ETV Bharat / entertainment

'ಆ್ಯಕ್ಷನ್ ಪಾತ್ರಕ್ಕಾಗಿ ಎರಡು ತಿಂಗಳು ಪ್ರ್ಯಾಕ್ಟೀಸ್ ಮಾಡಿದ್ದೇನೆ': 'ಪೌಡರ್'​ ನಟಿ ಶರ್ಮಿಳಾ ಮಾಂಡ್ರೆ - Sharmiela Mandre Interview

ಜನಾರ್ಧನ ಚಿಕ್ಕಣ್ಣ ನಿರ್ದೇಶಿಸಿರುವ ಪೌಡರ್ ಚಿತ್ರದಲ್ಲಿ ದಿಗಂತ್​​ ಮಂಚಾಲೆ ಮತ್ತು ಧನ್ಯಾ ರಾಮ್​ಕುಮಾರ್​ ಮುಖ್ಯಭೂಮಿಕೆಯಲ್ಲಿದ್ದರೆ, ಶರ್ಮಿಳಾ ಮಾಂಡ್ರೆ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ. ತಮ್ಮ ಪಾತ್ರಕ್ಕಾಗಿ ಶರ್ಮಿಳಾ ಹಾಕಿರುವ ಎಫರ್ಟ್ ಎಷ್ಟು ಎಂಬುದನ್ನು 'ಈಟಿವಿ ಭಾರತ'ದ ಜೊತೆ ಹಂಚಿಕೊಂಡಿದ್ದಾರೆ.

Sharmiela Mandre interview
'ಪೌಡರ್'​ ನಟಿ ಶರ್ಮಿಳಾ ಮಾಂಡ್ರೆ (ETV Bharat)
author img

By ETV Bharat Entertainment Team

Published : Aug 22, 2024, 7:48 PM IST

Updated : Aug 22, 2024, 10:28 PM IST

'ಪೌಡರ್'​ ನಟಿ ಶರ್ಮಿಳಾ ಮಾಂಡ್ರೆ ಸಂದರ್ಶನ (ETV Bharat)

ಇತ್ತೀಚೆಗೆ ಗಾಳಿಪಟ 2 ಸಿನಿಮಾದಲ್ಲಿ ಶಿಕ್ಷಕಿಯ ಪಾತ್ರ ನಿರ್ವಹಿಸಿ ಪ್ರೇಕ್ಷಕರಿಂದ ಸೈ ಎನಿಸಿಕೊಂಡಿದ್ದ ನಟಿ ಶರ್ಮಿಳಾ ಮಾಂಡ್ರೆ ಪ್ರಮುಖ ಪಾತ್ರ ವಹಿಸಿರುವ 'ಪೌಡರ್'​ ಸಿನಿಮಾ ಬಿಡುಗಡೆಗೆ ಕ್ಷಣಗಣನೆ ಶುರುವಾಗಿದೆ. ಕನ್ನಡದ ಈ ಬಹುನಿರೀಕ್ಷಿತ ಚಿತ್ರದಲ್ಲಿ ವಿಭಿನ್ನ ಪಾತ್ರ ನಿರ್ವಹಿಸಿದ್ದಾರೆ. ಹೊಸ ಅವತಾರದಲ್ಲಿ ಸಿನಿಪ್ರಿಯರ ಮನಗೆಲ್ಲಲು ರೆಡಿಯಾಗಿದ್ದಾರೆ.

ಗುಲ್ಟು ಸಿನಿಮಾ ಖ್ಯಾತಿಯ ಜನಾರ್ಧನ ಚಿಕ್ಕಣ್ಣ ನಿರ್ದೇಶಿಸಿರುವ ಪೌಡರ್ ಚಿತ್ರದಲ್ಲಿ ದಿಗಂತ್​​ ಮಂಚಾಲೆ ಮತ್ತು ಧನ್ಯಾ ರಾಮ್​ಕುಮಾರ್​ ಮುಖ್ಯಭೂಮಿಕೆಯಲ್ಲಿದ್ದರೆ, ಶರ್ಮಿಳಾ ಮಾಂಡ್ರೆ ಪ್ರಮುಖ ಪಾತ್ರವೊಂದನ್ನು ನಿರ್ವಹಿಸಿದ್ದಾರೆ. ತಮ್ಮ ಪಾತ್ರಕ್ಕಾಗಿ ಶರ್ಮಿಳಾ ಹಾಕಿರುವ ಪರಿಶ್ರಮದ ಕುರಿತು ಅವರೇ ವಿವರಿಸಿದ್ದಾರೆ.

