ETV Bharat / entertainment

ಪೃಥ್ವಿ ಅಂಬರ್ ಅಭಿನಯದ 'ಚೌಕಿದಾರ್' ಸಿನಿಮಾ ಅಡ್ಡಕ್ಕೆ ಡೈಲಾಗ್ ಕಿಂಗ್ ಎಂಟ್ರಿ - ACTOR SAI KUMAR - ACTOR SAI KUMAR

ಸಾಯಿ ಕುಮಾರ್​ ಅವರನ್ನು ತಂಡಕ್ಕೆ ಆಹ್ವಾನಿಸಿರುವ ಚೌಕಿದಾರ್​ ಸಿನಿಮಾತಂಡ ಅವರ ಪಾತ್ರದ ಬಗ್ಗೆ ಯಾವುದೇ ಸುಳಿವು ಬಿಟ್ಟುಕೊಟ್ಟಿಲ್ಲ. ಆದ್ರೆ ಚಿತ್ರವು ಟೈಟಲ್​ ಮೂಲಕವೇ ಸದ್ದು ಮಾಡುತ್ತಿದೆ. ಈ ಚೌಕಿದಾರ್ ಸಿನಿಮಾ ಕಂಪ್ಲೀಟ್ ಆ್ಯಕ್ಷನ್ ಸಿನಿಮಾವಲ್ಲ. ಪಕ್ಕಾ ಫ್ಯಾಮಿಲಿ ಎಂಟರ್​ಟೈನರ್ ಆಗಿದೆ.

Dialogue King Sai Kumar Entry to Pruthvi Ambar starrer Chowkidar Movie
ಪೃಥ್ವಿ ಅಂಬರ್ ಅಭಿನಯದ 'ಚೌಕಿದಾರ್' ಸಿನಿಮಾ ಅಡ್ಡಕ್ಕೆ ಡೈಲಾಗ್ ಕಿಂಗ್ ಎಂಟ್ರಿ (ETV Bharat)
author img

By ETV Bharat Karnataka Team

Published : Jun 22, 2024, 7:30 PM IST

ಬೆಂಗಳೂರು: ಟೈಟಲ್ ಮೂಲಕ ಪ್ರೇಕ್ಷಕರ ಕುತೂಹಲ ಹುಟ್ಟಿಸಿರುವ ಸಿನಿಮಾ ಚೌಕಿದಾರ್. ದಿಯಾ ಖ್ಯಾತಿಯ ಪೃಥ್ವಿ ಅಂಬರ್ ನಟಿಸುತ್ತಿರುವ ಚೌಕಿದಾರ್ ಸಿನಿಮಾ ತಂಡದಿಂದ ಮತ್ತೊಂದು ಹೊಸ ಅಪ್​ಡೇಟ್ ಸಿಕ್ಕಿದೆ. ಇತ್ತೀಚೆಗಷ್ಟೇ ಟೈಟಲ್ ಬಿಡುಗಡೆ ಮಾಡಿದ್ದ ಚಿತ್ರತಂಡವೀಗ ಡೈಲಾಗ್ ಕಿಂಗ್ ಸಾಯಿಕುಮಾರ್ ಅವರನ್ನು ತಮ್ಮ ಬಳಗಕ್ಕೆ ಸ್ವಾಗತಿಸಿದೆ. ಚೌಕಿದಾರ್ ಸಿನಿಮಾಕ್ಕೀಗ ಬಹುಭಾಷಾ ನಟ ಸಾಯಿಕುಮಾರ್ ಎಂಟ್ರಿ ಕೊಟ್ಟಿದ್ದಾರೆ. ಆದ್ರೆ ಡೈಲಾಗ್ ಕಿಂಗ್ ಪಾತ್ರದ ಬಗ್ಗೆ ಚಿತ್ರತಂಡ ಗುಟ್ಟುಬಿಟ್ಟುಕೊಟ್ಟಿಲ್ಲ.

ಕನ್ನಡದಲ್ಲಿ ಆನೆ ಪಟಾಕಿ ಸಿನಿಮಾ ಮೂಲಕ ಸ್ಯಾಂಡಲ್‌ವುಡ್‌ಗೆ ಎಂಟ್ರಿಯಾಗಿ ರಥಾವರ, ತಾರಕಾಸುರ ಸಿನಿಮಾಗಳನ್ನು ನಿರ್ದೇಶಿಸಿ ಯಶಸ್ವಿಯಾಗಿರುವ ನಿರ್ದೇಶಕ ಚಂದ್ರಶೇಖರ್‌ ಬಂಡಿಯಪ್ಪ ಚೌಕಿದಾರ್​ ಸಿನಿಮಾದ ಸೂತ್ರದಾರರು. ಈವರೆಗೆ ಸಿನಿಮಾದಲ್ಲಿ ಲವರ್‌ ಬಾಯ್‌ನಂತೆ ಕಾಣಿಸಿಕೊಂಡಿರುವ ಪೃಥ್ವಿ ಅಂಬರ್‌ ಈ ಚಿತ್ರದಲ್ಲಿ ಆ್ಯಕ್ಷನ್ ಸೀಕ್ವೆನ್ಸ್ ಮೂಲಕ ಪ್ರೇಕ್ಷಕರನ್ನು ರಂಜಿಸಲಿದ್ದಾರೆ. ಹಾಗಂತ ಚೌಕಿದಾರ್ ಕಂಪ್ಲೀಟ್ ಆ್ಯಕ್ಷನ್ ಸಿನಿಮಾವಲ್ಲ. ಪಕ್ಕ ಫ್ಯಾಮಿಲಿ ಎಂಟರ್​ಟೈನರ್.

ವಿದ್ಯಾ ಶೇಖರ್ ಎಂಟರ್ಟೈನ್ಮೆಂಟ್ ಬ್ಯಾನರ್ ಅಡಿಯಲ್ಲಿ ಕಲ್ಲಹಳ್ಳಿ ಚಂದ್ರಶೇಖರ್ ಚೌಕಿದಾರ್ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ. ಸಚಿನ್‌ ಬಸ್ರೂರು ಈ ಚಿತ್ರಕ್ಕೆ ಸಂಗೀತ ನಿರ್ದೇಶನ ಮಾಡುತ್ತಿದ್ದು, ವಿ. ನಾಗೇಂದ್ರ ಪ್ರಸಾದ್‌, ಪ್ರಮೋದ್‌ ಮರವಂತೆ ಹಾಡುಗಳಿಗೆ ಸಾಹಿತ್ಯ ಬರೆಯುತ್ತಿದ್ದಾರೆ. ಜುಲೈ ಮೊದಲ ವಾರ ಚೌಕಿದಾರ್ ಸಿನಿಮಾ ಮುಹೂರ್ತ ನೆರವೇರಿಸಲು ಚಿತ್ರತಂಡ ಯೋಜನೆ ಹಾಕಿದೆ.

ಇದನ್ನೂ ಓದಿ: 'ಕವಲುದಾರಿ' ಬಳಿಕ ವಿಶೇಷ ತನಿಖಾಧಿಕಾರಿಯಾಗಿ ರಿಷಿ: 'ರುದ್ರ ಗರುಡ ಪುರಾಣ' ಪೋಸ್ಟರ್ ರಿಲೀಸ್​ - Rishi Poster

ETV Bharat Logo

Copyright © 2025 Ushodaya Enterprises Pvt. Ltd., All Rights Reserved.