ETV Bharat / health

ಮಟ ಮಟ ಮಧ್ಯಾಹ್ನದಲ್ಲಿ ಕೂಲ್​ ಡ್ರಿಂಕ್ಸ್​​​​​​​​​​ ಕುಡಿಯುತ್ತಿದ್ದೀರಾ? ಹೊಟ್ಟೆಗೆ ಏನು ಹೋಗುತ್ತದೆ ಎಂಬುದು ನಿಮಗೆ ಗೊತ್ತಿದೆಯೇ? - Cool Drinks Side Effects

author img

By ETV Bharat Karnataka Team

Published : May 3, 2024, 7:18 AM IST

ಬೇಸಿಗೆ ಈ ದಗೆಯಿಂದ ಪಾರಾಗಲು ಜನ ತಂಪುಪಾನೀಯಗಳ ಮೊರೆ ಹೋಗುವುದು ಕಾಮನ್​ ಬಿಡಿ. ಈ ಕೂಲ್ ಡ್ರಿಂಕ್ಸ್ ತುಂಬಾ ತಂಪು ಎಂಬುದೂ ನಮಗೆ ಗೊತ್ತು. ಆದರೆ ನಾವು ಸೇವನೆ ಮಾಡಿದ ತಂಪು ಪಾನೀಯ ಒಳಗೆ ಹೋದ ನಂತರ ಏನು ಮಾಡುತ್ತದೆ ಎಂಬುದು ಅನೇಕರಿಗೆ ತಿಳಿದಿಲ್ಲ. ಈ ಬಗ್ಗೆ ನಿಮಗೆಷ್ಟು ಗೊತ್ತು. ಈ ಸ್ಟೋರಿಯಲ್ಲಿ ನೋಡೋಣ

Cool Drinks Side Effects In Summer
ಮಟ ಮಟ ಮಧ್ಯಾಹ್ನದಲ್ಲಿ ಕೂಲ್​ ಡ್ರಿಂಕ್ಸ್​​​​​​​​​​ ಕುಡಿಯುತ್ತಿದ್ದೀರಾ? ಹೊಟ್ಟೆಗೆ ಏನು ಹೋಗುತ್ತದೆ ಎಂಬುದು ನಿಮಗೆ ಗೊತ್ತಿದೆಯೇ? (ETV Bharat English)

ಹೈದರಾಬಾದ್​: ಬೇಸಿಗೆಯಲ್ಲಿ ಕೂಲ್ ಡ್ರಿಂಕ್ಸ್ ಮತ್ತು ಸೋಡಾ ಕುಡಿದರೆ ಬಿಸಿಲಿನ ತಾಪದಿಂದ ತಕ್ಷಣ ಪರಿಹಾರ ಸಿಗುತ್ತದೆ. ಆದರೆ, ಇದರಿಂದ ಗಂಭೀರ ಆರೋಗ್ಯ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಎಂದು ತಜ್ಞರು ಎಚ್ಚರಿಸಿದ್ದಾರೆ. ತಜ್ಞರು ಸಾಮಾನ್ಯವಾಗಿ 250 - 300 ಮಿಲಿ ತಂಪು ಪಾನೀಯದಲ್ಲಿ 150-200 ಕ್ಯಾಲೋರಿ ಇರುತ್ತದೆ ಎಂದು ಹೇಳುತ್ತಾರೆ. ವಿಶೇಷವಾಗಿ ತಂಪು ಪಾನೀಯವು ಹೆಚ್ಚಿನ ಫ್ರಕ್ಟೋಸ್ ಅನ್ನು ಹೊಂದಿರುತ್ತದೆ. ಇದು ತೂಕ ಹೆಚ್ಚಾಗಲು ಕಾರಣವಾಗಬಹುದು. ಇದರಿಂದ ಮಧುಮೇಹ, ಬಿಪಿ, ಹೃದ್ರೋಗ ಬರುವ ಸಾಧ್ಯತೆ ಇದೆ ಎಂದು ತಜ್ಞರು ಎಚ್ಚರಿಕೆ ಕೂಡಾ ನೀಡಿದ್ದಾರೆ. ಹಾಗಾಗಿ ಬೇಸಿಗೆಯಲ್ಲಿ ತಂಪು ಪಾನೀಯಗಳನ್ನು ಆದಷ್ಟು ಸೇವಿಸದಿರುವುದು ಒಳ್ಳೆಯದು ಎನ್ನುತ್ತಾರೆ ನುರಿತ ತಜ್ಞರು.