ಗ್ಲ್ಯಾಮರ್ ಪಾತ್ರಗಳಿಂದಲೇ ಕನ್ನಡಿಗರಿಗೆ ಚಿರಪರಿಚಿತರಾಗಿರುವ ಮಾಂಡ್ರೆ ಅವರೀಗ ಅಳೆದೂ ತೂಗಿ ಪಾತ್ರಗಳನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದಾರಂತೆ. ಈ ಸಿನಿಮಾ ಒಪ್ಪಿಕೊಳ್ಳಲು ಪ್ರಮುಖ ಕಾರಣ ನನ್ನ ಮೇಕಪ್ ಮಲ್ಲಿಕಾ ಪಾತ್ರ. ನಿರ್ದೇಶಕ ಜನಾರ್ಧನ್ ಚಿಕ್ಕಣ್ಣ ಅವರು ನನಗೆ ಈ ಪಾತ್ರ ಹೇಳುವ ಸಂದರ್ಭ ನಾಲ್ಕು ಪ್ರಮುಖ ಆ್ಯಕ್ಷನ್ ಸೀನ್​​ಗಳಿವೆ ಎಂದು ತಿಳಿಸಿದ್ದರು. ಆ್ಯಕ್ಷನ್​ ಪಾತ್ರ ನಿರ್ವಹಿಸಬೇಕಿದೆ ಎಂದು ತಿಳಿಸಿದಾಗ ಈ ಪಾತ್ರ ಒಪ್ಪಿಕೊಂಡೆ ಎಂದು ತಿಳಿಸಿದರು.

ಇನ್ನು ಆ್ಯಕ್ಷನ್ ಸೀಕ್ವೆನ್ಸ್​​ ಪಾತ್ರಕ್ಕಾಗಿ ಸಹಜವಾಗಿ ಆರು ತಿಂಗಳ ಕಾಲ ಟ್ರೈನಿಂಗ್ ಇರುತ್ತದೆ. ಆದ್ರೆ ನಾನು ಎರಡು ತಿಂಗಳಲ್ಲಿ ಆ್ಯಕ್ಷನ್ ಕಲಿತುಕೊಂಡೆ. ನಮ್ಮ ಸಿನಿಮಾ ಸ್ಟಂಟ್ ಮಾಸ್ಟರ್ ಜೊತೆ ದಿನಕ್ಕೆ 2 ಗಂಟೆ ಪ್ರ್ಯಾಕ್ಟಿಸ್ ಮಾಡುತ್ತಿದ್ದೆ. ಅಷ್ಟೇ ಅಲ್ಲಾ, ಈ ಪಾತ್ರಕ್ಕೆ ಫಿಟ್ ಆಗಿರಬೇಕು. ಅದಕ್ಕೆ ನಾನು ಒಂದಿಷ್ಟು ಸಿದ್ಧತೆಯನ್ನೂ ಮಾಡಿಕೊಂಡಿದ್ದೆ. ಪ್ರತಿದಿನ ಬೆಳಗ್ಗೆ ಪ್ರ್ಯಾಕ್ಟಿಸ್​​ ಮಾಡುತ್ತಿದ್ದೆ. ಮಧ್ಯಾಹ್ನ ವರ್ಕ್ ಔಟ್ ಮಾಡುತ್ತಿದ್ದೆ. ಸಂಜೆ ಯೋಗ ಮಾಡುತ್ತಿದ್ದೆ. ಇವೆಲ್ಲವೂ ನನಗೆ ಸಹಾಯವಾಯಿತು. ಶೂಟಿಂಗ್ ಸಂದರ್ಭದಲ್ಲೂ ಈ ಶಾಟ್ ಸರಿಯಾಗಿ ಬರುತ್ತಿದೆಯಾ ಎಂದು ಡೈರೆಕ್ಟರ್, ಕ್ಯಾಮರಾಮ್ಯಾನ್ ಗುರುಮೂರ್ತಿ ಅದ್ವೈತ್ ಜೊತೆ ಮಾತುಕತೆ ನಡೆಸುತ್ತಿದ್ದೆ ಎಂದು ತಮ್ಮ ಶೂಟಿಂಗ್​​ ಕ್ಷಣಗಳನ್ನು ನೆನಪಿಸಿಕೊಂಡರು.

ರಂಗಾಯಣ ರಘು, ದಿಗಂತ್, ರವಿಶಂಕರ್ ಗೌಡ ಜೊತೆ ನಾನು ಈ ಹಿಂದೆ ಸಿನಿಮಾಗಲಲ್ಲಿ ನಟಿಸಿದ್ದೆ. ಪೌಡರ್​ ಚಿತ್ರದ ಮೂಲಕ ಇದೇ ಮೊದಲ ಬಾರಿಗೆ ಧನ್ಯಾ ಹಾಗೂ ನಾಗಭೂಷಣ್​​ ಜೊತೆ ಕೆಲಸ ಮಾಡಿದ್ದು, ಅನುಭವ ಚೆನ್ನಾಗಿತ್ತು. ಒಂದು ಸಿನಿಮಾ ಚೆನ್ನಾಗಿ ಮೂಡಿಬರಬೇಕಂದ್ರೆ ಇಡೀ ಟೀಮ್​​ನಲ್ಲಿ ಪಾಸಿಟಿವ್ ಎನರ್ಜಿ ಇರಬೇಕು. ಅದನ್ನು ಪೌಡರ್ ಸಿನಿಮಾ ಶೂಟಿಂಗ್ ಸೆಟ್​​ನಲ್ಲಿ ನೋಡಿದೆ. ಡೈರೆಕ್ಟರ್ ಕೂಡ ನಮ್ಮ ಜೊತೆ ತಮಾಷೆ ಮಾಡುತ್ತಲೇ ಶೂಟಿಂಗ್ ಮಾಡಿದ್ದಾರೆ ಎಂದು ತಿಳಿಸಿದರು.

