ಹೈದರಾಬಾದ್: ಬೇಸಿಗೆಯಲ್ಲಿ ತಾಪಮಾನ ಏರಿಕೆಯಾಗುತ್ತಿದ್ದಂತೆ ಸೌಂದರ್ಯದ ಉತ್ಪನ್ನಗಳೊಂದಿಗೆ ಸಖ್ಯ ಬೆಳೆಸುವುದು ಕಷ್ಟವಾಗುತ್ತದೆ. ಶಾಖ, ಆರ್ದ್ರತೆ ಮತ್ತು ಸೂರ್ಯನಿಂದಾಗಿ ಸ್ಕಿನ್ ಕೇರ್ಗಳನ್ನು ಹಚ್ಚಿಕೊಂಡಾಗ ಅವು ಕಳೆಗುಂದುವ, ಮುಖ ಬಲು ಬೇಗ ಬಾಡಿದಂತೆ ಕಾಣುತ್ತದೆ. ಕಾರಣ ಸೂರ್ಯನ ಶಾಖ. ಬಿಸಿಲು ಹೆಚ್ಚಿದಂತೆ ಮುಖ ತಾಜಾತನ ಕಳೆದುಕೊಳ್ಳುತ್ತದೆ. ಆದರೆ, ಇಂತಹ ಬಿರು ಬೇಸಿಗೆಯಲ್ಲೂ ನಿಮ್ಮ ಮೇಕಪ್ ಕಳೆಗುಂದದಂತೆ ಮಾಡದೇ, ತ್ವಚೆಯ ಅಂದ ಹೆಚ್ಚಿಸಲು ಕೆಲವು ಸರಳ ಸಲಹೆಗಳನ್ನು ಚರ್ಮರೋಗ ತಜ್ಞರಾಗಿರುವ ಡಾ ಸ್ತುತಿ ಖರೇ ಶುಕ್ಲಾ ತಿಳಿಸಿದ್ದಾರೆ.
ಮುಖ ಶುಚಿಯಿಂದ ಆರಂಭಿಸಿ: ಮುಖದ ಮೇಲೆ ಯಾವುದೇ ಮೇಕಪ್ ಹಚ್ಚುವ ಮುನ್ನ ಅದನ್ನು ಸೌಮ್ಯ ಸ್ವಭಾವದ ಕ್ಲೇನ್ಸರ್ ಮೂಲಕ ಶುಚಿಗೊಳಿಸುವುದು ಅಗತ್ಯ. ಇದರಿಂದ ಮುಖದಲ್ಲಿರುವ ಎಣ್ಣೆ ಅಥವಾ ಒಣ ತ್ವಚೆ, ಅಂಟು ಅಂಟು ಅನುಭವದಿಂದ ಮುಕ್ತಿ ನೀಡುತ್ತದೆ.
ಪ್ರೈಮರ್ ಬಳಕೆ: ಶಾಖದಿಂದ ರಕ್ಷಣೆಗೆ ಇದು ಬಹು ಮುಖ್ಯವಾಗಿದೆ. ಮೇಕಪ್ ಹಾಕಿಕೊಳ್ಳುವ ಮುನ್ನ ಮುಖಕ್ಕೆ ಪ್ರೈಮರ್ ಹಚ್ಚಿಕೊಳ್ಳುವುದು ಅಗತ್ಯ. ಮೇಕಪ್ ಅನ್ನು ದೀರ್ಘಕಾಲ ಹಿಡಿದಿಡಲು ಇದು ಅವಶ್ಯವಾಗಿದೆ, ಇದು ಎಣ್ಣೆ ಉತ್ಪನ್ನಗಳ ನಿರ್ವಹಣೆ ಆಗಿದೆ. ಇದು ಮುಖದ ಮೇಲೆ ಮೃದುತ್ವ ಕಾಪಾಡಲು ಸಹಾಯ ಮಾಡುತ್ತದೆ.
