ಗ್ಲ್ಯಾಮರ್ ಪ್ರಪಂಚದಲ್ಲಿ ಮಾಡೆಲ್ ಆಗಿದ್ದ ಪೂನಂ ಪಾಂಡೆ ರಾತ್ರೋರಾತ್ರಿ ಬಾಲಿವುಡ್ ಸೆಲೆಬ್ರಿಟಿ ನಟಿಯಾಗಿ ಗುರುತಿಸಿಕೊಂಡಿದ್ದರು. ತನ್ನ ಮೈಮಾಟದಿಂದ ಸೋಷಿಯಲ್ ಮೀಡಿಯಾದಲ್ಲಿ ಪಡ್ಡೆ ಹುಡುಗರ ನಿದ್ದೆಗೆಡಿಸಿದ ಹಾಟ್ ತಾರೆ ಪೂನಂ ಪಾಂಡೆ, ಗರ್ಭಕಂಠ ಕ್ಯಾನ್ಸರ್‌ನಿಂದ ಕೇವಲ 32 ವರ್ಷಕ್ಕೆ ತನ್ನ ಇಹಲೋಕ ತ್ಯಜಿಸಿದ್ದಾರೆ. ಈ ಸುದ್ದಿ ಸಿನಿಮಾ ಲೋಕದಲ್ಲಿ ಶಾಕಿಂಗ್ ನ್ಯೂಸ್ ಆಗಿದ್ದರೂ ಈ ಪೂನಂ ಪಾಂಡೆ ಸಾವಿನ ಸುದ್ದಿ ಬಾಲಿವುಡ್ ಮಂದಿಗೆ ಅರಗಿಸಿಕೊಳ್ಳಲು ಆಗುತ್ತಿಲ್ಲ.
ಸಾಮಾನ್ಯ ಮಾಡೆಲ್ ಆಗಿದ್ದ ಪೂನಂ ಪಾಂಡೆ 2011 ವಿಶ್ವಕಪ್ ಗೆದ್ದರೆ ತಾನು ಸಾರ್ವಜನಿಕವಾಗಿ ಬೆತ್ತಲಾಗುತ್ತೇನೆ ಎಂದು ಹೇಳಿಕೆ ನೀಡುವ ಮೂಲಕ ಭಾರಿ ಸುದ್ದಿಯಾಗಿದ್ದರು, ಇದೂ ಪಡ್ಡೆಗಳ ನಿದ್ರೆ ಕೆಡಿಸಿತ್ತು. ಆ ವರ್ಷ ಟೀಂ ಇಂಡಿಯಾ ವಿಶ್ವಕಪ್ ಗೆದ್ದಿತು. ಹೇಳಿದ ಮಾತಿನಂತೆ ಪೂನಂ ಪಾಂಡೆ ಅರೆ ಬೆತ್ತಲೆ ಆಗುವ ಮೂಲಕ ಬಾಲಿವುಡ್ ಸೆಲೆಬ್ರಿಟಿ ಆಗಿದ್ದಳು.
ನಶಾ ಸಿನಿಮಾ ಮೂಲಕ ಬಾಲಿವುಡ್ ಚಿತ್ರರಂಗಕ್ಕೆ ಎಂಟ್ರಿಕೊಟ್ಟ ಪೂನಂ ಪಾಂಡೆ ಬಟ್ಟೆ ಹಾಗೂ ವಿವಾದಗಳಿಂದಲೇ ಹೆಚ್ಚು ಫೇಮಸ್ ಆಗ್ತಾ ಇದ್ದಳು. ಬಾಲಿವುಡ್ ಸಿನಿಮಾಗಳಲ್ಲಿ ಸಿಕ್ಕಾಪಟ್ಟೆ ಹಾಟ್ ಆಗಿ ಕಾಣಿಸಿಕೊಳ್ಳುತ್ತಿದ್ದ ಪೂನಂ ಪಾಂಡೆ ಕನ್ನಡದ ಲವ್ ಇಸ್ ಪಾಯಿಸನ್ ಸಿನಿಮಾದಲ್ಲಿ ಅಭಿನಯಿಸುವ ಮೂಲಕ ಸ್ಯಾಂಡಲ್ ವುಡ್ಗೆ ಎಂಟ್ರಿ ಕೊಟ್ಟಿದ್ದರು.
ಹೌದು ಪೂನಂ ಪಾಂಡೆ ಕನ್ನಡಕ್ಕೆ ಬಂದಿದ್ದರ ಹಿಂದೆ ಒಂದು ಕಥೆಯೂ ಇದೆ. ಆಗಷ್ಟೇ ಬಾಲಿವುಡ್ನಲ್ಲಿ ನಶಾ ಸಿನಿಮಾ ಮೂಲಕ ಜನಪ್ರಿಯತೆ ಗಳಿಸಿದ್ದ ಪೂನಂ ಪಾಂಡೆ, ಲವ್ ಇಸ್ ಪಾಯ್ಸನ್ ಚಿತ್ರಕ್ಕಾಗಿ ಕನ್ನಡಕ್ಕೆ ಬಂದಿದ್ದರು. ಆ ಸಮಯದಲ್ಲಿ ಲವ್ ಈಸ್ ಪಾಯಿಸನ್ ಚಿತ್ರದ ನಿರ್ಮಾಪಕ ಕೇಶವಮೂರ್ತಿ ಅವರಿಗೆ ಕೆಲ ನಟಿಮಣಿಯರು , ಕನ್ನಡದ ನಟಿಯರು ಯಾರು ಇಲ್ವಾ ಅಂತಾ ಪ್ರಶ್ನೆ ಮಾಡಿದ್ದರಂತೆ.
