ETV Bharat / entertainment

'ದಿನ ಕಳೆದಂತೆ ಚೈತ್ರಾ ಕುಂದಾಪುರರ ಹುಚ್ಚು ಹೆಚ್ಚುತ್ತಿದೆ' - ರಜತ್​ ಹೇಳಿಕೆ: ಮೋಕ್ಷಿತಾ ಗೌತಮಿ ಮನಸ್ತಾಪ - BIGG BOSS KANNADA 11

ಚೈತ್ರಾ ಕುಂದಾಪುರ ಮತ್ತು ರಜತ್​​ ಕಿಶನ್​ ನಡುವೆ ಗಲಾಟೆಯಾಗಿದೆ.

chaitra kundapura Rajath kishan fight
ಚೈತ್ರಾ ಕುಂದಾಪುರ - ರಜತ್​ ಕಿಶನ್​ ಫೈಟ್ (Photo: ETV Bharat)
author img

By ETV Bharat Entertainment Team

Published : Dec 5, 2024, 5:18 PM IST

ಕನ್ನಡದ 'ಬಿಗ್​ ಬಾಸ್'​ ಆಟ 70ನೇ ದಿನದತ್ತ ಮುನ್ನುಗ್ಗುತ್ತಿದೆ. ಆಟದ ಮಜಲುಗಳು ಬದಲಾಗಿವೆ. ಗೆಲ್ಲಬೇಕೆಂಬ ಹಠ ಪ್ರತೀ ಸ್ಪರ್ಧಿಗಳಲ್ಲೂ ಕಾಣುತ್ತಿದೆ. ಸ್ನೇಹಿತರು ಅಪರಿಚಿತಾಗಿ ಬದಲಾಗಿದ್ದಾರೆ. ಒಳಗಿದ್ದ ಮನಸ್ತಾಪಗಳು ಬಹಿರಂಗಗೊಳ್ಳುತ್ತಿವೆ.

ಇದೀಗ 'ದಿನ ಕಳೆದಂತೆ ಚೈತ್ರಾ ಕುಂದಾಪುರ ಅವರ ಹುಚ್ಚು ಹೆಚ್ಚುತ್ತಿದೆ' ಎಂಬ ಹೇಳಿಕೆಯನ್ನು ವೈಲ್ಡ್​ ಕಾರ್ಡ್​ ಸ್ಪರ್ಧಿ ರಜತ್​ ಕಿಶನ್​ ನೀಡಿದ್ದಾರೆ. ಮಾತಿಗೆ ಮಾತು ಬೆಳೆದು ದೊಡ್ಡ ಜಗಳವಾಗುವ ಸುಳಿವನ್ನು ಬಿಗ್​ ಬಾಸ್​ ಅನಾವರಣಗೊಳಿಸಿರುವ ಪ್ರೋಮೋ ಬಿಟ್ಟುಕೊಟ್ಟಿದೆ. ''ಭುಜಬಲಕ್ಕೂ ಬುದ್ಧಿಬಲಕ್ಕೂ ಜಿದ್ದಾಜಿದ್ದಿ!'' ಬಿಗ್ ಬಾಸ್ ಕನ್ನಡ ಸೀಸನ್ 11, ಸೋಮ-ಶುಕ್ರ ರಾತ್ರಿ 9:30ಕ್ಕೆ ಪ್ರಸಾರ ಎಂಬ ಕ್ಯಾಪ್ಷನ್​ನೊಂದಿಗೆ ಪ್ರೋಮೋ ಅನಾವರಣಗೊಂಡಿದ್ದು, ಸಂಪೂರ್ಣ ಸಂಚಿಕೆ ವೀಕ್ಷಿಸುವ ಪ್ರೇಕ್ಷಕರ ಕುತೂಹಲ ಹೆಚ್ಚಾಗಿದೆ. ರಜತ್​ ಕಿಶನ್​ ಅವರ ಹೇಳಿಕೆಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿವೆ.

