ETV Bharat / international

ಹೈಸ್ಕೂಲ್​ನಲ್ಲಿ 14 ವರ್ಷದ ವಿದ್ಯಾರ್ಥಿಯಿಂದ ಗುಂಡಿನ ದಾಳಿ: ನಾಲ್ವರು ಸಾವು - Student Opened Fire

author img

By ETV Bharat Karnataka Team

Published : Sep 5, 2024, 8:42 AM IST

ಹೈಸ್ಕೂಲ್​ನಲ್ಲಿ 14 ವರ್ಷದ ವಿದ್ಯಾರ್ಥಿ ನಡೆಸಿದ ಗುಂಡಿನ ದಾಳಿಯಲ್ಲಿ ನಾಲ್ವರು ಮೃತಪಟ್ಟಿದ್ದಾರೆ.

ಘಟನಾ ಸ್ಥಳ
ಘಟನಾ ಸ್ಥಳ (AP)

ವಿಂಡರ್: ಹೈಸ್ಕೂಲ್​ನಲ್ಲಿ 14 ವರ್ಷದ ವಿದ್ಯಾರ್ಥಿಯೊಬ್ಬ ಗುಂಡಿನ ದಾಳಿ ನಾಲ್ವರನ್ನು ಹತ್ಯೆಗೈದ ಘಟನೆ ಬುಧವಾರ ಜಾರ್ಜಿಯಾ ದೇಶದಲ್ಲಿ ನಡೆದಿದೆ. ದಾಳಿಯಲ್ಲಿ ಗಾಯಗೊಂಡ 8 ವಿದ್ಯಾರ್ಥಿಗಳು ಮತ್ತು ಓರ್ವ ಶಿಕ್ಷಕ ಸೇರಿ 19 ಜನರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಅಟ್ಲಾಂಟಾ ಹತ್ತಿರದ ವಿಂಡರ್​ ನಗರದ ಅಪಾಲಾಚಿ ಹೈಸ್ಕೂಲ್​ನಲ್ಲಿ ನಡೆದ ಈ ಘಟನೆಯಲ್ಲಿ ಇಬ್ಬರು ವಿದ್ಯಾರ್ಥಿಗಳು ಮತ್ತು ಇಬ್ಬರು ಶಿಕ್ಷಕರು ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಗುಂಡಿನ ದಾಳಿ ವೇಳೆ ಶಾಲೆಯಲ್ಲಿದ್ದ ವಿದ್ಯಾರ್ಥಿಗಳು ರಕ್ಷಿಸಿಕೊಳ್ಳಲು ತರಗತಿ ಕೊಠಡಿಗಳಲ್ಲಿ ಓಡಾಡಿದ್ದಾರೆ. ಬಳಿಕ ವಿದ್ಯಾರ್ಥಿಗಳನ್ನು ಹತ್ತಿರ ಫುಟ್ಬಾಲ್ ಕ್ರೀಡಾಂಗಣಕ್ಕೆ ಸ್ಥಳಾಂತರಿಸಲಾಗಿದೆ. ಇನ್ನು ಘಟನೆ ಬೆನ್ನಲ್ಲೇ ಪೋಷಕರು ತಮ್ಮ ಮಕ್ಕಳ ಸುರಕ್ಷತೆ ಖಚಿತಪಡಿಸಿಕೊಳ್ಳಲು ಸ್ಥಳಕ್ಕೆ ದೌಡಾಯಿಸಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಗುಂಡಿನ ದಾಳಿ ಮಾಡಿದ ವಿದ್ಯಾರ್ಥಿಯನ್ನು ತಕ್ಷಣವೇ ಶಾಲೆಯ ಭದ್ರತಾ ಸಿಬ್ಬಂದಿ ವಶಕ್ಕೆ ಪಡೆದಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಶಂಕಿತ ವಿದ್ಯಾರ್ಥಿ ಗುಂಡಿನ ದಾಳಿಯಲ್ಲಿ ಬಳಸಿದ ಬಂದೂಕನ್ನು ಹೇಗೆ ಪಡೆದುಕೊಂಡನು ಮತ್ತು ಶಾಲೆಗೆ ಹೇಗೆ ಒಳ ನುಗ್ಗಿದ್ದಾನೆ ಎಂಬುದನ್ನು ತನಿಖೆ ಮಾಡಲಾಗುತ್ತಿದೆ. ದಾಳಿಗೆ ವಿದ್ಯಾರ್ಥಿ ಯಾವ ಬಂದೂಕು ಬಳಸಿದ್ದಾನೆ ಎಂಬುದನ್ನು ಅಧಿಕಾರಿಗಳು ಬಹಿರಂಗಪಡಿಸಿಲ್ಲ.