ದೀರ್ಘವಾಧಿ ಫಾರ್ಮೂಲಾ: ಶಾಖ ಮತ್ತು ಆರ್ದ್ರತೆ ತಡೆಯಲು ದೀರ್ಘಾವಧಿಯಿಂದ ರಕ್ಷಣೆ ಪಡೆಯಲು ಬೇಸಿಗೆಯಲ್ಲಿ ಉತ್ಪನ್ನಗಳನ್ನು ಎಚ್ಚರಿಕೆಯಿಂದ ಆರಿಸಬೇಕು. ಅದರಲ್ಲೂ ಮಸ್ಕರ, ಹೈಲೈನರ್, ಕನ್ಸೀಲರ್ ಆಯ್ಕೆಯಲ್ಲಿ ಅದು ವಾಟರ್ ಪ್ರೂಫ್ ಇದೆಯಾ ಎಂಬುದನ್ನು ಗಮನಿಸಿ. ಇಂತಹ ಸಂಯೋಜನೆ ಹೊಂದಿರುವ ಉತ್ಪನ್ನಗಳು ಬೇಸಿಗೆಯ ಬಿಸಿಲಿಗೆ ಸುಲಭವಾಗಿ ಹಾಳಾಗದು.
ಮೇಕಪ್ ಸೆಟ್ ಮಾಡಿ: ಮೇಕಪ್ ಆದ ಬಳಿಕ ಸ್ಪ್ರೇ ಅಥವಾ ಟ್ರಾನ್ಸ್ಪರೆಂಟ್ ಪೌಡರ್ ಮೂಲಕ ಮೇಕಪ್ಗೆ ಫೈನಲ್ ಟಚ್ ಮಾಡಿ. ಇದರಿಂದ ದೀರ್ಘಕಾಲದವರೆಗೆ ಮೇಕಪ್ ಇರುತ್ತದೆ. ಜೊತೆಗೆ ದಿನವಿಡೀ ನಿಮ್ಮ ಮೇಕಪ್ ಹಾಳಾಗದಂತೆ ಇರಲು ಸಹಾಯ ಮಾಡುತ್ತದೆ. ಇದು ಚರ್ಮದಲ್ಲಿರುವ ಅಧಿಕ ಎಣ್ಣೆ ಅಂಶವನ್ನು ಗ್ರಹಿಸುತ್ತದೆ.
ಕೈಯಲ್ಲಿರಲಿ ಬ್ಲೊಟ್ಟಿಂಗ್ ಪೇಪರ್: ಬೇಸಿಗೆ ಸಮಯದಲ್ಲಿ ಶಾಖ ಮತ್ತು ಆರ್ದ್ರತೆಯಿಂದಾಗಿ ತ್ವಚೆ ಹೆಚ್ಚಿನ ಪ್ರಮಾಣದಲ್ಲಿ ಎಣ್ಣೆಯನ್ನು ಉತ್ಪತ್ತಿ ಮಾಡುತ್ತದೆ. ತಕ್ಷಣಕ್ಕೆ ಮುಖದ ಎಣ್ಣೆ ಅಂಶ ಮತ್ತು ಇತರ ಧೂಳುಗಳನ್ನು ತೆಗೆಯಲು ಕೈಯಲ್ಲಿ ಸದಾ ಬ್ಲೋಟಿಂಗ್ ಪೇಪರ್ ಅಥವಾ ಶೀಟ್ ಹಿಡಿದಿರಿ. ಇದು ಎಣ್ಣೆಯನ್ನು ಬೇಗ ಗ್ರಹಿಸುತ್ತದೆ. ಜೊತೆಗೆ ಮುಖ ತಾಜಾತನದಿಂದ ಕೂಡಿರಲು ಸಹಾಯ ಮಾಡುತ್ತದೆ.
