ETV Bharat / health

ಹೃದಯ ಬಡಿತದ ಬದಲಾವಣೆಯನ್ನು ಅರ್ಧ ಗಂಟೆ ಮುಂಚಿತವಾಗೇ ಅಂದಾಜು ಮಾಡುತ್ತೆ AI ವಾರ್ನ್​ - WARN PREDICTS IRREGULAR HEARTBEAT - WARN PREDICTS IRREGULAR HEARTBEAT

ಈ ಎಐ ಮಾದರಿ ಸಾಮಾನ್ಯ ಹೃದಯ ಬಡಿತದಿಂದ ಹೃತ್ಕರ್ಣ ಕಂಪನದ ರೂಪಾಂತರವನ್ನು ಶೇ 80ರಷ್ಟು ನಿಖರತೆಯೊಂದಿಗೆ ಪತ್ತೆ ಮಾಡುತ್ತದೆ.

ai-based-model-that-can-predict-irregular-heartbeat

author img

By ETV Bharat Karnataka Team

Published : Apr 24, 2024, 1:30 PM IST

ದೆಹಲಿ: ಬದಲಾಗುವ ಹೃದಯ ಬಡಿತವನ್ನು ಅಂದಾಜು ಮಾಡುವ ಉದ್ದೇಶದಿಂದ ವಿಜ್ಞಾನಿಗಳು ಕೃತಕ ಬುದ್ಧಿಮತ್ತೆಯನ್ನು (ಎಐ) ಅಭಿವೃದ್ಧಿ ಪಡಿಸಿದ್ದಾರೆ. ಇದು ವ್ಯಕ್ತಿಯ ಹೃದಯ ಬಡಿತದ ದರದಲ್ಲಿ ಉಂಟಾಗುವ ವ್ಯತ್ಯಾಸವನ್ನು ಅರ್ಧ ಗಂಟೆ ಮುಂಚಿತವಾಗಿಯೇ ಪತ್ತೆ ಮಾಡುವುದರಿಂದ ಆಗಬಹುದಾದ ಅನಾಹುತ ತಡೆಯಲು ಸಾಧ್ಯವಾಗುತ್ತದೆ. ಈ ಎಐ ಮಾದರಿ ಸಾಮಾನ್ಯ ಹೃದಯ ಬಡಿತದಿಂದ ಹೃತ್ಕರ್ಣ ಕಂಪನದ ರೂಪಾಂತರವನ್ನು ಶೇ 80ರಷ್ಟು ನಿಖರತೆಯೊಂದಿಗೆ ಪತ್ತೆ ಮಾಡುತ್ತದೆ ಎಂದು ಸಂಶೋಧಕರು ತಿಳಿಸಿದ್ದಾರೆ.

ಹೃತ್ಕರ್ಣದ ಕಂಪನಗಳು ಸಾಮಾನ್ಯವಾಗಿ ಹೃದಯ ಬಡಿತವಾಗಿದೆ. ಹೃದಯದಲ್ಲಿನ ಮೇಲ್ಭಾಗದ ಕವಾಟದ ಬಡಿತದಲ್ಲಿನ ಹೃದಯದ ಕಂಪನವಾಗಿದೆ. ಕೆಳಗಿನ ಕವಾಟಗಳಿಲ್ಲದೇ ಇದರ ಲಯವು ಕೆಲಸ ಮಾಡುವುದಿಲ್ಲ. ಹೃತ್ಕರ್ಣದ ಕಂಪನವನ್ನು ಸಮೀಪಿಸಿದಾಗ ಅದು ಒಂದು ನಿರ್ದಿಷ್ಟ ಮಿತಿಯನ್ನು ದಾಟುವವರೆಗೆ ಈ ಬಡಿತದ ಸಂಭವನೀಯತೆಯು ಹೆಚ್ಚಾಗುತ್ತದೆ. ಇಂತಹ ಸಂದರ್ಭದಲ್ಲಿ ಈ ಎಐ ಮಾದರಿಗಳು ಉಂಟಾಗಲಿರುವ ಪರಿಸ್ಥಿತಿ ಕುರಿತು ಅರ್ಧ ಗಂಟೆ ಮುಂಚೆಯೇ ಎಚ್ಚರಿಕೆ ನೀಡುತ್ತದೆ. ಈ ಕಾರಣದಿಂದ ರೋಗಿಗಳು ಮುನ್ನೆಚ್ಚರಿಕೆ ಕ್ರಮವನ್ನು ತೆಗೆದುಕೊಳ್ಳುವ ಮೂಲಕ ಹೃದಯ ಬಡಿತ ಸಾಮಾನ್ಯ ಮಾಡಬಹುದು. ಆಗುವ ಅನಾಹುತ ತಪ್ಪಿಸಬಹುದಾಗಿದೆ.

