಥವಾ ಸಹೋದ್ಯೋಗಿಗಳಿಂದ ಸಹಕಾರ ದೊರೆಯದ ವಾರದ ಮೊದಲಾರ್ಧದಲ್ಲಿ ನೀವು ವಿಪರೀತ ಬೇಸರ ಅನುಭವಿಸಬಹುದು. ವಾರದ ಮಧ್ಯದಲ್ಲಿ ನಿಮಗೆ ಎದುರಾಗುವ ಸಮಸ್ಯೆಗಳಿಗೆ ಕೆಲವೊಂದು ಉತ್ತರವನ್ನು ನೀವು ಪಡೆಯಲಿದ್ದೀರಿ. ಉದ್ಯೋಗದಲ್ಲಿರುವವರು ಹಿರಿಯರು ಅಥವಾ ಕಿರಿಯರೊಂದಿಗೆ ಉತ್ತಮ ಸಂಬಂಧವನ್ನು ಕಾಪಾಡಲು ಪ್ರಯತ್ನಿಸಬೇಕು. ಪ್ರಥಮಾರ್ಧಕ್ಕಿಂತಲೂ ದ್ವಿತೀಯಾರ್ಧದಲ್ಲಿ ಅದೃಷ್ಟದ ಹೆಚ್ಚು ಬಲ ನಿಮಗೆ ದೊರೆಯಲಿದೆ. ಈ ಅವಧಿಯಲ್ಲಿ ನಿಮ್ಮ ಧೈರ್ಯ ಮತ್ತು ಉತ್ಸಾಹವು ಹೆಚ್ಚಲಿದ್ದು, ನಿಮಗೆ ಗೌರವ ದೊರೆಯಲಿದೆ. ಸಾಮಾಜಿಕ ಮತ್ತು ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲು ನಿಮಗೆ ಅವಕಾಶ ದೊರೆಯಲಿದೆ. ನ್ಯಾಯಾಲಯಕ್ಕೆ ಸಂಬಂಧಿಸಿದ ವಿಷಯದಲ್ಲಿ ನಿಮಗೆ ಯಶಸ್ಸು ದೊರೆಯಲಿದೆ. ಪರಸ್ಪರ ನಂಬಿಕೆಯಲ್ಲಿ ಹೆಚ್ಚಳ ಉಂಟಾಗಲಿದ್ದು, ಪ್ರೇಮ ಸಂಬಂಧವು ಗಟ್ಟಿಗೊಳ್ಳಲಿದೆ. ನೀವು ಪ್ರಣಯಭರಿತ ಸಂಬಂಧವನ್ನು ಹೊಂದಿದ್ದರೆ, ನಿಮ್ಮ ಕುಟುಂಬದ ಸದಸ್ಯರು ಮದುವೆಗೆ ಒಪ್ಪಿಗೆ ಕೊಡುವ ಸಾಧ್ಯತೆ ಇದೆ. ಮನೆಯ ವಾತಾವರಣವು ಶಾಂತಿಯುತವಾಗಿರಲಿದೆ. ನಿಮ್ಮ ಪ್ರೀತಿಪಾತ್ರರು ಮತ್ತು ಗೆಳೆಯರೊಂದಿಗೆ ಸಂತಸದ ಕ್ಷಣಗಳನ್ನು ಕಳೆಯುವ ಅವಕಾಶ ನಿಮಗೆ ದೊರೆಯಲಿದೆ.

