ETV Bharat / entertainment

ರಾಕುಲ್ ​ - ಜಾಕಿ ಮದುವೆಯಲ್ಲಿ ಶಿಲ್ಪಾ ಶೆಟ್ಟಿ- ರಾಜ್​ ಕುಂದ್ರಾ ಡ್ಯಾನ್ಸ್: ಮ್ಯಾರೇಜ್​ ಲೊಕೇಶನ್​ನಿಂದ ಫೋಟೋಗಳು ವೈರಲ್ - ಶಿಲ್ಪಾ ಶೆಟ್ಟಿ

ರಾಕುಲ್ ಪ್ರೀತ್ ಸಿಂಗ್ ಮತ್ತು ಜಾಕಿ ಭಗ್ನಾನಿ ಮದುವೆಗೆ ಕ್ಷಣಗಣನೆ ಆರಂಭವಾಗಿದೆ.

Rakul Jackky Wedding
ರಾಕುಲ್​ ಜಾಕಿ ಮದುವೆ
author img

By ETV Bharat Karnataka Team

Published : Feb 20, 2024, 10:06 AM IST

Updated : Feb 20, 2024, 10:57 AM IST

ಪ್ರೇಮಪಕ್ಷಿಗಳಾದ ರಾಕುಲ್ ಪ್ರೀತ್ ಸಿಂಗ್ ಮತ್ತು ಜಾಕಿ ಭಗ್ನಾನಿ ನಾಳೆ ಗೋವಾದಲ್ಲಿ ಹಸೆಮಣೆ ಏರಲಿದ್ದಾರೆ. ಈಗಾಗಲೇ ಮದುವೆ ಮುನ್ನಾ ದಿನದ ಕಾರ್ಯಕ್ರಮಗಳು, ಶಾಸ್ತ್ರಗಳು ಆರಂಭವಾಗಿವೆ. ವರದಿಗಳ ಪ್ರಕಾರ, ಈ ಲವ್​ ಬರ್ಡ್ಸ್​​​​ಗಾಗಿ ನಟಿ ಶಿಲ್ಪಾ ಶೆಟ್ಟಿ ಮತ್ತು ರಾಜ್ ಕುಂದ್ರಾ ಸ್ಪೆಷಲ್​ ಪರ್ಫಾಮೆನ್ಸ್ ನೀಡಲು ಸಜ್ಜಾಗಿದ್ದಾರೆ. ಮತ್ತೊಂದೆಡೆ, ಮ್ಯಾರೇಜ್​ ಲೊಕೇಶನ್​ನಿಂದ ಕೆಲ ಫೋಟೋಗಳು ವೈರಲ್ ಆಗಿ ಸೋಷಿಯಲ್​ ಮೀಡಿಯಾದಲ್ಲಿ ಸಖತ್​ ಸದ್ದು ಮಾಡುತ್ತಿವೆ.

ಶಿಲ್ಪಾ ಮತ್ತು ರಾಜ್ ಜೋಡಿ ಜಾಕಿ ಕುಟುಂಬದೊಂದಿಗೆ, ವಿಶೇಷವಾಗಿ ವರನ ತಂದೆ ವಶು ಭಗ್ನಾನಿ ಜೊತೆ ಉತ್ತಮ ಭಾಂದವ್ಯ ಹೊಂದಿದ್ದಾರೆ. ಈ ಹಿಂದೆ ಶಿಲ್ಪಾ ಮತ್ತು ರಾಜ್ ಅವರ ವಿವಾಹ ಸಂಭ್ರಮಕ್ಕೆ ಜಾಕಿ ಭಗ್ನಾನಿ ಸಾಕ್ಷಿಯಾಗಿದ್ದು, ಸ್ಪೆಷಲ್​ ಪರ್ಫಾಮೆನ್ಸ್ ಕೂಡ ನೀಡಿದ್ದರು. ಇದೀಗ ಶಿಲ್ಪಾ ರಾಜ್​ ಜೋಡಿ ಪಂಜಾಬಿ ಹಾಡಿಗೆ ಹೆಜ್ಜೆ ಹಾಕಲಿದ್ದಾರೆ ಎಂಬ ಮಾಹಿತಿ ಇದೆ.

ರಾಕುಲ್ ಮತ್ತು ಜಾಕಿ ಮದುವೆ ಮುನ್ನದ ಕಾರ್ಯಕ್ರಮಗಳು ಈಗಾಗಲೇ ಗೋವಾದಲ್ಲಿ ಭರದಿಂದ ಸಾಗಿವೆ. ವಿವಾಹದ ಪ್ರಮುಖ ಶಾಸ್ತ್ರ ನಾಳೆ ಅಂದರೆ ಫೆಬ್ರವರಿ 21ರಂದು ಜರುಗಲಿದೆ. ಈ ಜೋಡಿ 2021ರ ಅಕ್ಟೋಬರ್ ನಲ್ಲಿ ತಾವು ರಿಲೇಶನ್​ಶಿಪ್​ನಲ್ಲಿರುವುದಾಗಿ ಸಾರ್ವಜನಿಕವಾಗಿ ಒಪ್ಪಿಕೊಂಡಿದ್ದರು. ಬಳಿಕ ಹಲವು ಈವೆಂಟ್​ಗಳಲ್ಲಿ ಜೊತೆಯಾಗಿ ಕಾಣಿಸಿಕೊಂಡಿದ್ದರು. ತಮ್ಮ ಅಧಿಕೃತ ಸೋಷಿಯಲ್​ ಮೀಡಿಯಾ ಖಾತೆಗಳಲ್ಲಿಯೂ ಸುಂದರ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

