ETV Bharat / international

ಮೌಂಟ್ ಫ್ಯೂಜಿಯಲ್ಲಿ ಫೆ.25ರಿಂದ ಭಾರತ-ಜಪಾನ್ ಜಂಟಿ ಸಮರಾಭ್ಯಾಸ - INDIA JAPAN MILITARY EXERCISE

ಭಾರತ ಮತ್ತು ಜಪಾನ್​ ಫೆ.25 ರಿಂದ ಜಂಟಿ ಸಮರಾಭ್ಯಾಸ ನಡೆಸಲಿವೆ.

ಮೌಂಟ್ ಫ್ಯೂಜಿಯಲ್ಲಿ ಫೆ.25 ರಿಂದ ಭಾರತ-ಜಪಾನ್ ಜಂಟಿ ಸಮರಾಭ್ಯಾಸ
ಮೌಂಟ್ ಫ್ಯೂಜಿಯಲ್ಲಿ ಫೆ.25 ರಿಂದ ಭಾರತ-ಜಪಾನ್ ಜಂಟಿ ಸಮರಾಭ್ಯಾಸ (ians)
author img

By ETV Bharat Karnataka Team

Published : Feb 16, 2025, 6:48 PM IST

ನವದೆಹಲಿ: ಭಾರತ ಮತ್ತು ಜಪಾನ್ ನಡುವಿನ 'ಧರ್ಮ ಗಾರ್ಡಿಯನ್' ಆರನೇ ಆವೃತ್ತಿಯ ಜಂಟಿ ಸಮರಾಭ್ಯಾಸವು ಫೆಬ್ರವರಿ 25 ರಿಂದ ಮಾರ್ಚ್ 9 ರವರೆಗೆ ಜಪಾನ್ ನ ಮೌಂಟ್ ಫ್ಯೂಜಿಯಲ್ಲಿ ನಡೆಯಲಿದೆ ಎಂದು ಭಾರತೀಯ ಸೇನೆ ಭಾನುವಾರ ತಿಳಿಸಿದೆ.

ವಿಶ್ವಸಂಸ್ಥೆಯ ಸೂಚನೆಯ ಅಡಿಯಲ್ಲಿ ಜಂಟಿ ನಗರ ಯುದ್ಧ ಮತ್ತು ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆಗಳ ಸಂದರ್ಭಗಳಲ್ಲಿ ಉಭಯ ಪಡೆಗಳ ನಡುವೆ ಪರಸ್ಪರ ಕಾರ್ಯಸಾಧ್ಯತೆಯನ್ನು ಹೆಚ್ಚಿಸುವ ಗುರಿಯನ್ನು ಈ ಸಮರಾಭ್ಯಾಸ ಹೊಂದಿದೆ ಎಂದು ರಕ್ಷಣಾ ಸಚಿವಾಲಯದ (ಸೇನೆ) ಐಎಚ್​ಕ್ಯೂನ ಸಾರ್ವಜನಿಕ ಮಾಹಿತಿಯ ಹೆಚ್ಚುವರಿ ಮಹಾನಿರ್ದೇಶಕರು ಸಾಮಾಜಿಕ ಮಾಧ್ಯಮ ಪೋಸ್ಟ್​ನಲ್ಲಿ ತಿಳಿಸಿದ್ದಾರೆ.

"2024 ರ ಅಕ್ಟೋಬರ್ 14 ರಿಂದ 17 ರವರೆಗೆ ಸೇನಾ ಮುಖ್ಯಸ್ಥರ (ಸಿಒಎಎಸ್) ಜಪಾನ್ ಭೇಟಿಯ ಸಮಯದಲ್ಲಿ ಸಾಧಿಸಲಾದ ಪ್ರಗತಿಯನ್ನು ಆಧರಿಸಿ, ಧರ್ಮ ಗಾರ್ಡಿಯನ್ 2025 ಸಮರಾಭ್ಯಾಸವು ಭಾರತ ಮತ್ತು ಜಪಾನ್ ನಡುವಿನ ದ್ವಿಪಕ್ಷೀಯ ರಕ್ಷಣಾ ಸಹಕಾರವನ್ನು ಮತ್ತಷ್ಟು ಬಲಪಡಿಸಲಿದೆ" ಎಂದು ಅದು ಹೇಳಿದೆ.

