ಪಾಕಿಸ್ತಾನ: ಮದುವೆ ಪ್ರಸ್ತಾಪ ನಿರಾಕರಿಸಿದ ಶಿಕ್ಷಕಿಗೆ ಗುಂಡಿಟ್ಟು ಹತ್ಯೆ - Teacher Killed - TEACHER KILLED
ಮದುವೆ ಪ್ರಸ್ತಾಪ ತಿರಸ್ಕರಿಸಿದ ಶಾಲಾ ಶಿಕ್ಷಕಿಯನ್ನು ಆಕೆಯ ತಂದೆಯ ಎದುರೇ ಕಿಡಿಗೇಡಿಯೊಬ್ಬ ಗುಂಡಿಕ್ಕಿ ಕೊಲೆ ಮಾಡಿದ್ದಾನೆ.

By ANI
Published : Sep 4, 2024, 2:14 PM IST
ಖೈಬರ್ ಪಖ್ತುಂಖ್ವಾ(ಪಾಕಿಸ್ತಾನ): ಮದುವೆ ಪ್ರಸ್ತಾಪ ನಿರಾಕರಿಸಿದ 40 ವರ್ಷದ ಮಹಿಳಾ ಶಾಲಾ ಶಿಕ್ಷಕಿಯನ್ನು ಆಕೆಯ ತಂದೆಯ ಎದುರೇ ಅಪರಿಚಿತನೊಬ್ಬ ಗುಂಡಿಕ್ಕಿ ಕೊಲೆಗೈದಿದ್ದಾನೆ. ಖೈಬರ್ ಪಖ್ತುಂಖ್ವಾ ಪ್ರಾಂತ್ಯದ ಜಂಗ್ದಾರ ತೊತಲೈ ಎಂಬ ಪ್ರದೇಶದಲ್ಲಿ ಘಟನೆ ನಡೆದಿದೆ.
ಅಪರಿಚಿತನೊಬ್ಬ ನನ್ನ ಮಗಳ ಮೇಲೆ ಗುಂಡು ಹಾರಿಸಿ ಸ್ಥಳದಿಂದ ಪರಾರಿಯಾಗಿರುವುದಾಗಿ ಮೃತ ಶಿಕ್ಷಕಿಯ ತಂದೆ ಪೊಲೀಸರ ಮುಂದೆ ಅಳಲು ತೋಡಿಕೊಂಡಿದ್ದಾರೆ. ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಈ ಹಿಂದೆಯೂ ನನ್ನ ಮಗಳ ಮೇಲೆ ಇದೇ ರೀತಿಯ ದಾಳಿ ನಡೆದಿತ್ತು. ಪೊಲೀಸರಿಗೆ ದೂರು ನೀಡಿದ್ದೆ. ಆದರೆ, ಅವರು ಯಾವುದೇ ಕ್ರಮ ಕೈಗೊಳ್ಳಲಿಲ್ಲ. ಕ್ರಮ ಜರುಗಿಸಿದ್ದರೆ ಮಗಳು ಉಳಿಯುತ್ತಿದ್ದಳು ಎಂದು ಪಾಕಿಸ್ತಾನದಲ್ಲಿ ಹೆಚ್ಚುತ್ತಿರುವ ಅಪರಾಧ ಪ್ರಕರಣಗಳ ಬಗ್ಗೆ ಶಿಕ್ಷಕಿಯ ತಂದೆ ಬೇಸರ ವ್ಯಕ್ತಪಡಿಸಿದ್ದಾರೆ.
ಜೂನ್ 8ರಂದು ಇದೇ ರೀತಿಯ ಘಟನೆ ನಡೆದಿತ್ತು. ಖೈಬರ್ ಪಖ್ತುಂಖ್ವಾದ ಮರ್ದಾನ್ ಜಿಲ್ಲೆಯ ತಜಗ್ರಾಮ್ ಎಂಬ ಪ್ರದೇಶದಲ್ಲಿ ತನ್ನಿಚ್ಛೆಯಂತೆ ವಿವಾಹವಾದ 22 ವರ್ಷದ ಮಹಿಳಾ ಶಾಲಾ ಶಿಕ್ಷಕಿಯನ್ನು ಗುಂಡು ಹಾರಿಸಿ ಕೊಲೆ ಮಾಡಲಾಗಿತ್ತು.
ಇದನ್ನೂ ಓದಿ: ಉಕ್ರೇನ್ ಮೇಲೆ ರಷ್ಯಾ ಭೀಕರ ಕ್ಷಿಪಣಿ ದಾಳಿ: 51 ಸಾವು, 200ಕ್ಕೂ ಹೆಚ್ಚು ಮಂದಿಗೆ ಗಾಯ - Russia Attack Ukraine