ನವದೆಹಲಿ: ಸಿಂಥೆಟಿಕ್ ಸಾಫ್ಟ್ ಡ್ರಿಂಕ್ಸ್ಗಳು ನೀರು ಅಥವಾ ತಾಜಾ ಹಣ್ಣಿಗೆ ಪರ್ಯಾಯವಲ್ಲ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಮತ್ತು ರಾಷ್ಟ್ರೀಯ ಪೋಷಕಾಂಶ ಸಂಸ್ಥೆ (ಎನ್ಐಎನ್) ಹೇಳಿದೆ.
ಕಾರ್ಬೊನೇಟ್ನ ಪಾನೀಯಗಳಲ್ಲಿ ಫಾಸ್ಪೊರಿಕ್ ಆಮ್ಲವಿದ್ದು, ಇದು ಹಲ್ಲಿನ ಎನಾಮಲ್‌ಗೆ ಹಾನಿ ಮಾಡುತ್ತದೆ. ಇದರ ಅಧಿಕ ಸೇವನೆ ಹಸಿವಿನ ಮೇಲೂ ಪ್ರಭಾವ ಬೀರುತ್ತದೆ ಎಂದು ತಿಳಿಸಿದೆ. ಅಷ್ಟೇ ಅಲ್ಲದೇ, 30 ಎಂಎಲ್ಗಿಂತ ಹೆಚ್ಚಿನ ಪ್ರಮಾಣದಲ್ಲಿ ಎಥೈಲ್ ಆಲ್ಕೋಹಾಲ್ ಅಂಶ ಹೊಂದಿರುವ ಪಾನೀಯಗಳ ಸೇವನೆಯಿಂದ ಅಧಿಕ ರಕ್ತದೊತ್ತಡ ಮತ್ತು ಪಾರ್ಶ್ವವಾಯು ಅಪಾಯ ಹೆಚ್ಚು. ಈ ಹಿನ್ನೆಲೆಯಲ್ಲಿ ಬಿಸಿ ತಾಪಮಾನದಲ್ಲಿ ಕೋಲ್ಡ್ ಡ್ರಿಂಕ್ಸ್, ಕಾರ್ಬೊನೇಟೆಡ್ ಪಾನೀಯ, ಮಿಕ್ಸೆಡ್ ಫ್ರೂಟ್ ಜ್ಯೂಸ್ ರೀತಿಯ ಸಿಂಥೆಟಿಕ್ ಸಾಫ್ಟ್ ಡ್ರಿಂಕ್ಸ್‌ಗೆ ಬದಲಾಗಿ ಎಳನೀರು, ಶರಬತ್ತು, ಮಜ್ಜಿಗೆ ಸೇವನೆ ಉತ್ತಮ ಎಂದು ಸಲಹೆ ನೀಡಿದೆ.
ನೀತಿ ಆಯೋಗದ ಸದಸ್ಯ ಡಾ.ವಿ.ಕೆ.ಪೌಲ್ ಮಾತನಾಡಿ, "ಕಳೆದ ಕೆಲವು ದಶಕಗಳಿಂದ ಭಾರತೀಯರ ಆಹಾರ ಅಭ್ಯಾಸಗಳು ಗಮನಾರ್ಹವಾಗಿ ಬದಲಾಗಿವೆ. ಇದರಿಂದ ಸಾಂಕ್ರಾಮಿಕೇತರ ಸೋಂಕಿನ ಕಾಯಿಲೆಗಳು ಜಾಸ್ತಿಯಾಗುತ್ತಿವೆ. ಆಹಾರದ ಆಯ್ಕೆ ಮತ್ತು ಉತ್ತಮ ಆರೋಗ್ಯ ಹಾಗೂ ಎಲ್ಲಾ ರೀತಿಯಲ್ಲಿ ಅಪೌಷ್ಟಿಕಾಂಶತೆಯನ್ನು ತಡೆಯುವ ನಿಟ್ಟಿನಲ್ಲಿ ಪುರಾವೆ ಆಧಾರಿತ ಆಹಾರ ಅಭ್ಯಾಸಗಳ ಶಿಫಾರಸಿನ ಮಾರ್ಗಸೂಚನೆ ನೀಡಲಾಗುತ್ತಿದೆ" ಎಂದು ಹೇಳಿದರು.
