ETV Bharat / entertainment

ಸೆಲೆಬ್ರಿಟಿ ಬಾಣಸಿಗ ಕುನಾಲ್ ಕಪೂರ್ ವಿಚ್ಛೇದನಕ್ಕೆ ಸುಪ್ರೀಂಕೋರ್ಟ್ ತಡೆ: ಮಧ್ಯಸ್ಥಿಕೆ ಕೇಂದ್ರಕ್ಕೆ ಪ್ರಕರಣ ಶಿಫಾರಸು - SC stays chef Kunal Kapurs divorce

author img

By ETV Bharat Karnataka Team

Published : Jul 30, 2024, 11:03 PM IST

ಖ್ಯಾತ ಬಾಣಸಿಗ ಕುನಾಲ್ ಕಪೂರ್ ಕ್ರೌರ್ಯದ ಆಧಾರದ ಮೇಲೆ ಪತ್ನಿಗೆ ವಿಚ್ಛೇದನ ನೀಡಲು ಅನುಮತಿ ನೀಡಿದ ದೆಹಲಿ ಹೈಕೋರ್ಟ್ ತೀರ್ಪಿಗೆ ಸುಪ್ರೀಂ ಕೋರ್ಟ್ ಮಂಗಳವಾರ (ಜುಲೈ 30ರಂದು) ತಡೆ ನೀಡಿದೆ.

DIVORCE  KUNAL KAPUR  DELHI HIGH COURT  MARRAIGE
ಬಾಣಸಿಗ ಕುನಾಲ್ ಕಪೂರ್ ವಿಚ್ಛೇದನಕ್ಕೆ ಸುಪ್ರೀಂ ಕೋರ್ಟ್ ತಡೆ: ಮಧ್ಯಸ್ಥಿಕೆ ಕೇಂದ್ರಕ್ಕೆ ಪ್ರಕರಣ ಶಿಫಾರಸ್ಸು (Getty Images)

ನವದೆಹಲಿ: ಕ್ರೌರ್ಯದ ಕಾರಣದಿಂದ ದೂರವಾಗಿದ್ದ ಪತ್ನಿಯಿಂದ ಸೆಲೆಬ್ರಿಟಿ ಬಾಣಸಿಗ ಕುನಾಲ್ ಕಪೂರ್‌ಗೆ ವಿಚ್ಛೇದನ ನೀಡಿದ್ದ ದೆಹಲಿ ಹೈಕೋರ್ಟ್‌ನ ಆದೇಶಕ್ಕೆ ಸುಪ್ರೀಂ ಕೋರ್ಟ್ ತಡೆ ನೀಡಿದೆ. ಹೈಕೋರ್ಟ್ ಆದೇಶದ ವಿರುದ್ಧ ಕಪೂರ್ ಪತ್ನಿಯು, ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು.

ನ್ಯಾಯಮೂರ್ತಿಗಳಾದ ಹೃಷಿಕೇಶ್ ರಾಯ್ ಮತ್ತು ಎಸ್‌ವಿಎನ್ ಭಟ್ಟಿ ಅವರ ಪೀಠ ಸೋಮವಾರ ಅವರ ಪತ್ನಿಯ ಅರ್ಜಿಗೆ ವಿಚ್ಛೇದನಕ್ಕೆ ತಡೆ ನೀಡಿದೆ. ಇತ್ಯರ್ಥದ ಸಾಧ್ಯತೆಯನ್ನು ಅನ್ವೇಷಿಸುವ ಪ್ರಯತ್ನದಲ್ಲಿ ಸುಪ್ರೀಂ ಕೋರ್ಟ್ ಪ್ರಕರಣವನ್ನು ಸುಪ್ರೀಂ ಕೋರ್ಟ್ ಮಧ್ಯಸ್ಥಿಕೆ ಕೇಂದ್ರಕ್ಕೆ ಶಿಫಾರಸು ಮಾಡಿದೆ.