ಈ ಘಟನೆ ಕುರಿತು ಮಾಧ್ಯಮಗೋಷ್ಠಿಯಲ್ಲಿ ಮಾತನಾಡುವಾಗ ಬಾರೋ ಕೌಂಟಿ ಶೆರಿಫ್ ಜಡ್ ಸ್ಮಿತ್ ಕಣ್ಣೀರು ಹಾಕಿದರು. "ನನ್ನ ಹೃದಯವು ಈ ಮಕ್ಕಳಿಗಾಗಿ ಮಿಡಿಯುತ್ತದೆ. ನನ್ನ ಹೃದಯವು ನಮ್ಮ ಸಮುದಾಯಕ್ಕಾಗಿ ಮಿಡಿಯುತ್ತದೆ. ಆದರೆ ದ್ವೇಷವು ಮೇಲುಗೈ ಸಾಧಿಸುವುದಿಲ್ಲ ಎಂದು ನಾನು ಸ್ಪಷ್ಟವಾಗಿ ಇಲ್ಲಿ ಹೇಳಲು ಬಯಸುತ್ತೇನೆ. ಪ್ರೀತಿ ಮೇಲುಗೈ ಸಾಧಿಸುತ್ತದೆ ಎಂದು ಹೇಳಲು ಬಯಸುತ್ತೇನೆ" ಎಂದು ತಿಳಿಸಿದ್ದಾರೆ.

"ಶಾಲಾ ಆವರಣದಲ್ಲಿ ಗುಂಡಿನ ಶಬ್ದ ಕೇಳಿದಾದ ನಾನು ತರಗತಿಯಲ್ಲಿದ್ದೆ. ತಕ್ಷಣವೇ ಕೊಠಡಿಯ ಬಾಗಿಲುಗಳಿಗೆ ಡೆಸ್ಕ್ ಇಟ್ಟು ರಕ್ಷಿಸಿಕೊಳ್ಳಲು ಪ್ರಯತ್ನಿಸಿದೆವು. ತರಗತಿಯಲ್ಲಿದ್ದ ನನ್ನ ಎಲ್ಲ ಸಹಪಾಠಿಗಳು ಭಯಭೀತರಾಗಿದ್ದು ಒಬ್ಬರಿಗೊಬ್ಬರು ಕೈ ಹಿಡಿದುಕೊಂಡು ರಕ್ಷಣೆಗಾಗಿ ಪೊಲೀಸರಿಗಾಗಿ ಕಾಯುತ್ತಿದ್ದೆವು" ಎಂದು ವಿದ್ಯಾರ್ಥಿಯೊಬ್ಬರು ಘಟನೆಯನ್ನು ನೆನಪಿಸಿಕೊಂಡಿದ್ದಾರೆ.

ಇದನ್ನೂ ಓದಿ: ಪಾಕಿಸ್ತಾನ: ಮದುವೆ ಪ್ರಸ್ತಾಪ ನಿರಾಕರಿಸಿದ ಶಿಕ್ಷಕಿಗೆ ಗುಂಡಿಟ್ಟು ಹತ್ಯೆ - Teacher Killed

ETV Bharat Logo

Copyright © 2024 Ushodaya Enterprises Pvt. Ltd., All Rights Reserved.