'ಭಾರತೀಯರಿಗೆ ಆಹಾರ ಮಾರ್ಗಸೂಚಿ' ಎಂಬ ಹೆಸರಿನಲ್ಲಿ ಐಸಿಎಂಆರ್-ಎನ್ಐಎನ್ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದೆ. ಇದರಲ್ಲಿ ಬೇಸಿಗೆಯ ತೀವ್ರ ದೈಹಿಕ ಚಟುವಟಿಕೆ, ನೀರಿನ ಸೇವನೆ ಕುರಿತು ಸಲಹೆಗಳನ್ನು ನೀಡಲಾಗಿದೆ.
ಎಳನೀರು ಸೇವಿಸಿ: ಎಳನೀರು ದೇಹವನ್ನು ನಿರ್ಜಲೀಕರಣಕ್ಕೆ ಒಳಗಾಗದಂತೆ ನೋಡಿಕೊಳ್ಳುತ್ತದೆ. ಇದರಲ್ಲಿ 100 ಎಂಎಲ್ಗೆ 15 ಕೆಸಿಎಎಲ್ ಮತ್ತು ಖನಿಜಾಂಶವಿದೆ. ಆದಾಗ್ಯೂ ಕಿಡ್ನಿ ಮತ್ತು ಹೃದಯ ಆರೋಗ್ಯ ಸಮಸ್ಯೆ ಹೊಂದಿರುವವರು ಈ ಪಾನೀಯ ಸೇವನೆ ತಪ್ಪಿಸುವುದು ಉತ್ತಮ.
ಕಾಯಿಸಿದ ಹಾಲು ಉತ್ತಮ: ಹಾಲು ಕೂಡ ಕ್ಯಾಲ್ಸಿಯಂನ ಉತ್ತಮ ಮೂಲ. ಇದರಲ್ಲಿ ಕಬ್ಬಿಣಾಂಶ ಇರುವುದಿಲ್ಲ. ಹಾಲು ಸುಲಭವಾಗಿ ಜೀರ್ಣವಾಗುವ ಮತ್ತು ಗ್ರಹಿಕೆಯಾಗುವ ಮೈಕ್ರೋ ಪೋಷಕಾಂಶ ಹೊಂದಿರುವ ಪಾನೀಯ. ಹಾಲು ಕಲುಷಿತವಾಗಿದ್ದಲ್ಲಿ ಅದನ್ನು ಚೆನ್ನಾಗಿ ಕಾಯಿಸಿ ಕುಡಿಯುವುದು ಒಳಿತು.
ಸಾಫ್ಟ್ ಡ್ರಿಂಕ್ಸ್ ಬೇಡ: ಸಾಫ್ಟ್ ಡಿಂಕ್ಸ್ಗಳು ಆಲ್ಕೋಹಾಲೇತರ ಪಾನೀಯವಾಗಿದ್ದರೂ ಇದರಲ್ಲಿ ಕಾರ್ಬೋನೇಟ್, ಕೃತಕ ಸಕ್ಕರೆ ಅಥವಾ ಕೃತಕ ಸಿಹಿ ಅಂಶ, ಸೇವನೆ ಆಮ್ಲಗಳು, ನೈಸರ್ಗಿಕ ಅಥವಾ ಕೃತಕ ಸುವಾಸನೆಗಳು ಮತ್ತು ಕೆಲವು ವೇಳೆ ತಾಜಾ ಹಣ್ಣು ಸೇರಿಸಲಾಗುತ್ತದೆ. ತಾಜಾ ಹಣ್ಣಿಗೆ ಹೋಲಿಸಿದರೆ, ಇವು ಉತ್ತಮ ಆಯ್ಕೆಯಲ್ಲ.
