ETV Bharat / health

ಉಪವಾಸ ಮಾಡುವುದರಿಂದ ಇದೆ ಭಾರಿ ಪ್ರಯೋಜನ; ಕ್ಯಾನ್ಸರ್​​ ರೋಗಿಗಳಲ್ಲಿ ಉತ್ತಮ ಪ್ರತಿ ರಕ್ಷಣೆಗೆ ಸಹಾಯ - Fasting has a myriad of benefits - FASTING HAS A MYRIAD OF BENEFITS

ಕ್ಯಾನ್ಸರ್​ ರೋಗಿಗಳಲ್ಲಿ ಉಪವಾಸ ಯಾವ ರೀತಿಯ ಪ್ರಯೋಜನ ಬೀರಲಿದೆ ಎಂದು ಅಧ್ಯಯನವೊಂದು ಮಹತ್ವದ ಅಂಶಗಳನ್ನು ಬಹಿರಂಗ ಪಡಿಸಿದೆ.

Fasting has a myriad of benefits for cancer fighting ability
ಸಾಂದರ್ಭಿಕ ಚಿತ್ರ ((ಸಂಗ್ರಹ ಚಿತ್ರ))
author img

By IANS

Published : Jun 17, 2024, 10:48 AM IST

ನವದೆಹಲಿ: ಡಯಟ್​ ಸೇರಿದಂತೆ ಮತ್ತಿತ್ತರ ಕಾರಣಗಳಿಂದ ಮಾಡುವ ಉಪವಾಸವೂ ಅನೇಕ ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ಅದರಲ್ಲೂ ಕ್ಯಾನ್ಸರ್ ರೋಗಿಗಳಲ್ಲಿ ಇದು ಇನ್ನೂ ಹೆಚ್ಚಿನ ಸಹಾಯ ಮಾಡಲಿದೆ. ಉಪವಾಸವೂ ದೇಹದ ಚಯಾಪಚಯ ಕ್ರಿಯೆಗಳನ್ನು ವೃದ್ಧಿಸಿ, ನೈಸರ್ಗಿಕ ಕೊಲೆಗಾರ ಕೋಶಕ್ಕೆ ಸಹಾಯ ಮಾಡುತ್ತದೆ. ಇದರಿಂದ ಕ್ಯಾನ್ಸರ್​ ಕಾರಕ ಗೆಡ್ಡೆಗಳಲ್ಲಿ ಮತ್ತು ಸುತ್ತಲಿನ ಕಠಿಣ ವಾತಾವರಣದಲ್ಲಿ ಉತ್ತಮ ಕೋಶಗಳು ಬದುಕಲು ಸಹಾಯ ಮಾಡುತ್ತದೆ. ಕ್ಯಾನ್ಸರ್​ ಹೋರಾಟದ ಸಾಮರ್ಥ್ಯವನ್ನು ಸುಧಾರಿಸುವಲ್ಲಿ ಕೂಡ ಉಪವಾಸವು ಪ್ರಯೋಜನವನ್ನುಂಟು ಮಾಡುತ್ತದೆ ಎಂದು ಅಧ್ಯಯನ ತಿಳಿಸಿದೆ.

ಕ್ಯಾನ್ಸರ್​ ರೋಗಿಗಳಲ್ಲಿ ಉಪವಾಸ ಯಾವ ರೀತಿಯ ಪ್ರಯೋಜನ ಬೀರಲಿದೆ ಎಂದು ನ್ಯೂಯಾರ್ಕ್‌ನ ಮೆಮೋರಿಯಲ್ ಸ್ಲೋನ್ ಕೆಟರಿಂಗ್ ಕ್ಯಾನ್ಸರ್ ಸೆಂಟರ್ ಇಲಿಗಳ ಮೇಲೆ ಅಧ್ಯಯನ ನಡೆಸಿದೆ. ಈ ವೇಳೆ ಉಪವಾಸವು ದೇಹವನ್ನು ಕ್ಯಾನ್ಸರ್ ವಿರುದ್ಧ ರಕ್ಷಿಸಲು ಸಹಾಯ ಮಾಡುತ್ತದೆ.

ಕ್ಯಾನ್ಸರ್​ ಟ್ಯೂಮರ್​ಗಳು ಹಸಿದಿರುತ್ತವೆ. ಅವು ಆಹಾರಗಳಿಂದ ಅಗತ್ಯ ಪೋಷಕಾಂಶವನ್ನು ಪಡೆಯುತ್ತವೆ, ಪ್ರತಿರಕ್ಷಣಾ ಕೋಶಗಳಿಗೆ ಹಾನಿಕಾರಕವಾದ ಲಿಪಿಡ್‌ಗಳಿಂದ ಸಮೃದ್ಧವಾಗಿರುವ ಪ್ರತಿಕೂಲ ವಾತಾವರಣವನ್ನು ಸೃಷ್ಟಿಸುತ್ತವೆ ಎಂದು ಅಧ್ಯಯನದ ಹಿರಿಯ ಲೇಖಕ ಇಮ್ಯುನೊಲೊಜಿಸ್ಟ್ ಜೋಸೆಫ್ ಸನ್ ತಿಳಿಸಿದ್ದಾರೆ.