''ಬುಟ್ಟಿಯನ್ನು ಕೆಳಮುಖವಾಗಿ ಹಿಡಿದು ಚೆಂಡುಗಳನ್ನು ಶೇಖರಿಸಬೇಕು. ಪ್ರತೀ ಸುತ್ತನ್ನು ಗೆದ್ದ ಸದಸ್ಯರು ಓರ್ವ ಸ್ಪರ್ಧಿಯನ್ನು ಈ ವಾರದ ಕ್ಯಾಪ್ಟನ್ಸಿ ಓಟದಿಂದ ಹೊರಗಿಡಬೇಕು'' ಎಂದು ಸೂಚಿಸಿ ಬಿಗ್​ ಬಾಸ್​ ಟಾಸ್ಕ್​​ ನೀಡಿದ್ದಾರೆ. ಅದರಂತೆ, ಹೆಚ್ಚು ಚೆಂಡುಗಳನ್ನು ಸ್ವೀಕರಿಸಿದ ರಜತ್ ಕಿಶನ್​ ಅವರು ಕ್ಯಾಪ್ಟನ್ಸಿ ಟಾಸ್ಕ್​ನಿಂದ ಚೈತ್ರಾ ಕುಂದಾಪುರ ಅವರನ್ನು ಹೊರಗಿಟ್ಟಿದ್ದಾರೆ. ರಜತ್​ ನಿರ್ಧಾರದಿಂದ ಅಸಮಧಾನಗೊಂಡ ಚೈತ್ರಾ ಮಾತಿನ ಮಳೆ ಸುರಿಸಿದ್ದಾರೆ.

''ಇರ್ಲಿ ಬಿಡಿ ರಜತ್​ ಅಣ್ಣ, ಇದು ನಿಮ್ಮ ನಿರ್ಧಾರ ಅಲ್ಲಾ ಅನ್ನೋದು ನನಗೂ ಗೊತ್ತು'' ಎಂದು ಚೈತ್ರಾ ತಿಳಿಸುತ್ತಿದ್ದಂತೆ 'ಯಾವಾಗ ನೋಡಿದ್ರೂ ಗೋಳು ಈ ಅಮ್ಮಂದು, ಏನ್​ ಈ ಅಮ್ಮನ ಆಚೇನೆ ಹಾಕೋಂಗಿಲ್ವಾ?' ಎಂದು ತಿಳಿಸಿದ್ದಾರೆ. ಭುಜಬಲದ ಕುರಿತು ಚೈತ್ರಾ ಮಾತೆತ್ತಿದ್ದು, ಚೈತ್ರಾ ಸೂಪರ್ ಎಂದು ಕೂಗುತ್ತಾ ರಜತ್​ ತಿರುಗಾಡಿದ್ದಾರೆ. ನಂತರ, ನನಗೆ ನಿಮ್ಮನ್ನು ನೋಡಿದ್ರೆ ನಗು ಬರುತ್ತೆ ಎಂದು ರಜತ್​ ತಿಳಿಸಿದ್ದಾರೆ. ಭಯ ಯಾರಿಗೆ ಇದೆ ಅನ್ನೋದು ಗೊತ್ತಾಯ್ತೆಂದು ಚೈತ್ರಾ ತಿಳಿಸಿದ್ದು, 'ಅವರಿಗೆ ದಿನೇ ದಿನೇ ಹುಚ್ಚು ಜಾಸ್ತಿಯಾಗುತ್ತಿದೆ' ಎಂದು ರಜತ್​ ಕಿಶನ್​ ಟೀಸಿದ್ದಾರೆ. ಅದಕ್ಕೆ ಹೌದೌದು ಎಂದು ತ್ರಿವಿಕ್ರಮ್​ ಸಾಥ್​ ನೀಡಿದ್ದಾರೆ.

ಇನ್ನು, ಮೋಕ್ಷಿತಾ ಮತ್ತು ಗೌತಮಿ ಅವರ ಮನಸ್ತಾಪ ಹೆಚ್ಚುವಂತೆ ತೋರಿದೆ. ಆರಂಭದಲ್ಲಿ ಮಂಜು ಮತ್ತು ಗೌತಮಿ ಅವರೊಂದಿಗೆ ಉತ್ತಮ ಒಡನಾಟ ಹೊಂದಿದ್ದ ಮೋಕ್ಷಿತಾ ಆ ತಂಡದಿಂದ ಹೊರಬಂದಿದ್ದಾರೆ. ಇದೀಗ ಮತ್ತೊಮ್ಮೆ ಆ ಮನಸ್ತಾಪವನ್ನು ಬಹಿರಂಗಪಡಿಸಿದ್ದಾರೆ.