ಸಿಂಥೆಟಿಕ್ ಸಾಫ್ಟ್ ಡ್ರಿಂಕ್ಸ್ಗಳು ನೀರು ಅಥವಾ ತಾಜಾ ಹಣ್ಣಿಗೆ ಪರ್ಯಾಯವಲ್ಲ. ಈ ಹಿನ್ನೆಲೆಯಲ್ಲಿ ಇದನ್ನು ಸೇವಿಸುವ ಬದಲು ಮಜ್ಜಿಗೆ, ಶರಬತ್ತು, ಸಕ್ಕರೆರಹಿತ ತಾಜಾ ಹಣ್ಣು, ಎಳನೀರು ಉತ್ತಮ ಆಯ್ಕೆ. ವಾಣಿಜ್ಯವಾಗಿ ಲಭ್ಯವಾಗುವ ಸಾಫ್ಟ್ ಡ್ರಿಂಕ್ಸ್ ಸಕ್ಕರೆ ಅಥವಾ ಉಪ್ಪಿನ ಸೇವನೆಯನ್ನು ಹೆಚ್ಚಿಸುತ್ತದೆ.
ಟೀ ಮತ್ತು ಕಾಫಿ: ಇದರಲ್ಲಿ ಕೆಫೆನ್ ಅಂಶವಿದ್ದು, ಕೇಂದ್ರ ನರ ವ್ಯವಸ್ಥೆಯನ್ನು ಉತ್ತೇಜಿಸಿ ಮತ್ತು ಶಾರೀರಿಕ ಅವಲಂಬನೆಯನ್ನು ಹೆಚ್ಚಿಸುತ್ತದೆ. ಸುಧಾರಿತ ಪ್ರಮಾಣದಲ್ಲಿ ಕಾಫಿ, ಟೀ ಸೇವನೆಗೆ ಶಿಫಾರಸು ಮಾಡಲಾಗುವುದು. ದಿನಕ್ಕೆ 300ಎಂಜಿಗಿಂತ ಹೆಚ್ಚಿನ ಮಟ್ಟದ ಕೆಫೆನ್ ಅಂಶ ಸೇವನೆ ಬೇಡ.
ಆಲ್ಕೋಹಾಲಿಕ್ ಪಾನೀಯ ಸೇವನೆ ತಪ್ಪಿಸಿ: ಇದರಲ್ಲೂ ಕೂಡ ಎಲೈಲ್ ಆಲ್ಕೋಹಾಲ್ ಇರುತ್ತದೆ. ಬಿಯರ್ನಲ್ಲಿ ಶೇ.2-5 ಮತ್ತು ವೈನ್ನಲ್ಲಿ ಶೇ.8-10ರಷ್ಟು ಆಲ್ಕೋಹಾಲ್ ಇದ್ದು, ಬ್ರಾಂಡಿ ಮತ್ತು ವಿಸ್ಕಿಯಲ್ಲಿ ಹೆಚ್ಚಿ ಪ್ರಮಾಣದಲ್ಲಿ ಆಲ್ಕೋಹಾಲ್ ಇರುತ್ತದೆ. ಇದು ಹೊಟ್ಟೆ ಸ್ಥೂಲಕಾಯಕತೆ ಹೆಚ್ಚಿಸುತ್ತದೆ. ಅತೀ ಹೆಚ್ಚಿನ ಆಲ್ಕೋಹಾಲ್ ಸೇವನೆ ಹಸಿವೆ ಹತ್ತಿಕ್ಕುತ್ತದೆ. ಇದರ ಜೊತೆಗೆ ಹಲವು ಪೋಷಕಾಂಶ ಕೊರತೆಗೆ ಕಾರಣವಾಗುತ್ತದೆ. ಇವುಗಳ ಅತಿಯಾದ ಕ್ಯಾನ್ಸರ್, ಹೃದಯದ ಸ್ನಾಯು ದುರ್ಬಲತೆಯಂತಹ ಅಪಾಯವನ್ನೂ ಏರಿಸುತ್ತದೆ.
ಇದನ್ನೂ ಓದಿ: ಪೋಷಕಾಂಶ ಕೊರತೆ, ಸ್ಥೂಲಕಾಯ, ಮಧುಮೇಹ ತಪ್ಪಿಸಲು ಈ ಆಹಾರ ಬೆಸ್ಟ್; ಐಸಿಎಂಆರ್