ಜೊತೆಗೆ, ಯಾವಾಗಲೂ ನಾನೋರ್ವ ಪ್ರೇಕ್ಷಕಳಾಗಿಯೂ ಸಿನಿಮಾ ನೋಡುತ್ತೇನೆ. ಸ್ಟಾರ್ ನಟರ ಸಿನಿಮಾಗಳಿಗೆ ಮಿಶ್ರ ಪ್ರತಿಕ್ರಿಯೆಗಳು ಬರುತ್ತದೆ. ಅದಕ್ಕೆ ನಾನು ಟ್ರೇಲರ್​​ ನೋಡಿ ಸಿನಿಮಾ ವೀಕ್ಷಿಸಲ್ಲ. ಆದ್ರೆ ಪೌಡರ್ ಟ್ರೇಲರ್ ಬಹಳ ಚೆನ್ನಾಗಿ ಮೂಡಿಬಂದಿದೆ ಎಂದು ತಿಳಿಸಿದರು. ಇನ್ನೂ ಎಲ್ಲರೂ ತಲೆ ಬಾಚಿಕೊಳ್ಳಿ, ಪೌಡರ್ ಹಾಕ್ಕೊಂಡು ಥಿಯೇಟರ್​ಗೆ ಬಂದು ಸಿನಿಮಾ ನೋಡಿ ಅಂತಾರೆ ಶರ್ಮಿಳಾ ಮಾಂಡ್ರೆ.

ಇದನ್ನೂ ಓದಿ: 'ನನ್ನ ಸಿನಿಮಾಗಳ ಕಥೆಯನ್ನು ಮೊದಲು ಅಮ್ಮ ಕೇಳ್ತಾರೆ': 'ಪೌಡರ್​​' ನಟಿ ಧನ್ಯಾ ರಾಮ್​​ಕುಮಾರ್ ಸಂದರ್ಶನ - Dhanya Ramkumar Interview

ನನ್ನ ಸಿನಿಜರ್ನಿಯಲ್ಲಿ ಎಲ್ಲಾ ರೀತಿಯ ಪಾತ್ರಗಳನ್ನು ನಿರ್ವಹಿಸಿದ್ದೇನೆ. ಆ್ಯಕ್ಷನ್ ಸಿಕ್ವೇನ್ಸ್ ನಿರ್ವಹಿಸಬೇಕೆಂದುಕೊಂಡಿದ್ದೆ. ಅದು ಪೌಡರ್ ಸಿನಿಮಾ ಮೂಲಕ ಈಡೇರಿದೆ. ಕೆಆರ್​ಜಿ ಸ್ಟುಡಿಯೋಸ್​​ ವಿಭಿನ್ನ ಸಿನಿಮಾಗಳನ್ನು ನಿರ್ಮಾಣ ಮಾಡುತ್ತದೆ, ಹಾಗೇ ಗುಲ್ಟು ಚಿತ್ರದ ಡೈರೆಕ್ಟರ್ ಚಿಕ್ಕಣ್ಣ ಜೊತೆ ಚಿತ್ರ ಮಾಡಬೇಕು ಅಂದುಕೊಂಡಿದ್ದೆ. ಎಲ್ಲವೂ ಪೌಡರ್ ಮೂಲಕ ಈಡೇರಿದೆ ಎಂದು ತಿಳಿಸಿದರು.

ಇದನ್ನೂ ಓದಿ: ರಕ್ಷಿತ್ ಶೆಟ್ಟಿ ಮತ್ತು ನನ್ನ ಪತ್ನಿಯೊಂದಿಗೆ ನಟಿಸುವ ಆಸೆ​​: 'ಪೌಡರ್​' ನಟ ದಿಗಂತ್​​ ಸಂದರ್ಶನ - Diganth Manchale Interview

ಸಖತ್​​ ಎಂಟರ್​​ಟೈನಿಂಗ್​​​ ಸಿನಿಮಾ ಮಾಡಿರುವ ಖುಷಿ ನಿರ್ಮಾಪಕರಾದ ಕಾರ್ತಿಕ್ ಗೌಡ, ಯೋಗಿ ಜಿ.ರಾಜ್, ವಿಜಯ್ ಸುಬ್ರಹ್ಮಣ್ಯಂ ಅವರಿಗಿದೆ. ದಿಗಂತ್, ಧನ್ಯಾ ಹಾಗೂ ಶರ್ಮಿಳಾ ಮಾಂಡ್ರೆಗೆ ಸಿನಿಮಾ ಒಳೆ ಹೆಸರು ತಮದುಕೊಡುವ ವಿಶ್ವಾಸವಿದೆ. ನಾಳೆ ರಾಜ್ಯದ ಹೆಚ್ಚಿನ ಚಿತ್ರಮಂದಿರಗಳಲ್ಲಿ ಪೌಡರ್​​ ತೆರೆಕಾಣಲಿದೆ.

Last Updated : Aug 22, 2024, 10:28 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.