ETV Bharat / entertainment

'ಪ್ರೇಮ್​ ಪರ್ಫೆಕ್ಷನಿಸ್ಟ್': ಕನ್ನಡ ನಿರ್ದೇಶಕನ ಕೊಂಡಾಡಿದ ಶಿಲ್ಪಾ ಶೆಟ್ಟಿ; ಸ್ಪೆಷಲ್​​ ವಿಡಿಯೋ ರಿವೀಲ್ - Shilpa Shetty

author img

By ETV Bharat Karnataka Team

Published : May 31, 2024, 2:17 PM IST

ಬಹುನಿರೀಕ್ಷಿತ 'ಕೆ.ಡಿ' ಚಿತ್ರದ ಶಿಲ್ಪಾ ಶೆಟ್ಟಿ ಅವರ ಪಾತ್ರದ ಚಿತ್ರೀಕರಣ ಪೂರ್ಣಗೊಂಡಿದ್ದು, ಸ್ಪೆಷಲ್​​ ವಿಡಿಯೋ ಅನಾವರಣಗೊಂಡಿದೆ.

Shilpa Shetty KD shooting completed
'ಕೆ.ಡಿ' ಚಿತ್ರದ ಶಿಲ್ಪಾ ಶೆಟ್ಟಿ ಚಿತ್ರೀಕರಣ ಪೂರ್ಣ (ETV Bharat)

'ಕೆ.ಡಿ' (KD). ಇದು ಶೀರ್ಷಿಕೆಯಿಂದಲೇ ಸೌತ್ ಸಿನಿಮಾ ಇಂಡಸ್ಟ್ರಿಯಲ್ಲಿ ಸಖತ್​​ ಟಾಕ್ ಆಗುತ್ತಿರುವ ಚಿತ್ರ. ಭಾರತೀಯ ಚಿತ್ರರಂಗದ 2024ರ ಬಹುನಿರೀಕ್ಷಿತ ಚಿತ್ರವೂ ಹೌದು. ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ರೆಟ್ರೋ ಸ್ಟೈಲ್​​ನಲ್ಲಿ ಕಾಣಿಸಿಕೊಳ್ಳುತ್ತಿದ್ದು, ಜೋಗಿ ಪ್ರೇಮ್ ಆ್ಯಕ್ಷನ್​​ ಕಟ್​​ ಹೇಳುತ್ತಿದ್ದಾರೆ. ಚಿತ್ರದಲ್ಲಿ ಆಕರ್ಷಕ ಪಾತ್ರ ನಿರ್ವಹಿಸಿರುವ ಬಾಲಿವುಡ್​ ಬೆಡಗಿ ಶಿಲ್ಪಾ ಶೆಟ್ಟಿ, ತಮ್ಮ ಪಾತ್ರದ ಚಿತ್ರೀಕರಣವನ್ನು ಪೂರ್ಣಗೊಳಿಸಿದ್ದಾರೆ. ಚಿತ್ರತಂಡ ವಿಶೇಷ ವಿಡಿಯೋ ಅನಾವರಣಗೊಳಿಸುವ ಮೂಲಕ ಸಿನಿಪ್ರಿಯರ ಕುತೂಹಲ ಹೆಚ್ಚಿಸಿದೆ.

ಫಸ್ಟ್ ಲುಕ್ ರಿಲೀಸ್ ಆದಾಗಿನಿಂದಲೂ ಕನ್ನಡ ಚಿತ್ರರಂಗದಲ್ಲಿ ಬೇಜಾನ್‌ ಸೌಂಡ್ ಮಾಡುತ್ತಿರುವ ಕೆ.ಡಿ ಚಿತ್ರ ಅಂಡರ್ ವರ್ಲ್ಡ್ ಸ್ಟೋರಿ ಆಗಿದ್ದು, ಶೀಘ್ರ ಶೂಟಿಂಗ್ ಪೂರ್ಣಗೊಳಿಸಲು ಮುಂದಾಗಿದೆ. ಚಿತ್ರದಲ್ಲಿ ಬಾಲಿವುಡ್ ನಟ ಸಂಜಯ್ ದತ್, ಬಾಲಿವುಡ್ ಬ್ಯೂಟಿ ಶಿಲ್ಪಾ ಶೆಟ್ಟಿ, ರವಿಚಂದ್ರನ್, ರೀಷ್ಮಾ ನಾಣಯ್ಯ, ರಮೇಶ್‌ ಅರವಿಂದ್ ಹೀಗೆ ದೊಡ್ಡ ಸ್ಟಾರ್ ಕಾಸ್ಟ್ ಇದ್ದು, ಹೈಪ್ ಕ್ರಿಯೇಟ್ ಆಗಿದೆ.