ಇದೀಗ ಗೋವಾದ ಮದುವೆ ಸ್ಥಳದಿಂದ ಕೆಲ ಚಿತ್ರಗಳು ಹೊರಬಿದ್ದಿವೆ. ರಾಕುಲ್ ಜಾಕಿ ಫ್ಯಾನ್ಸ್​ ಪೇಜ್​ಗಳು ಈ ಫೋಟೋಗಳನ್ನು ಹಂಚಿಕೊಂಡಿವೆ. ಒಂದು ಫೋಟೋ, ಹೂವುಗಳಿಂದ ಅಲಂಕರಿಸಲ್ಪಟ್ಟ ಬೋರ್ಡ್ ಆಗಿದೆ. 'ಭಗ್ನಾನಿ ಮತ್ತು ಸಿಂಗ್ ಕುಟುಂಬ ನಿಮ್ಮನ್ನು ಸ್ವಾಗತಿಸುತ್ತದೆ' ಎಂದು ಆ ಬೋರ್ಡ್​ನಲ್ಲಿ ಬರೆಯಲಾಗಿದೆ. ಮತ್ತೊಂದು ಫೋಟೋ, ಎಳನೀರು / ತೆಂಗಿನಕಾಯಿಯದ್ದಾಗಿದೆ. ಅದರ ಮೇಲೆ ಆರ್​ಜೆ ಎಂದು ಬರೆಯಲಾಗಿದೆ. ಮಾಹಿತಿ ಪ್ರಕಾರ, ಇದು ಅತಿಥಿಗಳಿಗೆ ಕೊಡುತ್ತಿರುವ ಸ್ವಾಗತ ಪಾನೀಯವಾಗಿದೆ.

ಇದನ್ನೂ ಓದಿ: ಚಿತ್ರರಂಗದಲ್ಲಿ 38 ವರ್ಷ ಪೂರೈಸಿದ ಶಿವಣ್ಣ: ಸೂಪರ್​​ ಸ್ಟಾರ್​ಗಳೊಂದಿಗಿನ ಫೋಟೋಗಳಿಲ್ಲಿವೆ ನೋಡಿ

ಗೋವಾಕ್ಕೆ ತೆರಳುವ ಮೊದಲು ರಾಕುಲ್ ಮತ್ತು ಜಾಕಿ ಶನಿವಾರ ಬೆಳಗ್ಗೆ ಮುಂಬೈನ ಪ್ರಸಿದ್ಧ ಸಿದ್ಧಿವಿನಾಯಕ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದರು. ಅದೇ ದಿನ ರಾತ್ರಿ ಗೋವಾ ಪ್ರಯಾಣ ಬೆಳೆಸಿದರು. ಏರ್​ಪೋರ್ಟ್​​ನಿಂದ ವಿಡಿಯೋಗಳು ವೈರಲ್​​ ಆಗಿ, ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಯಿತು.

ಇದನ್ನೂ ಓದಿ: ರಾಕುಲ್​-ಜಾಕಿ ಮದುವೆ: ಗೋವಾ ತಲುಪಿದ ವಧು-ವರ, ವಿಡಿಯೋ ನೋಡಿ

ಗೋವಾದ 'ಐಟಿಸಿ ಗ್ರ್ಯಾಂಡ್‌'ನಲ್ಲಿ ಅದ್ಧೂರಿ, ಪರಿಸರ ಸ್ನೇಹಿ ಮದುವೆ ನಡೆಯಲಿದೆ. ವರುಣ್ ಧವನ್ ಮತ್ತು ನತಾಶಾ ದಲಾಲ್ ದಂಪತಿ ಕೂಡ ಮದುವೆಗೆ ಹಾಜರಾಗಲಿದ್ದಾರೆ. ಸೋಮವಾರ ಈ ದಂಪತಿ ಗೋವಾ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡಿತ್ತು. ಅತಿಥಿಗಳ ಪಟ್ಟಿಯಲ್ಲಿ ಅಕ್ಷಯ್ ಕುಮಾರ್, ಟೈಗರ್ ಶ್ರಾಫ್, ರಿತೇಶ್ ದೇಶ್​​ಮುಖ್, ಸೋನಮ್ ಕಪೂರ್, ಆನಂದ್ ಅಹುಜಾ, ಶಾಹಿದ್ ಕಪೂರ್, ಭೂಮಿ ಪೆಡ್ನೇಕರ್, ಇಶಾ ಡಿಯೋಲ್ ಸೇರಿದಂತೆ ಹಲವರು ಇದ್ದಾರೆ. ಈ ಸೆಲೆಬ್ರಿಟಿಗಳು ಗೋವಾ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡಿದ್ದಾರೆ.

Last Updated : Feb 20, 2024, 10:57 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.