ಹಾವೇರಿ: ಸಂಕ್ರಾಂತಿ ದಿನವೇ ವರದಾ ನದಿಯಲ್ಲಿ ಈಜಲು ತೆರಳಿದ್ದ ಯುವಕ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ ಘಟನೆ ಹಾವೇರಿ ಜಿಲ್ಲೆ ಹಾನಗಲ್ ತಾಲೂಕು ಹೊಂಕಣ ಗ್ರಾಮದಲ್ಲಿ ಬಳಿ ನಡೆದಿದೆ.
ಮೃತ ಯುವಕನನ್ನು ಹಿರೇಕೆರೂರು ತಾಲೂಕಿನ ಯತ್ತಿನಹಳ್ಳಿ ಗ್ರಾಮದ ನಿವಾಸಿ 32 ವರ್ಷದ ರಮೇಶ ಕಡ್ಡೇರ್ ಎಂದು ಗುರುತಿಸಲಾಗಿದೆ. ಸಂಕ್ರಾಂತಿ ಹಬ್ಬಕ್ಕೆ ಬಂದಿದ್ದ ರಮೇಶ್ ಸ್ನೇಹಿತರೊಂದಿಗೆ ನದಿಯಲ್ಲಿ ಈಜಲು ಬಂದಿದ್ದ. ಈ ವೇಳೆ ಘಟನೆ ನಡೆದಿದೆ. ಆಡೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಮೃತ ರಮೇಶ್ ಸಂಬಂಧಿಕರ ಅಕ್ರಂದನ ಮುಗಿಲುಮುಟ್ಟಿದೆ.
ಇದನ್ನೂ ಓದಿ: ಲೈಸನ್ಸ್ ಇಲ್ಲದ ಗೂಡ್ಸ್ ಆಟೋದಲ್ಲಿ ಪ್ರಯಾಣಿಕರ ಸಾಗಿಸಿ ಮಹಿಳೆ ಸಾವು; ಚಾಲಕನಿಗೆ ನೀಡಲಾದ ಜೈಲು ಶಿಕ್ಷೆ ಎತ್ತಿ ಹಿಡಿದ ಹೈಕೋರ್ಟ್