ETV Bharat / health

ಹೃದಯಾಘಾತವಾಗುವ ಒಂದು ತಿಂಗಳ ಮೊದಲು ದೇಹ ನೀಡುತ್ತೆ ಎಚ್ಚರಿಕೆ: ಈ ಲಕ್ಷಣಗಳನ್ನು ಗುರುತಿಸಿದರೆ ಸುರಕ್ಷಿತವಾಗಿರಬಹುದು! - Heart attack warning signs

author img

By ETV Bharat Health Team

Published : Aug 30, 2024, 3:03 PM IST

Heart attack warning signs: ಇತ್ತೀಚಿನ ದಿನಗಳಲ್ಲಿ ಬದಲಾದ ಜೀವನಶೈಲಿಯಿಂದ ಮಕ್ಕಳಿಂದ ಹಿಡಿದು ದೊಡ್ಡವರವರೆಗೆ ಅನೇಕ ಜನರು ಹೃದಯಾಘಾತದಿಂದ ಬಳಲುತ್ತಿದ್ದಾರೆ. ಅನೇಕರು ಇದನ್ನು ಹಠಾತ್ ಸಾವು ಎಂದು ಪರಿಗಣಿಸುತ್ತಾರೆ. ಆದರೆ, ಹೃದಯಾಘಾತವಾಗುವ 10 ದಿನಗಳ ಮೊದಲು ನಮ್ಮಲ್ಲಿ ಕೆಲವು ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಈ ಲಕ್ಷಣಗಳನ್ನು ಸರಿಯಾಗಿ ಗುರುತಿಸಿದರೆ ಜೀವ ಉಳಿಸಬಹುದು ಎನ್ನುತ್ತಾರೆ ವೈದ್ಯರು. ಹೃದಯಾಘಾತವಾಗುವ ಮೊದಲು ದೇಹದಲ್ಲಿ ಯಾವ ರೀತಿಯ ಲಕ್ಷಣಗಳು ಕಂಡುಬರುತ್ತವೆ ಎನ್ನುವುದನ್ನು ತಿಳಿಯೋಣ ಬನ್ನಿ...

HEART ATTACK WARNING SIGNS  HEART ATTACK EARLY WARNING SIGNS  HEART DISEASE EARLY WARNING SIGNS  WARNING SIGN HEART PROBLEMS
ಸಾಂದರ್ಭಿಕ ಚಿತ್ರ (ETV Bharat)

Heart attack warning signs: ಹೃದಯವು ನಮ್ಮ ದೇಹದಲ್ಲಿನ ಪ್ರಮುಖ ಅಂಗವಾಗಿದೆ. ಹೃದಯ ಆರೋಗ್ಯವಾಗಿದ್ದರೆ ನಾವು ಆರೋಗ್ಯವಾಗಿರುತ್ತೇವೆ. ಆದರೆ, ಇಂದಿನ ಬದಲಾದ ಆಹಾರ ಪದ್ಧತಿಯಿಂದಾಗಿ ಅನೇಕರಿಗೆ ಚಿಕ್ಕ ವಯಸ್ಸಿನಲ್ಲಿಯೇ ಹೃದಯಾಘಾತವಾಗುತ್ತದೆ. ಆಸ್ಪತ್ರೆಗೆ ಕೊಂಡೊಯ್ಯುವ ಮುನ್ನವೇ ಅನೇಕರು ಸಾವನ್ನಪ್ಪುತ್ತಾರೆ. ಹೃದಯಾಘಾತದ ಮುನ್ನ ಅಂದ್ರೆ, 10 ದಿನದಿಂದ ಒಂದು ತಿಂಗಳೊಳಗೆ ಹಲವಾರು ಎಚ್ಚರಿಕೆಗಳನ್ನು ನೀಡುತ್ತದೆ. ಸರಿಯಾಗಿ ಗಮನಿಸಿದರೆ ಹೃದಯಾಘಾತದಿಂದ ಪಾರಾಗಬಹುದು ಎನ್ನುತ್ತಾರೆ ವೈದ್ಯರು. ಹೃದಯಾಘಾತಕ್ಕೂ ಮುನ್ನ ದೇಹದಲ್ಲಿ ಯಾವ ರೀತಿಯ ಲಕ್ಷಣಗಳು ಕಂಡುಬರುತ್ತವೆ ಎಂಬುದನ್ನು ಅರಿತುಕೊಳ್ಳೋಣ ಬನ್ನಿ...