ಸೈಕ್ಲೋನ್ ಸಮರಾಭ್ಯಾಸ: ಇದಕ್ಕೂ ಮುನ್ನ ಫೆಬ್ರವರಿ 11 ರಂದು ಭಾರತ ಮತ್ತು ಈಜಿಪ್ಟ್​ನ ವಿಶೇಷ ಪಡೆಗಳು ರಾಜಸ್ಥಾನದ ಮಹಾಜನ್ ಫೀಲ್ಡ್ ಫೈರಿಂಗ್ ರೇಂಜ್​ಗಳಲ್ಲಿ 'ಸೈಕ್ಲೋನ್ 3' ಸಮರಾಭ್ಯಾಸವನ್ನು ಪ್ರಾರಂಭಿಸಿವೆ. ಸಮರಾಭ್ಯಾಸ ಫೆಬ್ರವರಿ 23 ರಂದು ಕೊನೆಗೊಳ್ಳಲಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

'ಸೈಕ್ಲೋನ್' ಸಮರಾಭ್ಯಾಸವು ಭಾರತ ಮತ್ತು ಈಜಿಪ್ಟ್​ನಲ್ಲಿ ಪರ್ಯಾಯವಾಗಿ ನಡೆಸಲಾಗುವ ವಾರ್ಷಿಕ ಕಾರ್ಯಕ್ರಮವಾಗಿದೆ. ಈ ಹಿಂದೆ ಈ ಯೋಜನೆಯಡಿಯ ಸಮರಾಭ್ಯಾಸವು 2024 ರ ಜನವರಿಯಲ್ಲಿ ಈಜಿಪ್ಟ್​ನಲ್ಲಿ ನಡೆದಿತ್ತು" ಎಂದು ಅಧಿಕಾರಿ ಹೇಳಿದರು.

25 ಜನ ಸಿಬ್ಬಂದಿಯನ್ನು ಒಳಗೊಂಡ ಭಾರತೀಯ ತುಕಡಿಯನ್ನು ಎರಡು ವಿಶೇಷ ಪಡೆಗಳ ಬೆಟಾಲಿಯನ್ ಗಳ ಸೈನಿಕರು ಪ್ರತಿನಿಧಿಸುತ್ತಿದ್ದಾರೆ. 25 ಸಿಬ್ಬಂದಿಯನ್ನು ಒಳಗೊಂಡ ಈಜಿಪ್ಟ್ ತುಕಡಿಯನ್ನು ವಿಶೇಷ ಪಡೆಗಳ ಗುಂಪು ಮತ್ತು ಈಜಿಪ್ಟ್ ವಿಶೇಷ ಪಡೆಗಳ ಕಾರ್ಯಪಡೆ ಪ್ರತಿನಿಧಿಸುತ್ತಿದೆ.

ವಿಶೇಷ ಕಾರ್ಯಾಚರಣೆ ತಂತ್ರಗಳ ಪರಸ್ಪರ ಕಾರ್ಯಸಾಧ್ಯತೆ, ಜಂಟಿ ಕಾರ್ಯಾಚರಣೆ ಮತ್ತು ಪರಸ್ಪರ ಮಾಹಿತಿ ವಿನಿಮಯವನ್ನು ಹೆಚ್ಚಿಸುವ ಮೂಲಕ ಉಭಯ ದೇಶಗಳ ನಡುವಿನ ಮಿಲಿಟರಿ ಸಂಬಂಧವನ್ನು ಉತ್ತೇಜಿಸುವ ಗುರಿಯನ್ನು ಈ ಸಮರಾಭ್ಯಾಸ ಹೊಂದಿದೆ ಎಂದು ಅಧಿಕಾರಿ ಹೇಳಿದರು.

ಮರುಭೂಮಿ ಮತ್ತು ಅರೆ ಮರುಭೂಮಿ ಭೂಪ್ರದೇಶದಲ್ಲಿ ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆಗಾಗಿ ಯುದ್ಧತಂತ್ರದ ಅಭ್ಯಾಸಗಳನ್ನು ಪೂರ್ವಾಭ್ಯಾಸ ಮಾಡಲು 48 ಗಂಟೆಗಳ ಸುದೀರ್ಘ ಮೌಲ್ಯಮಾಪನದೊಂದಿಗೆ ಈ ಸಮರಾಭ್ಯಾಸವು ಕೊನೆಗೊಳ್ಳಲಿದೆ. ಈ ಸಮರಾಭ್ಯಾಸವು ಸ್ಥಳೀಯ ಮಿಲಿಟರಿ ಉಪಕರಣಗಳ ಪ್ರದರ್ಶನ ಮತ್ತು ಈಜಿಪ್ಟ್ ಕಡೆಯ ರಕ್ಷಣಾ ಉತ್ಪಾದನಾ ಉದ್ಯಮದ ಅವಲೋಕನವನ್ನು ಸಹ ಒಳಗೊಂಡಿರುತ್ತದೆ ಎಂದು ಅವರು ತಿಳಿಸಿದರು.

ಇದನ್ನೂ ಓದಿ : ಖೈಬರ್ ಪಖ್ತುಂಖ್ವಾದಲ್ಲಿ ಪಾಕ್ ಸೈನಿಕರ ಕಾರ್ಯಾಚರಣೆ; 15 ಖ್ವಾರಿಜ್ ಉಗ್ರರು ಹತ - PAKISTAN KILLS KHWARIJ TERRORISTS

ETV Bharat Logo

Copyright © 2025 Ushodaya Enterprises Pvt. Ltd., All Rights Reserved.