ETV Bharat / international

ಲೇಖಕ ಸಲ್ಮಾನ್ ರಶ್ದಿ ಮೇಲಿನ ಮಾರಣಾಂತಿಕ ಹಲ್ಲೆ ಪ್ರಕರಣ: ವಿಚಾರಣೆ ವೇಳೆ ಆರೋಪಿ ಪರ ವಕೀಲ ಹೇಳಿದ್ದು ಹೀಗೆ.. - Author Salman Rushdie

author img

By PTI

Published : Jun 19, 2024, 10:11 AM IST

ಭಾರತೀಯ ಮೂಲದ ಲೇಖಕ ಸಲ್ಮಾನ್ ರಶ್ದಿ ಮೇಲಿನ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಚೌಟೌಕ್ವಾ ಕೌಂಟಿ ನ್ಯಾಯಾಲಯದಲ್ಲಿ ವಿಚಾರಣೆ ನಡೆಯಿತು. ಈ ವೇಳೆ ಆರೋಪಿ ಪರ ವಕೀಲ ಹಾಗೂ ಸರ್ಕಾರಿ ವಕೀಲ, ಜಿಲ್ಲಾ ಅಟಾರ್ನಿ ಜೇಸನ್ ಸ್ಮಿತ್ ವಾದ ಮಂಡಿಸಿದರು.

plea deal  Salman Rushdie  Chautauqua County Court  US
ಲೇಖಕ ಸಲ್ಮಾನ್ ರಶ್ದಿ (ANI)

ಮೇವಿಲ್ಲೆ (ಅಮೆರಿಕ): ''ಭಾರತೀಯ ಮೂಲದ ಲೇಖಕ ಸಲ್ಮಾನ್ ರಶ್ದಿ ಮೇಲೆ ಅನೇಕ ಸಲ ಚಾಕುವಿನಿಂದ ಇರಿದು ಹಲ್ಲೆ ನಡೆಸಿದ ಆರೋಪಿ ನ್ಯೂಜೆರ್ಸಿಯ ವ್ಯಕ್ತಿ ಅಲ್ಲಿನ ಜೈಲಿನಲ್ಲಿದ್ದು, ತನ್ನ ಶಿಕ್ಷೆಯ ಸಮಯವನ್ನು ಕಡಿಮೆ ಮಾಡುವ ಪ್ರಸ್ತಾಪದ ಒಪ್ಪಂದದ ಬಗ್ಗೆ ಆಸಕ್ತಿ ಹೊಂದಿಲ್ಲ. ಆದರೆ, ಪ್ರತ್ಯೇಕ ಭಯೋತ್ಪಾದನೆ ಸಂಬಂಧಿತ ಆರೋಪದ ಮೇಲೆ ಫೆಡರಲ್ ಜೈಲಿಗೆ ಆರೋಪಿಯನ್ನು ಹಾಕಬೇಕು'' ಎಂದು ಆರೋಪಿ ಪರ ವಕೀಲರು ಮಂಗಳವಾರ ತಿಳಿಸಿದರು.

ಈ ವೇಳೆ, 26ರ ಹರೆಯದ ಹಾದಿ ಮತಾರ್ ಅವರು ಚೌಟೌಕ್ವಾ ಕೌಂಟಿ ನ್ಯಾಯಾಲಯದಲ್ಲಿ ಮೌನವಾಗಿ ಕುಳಿತುಕೊಂಡಿದ್ದ. ಏಕೆಂದರೆ ಆರೋಪಿ ಪರ ವಕೀಲರು ಹಾಗೂ ರಾಜ್ಯ ಮತ್ತು ಫೆಡರಲ್ ಪ್ರಾಸಿಕ್ಯೂಟರ್‌ ನಡುವೆ ವಾದ ಮಂಡಿಸಿದರು. ನಿಯೋಜಿತ ಭಯೋತ್ಪಾದಕ ಸಂಘಟನೆಗೆ ಬೆಂಬಲವನ್ನು ನೀಡಲು ಪ್ರಯತ್ನಿಸುವ ಇನ್ನೂ ಸಲ್ಲಿಸಬೇಕಾದ ಫೆಡರಲ್ ಆರೋಪಕ್ಕೆ ಆತ ತಪ್ಪೊಪ್ಪಿಕೊಳ್ಳುತ್ತಾನೆ. ಇದು ಹೆಚ್ಚುವರಿ 20 ವರ್ಷಗಳವರೆಗೆ ಶಿಕ್ಷೆ ದೊರೆಯಲು ಕಾರಣವಾಗಬಹುದು ಎಂದು ವಕೀಲರು ಮಾಹಿತಿ ನೀಡಿದರು.

