ವಿಷ್ಣು ಮಂಚು ಅವರ ಕನಸಿನ ಯೋಜನೆ 'ಕಣ್ಣಪ್ಪ' ಚಿತ್ರದ ಕೆಲಸಗಳು ಸಾಗಿವೆ. ಕಾಲಕಾಲಕ್ಕೆ ಈ ಬಹುನಿರೀಕ್ಷಿತ ಚಿತ್ರದ ಅಪ್ಡೇಟ್ಸ್ ಅನ್ನೂ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುವ ಮೂಲಕ ಪ್ರೇಕ್ಷಕರ ಕುತೂಹಲ ಹೆಚ್ಚಿಸುತ್ತಿದ್ದಾರೆ. ಇತ್ತೀಚೆಗಷ್ಟೇ ರೆಬೆಲ್ ಸ್ಟಾರ್ ಪ್ರಭಾಸ್ ಶೂಟಿಂಗ್ಗೆ ಸೇರಿಕೊಂಡಿದ್ದಾರೆ ಎಂದು ವಿಷ್ಣು ಮಂಚು ಟ್ವೀಟ್ ಮಾಡಿದ್ದರು. ಪ್ಯಾನ್ ಇಂಡಿಯಾ ಸ್ಟಾರ್ ಪ್ರಭಾಸ್ ಆಗಮನದೊಂದಿಗೆ 'ಕಣ್ಣಪ್ಪ' ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡ್ ಆಯಿತು. ಇದೀಗ ಪ್ರಭಾಸ್ ಪಾತ್ರದ ಬಗ್ಗೆ ಕೊಂಚ ಮಾಹಿತಿ ಹಂಚಿಕೊಂಡಿದ್ದಾರೆ.
ಮೇ 9ರಂದು 'ನನ್ನ ಸಹೋದರ ಪ್ರಭಾಸ್ ಚಿತ್ರೀಕರಣಕ್ಕೆ ಸೇರಿಕೊಂಡರು' ಎಂದು ಪೋಸ್ಟರ್ನೊಂದಿಗೆ ವಿಷ್ಣು ಮಂಚು ತಮ್ಮ ಎಕ್ಸ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡರು. ಈ ಬಗ್ಗೆ ಮಾತನಾಡಿರುವ ವಿಷ್ಣು ಮಂಚು, ಕಣ್ಣಪ್ಪ ಹಲವು ಸೂಪರ್ ಸ್ಟಾರ್‌ಗಳು ನಟಿಸುತ್ತಿರುವ ಅದ್ಭುತ ಕಥಾಹಂದರ ಹೊಂದಿರುವ ಸಿನಿಮಾ. ಇದರಲ್ಲಿನ ಪಾತ್ರಗಳಿಗೆ ಟಾಪ್ ಸ್ಟಾರ್‌ಗಳನ್ನೇ ಹಾಕಲು ಪ್ಲ್ಯಾನ್ ಮಾಡಿಕೊಂಡಿದ್ದೇವೆ. ಪ್ಯಾನ್ ಇಂಡಿಯಾ ಸ್ಟಾರ್ ಪ್ರಭಾಸ್ ಅವರ ಬಳಿ ಈ ಚಿತ್ರದಲ್ಲಿ ನಟಿಸುವಂತೆ ತಿಳಿಸಿ ಕಥೆ ಹೇಳಿದ್ದೆವು. ನಂತರ, ನಾವು ಅವರಲ್ಲಿ ಒಂದು ಪಾತ್ರ ನಿರ್ವಹಿಸಲು ಕೇಳಿದಾಗ, ಪ್ರಭಾಸ್ ಮತ್ತೊಂದು ಪಾತ್ರಕ್ಕೆ ಗ್ರೀನ್ ಸಿಗ್ನಲ್ ಕೊಟ್ಟರು. ಪ್ರಭಾಸ್ ಹೇಳಿದ್ದಕ್ಕೆ ನಾನು ಕೂಡ ಓಕೆ ಎಂದೆ. ಅವರ ಶೈಲಿಗೆ ತಕ್ಕಂತೆ ಪಾತ್ರವನ್ನೂ ಅಭಿವೃದ್ಧಿಪಡಿಸಿದ್ದೇವೆ ಎಂದು ಮಾಹಿತಿ ಹಂಚಿಕೊಂಡರು.