ಯಾಕೆಂದರೆ ಲವ್ ಈಸ್ ಪಾಯಿಸನ್ ಚಿತ್ರದ ಐಟಂ ಹಾಡಿಗಾಗಿ ಪೂನಂ ಪಾಂಡೆಗೆ ಬರೋಬ್ಬರಿ 50 ಲಕ್ಷ ರೂಪಾಯಿ ಕೊಟ್ಟು ಅವರನ್ನು ಕನ್ನಡಕ್ಕೆ ಕರೆ ತಂದಿದ್ದರು. ಕನ್ನಡದ ಅನೇಕ ನಟಿಯರ ಬಳಿ ಐಟಂ ಸಾಂಗ್ನ ಪ್ರಸ್ತಾವನೆ ತಗೊಂಡು ಹೋದ್ರೂ ಯಾರೊಬ್ಬರೂ ಕ್ಯಾರೆ ಎನ್ನಲಿಲ್ಲ. 'ಹೀರೋ ಹೆಸರು ಕೇಳಿದ ತಕ್ಷಣ ಚಿತ್ರದಲ್ಲಿ ಕುಣಿಯಲು ಒಪ್ಪಲಿಲ್ಲ. ಇದು ನಮಗೆ ಸರಿ ಕಾಣಲಿಲ್ಲ. ಸ್ಯಾಂಡಲ್‌ವುಡ್ ನಟಿಯರ ಮೇಲಿನ ಹಠಕ್ಕಾಗಿ ಪೂನಂರನ್ನು ಕನ್ನಡಕ್ಕೆ ಕರೆತಂದೆವು ಅಂತಾರೆ ಲವ್ ಇಸ್ ಪಾಯ್ಸನ್ ಚಿತ್ರದ ನಿರ್ಮಾಪಕ ಕೇಶವ ಮೂರ್ತಿ.
ಇನ್ನು ಹತ್ತು ವರ್ಷದ ಹಿಂದೆ ಲವ್ ಇಸ್ ಪಾಯಿಸನ್ ಬಿಡುಗಡೆ ಮುನ್ನವೇ ಆ ಚಿತ್ರದ ನಾಯಕ ರಾಜೇಶ್ ಮಹಡಿ ಮೇಲಿಂದ ಬಿದ್ದು ದುರಂತ ಅಂತ್ಯವನ್ನು ಕಂಡಿದ್ದರು. ಇನ್ನೂ ಚಿತ್ರೀಕರಣ ಬಾಕಿ ಇದೆ ಹಾಗಾಗಿ ಚಿತ್ರ ರಿಲೀಸ್ ಅಗುವುದು ಡೌಟು ಎಂದು ಗಾಂಧಿನಗರ ಅಭಿಪ್ರಾಯಪಟ್ಟಿತ್ತು. ಆದರೆ ಆ ನಂತರ ಚಿತ್ರ ಜೂನ್ 06 2014ರಂದು ಬಿಡುಗಡೆಯಾಗಿತ್ತು. ಈಗ ಲವ್ ಇಸ್ ಪಾಯಿಸನ್ ಚಿತ್ರ ಬಿಡುಗಡೆಯಾಗಿ ಹತ್ತು ವರ್ಷದ ನಂತರ ರಾಜೇಶ್ ಅವರಂತೆ ಪೂನಂ ಪಾಂಡೆ ದುರಂತ ಅಂತ್ಯವನ್ನು ಕಂಡಿದ್ದಾರೆ. ತೀರಾ ಚೆಂದದ ಬದುಕು ಸಾಗಿಸಬೇಕಿದ್ದ ಪೂನಂ ಪಾಂಡೆ, ಗರ್ಭಕಂಠದ ಕ್ಯಾನ್ಸರ್ ಗೆ ಬಲಿಯಾಗಿದ್ದು ಒಂದು ದುರಂತವೇ ಸರಿ.
ಕನ್ನಡದಲ್ಲೂ ಗಮನ ಸೆಳೆದಿದ್ದ ಹಾಟ್ ಬೆಡಗಿ ಪೂನಂ ಪಾಂಡೆ: ಐಟಂ ಸಾಂಗ್ನಲ್ಲಿ ಮಿಂಚು - ಹಾಟ್ ಬೆಡಗಿ ಪೂನಂ ಪಾಂಡೆ
ಆಗಷ್ಟೇ ಬಾಲಿವುಡ್ನಲ್ಲಿ ನಶಾ ಸಿನಿಮಾ ಮೂಲಕ ಜನಪ್ರಿಯತೆ ಗಳಿಸಿದ್ದ ಹಾಟ್ ಬೆಡಗಿ ಪೂನಂ ಪಾಂಡೆ, ಲವ್ ಇಸ್ ಪಾಯ್ಸನ್ ಚಿತ್ರದ ಐಟಂ ಸಾಂಗ್ಗೆ ಕನ್ನಡಕ್ಕೆ ಬಂದಿದ್ದರು. ಆ ಸಮಯದಲ್ಲಿ ಲವ್ ಈಸ್ ಪಾಯಿಸನ್ ಚಿತ್ರದ ನಿರ್ಮಾಪಕ ಕೇಶವಮೂರ್ತಿ ಅವರಿಗೆ ಕೆಲ ನಟಿಮಣಿಯರು ಪ್ರಶ್ನೆ ಮಾಡಿದ್ದರಂತೆ, ಕನ್ನಡದ ನಟಿಯರು ಯಾರು ಇಲ್ವಾ ಅಂತಾ ?
Published : Feb 2, 2024, 10:38 PM IST