ದಣಿವಾಗುವುದು: ಹೃದಯಾಘಾತವಾಗುವ ಮುನ್ನ ಅಂದ್ರೆ, 10 ದಿನದಿಂದ ಒಂದು ತಿಂಗಳ ಮೊದಲು ದಣಿವಾಗುತ್ತದೆ. ಈ ಅವಧಿಯಲ್ಲಿ ಹೃದಯವು ಆಯಾಸವಾಗಿರುತ್ತದೆ ಎಂದು ವೈದ್ಯರು ಹೇಳಿದ್ದಾರೆ. 2019 ರಲ್ಲಿ ಜರ್ನಲ್ ಆಫ್ ದಿ ನ್ಯಾಷನಲ್ ಹಾರ್ಟ್, ಲಂಗ್ ಮತ್ತು ಬ್ಲಡ್ ಇನ್ಸ್ಟಿಟ್ಯೂಟ್​ನಲ್ಲಿ ಈ ರೋಗಲಕ್ಷಣವು ಪುರುಷರಿಗಿಂತ ಮಹಿಳೆಯರಲ್ಲಿ ಹೆಚ್ಚು ಸಾಮಾನ್ಯವಾಗಿದೆ ಎಂದು ತಿಳಿದುಬಂದಿದೆ. ಮಹಿಳೆಯರಲ್ಲಿ ತೀವ್ರವಾದ ಪರಿಧಮನಿಯ ರೋಗಲಕ್ಷಣದ ಲಕ್ಷಣವಾಗಿ ಆಯಾಸ (Fatigue as a Symptom of Acute Coronary Syndrome in Women) ಕುರಿತು ಅಧ್ಯಯನ ವರದಿಯಲ್ಲಿ ಡಾ. ಲಕ್ಷ್ಮಿ ಮೆಹ್ತಾ ಮತ್ತು ಡಾ. ವ್ಯಾಕಾರಿನೋ ವಿ. ಭಾಗವಹಿಸಿದ್ದರು.

ಎದೆಯಲ್ಲಿ ಅಸ್ವಸ್ಥತೆ: ಹೃದಯಾಘಾತದ ಮೊದಲು ಎದೆಯ ಸುತ್ತಲೂ ಸಾಕಷ್ಟು ಅಸ್ವಸ್ಥತೆಯನ್ನು ಅನುಭವಿಸುತ್ತಾರೆ. ಇದರ ಜೊತೆಯಲ್ಲಿ ಎದೆಯ ಮಧ್ಯದಲ್ಲಿ ನೋವು ಇರುತ್ತದೆ ಎಂದು ವೈದ್ಯರು ವಿವರಿಸುತ್ತಾರೆ.

ದೇಹ ಬೆವರುವುದು: ಬೆವರುವುದು ಸಾಮಾನ್ಯ ಎಂದು ಹಲವರು ಭಾವಿಸುತ್ತಾರೆ. ಆದಾಗ್ಯೂ, ಹೃದಯಾಘಾತದಿಂದ ಬಳಲುತ್ತಿರುವ ಜನರು ಹೆಚ್ಚು ಬೆವರುತ್ತಾರೆ. ಹೃದಯಕ್ಕೆ ಸಾಕಷ್ಟು ರಕ್ತ ಪೂರೈಕೆಯಿಂದಾಗಿ ರೋಗಿಗಳು ತೀವ್ರವಾಗಿ ಬೆವರುತ್ತಾರೆ ಎಂದು ವಿವರಿಸಲಾಗಿದೆ. ಇದರ ಜೊತೆಗೆ ಕೆಲವರು ಅಜೀರ್ಣ ಅಥವಾ ವಾಕರಿಕೆ ಮುಂತಾದ ಸಮಸ್ಯೆಗಳನ್ನು ಎದುರಿಸುತ್ತಾರೆ ಎಂದು ವೈದ್ಯರು ಹೇಳುತ್ತಾರೆ.

ಹೃದಯ ಬಡಿತ ಹೆಚ್ಚಾಗುತ್ತೆ: ಹೃದಯಕ್ಕೆ ಸಾಕಷ್ಟು ರಕ್ತ ಸಿಗದಿದ್ದರೆ ಹಲವು ಸಮಸ್ಯೆಗಳು ಎದುರಾಗುತ್ತವೆ. ಈ ಕಾರಣದಿಂದಾಗಿ, ಹೃದಯ ಬಡಿತವೂ ಹೆಚ್ಚಾಗುತ್ತದೆ. ಹೃದಯಾಘಾತಕ್ಕೆ ಕೆಲವು ದಿನಗಳ ಮೊದಲು ರೋಗಿಗಳಲ್ಲಿ ಹೃದಯ ಬಡಿತ ಹೆಚ್ಚಾಗುತ್ತದೆ ಎಂದು ವೈದ್ಯರು ವಿವರಿಸುತ್ತಾರೆ.