ಇದಕ್ಕಾಗಿ ತಂಡವೂ ನುರಿತ ಆಳ ಕಲಿಕಾ ಮಾದರಿಗಳಿಂದ ದತ್ತಾಂಶವನ್ನು ಪಡೆದಿದ್ದಾರೆ. ಈ ಸಾಧನವನ್ನು ರೋಗಿಗಳು ಪ್ರತಿ ನಿತ್ಯ ಕೂಡ ಬಳಕೆ ಮಾಡಬಹುದು. ಈ ಧರಿಸಬುದಾದ ಸಾಧನವು ರಿಯಲ್​ ಟೈಮ್​ ನಿರ್ವಹಣೆ ಮತ್ತು ಮುನ್ನೆಚ್ಚರಿಕೆಯನ್ನು ನೀಡುತ್ತದೆ.

ಈ ಎಐ ವ್ಯವಸ್ಥೆ ಅಭಿವೃದ್ಧಿಗಾಗಿ ವಿಜ್ಞಾನಿಗಳ ತಂಡ ಚೀನಾದ ವುಹಾನ್​ನ ತೊಂಗ್ಜಿ ಆಸ್ಪತ್ರೆಯ 350 ರೋಗಿಗಳ ದತ್ತಾಂಶವನ್ನು ಪಡೆದಿದ್ದಾರೆ. ಇದಕ್ಕೆ ವಾರ್ನ್ (​WARN) ಎಂದು ಹೆಸರಿಡಲಾಗಿದೆ. ಆಳದ ಕಲಿಕೆ ಆಧಾರದ ಮೇಲೆ ಎಐ ಮಾದರಿ ಸಿದ್ಧಪಡಿಸಿದ್ದಾರೆ. ಇದರ ವಿಶೇಷತೆ ಎಂದರೆ ಹಳೆಯ ದತ್ತಾಂಶದಲ್ಲಿನ ನಿರ್ದಿಷ್ಟ ಪ್ರವೃತ್ತಿ ಆಧಾರದ ಮೇಲೆ ಇದು ಅಂದಾಜು ಮಾಡುತ್ತದೆ. ಇದನ್ನು ಸ್ಮಾರ್ಟ್​ಫೋನ್​ನಲ್ಲಿ ಕೂಡ ಅಳವಡಿಸಬಹುದು.

ಲಕ್ಸಂಬರ್ಗ್​​ ಯುನಿವರ್ಸಿಟಿ ಸಂಶೋಧಕರು ಒಳಗೊಂಡ ತಂಡ ಈ ಎಐ ಮಾದರಿ ಅಭಿವೃದ್ಧಿಪಡಿಸಿದ್ದು, ಇದು ಮುಂಚಿನ ಮುನ್ನೆಚ್ಚರಿಕೆ ನೀಡುವುದರಿಂದ ರೋಗಿಗಳ ತಮ್ಮ ಹೃದಯ ಆರೋಗ್ಯ ಬಗ್ಗೆ ಕಾಳಜಿ ವಹಿಸಬಹುದಾಗಿದೆ. ಈ ಅಧ್ಯಯನವನ್ನು ಜರ್ನಲ್​ ಪ್ಯಾಟರ್ನ್ಸ್​​ನಲ್ಲಿ ಪ್ರಕಟಿಸಲಾಗಿದೆ. ಕಡಿಮೆ ವೆಚ್ಚದಲ್ಲಿ ಧರಿಸಬಹುದಾದ ಸೂಕ್ತ ಹೃದಯದ ಮುನ್ನೆಚ್ಚರಿಕೆ ಸಾಧನ ಇದಾಗಿದೆ ಎಂದು ಸಂಶೋಧಕರು ತಿಳಿಸಿದ್ದಾರೆ.

ಇದನ್ನೂ ಓದಿ: ಹಿಮೋಫಿಲಿಯಾ ನಿಮಗೆಷ್ಟು ಗೊತ್ತು: ಈ ರೋಗ ಬರುವುದು ಯಾಕೆ?, ತಡೆಗಟ್ಟುವುದು ಹೇಗೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.