ಜೀರ್ಣಕ್ರಿಯೆ ಮೇಲೆ ಪರಿಣಾಮ: ಕೂಲ್ ಡ್ರಿಂಕ್ಸ್ ನಲ್ಲಿ ಫಾಸ್ಪರಿಕ್ ಎಂಬ ಆ್ಯಸಿಡ್​ ಇರುತ್ತದೆ. ಇದರಿಂದ ಜೀರ್ಣಾಂಗ ವ್ಯವಸ್ಥೆ ಹಾಳಾಗುತ್ತದೆಯಂತೆ. ಸಾಮಾನ್ಯವಾಗಿ, ನಾವು ಸೇವಿಸುವ ಆಹಾರವನ್ನು ಜೀರ್ಣಿಸಿಕೊಳ್ಳಲು ಹೈಡ್ರಾಲಿಕ್ ಆಮ್ಲದ ಘಟಕವನ್ನು ಬಳಸಲಾಗುತ್ತದೆ. ಇದು ನಮ್ಮ ಹೊಟ್ಟೆಯಲ್ಲಿಯೇ ಉತ್ಪತ್ತಿಯಾಗುತ್ತದೆ. ತಂಪು ಪಾನೀಯಗಳಲ್ಲಿನ ರಾಸಾಯನಿಕವು ಈ ಆಮ್ಲದೊಂದಿಗೆ ಬೆರೆಸಿದಾಗ ಅದು ಚಯಾಪಚಯ ಕ್ರಿಯೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಇದರಿಂದ ವಿವಿಧ ಜೀರ್ಣಕ್ರಿಯೆ ಸಮಸ್ಯೆಗಳು ಉಂಟಾಗುತ್ತವೆ ಎಂದು ತಜ್ಞರು ಎಚ್ಚರಿಸಿದ್ದಾರೆ.

ಫ್ಯಾಟಿ ಲಿವರ್ ಸಮಸ್ಯೆ: ತಂಪು ಪಾನೀಯಗಳನ್ನು ಅತಿಯಾಗಿ ಸೇವಿಸುವುದರಿಂದ ಆಲ್ಕೋಹಾಲ್ ರಹಿತ ಫ್ಯಾಟಿ ಲಿವರ್ ಕಾಯಿಲೆ ಬರುವ ಅಪಾಯವಿದೆ. ತಂಪು ಪಾನೀಯಗಳನ್ನು ಹೆಚ್ಚು ಹೆಚ್ಚು ಕುಡಿಯುವುದರಿಂದ ಹೆಚ್ಚುವರಿ ಫ್ರಕ್ಟೋಸ್ ಯಕೃತ್ತನ್ನು ತಲುಪುತ್ತದೆ. ಅದು ಓವರ್ ಲೋಡ್ ಆಗುತ್ತದೆ ಮತ್ತು ದಪ್ಪವಾಗುತ್ತದೆ ಎಂದು ಹೇಳಲಾಗುತ್ತದೆ. ಈ ಕಾರಣದಿಂದಾಗಿ, ಯಕೃತ್ತಿನಲ್ಲಿ ಕೊಬ್ಬಿನ ಶೇಖರಣೆ ಪ್ರಾರಂಭವಾಗುತ್ತದೆ. ಇದರಿಂದ ಯಕೃತ್ ಸಂಬಂಧಿ ಸಮಸ್ಯೆಗಳು ಉದ್ಭವಿಸುತ್ತವೆ ಎಂಬುದು ಆರೋಗ್ಯ ತಜ್ಞರ ಮಾತಾಗಿದೆ.

2020 ರಲ್ಲಿ 'ಹೆಪಾಟಾಲಜಿ' ಜರ್ನಲ್‌ನಲ್ಲಿ ಪ್ರಕಟವಾದ ವರದಿಯ ಪ್ರಕಾರ, ಬೇಸಿಗೆಯಲ್ಲಿ ಸಾಕಷ್ಟು ಕೂಲ್ ಡ್ರಿಂಕ್ಸ್ ಕುಡಿಯುವ ಜನರು ಕೊಬ್ಬಿನ ಯಕೃತ್ತು ಮತ್ತು ಯಕೃತ್ತಿನ ಉರಿಯೂತದ ಅಪಾಯವನ್ನು ಹೊಂದಿರುತ್ತಾರೆ. ಈ ಸಂಶೋಧನೆಯಲ್ಲಿ ಹಾರ್ವರ್ಡ್ ಸ್ಕೂಲ್ ಆಫ್ ಪಬ್ಲಿಕ್ ಹೆಲ್ತ್‌ನ ಪ್ರಮುಖ ಪೌಷ್ಟಿಕತಜ್ಞ ಡಾ. ಜೋಸೆಫ್ ಟಿ. ಕರುಬಳ್ಳಿ ಕೂಡಾ ಭಾಗವಹಿಸಿದ್ದರು. ಹೆಚ್ಚು ಕೂಲ್ ಡ್ರಿಂಕ್ಸ್ ಸೇವಿಸುವವರಿಗೆ ಆಲ್ಕೋಹಾಲ್ ರಹಿತ ಫ್ಯಾಟಿ ಲಿವರ್ ಕಾಯಿಲೆ ಬರುವ ಸಾಧ್ಯತೆ ಹೆಚ್ಚಿದೆ ಎಂದು ಅವರು ತಿಳಿಸಿದ್ದಾರೆ.