ಸಿಂಹ: ಈ ವಾರದಲ್ಲಿ ಮಂಗಳದಾಯಕ ವಾತಾವರಣವು ನೆಲೆಸಲಿದ್ದು, ಅದೃಷ್ಟವು ನಿಮ್ಮನ್ನು ಬೆಂಬಲಿಸಲಿದೆ. ಆದರೆ ಉತ್ಸಾಹದ ಭರದಲ್ಲಿ ತಪ್ಪಿಯೂ ಅವಸರದ ನಿರ್ಧಾರ ತೆಗೆದುಕೊಳ್ಳಬೇಡಿ. ಇಲ್ಲದಿದ್ದರೆ ನಿಮ್ಮ ಕೆಲಸವು ಹಾಳಾಗಬಹುದು. ಗೆಳೆಯರು ಮತ್ತು ಸಂಬಂಧಿಕರೊಂದಿಗೆ ನಗೆ ಚಟಾಕಿಯನ್ನು ಹಾರಿಸುವಾಗಲೂ ಎಚ್ಚರಿಕೆಯಿಂದ ಇರಿ. ನಿಮ್ಮ ಮಾತುಗಳು ನಿಮ್ಮ ಕೃತಿಯನ್ನು ಪ್ರತಿಫಲಿಸುತ್ತವೆ ಎಂಬುದನ್ನು ಮರೆಯಬೇಡಿ. ಯಾರಿಗೂ ಬೇಸರವನ್ನುಂಟು ಮಾಡಬೇಡಿ. ಸಂಬಂಧದಲ್ಲಿ ಬಿರುಕು ಉಂಟಾಗದಂತೆ ನೋಡಿಕೊಳ್ಳಿ. ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ಸಿದ್ಧತೆ ನಡೆಸುತ್ತಿರುವವರು ಈ ವಾರದ ಆರಂಭದಲ್ಲಿ ಯಾವುದೇ ಕೆಲಸವನ್ನು ಜಾಣ್ಮೆಯಿಂದ ನಿಭಾಯಿಸಿದರೆ ಅಧಿಕ ಪ್ರಮಾಣದ ಯಶಸ್ಸನ್ನು ಪಡೆಯಲಿದ್ದಾರೆ. ದೀರ್ಘ ಕಾಲದಿಂದ ಕಾಡುತ್ತಿರುವ ಸಮಸ್ಯೆಗೆ ಪರಿಹಾರ ದೊರೆಯುವುದರಿಂದ ನೀವು ನಿರಾಳತೆ ಅನುಭವಿಸಲಿದ್ದೀರಿ. ಉದ್ಯೋಗದಲ್ಲಿರುವವರಿಗೆ ಆದಾಯದ ಹೊಸ ಮೂಲವು ದೊರೆಯಲಿದೆ. ವ್ಯವಹಾರದಲ್ಲಿ ನಿಮಗೆ ಧನಲಾಭ ಉಂಟಾಗಲಿದೆ. ನೀವು ವಿವಾಹದ ಪ್ರಸ್ತಾಪವನ್ನು ಮಾಡುವುದಾದರೆ ಈ ವಾರವು ನಿಮ್ಮ ಪಾಲಿಗೆ ಸೂಕ್ತ ಎನಿಸಲಿದೆ.

ಕನ್ಯಾ: ಈ ವಾರದ ಆರಂಭದಲ್ಲಿ ನೀವು ಅತಿಯಾದ ಕೆಲಸದ ಭಾರವನ್ನು ಅನುಭವಿಸಬಹುದು. ಇದರೊಂದಿಗೆ ಕೌಟುಂಬಿಕ ಸಮಸ್ಯೆಗಳು ನಿಮ್ಮನ್ನು ಕಾಡಬಹುದು. ಇಂತಹ ಸಂದರ್ಭದಲ್ಲಿ ನೀವು ಅವಸರದಲ್ಲಿ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಬಾರದು. ಬದಲಾಗಿ ನಿಮ್ಮ ಹಿತೈಷಿಗಳ ನೆರವನ್ನು ಪಡೆಯಿರಿ. ಆಗ ಮಾತ್ರವೇ ಯಶಸ್ಸನ್ನು ಗಳಿಸಲು ನಿಮಗೆ ಸಾಧ್ಯವಾಗಲಿದೆ. ಸವಾಲಿನ ಕ್ಷಣಗಳು ಎದುರಾಗುವಾಗ ಒಂದು ಮಾತನ್ನು ನೆನಪಿನಲ್ಲಿಟ್ಟುಕೊಳ್ಳಿ: ಕೆಟ್ಟ ದಿನಗಳು ಕೊನೆಗೊಂಡು ಒಳ್ಳೆಯ ದಿನಗಳು ಖಂಡಿತವಾಗಿಯೂ ಬರುತ್ತವೆ. ನಿಮ್ಮ ಬದುಕಿನಲ್ಲಿ ಎದುರಾಗುವ ಸವಾಲುಗಳು ವಾರದ ಕೊನೆಗೆ ನಿಮಗೆ ಉತ್ತಮ ಪಾಠವನ್ನು ಕಲಿಸಲಿವೆ. ಯಾವುದೇ ಸಾಮಾಜಿಕ ಕಳಂಕ ಉಂಟಾಗದಂತೆ ನೋಡಿಕೊಳ್ಳಬೇಕಾದರೆ ಪ್ರೇಮ ಸಂಬಂಧದಲ್ಲಿ ಎಚ್ಚರಿಕೆಯಿಂದ ಮುಂದುವರಿಯುವುದು ಒಳ್ಳೆಯದು. ಸವಾಲಿನ ಕ್ಷಣದಲ್ಲಿ ನಿಮ್ಮ ಜೀವನ ಸಂಗಾತಿಯು ನಿಮ್ಮನ್ನು ನೆರಳಿನಂತೆ ಹಿಂಬಾಲಿಸಲಿದ್ದಾರೆ. ನಿಮ್ಮ ಆರೋಗ್ಯಕ್ಕೆ ಸಂಪೂರ್ಣ ಗಮನವನ್ನು ನೀಡಬೇಕು.

ತುಲಾ: ಈ ವಾರದ ಆರಂಭದಿಂದಲೇ ತುಲಾ ರಾಶಿಯವರು ವಿಶೇಷ ಲಾಭವನ್ನು ಗಳಿಸಲಿದ್ದಾರೆ. ತುಲಾ ರಾಶಿಯಲ್ಲಿ ಜನಿಸಿದವರಿಗೆ ಅದೃಷ್ಟದ ಬಲವೂ ದೊರೆಯಲಿದೆ. ಹೀಗಾಗಿ ನೀವು ಚೈತನ್ಯ ಮತ್ತು ಆತ್ಮವಿಶ್ವಾಸದಿಂದ ಮುಂದುವರಿಯಲಿದ್ದೀರಿ. ಇದರಿಂದಾಗಿ ನಿಮ್ಮ ಕೆಲಸವನ್ನು ಸಕಾಲದಲ್ಲಿ ಮತ್ತು ಸೂಕ್ತ ರೀತಿಯಲ್ಲಿ ಮುಗಿಸಲು ಸಾಧ್ಯವಾಗುತ್ತದೆ. ರಾಜಕೀಯದಲ್ಲಿ ತೊಡಗಿಸಿಕೊಂಡವರಿಗೆ ಈ ವಾರದಲ್ಲಿ ಗೌರವ ಮತ್ತು ಮನ್ನಣೆಯ ಜೊತೆಗೆ ಹೆಚ್ಚಿನ ಜವಾಬ್ದಾರಿಯೂ ದೊರೆಯಲಿದೆ. ವಾರದ ನಡುವೆ ಕೆಲವೊಂದು ಕೌಟುಂಬಿಕ ಸಮಸ್ಯೆಗಳು ನಿಮ್ಮ ಕಾಡಲಿವೆ. ಆದರೆ ನೀವಾಗಿಯೇ ಇದನ್ನು ಬಗೆಹರಿಸುವಲ್ಲಿ ಯಶಸ್ವಿಯಾಗಲಿದ್ದೀರಿ. ಈ ವಾರದಲ್ಲಿ ನಿಮಗೆ ಆರ್ಥಿಕ ಮತ್ತು ವ್ಯಾವಹಾರಿಕ ಲಾಭ ಉಂಟಾಗಲಿದೆ. ಉದ್ಯೋಗದಲ್ಲಿರುವವರಿಗೆ ಸಾಕಷ್ಟು ಯಶಸ್ಸು ದೊರೆಯಲಿದೆ. ಒಟ್ಟಾರೆಯಾಗಿ ಆರೋಗ್ಯವು ಸಾಮಾನ್ಯ ಮಟ್ಟದಲ್ಲಿರುತ್ತದೆ.

