ಪುಣೆ: ಗ್ರಾಹಕರಿಗೆ ಉಚಿತವಾಗಿ ಸಿಬಿಲ್ ಸ್ಕೋರ್ ಪರಿಶೀಲಿಸುವ ಸೌಲಭ್ಯ ಹಲವು ಹಣಕಾಸು ಸಂಸ್ಥೆಗಳು ನೀಡುತ್ತಿವೆ. ಇದೀಗ ಬಜಾಜ್ ಮಾರ್ಕೆಟ್ಸ್ ಕಂಪನಿ ಸಹ ಕ್ರೆಡಿಟ್ ಇನ್ಫರ್ಮೇಷನ್ ಬ್ಯೂರೋ (ಇಂಡಿಯಾ) ಲಿಮಿಟೆಡ್ (ಸಿಬಿಲ್) ಜೊತೆಗೆ ಒಪ್ಪಂದ ಮಾಡಿಕೊಂಡಿದೆ.
ಈ ಸೌಲಭ್ಯವನ್ನು ಬಳಸಿಕೊಂಡು ಗ್ರಾಹಕರು ತಮ್ಮ ಕ್ರೆಡಿಟ್ ಹಿಸ್ಟರಿ ಟ್ರ್ಯಾಕ್ ಮಾಡಬಹುದು, ಕ್ರೆಡಿಟ್ ಸ್ಕೋರ್ನಲ್ಲಿ ಆಗಿರುವ ಬದಲಾವಣೆಗಳನ್ನು ತಿಳಿಯಬಹುದು ಮತ್ತು ತಮ್ಮ ಕ್ರೆಡಿಟ್ ಹೆಲ್ತ್ ಬಗ್ಗೆ ಮಾಹಿತಿ ಪಡೆಯಬಹುದು. ಈ ಸೌಲಭ್ಯವು ಸೂಕ್ತ ಹಣಕಾಸು ನಿರ್ಧಾರಗಳನ್ನು ತೆಗೆದುಕೊಳ್ಳಲು ಗ್ರಾಹಕರಿಗೆ ಸಹಾಯಕವಾಗಲಿದೆ. ಈ ವೈಶಿಷ್ಟ್ಯ ಬಳಸಿ ಗ್ರಾಹಕರು ಸುಲಭವಾಗಿ ಯಾವುದೇ ಸಮಯದಲ್ಲಿ ತಮ್ಮ ಸಿಬಿಲ್ ಸ್ಕೋರ್ ಉಚಿತವಾಗಿ ಪರಿಶೀಲಿಸಬಹುದು.
ಸಿಬಿಲ್ ಸ್ಕೋರ್ ಚೆಕ್ ಸೌಲಭ್ಯದ ಲಾಭಗಳು ಹೀಗಿವೆ:
- ಗ್ರಾಹಕರು ತಮ್ಮ ಕ್ರೆಡಿಟ್ ಹಿಸ್ಟರಿ ಮತ್ತು ಮರುಪಾವತಿ ನಡವಳಿಕೆ ಸೇರಿದಂತೆ ತಮ್ಮ ಕ್ರೆಡಿಟ್ ಆರೋಗ್ಯದ ಬಗ್ಗೆ ಸಂಪೂರ್ಣ ಮಾಹಿತಿ ಪಡೆಯಬಹುದು.
- ಕೆಲವೇ ಕ್ಲಿಕ್ಗಳ ಮೂಲಕ ಕಾಗದ ರಹಿತ ಪ್ರಕ್ರಿಯೆಯಿಂದ ಸುಲಭವಾಗಿ ಕ್ರೆಡಿಟ್ ಸ್ಕೋರ್ ನೋಡಬಹುದು.
- ಇದರಲ್ಲಿ ಕ್ರೆಡಿಟ್ ಸ್ಕೋರ್ ಚೆಕ್ ಮಾಡುವುದು ಸಾಫ್ಟ್ ಎನ್ಕ್ವೈರಿ ಆಗಿರುವುದರಿಂದ ಇದು ಕ್ರೆಡಿಟ್ ಸ್ಕೋರ್ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ.
- ಸಿಬಿಲ್ ಸ್ಕೋರ್ ಅನ್ನು ನಿಯಮಿತವಾಗಿ ಪರಿಶೀಲಿಸುವ ಮೂಲಕ ವರದಿಯಲ್ಲಿ ಏನಾದರೂ ತಪ್ಪಾಗಿದ್ದರೆ ಅದನ್ನು ಸರಿಪಡಿಸಿಕೊಳ್ಳಬಹುದು ಹಾಗೂ ಈ ಮೂಲಕ ಉತ್ತಮ ಸ್ಕೋರ್ ಕಾಪಾಡಿಕೊಂಡಲ್ಲಿ ಸಾಲ ಪಡೆಯುವುದು ಸುಲಭವಾಗಲಿದೆ.
ಉತ್ತಮ ಹಣಕಾಸು ಅವಕಾಶಗಳನ್ನು ಖಾತ್ರಿಪಡಿಸುವ ಬಲವಾದ ಕ್ರೆಡಿಟ್ ಪ್ರೊಫೈಲ್ ಅನ್ನು ಕಾಪಾಡಿಕೊಳ್ಳಲು ಸಿಬಿಲ್ ಸ್ಕೋರ್ ಅನ್ನು ನಿಯಮಿತವಾಗಿ ಪರಿಶೀಲಿಸುವುದು ಸೂಕ್ತ.
ಇದನ್ನೂ ಓದಿ : ವೇತನದಾರರ ಶೇ 33ರಷ್ಟು ಆದಾಯ ಇಎಂಐ ಪಾವತಿಗೇ ಖರ್ಚಾಗುತ್ತೆ : ಪಿಡಬ್ಲ್ಯೂಸಿ ವರದಿ - EMI PAYMENTS