ಅಧಿಕ ರಕ್ತದೊತ್ತಡ: ಬೇಸಿಗೆಯಲ್ಲಿ ನಿರ್ಜಲೀಕರಣ ತಪ್ಪಿಸಲು ಅನೇಕ ಜನರು ತಂಪು ಪಾನೀಯಗಳ ಮೊರೆ ಹೋಗುವುದು ಕಾಮನ್​. ಆದರೆ, ಇದರಲ್ಲಿರುವ ಕೆಫೀನ್ ಮತ್ತು ಸಕ್ಕರೆ ಹೆಚ್ಚು ನಿರ್ಜಲೀಕರಣಕ್ಕೆ ಕಾರಣವಾಗುತ್ತದೆ ಎನ್ನುತ್ತಾರೆ ತಜ್ಞರು. ವಿಶೇಷವಾಗಿ ಕೆಫೀನ್ ಅಧಿಕ ರಕ್ತದೊತ್ತಡ ಮತ್ತು ಆಗಾಗ್ಗೆ ಮೂತ್ರ ವಿಸರ್ಜನೆಯಂತಹ ಅಡ್ಡ ಪರಿಣಾಮಗಳನ್ನು ಉಂಟುಮಾಡುತ್ತದೆ.

ಇದಲ್ಲದೇ, ಈ ರಾಸಾಯನಿಕಗಳು ಮೂಳೆಗಳ ದೌರ್ಬಲ್ಯಕ್ಕೆ ಕಾರಣವಾಗುತ್ತವೆ ಎಂಬುದು ತಜ್ಞರ ಅಭಿಮತ ಸಕ್ಕರೆ ಅಂಶ ಇರುವುದರಿಂದ ಹಲ್ಲಿನ ಸಮಸ್ಯೆಗಳು ಉಂಟಾಗುತ್ತವೆ, ಇದಲ್ಲದೇ, ಹಲ್ಲುಗಳು ಬೀಳುವ ಅಪಾಯವೂ ಇದೆ. ತಂಪು ಪಾನೀಯಗಳಲ್ಲಿ ಫ್ರಕ್ಟೋಸ್ ಹೆಚ್ಚಿರುವುದರಿಂದ ಮೆದುಳಿನಲ್ಲಿ ಹಿಪೊಕ್ಯಾಂಪಸ್ ಪ್ರಮಾಣ ಕಡಿಮೆಯಾಗುತ್ತದೆ. ಪರಿಣಾಮವಾಗಿ.. ವಿಸ್ಮೃತಿ ಬರುವ ಸಾಧ್ಯತೆಗಳೂ ಇವೆ ಎಂದು ಹೇಳಲಾಗುತ್ತಿದೆ. ಅಂತಿಮವಾಗಿ ಈ ಪಾನೀಯಗಳಿಂದ ಅನಾರೋಗ್ಯಕರ ತೂಕ ಹೆಚ್ಚಾಗುವುದನ್ನು ಹೊರತುಪಡಿಸಿ ಯಾವುದೇ ಪ್ರಯೋಜನವಿಲ್ಲ ಎಂಬುದು ತಜ್ಞರ ಸ್ಪಷ್ಟ ನುಡಿಗಳಾಗಿವೆ. ಅದಕ್ಕಾಗಿಯೇ ಬೇಸಿಗೆಯಲ್ಲಿ ಆರೋಗ್ಯವನ್ನು ಹಾಳು ಮಾಡುವ ಈ ಪಾನೀಯಗಳ ಬದಲಿಗೆ ಕಲ್ಲಂಗಡಿ, ಇತರ ಹಣ್ಣಿನ ರಸವನ್ನು ಕುಡಿಯುವುದು ಉತ್ತಮ.

ನಿಮ್ಮ ಗಮನಕ್ಕೆ : ಇಲ್ಲಿ ನಿಮಗೆ ನೀಡಿರುವ ಎಲ್ಲಾ ಆರೋಗ್ಯ ಮಾಹಿತಿ ಮತ್ತು ಸಲಹೆಗಳು ನಿಮ್ಮ ತಿಳಿವಳಿಕೆಗಾಗಿ ಮಾತ್ರ. ವೈಜ್ಞಾನಿಕ ಸಂಶೋಧನೆ, ಅಧ್ಯಯನಗಳು, ವೈದ್ಯಕೀಯ ಮತ್ತು ಆರೋಗ್ಯ ವೃತ್ತಿಪರರ ಸಲಹೆಗಳನ್ನು ಆಧರಿಸಿ ನಾವು ಈ ಮಾಹಿತಿಯನ್ನು ಒದಗಿಸುತ್ತಿದ್ದೇವೆ. ಇವುಗಳನ್ನು ಅನುಸರಿಸುವ ಮೊದಲು ಕೌಟುಂಬಿಕ ವೈದ್ಯರ ಸಲಹೆಯನ್ನು ತೆಗೆದುಕೊಳ್ಳುವುದು ಉತ್ತಮ.

ಇದನ್ನು ಓದಿ: ಶಾಲೆಗಳಲ್ಲಿ ಮಕ್ಕಳನ್ನು ಕಾಡುವ ನಿದ್ರಾ ಕೊರತೆ ಸಮಸ್ಯೆ; ಇದಕ್ಕೆ ಕಾರಣಗಳೇನು? - Sleep loss teenagers in school

ETV Bharat Logo

Copyright © 2024 Ushodaya Enterprises Pvt. Ltd., All Rights Reserved.