ವೃಶ್ಚಿಕ: ವೃಶ್ಚಿಕ ರಾಶಿಯವರು ತಪ್ಪನ್ನು ಮಾಡಿ ಎಲ್ಲವನ್ನೂ ಹಾಳು ಮಾಡುವ ಸಾಧ್ಯತೆ ಇದೆ. ಈ ಕಾರಣಕ್ಕಾಗಿ ಅವರು ತಮ್ಮ ಭಾಷೆ ಮತ್ತು ನಡತೆಯ ಮೇಲೆ ನಿಯಂತ್ರಣವಿರಿಸಬೇಕು. ಇಂತಹ ಸಂದರ್ಭದಲ್ಲಿ ಯಾವುದೇ ನಿರ್ಧಾರವನ್ನು ತೆಗೆದುಕೊಳ್ಳುವ ಮೊದಲು ತಮ್ಮ ಮುಂದಿರುವ ಆಯ್ಕೆಯನ್ನು ಅವರು ಸರಿಯಾಗಿ ಪರಿಗಣಿಸಬೇಕು. ಕೆಲಸದ ಸ್ಥಳದಲ್ಲಿ ನೀವು ಏನಾದರೂ ಹೊಸತನ್ನು ಬಹಿರಂಗಪಡಿಸಿದರೆ ನಿಮ್ಮ ಎದುರಾಳಿಗಳು ಅದಕ್ಕೆ ತಡೆಯನ್ನೊಡ್ಡಬಹುದು. ನ್ಯಾಯಾಲಯಕ್ಕೆ ಸಂಬಂಧಿಸಿದ ವಿಷಯಗಳನ್ನು ನ್ಯಾಯಾಲಯದ ಹೊರಗೆ ಬಗೆಹರಿಸಲು ಸಾಧ್ಯವಾದಲ್ಲಿ, ಯಾವುದೇ ವಿಳಂಬವಿಲ್ಲದೆ ಹೀಗೆಯೇ ಮಾಡಿ. ಹೀಗೆ ಮಾಡುವುದರಿಂದ ನೀವು ದೀರ್ಘಾವಧಿಯಲ್ಲಿ ಸಾಕಷ್ಟು ಸಮಯವನ್ನು ಉಳಿಸಬಹುದು. ಈ ವಾರದ ಉತ್ತರಾರ್ಧದಲ್ಲಿ ಪ್ರಯಾಣಿಸುವಾಗ ನಿಮ್ಮ ಆರೋಗ್ಯ ಮತ್ತು ನಿಮ್ಮಲ್ಲಿರುವ ಬೆಲೆಬಾಳುವ ವಸ್ತುಗಳಿಗೆ ಸಂಬಂಧಿಸಿದಂತೆ ವಿಶೇಷ ಕಾಳಜಿ ವಹಿಸಿ. ನಿಮ್ಮ ಪ್ರಣಯ ಸಂಬಂಧವು ಅನುರಾಗದೊಂದಿಗೆ ಸದೃಢವಾಗಿರಬೇಕಾದರೆ ನಿಮ್ಮ ಜೀವನ ಸಂಗಾತಿಯ ಅಗತ್ಯತೆಗಳು ಮತ್ತು ಭಾವನೆಗಳನ್ನು ನಿರ್ಲಕ್ಷಿಸಬೇಡಿ. ಸವಾಲುಗಳು ಎದುರಾದಾಗ ನಿಮ್ಮ ಜೀವನ ಸಂಗಾತಿಯು ನಿಮ್ಮೊಡನೆ ಇರಲಿದ್ದಾರೆ.