ಇದನ್ನೂ ಓದಿ: ಮಹಿಳಾ ಅಭಿಮಾನಿ ಸಾವು; ಮೃತಳ ಕುಟುಂಬಕ್ಕೆ ಅಗತ್ಯ ನೆರವಿನ ಭರವಸೆ ನೀಡಿದ ಅಲ್ಲು ಅರ್ಜುನ್​​ ತಂಡ

ಕ್ಯಾಪ್ಟನ್ಸಿ ಟಾಸ್ಕ್​ಗೆ ಮನೆಯ ಉಳಿದ ಸದಸ್ಯರ ಪೈಕಿ ತಮ್ಮ ಪರ ಆಡುವಂತೆ ಮನವೊಲಿಸಬೇಕು ಎಂದು ಬಿಗ್​ ಬಾಸ್​ ಸೂಚಿಸಿದ್ದಾರೆ. ಎಲ್ಲರೂ ತಮ್ಮ ಜೊತೆ ಆಡುವ ಸ್ಪರ್ಧಿಯನ್ನು ಆಯ್ದುಕೊಂಡಂತೆ ತೋರಿದೆ. ಕೊನೆಗೆ ಉಳಿದಿರೋದು ಗೌತಮಿ. ಆದ್ರೆ ಗೌತಮಿ ಸಹಾಯ ಪಡೆಯಲು ಮೋಕ್ಷಿತಾ ಹಿಂಜರಿಸಿದ್ದಾರೆ. ನಾನು ಗೌತಮಿ ಬಳಿ ಸಹಾಯ ಕೇಳಲ್ಲ. ಅವರಿಂದ ಕ್ಯಾಪ್ಟನ್​ ಆಗ್ಬೇಕು ಅಂತಿದ್ರೆ ನಾನು ಆಡೋದೇ ಇಲ್ಲ. ನನಗೆ ನನ್ ಸೆಲ್ಫ್​ ರೆಸ್ಪೆಕ್ಟ್​ ಮುಂದೆ ಯಾವುದೂ ದೊಡ್ಡದಲ್ಲ. ನನ್ನನ್ನು ಕಳಿಸಿದ್ರೆ ನಾಳೆನೇ ಕಳುಹಿಸಲು, ನಾನು ಹೋಗಲು ರೆಡಿ ಅನ್ನೋ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಹಸೆಮಣೆ ಏರಿದ ನಾಗ ಚೈತನ್ಯ ಶೋಭಿತಾ ಧೂಳಿಪಾಲ: ಸುಂದರ ಫೋಟೋಗಳನ್ನೊಮ್ಮೆ ನೋಡಿ ಬಿಡಿ!

ನಂತರ ಬಿಗ್​ ಬಾಸ್​ ಮಾತನಾಡಿ, ಮೋಕ್ಷಿತಾ ದೊಡ್ಡ ದೊಡ್ಡ ನಿರ್ಧಾರಗಳ ಜೊತೆ ಅದಕ್ಕೆ ತಕ್ಕ ಬೆಲೆಯನ್ನೂ ಕಟ್ಟಬೇಕಾಗುತ್ತದೆ ಎಂದು ತಿಳಿಸಿದ್ದಾರೆ. ನಂತರ ಅನಾವರಣಗೊಂಡಿರುವ ಪ್ರೋಮೋ ಪ್ರಕಾರ, ಮೋಕ್ಷಿತಾ ಪರವಾಗಿ ಧನರಾಜ್​ ಆಚಾರ್​ ಆಡಿದಂತೆ, ಗೌತಮಿ ಉಸ್ತುವಾರಿ ವಹಿಸಿದಂತೆ ತೋರಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.