ವಿಚ್ಛೇದನ ನೀಡುವಾಗ, ಕಪೂರ್‌ಗೆ ಮಹಿಳೆಯ (ಪ್ರತಿವಾದಿ) ವರ್ತನೆಯು ಘನತೆ ಮತ್ತು ಸಹಾನುಭೂತಿಯಿಂದ ದೂರವಿದೆ ಎಂದು ಹೈಕೋರ್ಟ್ ಹೇಳಿತ್ತು. ಕೌಟುಂಬಿಕ ನ್ಯಾಯಾಲಯವು ಕಪೂರ್‌ಗೆ ವಿಚ್ಛೇದನ ನೀಡಲು ನಿರಾಕರಿಸಿತ್ತು. ಕೌಟುಂಬಿಕ ನ್ಯಾಯಾಲಯದ ಆದೇಶದ ವಿರುದ್ಧ ಅವರು ಹೈಕೋರ್ಟ್ ಮೆಟ್ಟಿಲೇರಿದ್ದರು. ಈ ವರ್ಷದ ಏಪ್ರಿಲ್‌ನಲ್ಲಿ, ಕ್ರೌರ್ಯದ ಆಧಾರದ ಮೇಲೆ ಹೈಕೋರ್ಟ್ ಕಪೂರ್‌ಗೆ ವಿಚ್ಛೇದನ ನೀಡಿತ್ತು.

ಒಬ್ಬ ಸಂಗಾತಿಯು ಇನ್ನೊಬ್ಬರೊಂದಿಗೆ ಈ ರೀತಿ ವರ್ತಿಸಿದಾಗ, ಅದು ಮದುವೆಯ ಮೂಲತತ್ವವನ್ನು ಹಾಳುಮಾಡುತ್ತದೆ. ಮತ್ತು ಅವನು ಅಥವಾ ಅವಳು ಒಟ್ಟಿಗೆ ಬದುಕಲು ಯಾವುದೇ ಕಾರಣವಿಲ್ಲ ಎಂದು ಹೈಕೋರ್ಟ್ ಹೇಳಿತ್ತು.

ಕುನಾಲ್ ಕಪೂರ್ ಏಪ್ರಿಲ್ 2008 ರಲ್ಲಿ ವಿವಾಹವಾಗಿದ್ದರು. ಮತ್ತು ಅವರ ಪತ್ನಿ 2012ರಲ್ಲಿ ಮಗನಿಗೆ ಜನ್ಮ ನೀಡಿದ್ದರು. 'ಮಾಸ್ಟರ್‌ ಶೆಫ್ ಇಂಡಿಯಾ' ಎಂಬ ದೂರದರ್ಶನ ಕಾರ್ಯಕ್ರಮದ ತೀರ್ಪುಗಾರರಾಗಿದ್ದ ಕುನಾಲ್ ಕಪೂರ್, ತಮ್ಮ ಪತ್ನಿ ತನ್ನ ಹೆತ್ತವರನ್ನು ಎಂದಿಗೂ ಗೌರವಿಸಿಲ್ಲ ಎಂದು ಹೇಳಿಕೊಂಡಿದ್ದರು. ನ್ಯಾಯಾಲಯವನ್ನು ದಾರಿ ತಪ್ಪಿಸುವ ಸಲುವಾಗಿ ಸುಳ್ಳು ಆರೋಪ ಮಾಡಿದ್ದಾರೆ ಎಂದು ಅವರ ಪತ್ನಿ ಆರೋಪಿಸಿದ್ದಾರೆ.

ಇದನ್ನೂ ಓದಿ: ನನ್ನ ಹೆಸರ ಮುಂದೆ ಪತಿ ಅಮಿತಾಭ್​​​ ಹೆಸರೇಕೆ? ಪಾರ್ಲಿಮೆಂಟ್​ನಲ್ಲಿ ಜಯಾ ಬಚ್ಚನ್​ ಗರಂ - Jaya Bachchan

ETV Bharat Logo

Copyright © 2024 Ushodaya Enterprises Pvt. Ltd., All Rights Reserved.