ಧನು: ಈ ವಾರದಲ್ಲಿ ಅದೃಷ್ಟದ ಬಲ ದೊರೆಯಲಿದೆ. ನಿಮ್ಮ ವ್ಯವಹಾರ ಮತ್ತು ವೃತ್ತಿಯ ಕುರಿತು ಶುಭ ಸುದ್ದಿ ದೊರೆಯಲಿದೆ. ಈ ಹಿಂದೆ ಮಾಡಿದ ಹೂಡಿಕೆಗಳಿಂದ ಸಾಕಷ್ಟು ಆರ್ಥಿಕ ಲಾಭ ದೊರೆಯಲಿದೆ. ಅಲ್ಲದೆ ಹೊಸ ಆರ್ಥಿಕ ಹೂಡಿಕೆಗಳ ಮೇಲೆ ಈ ವಾರದಲ್ಲಿ ಅಧಿಕ ಲಾಭ ದೊರೆಯಲಿದೆ. ಅದರೆ ಯಾವುದೇ ಆರ್ಥಿಕ ಹೂಡಿಕೆಯನ್ನು ಮಾಡುವ ಮೊದಲು ನಿಮ್ಮ ಆಪ್ತ ಮಿತ್ರರು ಮತ್ತು ತಜ್ಞರೊಂದಿಗೆ ಸಮಾಲೋಚನೆ ಮಾಡುವುದನ್ನು ಮರೆಯಬೇಡಿ. ರಾಜಕಾರಣಿಗಳಿಗೆ ಉನ್ನತ ಸ್ಥಾನ ಅಥವಾ ವಿಶೇಷ ಜವಾಬ್ದಾರಿ ದೊರೆಯಬಹುದು. ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಪಾಲ್ಗೊಳ್ಳುವವರಿಗೆ ಶುಭ ಸುದ್ದಿ ದೊರೆಯಲಿದೆ. ನೀವು ಯಾರಿಗಾದರೂ ಪ್ರಶ್ನಿಸುವ ನಿರ್ಧಾರವನ್ನು ತೆಗೆದುಕೊಂಡಿದ್ದರೆ ನಿಮ್ಮ ನಿರ್ಧಾರ ಜಾರಿಗೊಳ್ಳಲಿದೆ. ವೈವಾಹಿಕ ಬದುಕಿನಲ್ಲಿ ಬದ್ಧತೆ ಕಾಣಿಸಿಕೊಳ್ಳಲಿದೆ. ಪ್ರಣಯ ಸಂಬಂಧದಲ್ಲಿಯೂ ಮಾಧುರ್ಯತೆ ಮತ್ತು ನಂಬಿಕೆಯು ಪ್ರಯೋಜನಕಾರಿ ಎನಿಸಲಿದೆ.

ಮಕರ: ಈ ವಾರದಲ್ಲಿ ವಿಶೇಷ ಸನ್ನಿವೇಶ ಎದುರಾಗಬಹುದು. ಈ ರಾಶಿಯಲ್ಲಿ ಹುಟ್ಟಿದವರು ಮುಖ್ಯವಾಗಿ ವ್ಯವಹಾರಕ್ಕೆ ಸಂಬಂಧಿಸಿದಂತೆ ಅವಸರದಲ್ಲಿ ಯಾವುದೇ ನಿರ್ಧಾರವನ್ನು ತೆಗೆದುಕೊಳ್ಳಬಾರದು. ವೃತ್ತಿಗೆ ಸಂಬಂಧಿಸಿದ ಕೆಲಸದ ವಿಚಾರದಲ್ಲಿ ಭಾವನಾತ್ಮಕ ನೆಲೆಯಲ್ಲಿ ವರ್ತಿಸಬೇಡಿ. ಅಲ್ಲದೆ ಅವಸರದ ನಿರ್ಧಾರ ತೆಗೆದುಕೊಳ್ಳಬೇಡಿ. ಇದು ನಿಮ್ಮ ಕೆಲಸವನ್ನು ಹಾಳು ಮಾಡಬಹುದು. ಉದ್ಯೋಗದಲ್ಲಿರುವವರು ಕೆಲಸವನ್ನು ಬದಲಾಯಿಸುವ ಸಾಧ್ಯತೆ ಇದೆ. ಬದುಕು ನಿಮ್ಮ ನಿರೀಕ್ಷೆಯಂತೆ ನಡೆಯದೆ ಇದ್ದರೆ ಹತಾಶೆಗೆ ಒಳಗಾಗಬೇಡಿ. ನಿಮ್ಮ ಸ್ವಾಧೀನದಲ್ಲಿ ಇರುವುದೆಲ್ಲವನ್ನು ಕಳೆದುಕೊಳ್ಳದಂತೆ ನೋಡಿಕೊಳ್ಳಬೇಕಾದರೆ ಸಹನೆಯನ್ನು ಕಾಪಾಡಬೇಕು. ಹಿರಿಯರು ಹಾಗೂ ಕಿರಿಯರೊಂದಿಗೆ ಸಹಕಾರದಿಂದ ವರ್ತಿಸಿ. ಅನಗತ್ಯ ವಾಗ್ವಾದದಿಂದ ದೂರವಿರುವುದು ಒಳ್ಳೆಯದು. ಈ ವಾರದಲ್ಲಿ ವ್ಯವಹಾರದಲ್ಲಿ ಪ್ರಗತಿ ಸಾಧಿಸುವುದಕ್ಕಾಗಿ ಹೆಜ್ಜೆ ಇಡುವಾಗ ಇತರರ ಮೇಲೆ ಹೆಚ್ಚು ಅವಲಂಬಿಸಬೇಡಿ. ಅಲ್ಲದೆ ಅವರ ಮೇಲೆ ನಂಬಿಕೆ ಇಡಬೇಡಿ. ಪ್ರಣಯ ಸಂಬಂಧದಲ್ಲಿ ಎಚ್ಚರಿಕೆಯಿಂದ ಮುಂದೆ ಸಾಗಬೇಕು.

ಕುಂಭ: ಈ ವಾರದ ಆರಂಭದಲ್ಲಿ ಆದಾಯ ಮೂಲವು ದೊರೆಯಲಿದೆ. ಇದೇ ವೇಳೆ ನೀವು ಭೌತಿಕ ವಸ್ತುಗಳನ್ನು ಪಡೆಯಲಿದ್ದೀರಿ. ವಿವಿಧ ವಸ್ತುಗಳ ಖರೀದಿಗಾಗಿ ನೀವು ಹೆಚ್ಚಿನ ಹಣವನ್ನು ಖರ್ಚು ಮಾಡಬೇಕಾದೀತು. ಈ ಲಾಭದಾಯಕ ಮತ್ತು ಆನಂದದಾಯಕ ಪ್ರಯಾಣದಲ್ಲಿ ನಿಮಗೆ ಹಿರಿಯರು ಮತ್ತು ಕಿರಿಯರ ಬೆಂಬಲ ದೊರೆಯಲಿದೆ. ವಾರದ ದ್ವಿತೀಯಾರ್ಧದದಲ್ಲಿ ನಿಮ್ಮ ವೈಯಕ್ತಿಕ ಮತ್ತು ವೃತ್ತಿಪರ ಸಂಬಂಧಗಳಲ್ಲಿ ಯಾವುದೇ ತಪ್ಪು ಗ್ರಹಿಕೆ ಉಂಟಾಗದಂತೆ ನೋಡಿಕೊಳ್ಳಿ. ಕೌಟುಂಬಿಕ ಸಮಸ್ಯೆಗಳನ್ನು ಬಗೆಹರಿಸುವಾಗ ಕುಟುಂಬದ ಹಿರಿಯ ಸದಸ್ಯರು ಮತ್ತು ಅವರ ಭಾವನೆಗಳನ್ನು ಪರಿಗಣಿಸಿ. ಯಾವುದೇ ಪ್ರಮುಖ ನಿರ್ಧಾರವನ್ನು ಕೈಗೆತ್ತಿಕೊಳ್ಳುವ ಮೊದಲು ಸಲಹೆಯನ್ನು ಪಡೆಯಿರಿ. ಈ ವಾರದ ಉತ್ತರಾರ್ಧದಲ್ಲಿ ನಿಮಗಾಗಿ ಒಂದಷ್ಟು ಸಮಯವನ್ನು ಮೀಸಲಿಡಿ. ನಿಮ್ಮ ಇಚ್ಛೆಗೆ ತಕ್ಕುದಾಗಿ ಕೆಲಸವು ನಡೆಯದೆ ಇದ್ದರೆ ನೀವು ಸ್ವಲ್ಪ ಖಿನ್ನತೆಗೆ ಒಳಗಾಗಬಹುದು. ಪ್ರೇಮಿಯ ಸಮಸ್ಯೆಗೆ ಕುರಿತಂತೆ ಈ ವಾರದಲ್ಲಿ ವಿಪರೀತ ಭಿನ್ನಾಭಿಪ್ರಾಯ ಉಂಟಾಗಬಹುದು.

