ETV Bharat / international

ಆಸ್ಪ್ರೇಲಿಯಾ ಸಮುದ್ರ ಕಿನಾರೆಯಲ್ಲಿ 157 ಡಾಲ್ಫಿನ್​​ಗಳು ​ಸಾವು: ಕಾರಣ ನಿಗೂಢ - REMOTE AUSTRALIAN BEACH

ಆಸ್ಪ್ರೇಲಿಯಾದ ಹೆಚ್ಚು ಜನ ಸಂಪರ್ಕ ಹೊಂದಿಲ್ಲದ ಬೀಚ್​ನಲ್ಲಿ 157ಕ್ಕೂ ಹೆಚ್ಚು ಡಾಲ್ಫಿನ್​ ಗಳು ಸಾವನ್ನಪ್ಪಿವೆ. ಸಾವಿಗೆ ನಿಖರವಾದ ಕಾರಣ ತಿಳಿದು ಬಂದಿಲ್ಲ.

pod-of-157-dolphins-stranded-on-remote-australian-beach
ಡಾಲ್ಫಿನ್​ ಸಾವು (eಪಿ)
author img

By ETV Bharat Karnataka Team

Published : Feb 19, 2025, 2:27 PM IST

ಅರ್ತುರ್​ ರಿವರ್​ (ಆಸ್ಟ್ರೇಲಿಯಾ): ಆಸ್ಟ್ರೇಲಿಯಾದ ದಕ್ಷಿಣ ದ್ವೀಪ ತಾಸ್ಮಾನಿಯಾದಲ್ಲಿ ಹೆಚ್ಚು ಜನಸಂಪರ್ಕಕ್ಕೆ ಒಳಗಾಗದ ಸಮುದ್ರ ಕಿನಾರೆಯಲ್ಲಿ 150ಕ್ಕೂ ಹೆಚ್ಚು ಡಾಲ್ಫಿನ್​ಗಳು ಸಾವನ್ನಪ್ಪಿದ್ದು, ಕಡಲ ಕಿನಾರೆಯಲ್ಲಿ ಅದರ ಕಳೆಬರಗಳು ಕಂಡು ಬಂದಿವೆ.

157 ಡಾಲ್ಫಿನ್​ಗಳ ಸಾವು ಕಳೆದ 48 ಗಂಟೆಗಳಲ್ಲಿ ಸಂಭವಿಸಿದೆ. ಡಾಲ್ಫಿನ್​ನ ದೊಡ್ಡ ಜಾತಿಯ ಸದಸ್ಯರಾದ ವೇಲ್ಸ್​ನಂತಹ ಸಮುದ್ರ ಜೀವಿ ಇವುಗಳ ಸಾವಿಗೆ ಕಾರಣವಾಗಿರುವಂತೆ ಕಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ನಡುವೆ ಸಾವು ಬದುಕಿನ ನಡುವೆ ಹೋರಾಟ ನಡೆಸಿ, ಗಂಭೀರ ಸ್ಥಿತಿಯಲ್ಲಿ ಪತ್ತೆಯಾಗಿರುವ ಕೆಲವು ಡಾಲ್ಫಿನ್​ಗಳು ಸಹ ಪತ್ತೆಯಾಗಿದ್ದು, ಅವುಗಳನ್ನು ರಕ್ಷಿಸುವುದು ಕಷ್ಟವಾಗಿದೆ ಎಂದು ರಾಜ್ಯ ವನ್ಯಜೀವಿ ಅಧಿಕಾರಿ ಬ್ರೆಂಡೊನ್​ ಕ್ಲಾರ್ಕ್​ ಹೇಳಿದ್ದಾರೆ.

ಡಾಲ್ಫಿನ್​ಗಳ ಮೇಲಿನ ಹಾನಿ ಕಡಿಮೆ ಮಾಡಲು ತಜ್ಞ ವೈದ್ಯರನ್ನು ಸ್ಥಳದಲ್ಲಿ ಸಹಾಯಕ್ಕೆ ನಿಯೋಜಿಸಬೇಕಿದೆ. ವೇಲ್ಸ್​ಗಳುಇ ಡಾಲ್ಫಿನ್​ ಗಳ ಮೇಲೆ ಆಗಾಗ ಈ ರೀತಿಯ ದಾಳಿ ಮಾಡಿ ಹಾನಿ ಮಾಡುವುದು ಸಾಮಾನ್ಯವಾಗಿದೆ. ಇದನ್ನು ತಪ್ಪಿಸಲು ವೆಟ್​ ಡಾಕ್ಟರ್​ ಉಪಸ್ಥಿತಿ ಅವಶ್ಯವಾಗಿದೆ ಎಂದಿದ್ದಾರೆ.

