ಹೈದರಾಬಾದ್: ಉಪ್ಪಿನ ಮೂಲಕ ಅಧಿಕ ಪ್ರಮಾಣದ ಸೋಡಿಯಂ ಸೇವಿಸಲಾಗುತ್ತದೆ. ಇದು ತ್ವಚೆಯಲ್ಲಿ ಉರಿಯೂತದಂತಹ ಎಸ್ಜಿಮಾ ಸಮಸ್ಯೆಯ ಅಪಾಯ ಹೆಚ್ಚಿಸುತ್ತದೆ ಎಂದು ಅಧ್ಯಯನ ತಿಳಿಸಿದೆ.
ಎಸ್ಜಿಮಾ ಎಂಬುದು ತ್ವಚೆಗಳಲ್ಲಿ ಶುಷ್ಕತೆ ಮತ್ತು ಕಿರಿಕಿರಿಯಂತಹ ಉರಿಯೂತದ ಅನುಭವಕ್ಕೆ ಕಾರಣವಾಗುತ್ತದೆ. ಈ ಹಿಂದಿನ ಅಧ್ಯಯನದಲ್ಲೂ ಕೂಡ ಸೋಡಿಯಂ ಹೆಚ್ಚಳ ಎಸ್ಜಿಮಾ ಸೇರಿದಂತೆ ಆಟೋ ಇಮ್ಯೂನ್ ಮತ್ತು ದೀರ್ಘ ಉರಿಯೂತದ ಪರಿಸ್ಥಿತಿಗೆ ಕಾರಣವಾಗುತ್ತದೆ ಎಂದು ತೋರಿಸಿತ್ತು.
ಫಾಸ್ಟ್ ಫುಡ್ಗಳು ಅಧಿಕ ಮಟ್ಟದ ಡಯಾಟರಿ ಸೋಡಿಯಂ ಅಂಶ ಹೊಂದಿರುತ್ತವೆ. ಇದೂ ಕೂಡ ಯುವಜನತೆ ಸೇರಿದಂತೆ ಎಲ್ಲಾ ವಯೋಮಾನದವರಲ್ಲಿ ಎಸ್ಜಿಮಾ ಸಮಸ್ಯೆ ಅಪಾಯ ಹೆಚ್ಚಿಸುತ್ತದೆ.
ಹೊಸ ಅಧ್ಯಯನದಲ್ಲಿ ತಿಳಿಸಿದಂತೆ, ನಿತ್ಯ ಶಿಫಾರಸು ಮಾಡಿರುವ ಪ್ರಮಾಣಕ್ಕಿಂತ ಹೆಚ್ಚಿನ ಉಪ್ಪು ಸೇವನೆ ಎಸ್ಜಿಮಾವನ್ನು ಶೇ.22ರಷ್ಟು ಏರಿಸುವ ಸಾಧ್ಯತೆ ಇದೆ. ಅರ್ಧ ಟೀ ಚಮಚದಲ್ಲಿ ಒಂದು ಗ್ರಾಂ ಸೋಡಿಯಂ ಇರುತ್ತದೆ ಎಂಬುದು ಗಮನಾರ್ಹ.
ಇತ್ತೀಚಿನ ದಿನಗಳಲ್ಲಿ ದೀರ್ಘಕಾಲದ ತ್ವಚೆ ಪರಿಸ್ಥಿತಿ ಸಾಮಾನ್ಯ. ವಿಶೇಷವಾಗಿ, ಕೈಗಾರಿಕೋದ್ಯಮ ದೇಶಗಳಲ್ಲಿ ಪರಿಸರ ಮತ್ತು ಜೀವನಶೈಲಿಯ ವಿವಿಧ ಶೈಲಿ ಆಹಾರಗಳು ಪ್ರಮುಖ ಪಾತ್ರ ವಹಿಸುತ್ತದೆ ಎಂದು ಅಮೆರಿಕದ ಕ್ಯಾಲಿಫೋರ್ನಿಯಾ ಸ್ಯಾನ್ ಪ್ರಾನ್ಸಿಸ್ಕೊ ಯುನಿವರ್ಸಿಟಿ (ಯುಸಿಎಸ್ಎಫ್) ಸಂಶೋಧಕರು ತಿಳಿಸಿದ್ದಾರೆ.
ಎಸ್ಜಿಮಾ ರೋಗಿಗಳು ಸೋಡಿಯಂ ಸೇವನೆ ಕಡಿಮೆ ಮಾಡುವ ಮೂಲಕ ರೋಗದ ನಿರ್ವಹಣೆ ಮಾಡಬಹುದು. ಈ ಅಧ್ಯಯನವನ್ನು ಅಮೆರಿಕನ್ ಮೆಡಿಕಲ್ ಅಸೋಸಿಯೇಷನ್ ಡರ್ಮಟಾಲಜಿಯಲ್ಲಿ ಪ್ರಕಟಿಸಲಾಗಿದೆ.
ಅಧ್ಯಯನಕ್ಕಾಗಿ ಸಂಶೋಧಕರು, ಯುಕೆ ಬಯೋಬ್ಯಾಂಕ್ನಿಂದ 30ರಿಂದ 70 ವರ್ಷದ ವಯೋಮಾನದವರ ದತ್ತಾಂಶ ಪಡೆದು ವಿಶ್ಲೇಷಿಸಿದ್ದಾರೆ. ಇದರಲ್ಲಿ ಯೂರಿನ್ ಮತ್ತು ಎಲೆಕ್ಟ್ರಾನಿಕ್ ವೈದ್ಯಕೀಯ ದಾಖಲಾತಿಗಳನ್ನು ಪರಿಶೀಲಿಸಲಾಗಿದೆ.
ಯೂರಿನ್ ಮಾಸರಿಗಳನ್ನು ರೋಗಿಯು ಸೋಡಿಯಂ ಸೇವನೆ ಮಟ್ಟವನ್ನು ಗಮನಿಸಿದರೆ, ವೈದ್ಯಕೀಯ ಮಾದರಿಗಳಿಂದ ಎಸ್ಜಿಮಾದ ಪತ್ತೆ ಮಾಡಲಾಗಿದೆ. ಫಲಿತಾಂಶದಲ್ಲಿ ಸೋಡಿಯಂ ಒಂದು ಗ್ರಾಂ ಹೆಚ್ಚು ಸೇವನೆ ತ್ವಚೆಯ ಅಪಾಯವನ್ನು ಶೇ.22ರಷ್ಟು ಹೆಚ್ಚಿಸುತ್ತದೆ ಎಂದು ಎಚ್ಚರಿಸಿದೆ.(ಐಎಎನ್ಎಸ್)
ಇದನ್ನೂ ಓದಿ: ದಿನಕ್ಕೆ ಎಷ್ಟು ಪ್ರಮಾಣದ ಉಪ್ಪು ಸೇವಿಸಬೇಕು: ಐಸಿಎಂಆರ್ ಹೇಳಿರುವುದೇನು?