ಮೀನ: ವಾರದ ಮೊದಲಾರ್ಧದಲ್ಲಿ ಅದೃಷ್ಟವು ಸಂಪೂರ್ಣವಾಗಿ ನಿಮ್ಮ ಪರವಾಗಿದೆ. ಇದರೊಂದಿಗೆ ನಿಮ್ಮ ಹಿರಿಯರೊಂದಿಗಿನ ಸಹಕಾರದಲ್ಲಿ ವೃದ್ಧಿಯಾಗಲಿದೆ. ಹೀಗಾಗಿ ನಿಮ್ಮ ಕೆಲಸದಲ್ಲಿ ನೀವು ನಿರೀಕ್ಷಿಸುವ ವರ್ಗಾವಣೆ ಅಥವಾ ಬಡ್ತಿ ದೊರೆಯಲಿದೆ. ನಿಮ್ಮ ಅಗತ್ಯತೆಯನ್ನು ಗುರುತಿಸಬೇಕಾದರೆ ಪ್ರಮುಖ ಕೆಲಸವೊಂದು ನೀವು ಪೂರ್ಣಗೊಳಿಸಬೇಕಿದ್ದು, ಇದರಿಂದಾಗಿ ನಿಮ್ಮ ವರ್ಚಿಸ್ಸಿನಲ್ಲಿ ವೃದ್ಧಿ ಉಂಟಾಗಲಿದೆ. ಹಣಕಾಸಿನ ವಿಚಾರದಲ್ಲಿಯೂ ಈ ವಾರವು ವ್ಯಾಪಾರೋದ್ಯಮಿಗಳ ಪಾಲಿಗೆ ಅದೃಷ್ಟಶಾಲಿ ಎನಿಸಲಿದೆ. ನಿಮ್ಮ ಗೆಳೆಯರು ಮತ್ತು ಹಿತೈಷಿಗಳ ಸಹಾಯದಿಂದಾಗಿ ನಿಮ್ಮ ವ್ಯವಹಾರವನ್ನು ಬೆಳೆಸಲು ಅವಕಾಶಗಳು ಲಭಿಸಲಿವೆ. ಮನೆಯಲ್ಲಿ ಮಂಗಳದಾಯಕ ಕಾರ್ಯಕ್ರಮವು ನಡೆಯಲಿದೆ. ಮಕ್ಕಳ ಕುರಿತಂತೆ ದೊರೆಯುವ ಯಾವುದೇ ಶುಭಕರ ಸುದ್ದಿಯು ಮನೆಯಲ್ಲಿ ಸಂತಸವನ್ನುಂಟು ಮಾಡಲಿದೆ. ವೈವಾಹಿಕ ಜೀವನದಲ್ಲಿ ಮಾಧುರ್ಯ ಮತ್ತು ನಂಬಿಕೆಯು ಹೆಚ್ಚಲಿದ್ದು, ಪ್ರೇಮ ಸಂಬಂಧವು ಗಟ್ಟಿಗೊಳ್ಳಲಿದೆ. ಆರೋಗ್ಯದ ವಿಚಾರದಲ್ಲಿಯೂ ಈ ವಾರವು ಚೆನ್ನಾಗಿರಲಿದೆ.

ಇದನ್ನೂ ಓದಿ: ರಾಜಧಾನಿಯಲ್ಲಿ ಅಕ್ಷಯ ತೃತೀಯ ಸಂಭ್ರಮದ ಜತೆಗೆ, ಬೆಲೆ ಏರಿಕೆಯ ಶಾಕ್​: ಚಿನ್ನಾಭರಣ ಅಂಗಡಿಗಳಲ್ಲಿ ಖರೀದಿಗೆ ಮುಗಿಬಿದ್ದ ಜನತೆ ​​ - Akshaya Tritiya Importance

ETV Bharat Logo

Copyright © 2024 Ushodaya Enterprises Pvt. Ltd., All Rights Reserved.