ಸಮುದ್ರ ಕಿನಾರೆಯಲ್ಲಿ ಡಾಲ್ಫಿನ್​ಗಳ ಮೇಲಿನ ಈ ರೀತಿಯ ದಾಳಿ 50 ವರ್ಷದಲ್ಲಿ ಇದೇ ಮೊದಲ ಬಾರಿಗೆ ಕಂಡು ಬಂದಿದೆ ಎಂದು ವನ್ಯಜೀವಿ ಅಧಿಕಾರಿ ತಿಳಿಸಿದ್ದಾರೆ. ಬಹುಕಾಲದ ಬಳಿಕ ಈ ರೀತಿಯ ನಡುವಳಿಕೆ ಕಂಡು ಬಂದಿದೆ. ಈ ಡಾಲ್ಫಿನ್​ ​ಗಳು ವಲಸಿಗ ಪ್ರಾಣಿಗಳಾಗಿದ್ದು, ಇವು ಜಗತ್ತಿನ ಎಲ್ಲೆಡೆ ಸಂಚರಿಸುತ್ತವೆ. 50 ವರ್ಷದಲ್ಲಿ ಮೊದಲ ಬಾರಿಗೆ ಡಾಲ್ಫಿನ್​ ಗಳು ಈ ರೀತಿಯಲ್ಲಿ ಕಂಡು ಬಂದಿರುವುದು ಏನಕ್ಕೆ ಎಂಬುದು ಕಾರಣ ತಿಳಿದಿಲ್ಲ. ಈ ಕುರಿತು ಯಾವುದೇ ಸುಳಿವು ಲಭ್ಯವಾಗಿಲ್ಲ. ಮರಣೋತ್ತರ ಪರೀಕ್ಷೆ ಬಳಿಕ ಈ ಕುರಿತು ಸುಳಿವು ಲಭ್ಯವಾಗುವ ಭರವಸೆ ಇದೆ ಎಂದು ಬ್ರೆಂಡೊನ್​ ಕ್ಲಾರ್ಕ್ ತಿಳಿಸಿದ್ದಾರೆ​ .

ತಾಸ್ಮಾನಿಯಾದಲ್ಲಿ ಕಡು ಕಪ್ಪು ಮೈ ಬಣ್ಣದ ಡಾಲ್ಫಿನ್​ಗಳು ಬುಧವಾರ ಬೆಳಗ್ಗೆ ಸಮುದ್ರ ಕಿನಾರೆಯ ಮರಳಿನಲ್ಲಿ ಸಾವನ್ನಪ್ಪಿರುವುದು ಕಂಡು ಬಂದಿದೆ. ಈ ಕಿನಾರೆ ಪ್ರದೇಶ ಜನನಿಬಿಡವಲ್ಲದ ಕ್ಲಿಷ್ಟಕರ ಪ್ರದೇಶವಾಗಿದೆ. ಇಲ್ಲಿನ ಸಮುದ್ರಕ್ಕೆ ವಿಶೇಷ ಸಾಧನಗಳನ್ನು ತರುವುದು ಕೂಡ ಸವಾಲುದಾಯಕವಾಗಿದ್ದು, ಇದು ದುರ್ಗಮ ಮಾರ್ಗವಾಗಿದೆ ಎಂದು ತಾಸ್ಮಾನಿಯಾದ ಪರಿಸರ ವಿಭಾಗ ತಿಳಿಸಿದೆ.

ಇದನ್ನೂ ಓದಿ: ಶ್ರೀಲಂಕಾವನ್ನು ಕತ್ತಲಲ್ಲಿ ಕಳೆಯುವಂತೆ ಮಾಡಿದ ಕೋತಿ!: ಅಲ್ಲಿ ಆಗಿದ್ದೇನು ಗೊತ್ತಾ?

ಇದನ್ನೂ ಓದಿ: ಲ್ಯಾಂಡಿಂಗ್​ ವೇಳೆ ರನ್​ವೇಯಲ್ಲಿ ಜಾರಿ ಪಲ್ಟಿಯಾದ ವಿಮಾನ; ಮಗು ಸೇರಿ 18 ಮಂದಿಗೆ ಗಂಭೀರ ಗಾಯ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.