ಶಿಲ್ಪಾ, ಪ್ರೇಮ್ ನಿರ್ದೇಶನ ಶೈಲಿಗೆ ಫಿದಾ ಆಗಿದ್ದಾರೆ. ಈ ಚಿತ್ರದಲ್ಲಿ ಶೆಟ್ಟಿ ರೆಟ್ರೋ‌ ಅವತಾರದಲ್ಲಿ ಕಾಣಿಸಿಕೊಂಡಿದ್ದು, ಸಂಜಯ್ ದತ್ ಜೋಡಿ ಎನ್ನಲಾಗುತ್ತಿದೆ. ಮಂಗಳೂರು ಚೆಲುವೆ ತನ್ನ ಪಾತ್ರದ ಶೂಟಿಂಗ್ ಮುಗಿಸಿದ್ದಾರೆ. ಚಿತ್ರೀಕರಣದ ಕೊನೆ ದಿನದ ಫನ್ನಿ ಕ್ಷಣಗಳನ್ನು ಚಿತ್ರತಂಡ ಅನಾವರಣಗೊಳಿಸಿರುವ ವಿಡಿಯೋ ಒಳಗೊಂಡಿದೆ. ಶಿಲ್ಪಾ ತಮ್ಮ ಉದ್ದ ಕೇಶರಾಶಿಯಿಂದ ಪ್ರೇಮ್ ಕುತ್ತಿಗೆಯನ್ನು ಬಿಗಿಹಿಡಿಯುವ ‌ಮೂಲಕ ತಮಾಷೆ ಮಾಡಿದ್ದಾರೆ. ಬಳಿಕ ಪ್ರೇಮ್ ಡೈರೆಕ್ಷನ್ ಬಗ್ಗೆ ಮಾತನಾಡಿ, ಪರ್ಫೆಕ್ಷನಿಸ್ಟ್ ಎಂದು ಹೇಳುವ ಮೂಲಕ ಶೂಟಿಂಗ್ ಅನುಭವಗಳನ್ನು ಹಂಚಿಕೊಂಡಿದ್ದಾರೆ.

ಇತ್ತೀಚೆಗೆ ಈ ಚಿತ್ರದ ಆಡಿಯೋ ಹಕ್ಕು ದಾಖಲೆಯ ಮೊತ್ತಕ್ಕೆ ಮಾರಾಟ ಆಗಿದೆ. ಮೂಸಿಕ್​ ರೈಟ್ಸ್​ ಅನ್ನು ಆನಂದ್‍ ಆಡಿಯೋಗೆ 17.70 ಕೋಟಿ ರೂ.ಗಳಿಗೆ ಮಾರಾಟ ಮಾಡಿದ್ದಾರೆ. ಈ ವಿಷಯವನ್ನು ಸ್ವತಃ ಪ್ರೇಮ್‍ ಹೇಳಿಕೊಂಡಿದ್ದಾರೆ.

ಇದನ್ನೂ ಓದಿ: ವೇದಿಕೆಯಲ್ಲಿ ನಟಿಯನ್ನು ತಳ್ಳಿದ ನಂದಮೂರಿ ಬಾಲಕೃಷ್ಣ: ಅಂಜಲಿ ಪ್ರತಿಕ್ರಿಯೆ ಇದು - Anjali

ಚಿತ್ರದ ವಿಶೇಷವೆಂದರೆ, ಸಂಗೀತಕ್ಕಾಗಿ ಸಂಗೀತ ನಿರ್ದೇಶಕ ಅರ್ಜುನ್‍ ಜನ್ಯ 256 ಪೀಸ್‍ ಆರ್ಕೆಸ್ಟ್ರಾ ಬಳಸಿದ್ದಾರೆ. ಇತ್ತೀಚೆಗಷ್ಟೇ, ಉಪೇಂದ್ರ ಅಭಿನಯದ ಮತ್ತು ನಿರ್ದೇಶನದ 'ಯು/ಐ' ಚಿತ್ರಕ್ಕಾಗಿ 90 ಪೀಸ್‍ ಆರ್ಕೆಸ್ಟ್ರಾ ಬಳಸಿದ್ದಾಗಿ ಸುದ್ದಿಯಾಗಿತ್ತು. ಇದಕ್ಕೂ ಮುನ್ನ ಭಾರತದಲ್ಲಿ ಶಾರುಖ್‍ ಖಾನ್‍ ಅಭಿನಯದ 'ಜವಾನ್‍' ಚಿತ್ರಕ್ಕೆ 180 ಪೀಸ್ ಆರ್ಕೆಸ್ಟ್ರಾ ಬಳಸಿದ್ದು ದಾಖಲೆಯಾಗಿತ್ತು. ಈಗ ಆ ದಾಖಲೆಯನ್ನು ಕೆ ಡಿ ಚಿತ್ರ ಮುರಿದಿದೆ.

ಇದನ್ನೂ ಓದಿ: ಅಂಬಾನಿ ಪುತ್ರನ ಮದುವೆ ಡೇಟ್​ ಫಿಕ್ಸ್​: ಮುಂಬೈನಲ್ಲಿ ನಡೆಯಲಿದೆ ಅದ್ಧೂರಿ ಸಮಾರಂಭ - Anant Radhika Wedding Date

ಕೆ.ಡಿ ಚಿತ್ರಕ್ಕೆ ಪ್ರೇಮ್‍ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶಿಸಿದ್ದಾರೆ. ಕೆ.ವಿ.ಎನ್‍ ಪ್ರೊಡಕ್ಷನ್ಸ್ ಬ್ಯಾನರ್​ನಡಿ ಈ ಚಿತ್ರವನ್ನು ನಿರ್ಮಿಸಲಾಗಿದೆ. ಅರ್ಜುನ್‍ ಜನ್ಯ ಸಂಗೀತ ಮತ್ತು ವಿಲಿಯಂ ಡೇವಿಡ್‍ ಛಾಯಾಗ್ರಹಣ ಈ ಚಿತ್ರಕ್ಕಿದೆ. ಇನ್ನೂ, ಚಿತ್ರದ ಮೂರು ಹಾಡುಗಳ ಚಿತ್ರೀಕರಣ ಬಾಕಿ ಇದ್ದು, ಮುಂದಿನ ತಿಂಗಳು ಚಿತ್ರೀಕರಣ ಪೂರ್ಣಗೊಳ್ಳಲಿದೆ. ಸದ್ಯ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಆರಂಭವಾಗಿದ್ದು, ಡಿಸೆಂಬರ್​​​ನಲ್ಲಿ ಕೆ.ಡಿ ಪ್ರೇಕ್ಷಕರೆದುರು ಬರಲಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.