ಪಾಶ್ಚಿಮಾತ್ಯ ನ್ಯೂಯಾರ್ಕ್‌ನಲ್ಲಿರುವ ಚೌಟೌಕ್ವಾ ಇನ್‌ಸ್ಟಿಟ್ಯೂಷನ್‌ನಲ್ಲಿ ಅಲ್ಲಿ ಸೇರಿದ್ದವರನ್ನು ಉದ್ದೇಶಿಸಿ ಮಾತನಾಡಲು ಹೊರಟಿದ್ದ ರಶ್ದಿ ಅವರ ಮೇಲೆ ಆರೋಪಿ ದಾಳಿ ಮಾಡಿದ್ದ. ಅಷ್ಟೇ ಅಲ್ಲ ಈ ಘಟನೆಗೆ ಸಂಬಂಧಿಸಿದಂತೆ ಆರೋಪಿ ಮತರ್ ತಪ್ಪೊಪ್ಪಿಕೊಂಡಿದ್ದಾನೆ. 2022ರಲ್ಲಿ ಬಂಧಿಸಿದ ಆರೋಪಿಗೆ ಈವರೆಗೂ ಜಾಮೀನು ನೀಡಿಲ್ಲ. ದಾಳಿಗೊಳಗಾದ ರಶ್ದಿ ಅವರ ಒಂದು ಕಣ್ಣು ಕುರುಡಾಗಿದೆ. ಮಾಡರೇಟರ್ ಹೆನ್ರಿ ರೀಸ್ ಕೂಡ ಈ ದಾಳಿ ವೇಳೆ ಗಾಯಗೊಂಡಿದ್ದರು.

ಚೌಟೌಕ್ವಾ ಕೌಂಟಿಯ ಜಿಲ್ಲಾ ಅಟಾರ್ನಿ ಜೇಸನ್ ಸ್ಮಿತ್ ಅವರು, ಹನ್ನೆರಡು ಬಾರಿ ಇರಿತಕ್ಕೊಳಗಾದ ರಶ್ದಿ ಅವರು ಮಾರಣಾಂತಿಕ ದಾಳಿ ಮತ್ತು ಆ ಬಳಿಕ ನೋವಿನಿಂದ ಚೇತರಿಸಿಕೊಂಡ ಬಗ್ಗೆ ಅವರು ತಮ್ಮ ಆತ್ಮಚರಿತ್ರೆಯಲ್ಲಿ ವಿವರಿಸಿದ್ದಾರೆ. ನೈಫ್: ಮೆಡಿಟೇಶನ್ಸ್ ಆಫ್ಟರ್ ಅಟೆಂಪ್ಟೆಡ್ ಮರ್ಡರ್ ಪುಸ್ತಕದಲ್ಲಿ ಈ ಪ್ರಕರಣದ ಕುರಿತು ಪ್ರಸ್ತಾಪಿಸಿದ್ದಾರೆ. ಈ ಪ್ರಕರಣವನ್ನು ಅಂತ್ಯಗೊಳ್ಳುವುದನ್ನು ನೋಡುವುದು ಅವರ ಆದ್ಯತೆಯಾಗಿದೆ'' ಎಂದು ಸ್ಮಿತ್ ಕೋರ್ಟ್​ ಗಮನಕ್ಕೆ ತಂದರು.

''ರಶ್ದಿ ಅವರ ಒಪ್ಪಿಗೆಯಿಲ್ಲದೇ, ದಾಳಿಯ ಸ್ವರೂಪವನ್ನು ಪರಿಗಣಿಸಿ ಗರಿಷ್ಠ ರಾಜ್ಯ ಜೈಲು ಶಿಕ್ಷೆಯನ್ನು ಕಡಿಮೆ ಮಾಡುವುದನ್ನು ತಾನು ವಿರೋಧಿಸುತ್ತೇನೆ. ಇದು ಕೇವಲ ವ್ಯಕ್ತಿಯ ವಿರುದ್ಧದ ಅಪರಾಧವಲ್ಲ, ಆದರೆ, ಇದು ವಾಕ್ ಸ್ವಾತಂತ್ರ್ಯದ ಪರಿಕಲ್ಪನೆಯ ವಿರುದ್ಧದ ಅಪರಾಧವಾಗಿದೆ'' ಎಂದು ಸ್ಮಿತ್ ಹೇಳಿದರು. ಇನ್ನು ಆರೋಪಿ ಮತರ್ ಅವರ ವಕೀಲರಾದ ನಥಾನಿಯಲ್ ಬರೋನ್ ವಾದ ಮಂಡಿಸಿದರು. ನ್ಯಾಯಾಧೀಶ ಡೇವಿಡ್ ಫೋಲಿ ಅವರು, ಆರೋಪಿಯ ಶಿಕ್ಷೆ ಕಡಿಮೆ ಮಾಡುವ ಪ್ರಸ್ತಾಪ ಕುರಿತು ಚರ್ಚಿಸಲು ವಿಚಾರಣೆಯನ್ನು ಜುಲೈ 2ಕ್ಕೆ ಮುಂದೂಡಿದ್ದಾರೆ.

ಇದನ್ನೂ ಓದಿ: ಪಾಕಿಸ್ತಾನದಲ್ಲಿ ಪತ್ರಕರ್ತನನ್ನು ಗುಂಡಿಕ್ಕಿ ಕೊಂದ ಅಪರಿಚಿತ ಬಂದೂಕುಧಾರಿಗಳು - Pakistani journalist shot dead

ETV Bharat Logo

Copyright © 2024 Ushodaya Enterprises Pvt. Ltd., All Rights Reserved.