ಹಗುರದಿಂದ ಕೂಡಿರಲಿ: ಬೇಸಿಗೆಯಲ್ಲಿ ತ್ವಚೆ ಸುಲಭವಾಗಿ ಉಸಿರಾಡುವಂತಹ ಹಗುರದಿಂದ ಕೂಡಿರುವ ಮೇಕಪ್ ಧರಿಸಿ. ಗಾಢಾ ಫೌಂಡೆಷನ್ ಮತ್ತು ಭಾರಿ ಕ್ರೀಮ್ಸ್ಗಳನ್ನು ಶಾಖ ಮತ್ತು ಅನಾನುಕೂಲಕತೆ ಕಾರಣವಾಗುತ್ತದೆ. ಈ ಹಿನ್ನೆಲೆ ಎಣ್ಣೆ ಮುಕ್ತ ಮಾಶ್ಚರೈಸರ್, ಸೆರಂ ಮತ್ತು ಫೌಂಡೇಷನ್ ಅನ್ನು ಬಳಕೆ ಮಾಡುವುದರಿಂದ ಚರ್ಮವೂ ಹೈಡ್ರೇಟ್ ಆಗುತ್ತದೆ.
ಚರ್ಮವನ್ನು ರಕ್ಷಿಸಿ: ಸೌಂದರ್ಯ ವರ್ಧಕಗಳು ನಿಮ್ಮನ್ನು ಆಕರ್ಷಣೀಯವಾಗಿ ಕಾಣುವಂತೆ ಮಾಡುತ್ತದೆ ಎಂಬುದು ಸುಳ್ಳಲ್ಲ. ಬೇಸಿಗೆಯಲ್ಲಿ ಬಳಕೆ ಮಾಡುವ ನಿಮ್ಮ ಉತ್ಪನ್ನಗಳಲ್ಲಿ ಎಫ್ಪಿಎಫ್ ಇದ್ದರೂ ವಿಶಾಲ ವ್ಯಾಪ್ತಿಯ ಅಂದರೆ ಎಸ್ಪಿಎಫ್ 30ಕ್ಕಿಂತ ಹೆಚ್ಚಿನ ಸೌಂದರ್ಯವರ್ಧಕವನ್ನು ಬಳಕೆ ಮಾಡಿ. ಇದು ಚರ್ಮ ಯುವಿ ಕಿರಣದಿಂದ ಹಾಳಾಗದಂತೆ ಮತ್ತು ಬೇಗ ಸುಕ್ಕಾಗದಂತೆ, ಸನ್ಬರ್ನ್ ಆಗದಂತೆ ತಡೆಯುತ್ತದೆ.
ಬೇಸಿಗೆಯ ಮೇಕಪ್ ಮತ್ತು ಸ್ಕ್ರೀನ್ಕೇರ್ ಅನ್ನು ನಿರ್ವಹಣೆ ಮಾಡುವುದು ಕಷ್ಟವಲ್ಲ. ಆದರೆ, ಶಾಖ ಮತ್ತು ಆರ್ದ್ರತೆಯಲ್ಲಿಯೂ ಮೇಕಪ್ ತಾಜಾತನ ಮತ್ತು ಹೊಳಪಿನಿಂದ ಕೂಡಿರಬೇಕು ಎಂಬುದನ್ನು ನೆನಪಿನಲ್ಲಿಡಿ. ಮೇಲಿನ ಲೇಖನದ ಸಂಪೂರ್ಣ ಮಾಹಿತಿ ಡಾ ಸ್ತುತಿ ಖರೆ ಶುಕ್ಲಾ ಅವರ ಶಿಫಾರಸು ಮಾಡಿದ್ದು, ಈ ಟಿವಿ ಭಾರತ್ ಈ ಅಂಶಗಳ ಕುರಿತು ಯಾವುದೇ ಜವಾಬ್ದಾರಿ ಹೊಂದಿರುವುದಿಲ್ಲ.
ಇದನ್ನೂ ಓದಿ: ಮೇಕಪ್ ಮಾಡಿಕೊಳ್ಳುವಾಗ ಕಾಂಟಾಕ್ಟ್ ಲೆನ್ಸ್ ಬಳಕೆ: ಈ ಮುಂಜಾಗ್ರತೆ ಪಾಲಿಸಿ