ETV Bharat / entertainment

ಮತ್ತೊಂದು ಹೊಸ ತಂಡಕ್ಕೆ ಸಾಥ್ ನೀಡಿದ ಡಾಲಿ ಪಿಕ್ಚರ್ಸ್ - Daali pictures

ಡಾಲಿ ಪ್ರೊಡಕ್ಷನ್​ನಿಂದ ಮತ್ತೊಂದು ಸಿನಿಮಾ ಸೆಟ್ಟೇರುತ್ತಿದೆ. ಫೆಬ್ರವರಿ 14ಕ್ಕೆ ಸಿನಿಮಾದ ಟೈಟಲ್ ಮತ್ತು ಹೀರೋ ಯಾರು ಎಂಬುದನ್ನು ಅನೌನ್ಸ್ ಮಾಡಲಿದ್ದಾರೆ.

ಡಾಲಿ ಪಿಕ್ಚರ್ಸ್
ಡಾಲಿ ಪಿಕ್ಚರ್ಸ್
author img

By ETV Bharat Karnataka Team

Published : Feb 12, 2024, 7:31 PM IST

ನಟ ಡಾಲಿ ಧನಂಜಯ ಕಡೆಯಿಂದ ಅಭಿಮಾನಿಗಳಿಗೆ ಸಿಹಿ ಸುದ್ದಿ ಸಿಕ್ಕಿದೆ. ಸಿಹಿ ಸುದ್ದಿನಾ ಅಂದ್ರೆ ಮದುವೆ ಆಗ್ತಿದ್ದಾರಾ ಅಂತ ಅಚ್ಚರಿ ಪಡಬೇಡಿ. ಡಾಲಿ ಪ್ರೊಡಕ್ಷನ್​ನಿಂದ ಮತ್ತೊಂದು ಸಿನಿಮಾ ಸೆಟ್ಟೇರುತ್ತಿದೆ ಎನ್ನುವುದೇ ಅಭಿಮಾನಿಗಳಿಗೆ ಖುಷಿಯ ವಿಚಾರ. ಹೌದು, ಧನಂಜಯ ನಿರ್ಮಾಣದ 'ಡಾಲಿ ಪಿಕ್ಚರ್ಸ್'ನ ಐದನೇ ಸಿನಿಮಾ ಸೆಟ್ಟೇರುತ್ತಿದೆ. ಈಗಾಗಲೇ ಬ್ಯಾಕ್ ಟು ಬ್ಯಾಕ್ ಹಿಟ್ ಸಿನಿಮಾಗಳನ್ನು ನೀಡಿರುವ ಡಾಲಿ ಪಿಕ್ಚರ್ಸ್ ಇದೀಗ ಮತ್ತೊಂದು ಹಿಟ್ ನೀಡಲು ಸಜ್ಜಾಗಿದೆ.

'ಟಗರು ಪಲ್ಯ' ಸಕ್ಸಸ್​ನಲ್ಲಿರುವ 'ಡಾಲಿ ಪಿಕ್ಚರ್ಸ್' ಇದೀಗ ಮತ್ತೊಂದು ವಿಭಿನ್ನ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬರುತ್ತಿದೆ. ಈ ಬಗ್ಗೆ ಡಾಲಿ ಪಿಕ್ಚರ್ಸ್ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿದೆ. ಆದರೆ ಯಾವ ಸಿನಿಮಾ, ಹೀರೋ ಯಾರು ಎನ್ನುವ ಯಾವುದೇ ಡೀಟೇಲ್ಸ್ಅನ್ನು ಬಿಟ್ಟುಕೊಟ್ಟಿಲ್ಲ.

ಬಡವರ ಮಕ್ಕಳು ಬೆಳಿಬೇಕು ಎನ್ನುವ ಡಾಲಿ, ಅದರಂತೆ ತಮ್ಮ ಪ್ರೊಡಕ್ಷನ್ ಮೂಲಕ ಅನೇಕ ಹೊಸ ಪ್ರತಿಭೆಗಳಿಗೆ ಅವಕಾಶ ನೀಡಿದ್ದಾರೆ. ಅದರಂತೆ ಈ ಬಾರಿ ಯಾವ ಪ್ರತಿಭೆಗಳಿಗೆ ಅವಕಾಶ ನೀಡಲಿದ್ದಾರೆ, ಧನಂಜಯ ಅವರ ಪ್ರೊಡಕ್ಷನ್​ನಿಂದ ಯಾವ ಹೀರೋ, ನಿರ್ದೇಶಕ ಮತ್ತು ನಾಯಕಿ ಸ್ಯಾಂಡಲ್​​ವುಡ್​ಗೆ ಎಂಟ್ರಿ ಕೊಡಲಿದ್ದಾರೆ ಎನ್ನುವ ಕುತೂಹಲ ಅಭಿಮಾನಿಗಳಲ್ಲಿದೆ.

5ನೇ ಸಿನಿಮಾ ಬರ್ತಿದೆ ಎಂದು ಮಾಹಿತಿ ಹಂಚಿಕೊಂಡಿರುವ ಡಾಲಿ ಪಿಕ್ಚರ್ಸ್ ಇದೇ ತಿಂಗಳು ಫೆಬ್ರವರಿ 14ಕ್ಕೆ ಸಿನಿಮಾದ ಟೈಟಲ್ ಮತ್ತು ಹೀರೋ ಯಾರು ಎಂಬುದನ್ನು ಅನೌನ್ಸ್ ಮಾಡಲಿದ್ದಾರೆ.

ಇದನ್ನೂ ಓದಿ : ಶೀಘ್ರದಲ್ಲೇ 'ಯು.ಐ' ತೆರೆಗೆ: ಉಪ್ಪಿ ಸಿನಿಮಾ ಮೇಲೆ ಅಭಿಮಾನಿಗಳ ನಿರೀಕ್ಷೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.