ನಾವು ಹೇಳಿದ ಪಾತ್ರಕ್ಕಿಂತ ಅವರು ಇಷ್ಟಪಡುವ ಪಾತ್ರಕ್ಕೆ ಜೀವ ತುಂಬೋ ಮೂಲಕ ಅತ್ಯುತ್ತಮವಾದದ್ದನ್ನೇ ನೀಡುತ್ತಾರೆ ಅನ್ನೋದು ನನ್ನ ಅಭಿಪ್ರಾಯ. ಆದರೆ, ಈ ಸಿನಿಮಾದಲ್ಲಿ ಯಾರು ಯಾವ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಬಗ್ಗೆ ಒಂದೊಂದಾಗೇ ಅಧಿಕೃತ ಅಪ್ಡೇಟ್ ನೀಡುತ್ತೇವೆ. ನಾವು ಪಾತ್ರಗಳನ್ನು ಪರಿಚಯಿಸುವವರೆಗೆ ಯಾವುದೇ ತೀರ್ಮಾನಕ್ಕೆ ಬರಬೇಡಿ. ವದಂತಿಗಳನ್ನು ನಂಬಬೇಡಿ. ಬೆಳ್ಳಿತೆರೆಯಲ್ಲಿ ಸಿನಿಮಾ ನೋಡಲು ನೀವು ಎಷ್ಟು ಕಾತುರರಾಗಿದ್ದೀರೋ ಅದೇ ರೀತಿಯಾಗಿ ಚಿತ್ರವನ್ನು ನಿಮ್ಮ ಮುಂದಿಡಲು ನಾವೂ ಉತ್ಸುಕರಾಗಿದ್ದೇವೆ. ಮೇ 12ರ ಸೋಮವಾರದಂದು (ಇಂದು) ನಿಮಗೆ ಸೂಪರ್ ಅಪ್ಡೇಟ್ ಸಿಗಲಿದೆ ಎಂದು ಬಹಿರಂಗಪಡಿಸಿದ್ದಾರೆ.
ಇದನ್ನೂ ಓದಿ: ಸಾನ್ಯಾ ಅಯ್ಯರ್, ಇಂದ್ರಜಿತ್ ಲಂಕೇಶ್ ಪುತ್ರನ 'ಟೈಮ್ ಬರುತ್ತೆ' ಹಾಡಿಗೆ ಫ್ಯಾನ್ಸ್ ಫಿದಾ - Gowri movie
ಮುಖೇಶ್ ಕುಮಾರ್ ಸಿಂಗ್ ನಿರ್ದೇಶನದ ಈ ಚಿತ್ರದಲ್ಲಿ ಮಂಚು ವಿಷ್ಣು ಕಣ್ಣಪ್ಪನ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಮೋಹನ್ ಬಾಬು, ಅಕ್ಷಯ್ ಕುಮಾರ್, ಮೋಹನ್ ಲಾಲ್, ಶಿವರಾಜ್ಕುಮಾರ್, ನಯನತಾರಾ, ಮಧುಬಾಲಾ ಸೇರಿದಂತೆ ಗಣ್ಯರು ಈ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಚಿತ್ರವನ್ನು ಮಂಚು ವಿಷ್ಣು ಅವರ ಸ್ವಂತ ಬ್ಯಾನರ್ ಆವಾ ಎಂಟರ್‌ಟೈನ್‌ಮೆಂಟ್ ಜೊತೆಗೆ 24 ಫ್ರೇಮ್ಸ್ ಫ್ಯಾಕ್ಟರಿ ನಿರ್ಮಿಸುತ್ತಿದೆ. ಸ್ಟೀಫನ್ ದೇವಸಿ ಮತ್ತು ಮಣಿ ಶರ್ಮಾ ಚಿತ್ರಕ್ಕೆ ಸಂಗೀತ ನೀಡುತ್ತಿದ್ದಾರೆ.
ಇದನ್ನೂ ಓದಿ: ಮಿತ್ರ ಜನ್ಮದಿನ: ಕನ್ನಡಿಗರ ಮನಸ್ಸಿಗೆ ಹತ್ತಿರವಾದ ರಾಗ ಚಿತ್ರ ನಟ, ಶುಭಾಶಯಗಳ ಮಹಾಪೂರ - Mithra Birthday