ಉಪವಾಸ ಕಾರ್ಯದಿಂದ ನೈಸರ್ಗಿಕವಾಗಿ ಕೋಶಗಳನ್ನು ಕೊಲ್ಲಬಹುದು. ಈ ಪರಿಸರವನ್ನು ತೊಡೆದು ಹಾಕುವುದರಿಂದ ಅವುಗಳನ್ನು ಮತ್ತೆ ಪುನರುಜ್ಜೀವನಗೊಳಿಸಬಹುದು ಎಂದು ತಿಳಿಸಿದ್ದಾರೆ. ಈ ಅಧ್ಯಯನವನ್ನು ಇಮ್ಯುನಿಟಿ ಜರ್ನಲ್‌ನಲ್ಲಿ ಪ್ರಕಟಿಸಲಾಗಿದೆ

ಅಧ್ಯಯನದ ಭಾಗಿಯಾಗಿದ್ದ ಇಲಿಗೆ ವಾರಕ್ಕೆ ಎರಡು ಬಾರಿ ಒಂದು ದಿನ ಆಹಾರವನ್ನು ನೀಡರಲಿಲ್ಲ. ಈ ಉಪವಾಸ ಬಳಿಕ ಅವುಗಳಿಗೆ ಮುಕ್ತವಾಗಿ ತಿನ್ನಲು ಅವಕಾಶ ನೀಡಲಾಯಿತು. ಈ ವೇಳೆ ಮನುಷ್ಯರಂತೆ ಇಲಿಗಳಲ್ಲಿ ಉಪವಾಸದಿಂದ ಗ್ಲುಕೋಸ್​ ಮಟ್ಟ ಕುಸಿತಗೊಂಡಿತು. ಮುಕ್ತ ಕೊಬ್ಬಿನಾಮ್ಲಗಳಲ್ಲಿ ಏರಿಕೆ ಕಂಡಿತು. ಜೊತೆಗೆ ಕೊಬ್ಬಿನ ಕೋಶಗಳಿಂದ ಬಿಡುಗಡೆಯಾದ ಲಿಪಿಡ್‌ಗಳು ಇತರ ಪೋಷಕಾಂಶಗಳು ಇಲ್ಲದಿದ್ದಾಗ ಪರ್ಯಾಯ ಶಕ್ತಿಯ ಮೂಲವಾಗಿ ಕಾರ್ಯನಿರ್ವಹಿಸುತ್ತವೆ ಎಂದು ಅಧ್ಯಯನದ ಪ್ರಮುಖ ಲೇಖಕರಾಗಿರುವ ರೆಬೆಕಾ ಡೆಲ್ಕಾಂಟೆ ತಿಳಿಸಿದ್ದಾರೆ.

ಈ ಉಪವಾದಲ್ಲಿ ನೈಸರ್ಗಿಕ ಕೊಲೆಗಾರ ಕೋಶವು ಕೊಬ್ಬಿನಾಮ್ಲಗಳನ್ನು ಗ್ಲೂಕೋಸ್‌ಗೆ ಪರ್ಯಾಯ ಇಂಧನ ಮೂಲವಾಗಿ ಬಳಸಿದವು. ಇದು ಕ್ಯಾನ್ಸರ್ ವಿರೋಧಿ ಪ್ರತಿಕ್ರಿಯೆಯನ್ನು ಉತ್ತಮಗೊಳಿಸಿತು

ಈ ಸಂಬಂಧ ಹೆಚ್ಚಿನ ಸಂಶೋಧನೆಯ ಅಗತ್ಯ ಇದ್ದು, ಇಮ್ಯುನೊಥೆರಪಿಯನ್ನು ಹೆಚ್ಚು ಪರಿಣಾಮಕಾರಿಯಾಗಿ ಮಾಡಲು ಪ್ರತಿರಕ್ಷಣಾ ಪ್ರತಿಕ್ರಿಯೆಗಳನ್ನು ಸುಧಾರಿಸಲು ಉಪವಾಸ ಉತ್ತಮ ತಂತ್ರವಾಗಿದೆ ಎಂದು ಫಲಿತಾಂಶಗಳು ತಿಳಿಸಿದೆ. (ಐಎಎನ್​ಎಸ್​)

ಇದನ್ನೂ ಓದಿ: ಇಂಟರ್​ಮಿಟ್ಟೆಂಟ್​​​​​​ ಫಾಸ್ಟಿಂಗ್​ ಡಯಟ್​ನಿಂದ ಮಹಿಳೆಯರಿಗೆ ಹೆಚ್ಚಿನ ಪ್ರಯೋಜನವಿಲ್ಲ; ಕಾರಣ ಇದು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.