ದೇಹ ನೋವು: ಹೃದಯಾಘಾತವಾಗುವ ಕೆಲವು ದಿನಗಳ ಮೊದಲು ಕಾಣಿಸಿಕೊಳ್ಳುವ ಪ್ರಮುಖ ಲಕ್ಷಣಗಳಲ್ಲಿ ದೇಹ ನೋವು ಕೂಡ ಒಂದು. ಈ ಸಮಯದಲ್ಲಿ ರೋಗಿಯು ಎದೆ, ಭುಜಗಳು, ತೋಳುಗಳು, ಬೆನ್ನು, ಕುತ್ತಿಗೆ ಮತ್ತು ದವಡೆಯಲ್ಲಿ ನೋವು ಇರುತ್ತದೆ. ವಾಸ್ತವವಾಗಿ, ಹೃದಯಕ್ಕೆ ಸಂಬಂಧಿಸಿದ ಸಮಸ್ಯೆ ಇದ್ದಾಗ, ಅಪಧಮನಿಗಳು ನಿರ್ಬಂಧಿಸಲ್ಪಡುತ್ತವೆ. ಅದು ನೋವನ್ನು ಉಂಟುಮಾಡುತ್ತದೆ ಎನ್ನುತ್ತಾರೆ ವೈದ್ಯರು.

ತಲೆಸುತ್ತು ಬರುವುದು: ಯಾವುದೇ ಕಾರಣವಿಲ್ಲದೆ ನಿಮಗೆ ತಲೆತಿರುಗುವಿಕೆ ಅನಿಸಿದರೆ ಅದನ್ನು ಸಾಮಾನ್ಯವಾಗಿ ತೆಗೆದುಕೊಳ್ಳಬೇಡಿ. ಏಕೆಂದರೆ ಇವೆಲ್ಲವೂ ಹೃದಯಾಘಾತದ ಲಕ್ಷಣಗಳಾಗಿವೆ ಎಂದು ವೈದ್ಯರು ಸಲಹೆ ನೀಡುತ್ತಾರೆ. ತಲೆಸುತ್ತು, ತಲೆನೋವು, ಉಸಿರಾಟದ ತೊಂದರೆ, ಎದೆನೋವು, ರಕ್ತದೊತ್ತಡ ಕಡಿಮೆಯಾಗುವುದು. ಇವೆಲ್ಲವೂ ಹೃದಯಾಘಾತದ ಲಕ್ಷಣಗಳಾಗಿರಬಹುದು ಎಂದು ಎಂದು ವೈದ್ಯರು ತಿಳಿಸುತ್ತಾರೆ.

ಹೆಚ್ಚಿನ ಮಾಹಿತಿಗಾಗಿ ನೀವು ಈ ವೆಬ್​ಸೈಟ್​ಗೆ ಸಂಪರ್ಕಿಸಬಹುದು:

https://www.nih.gov/news-events/nih-research-matters/heart-attack-symptoms-women

ಓದುಗರಿಗೆ ಸೂಚನೆ: ಇಲ್ಲಿ ನಿಮಗೆ ನೀಡಿರುವ ಎಲ್ಲ ಆರೋಗ್ಯ ಮಾಹಿತಿ ಮತ್ತು ಸಲಹೆಗಳು ನಿಮ್ಮ ತಿಳಿವಳಿಕೆಗಾಗಿ ಮಾತ್ರ. ವೈಜ್ಞಾನಿಕ ಸಂಶೋಧನೆ, ಅಧ್ಯಯನಗಳು, ವೈದ್ಯಕೀಯ ಮತ್ತು ಆರೋಗ್ಯ ವೃತ್ತಿಪರ ಸಲಹೆಯನ್ನು ಆಧರಿಸಿ ನಾವು ಈ ಮಾಹಿತಿ ನಿಮಗೆ ನೀಡಿದ್ದೇವೆ. ಆದರೆ, ಇವುಗಳನ್ನು ಅನುಸರಿಸುವ ಮೊದಲು ಪರಿಣತ ವೈದ್ಯರ ಸಲಹೆಯನ್ನು ತೆಗೆದುಕೊಳ್ಳುವುದು ಉತ್ತಮ.

ಇದನ್ನೂ ಓದಿ:

ಬೆಳಗಿನ ವಾಕಿಂಗ್​ ವೇಳೆ ಈ ತಪ್ಪುಗಳನ್ನು ಮಾಡಿದ್ರೆ ಉಪಯೋಗಕ್ಕಿಂತ ಅಪಾಯವೇ ಹೆಚ್ಚು! - AVOID MISTAKES

ನೀವು ಅಧಿಕ ಯೂರಿಕ್ ಆ್ಯಸಿಡ್ ಸಮಸ್ಯೆಯಿಂದ ಬಳಲುತ್ತಿದ್ದೀರಾ? ಈ ಆಹಾರಗಳನ್ನು ತ್ಯಜಿಸಿದರೆ ತೊಂದರೆ ದೂರವಾಗುತ್ತೆ! - Uric Acid Avoid Food List

ETV Bharat Logo

Copyright © 2024 Ushodaya Enterprises Pvt. Ltd., All Rights Reserved.