ETV Bharat / entertainment

ನಿಜಕ್ಕೂ ಮನೆಯಿಂದ ಹೊರಬಿದ್ರಾ ಲಾಯರ್​ ಜಗದೀಶ್ ​- ರಂಜಿತ್​​; ಏನಿದು ಬಿಗ್​ಬಾಸ್​ ಟ್ವಿಸ್ಟ್​​​? - BIGG BOSS KANNADA 11

ಈ ಹಿಂದೆ ಬಿಗ್​ ಬಾಸ್​ ಸೀಸನ್​ 3ರಲ್ಲೂ ಇದೇ ರೀತಿ ಸಹ ಸ್ಪರ್ಧಿಯೊಬ್ಬರ ಮೇಲೆ ಕೈ ಮಾಡಿ ಹುಚ್ಚ ವೆಂಕಟ್​ ಮನೆಯಿಂದ ಹೊರ ನಡೆದಿದ್ದರು. ಇದೀಗ ಅದೇ ರೀತಿಯ ಘಟನೆ ಮನೆಯಲ್ಲಿ ಮರುಕಳಿಸಿದೆ.

Bigg Boss Kannada 11 new twist in lawyer jagadish and Ranjit elimination
ಬಿಗ್​ ಬಾಸ್​ ಸೀಸನ್​ 11 (ಸಂಗ್ರಹ ಚಿತ್ರ)
author img

By ETV Bharat Entertainment Team

Published : Oct 18, 2024, 2:02 PM IST

ಬೆಂಗಳೂರು: ಬಿಗ್​ ಬಾಸ್​ ಸೀಸನ್​ 11 ಪ್ರಮುಖ ಮನರಂಜನಾ ಅಭ್ಯರ್ಥಿಯಾಗಿದ್ದ ಲಾಯರ್​ ಜಗದೀಶ್​ ಮತ್ತು ರಂಜಿತ್​​ಗೆ ಮನೆಯಿಂದ ಹೊರ ಹೋಗುವಂತೆ ಬಿಗ್​ಬಾಸ್​ ತಾಕಿತ್ತು ಮಾಡಿದ್ದಾರೆ. ಇದರಿಂದ ಇದೀಗ ಮನೆಯಲ್ಲಿ ಅಶಾಂತಿ ಜೊತೆ ದುಃಖದ ವಾತಾವರಣ ನಿರ್ಮಾಣವಾಗಿದೆ. ಬಿಗ್​ ಬಾಸ್​ ಬಿಡುಗಡೆ ಮಾಡಿರುವ ಪ್ರೋಮೋದಲ್ಲಿ ರಂಜಿತ್​ ಲಾಯರ್​ ಜಗದೀಶ್​ ಮೇಲೆ ತಳ್ಳಾಟ ನಡೆದಿರುವುದು ಕಂಡು ಬಂದಿದೆ. ಈ ಹಿಂದೆ ಬಿಗ್​ ಬಾಸ್​ ಸೀಸನ್​ 3ರಲ್ಲೂ ಇದೇ ರೀತಿ ಸಹ ಸ್ಪರ್ಧಿಯೊಬ್ಬರ ಮೇಲೆ ಕೈ ಮಾಡಿ ಹುಚ್ಚ ವೆಂಕಟ್​ ಮನೆಯಿಂದ ಹೊರ ನಡೆದಿದ್ದರು. ಇದೀಗ ಅದೇ ರೀತಿಯ ಘಟನೆ ಮನೆಯಲ್ಲಿ ಮರುಕಳಿಸಿದೆ.

ಏನಿದು ಗಲಾಟೆ?: ಬಿಗ್​ ಬಾಸ್​ ಆರಂಭವಾದಾಗಿನಿಂದ ಲಾಯರ್​ ಜಗದೀಶ್​ ತಾವೇ ಕಿಂಗ್​ ಮೇಕರ್​ ಎಂಬ ಭಾವನೆಯಲ್ಲಿ ಸಹ ಸ್ಪರ್ಧಿಗಳು ಸೇರಿದಂತೆ ಬಿಗ್​​ ಬಾಸ್​ಗೂ ಸವಾಲೆಸೆಯುತ್ತಾ ಬಂದಿದ್ದಾರೆ. ಆದರೆ, ನಿನ್ನೆ ನಡೆದ ಸಂಚಿಕೆಯಲ್ಲಿ ಅವರು ಮಹಿಳಾ ಅಭ್ಯರ್ಥಿಗಳ ವಿರುದ್ಧ ಏಕ ವಚನ ಬಳಕೆ ಮಾಡಿದ್ದಾರೆ. ಇದರಿಂದಾಗಿ ಮನೆಯ ಸದಸ್ಯರ ಆಕ್ರೋಶ ಕಟ್ಟೆ ಒಡೆದು ಚೈತ್ರಾ, ಹಂಸ, ಮಾನಸ, ಭವ್ಯ, ರಂಜಿತ್​. ಉಗ್ರಂ ಮಂಜು ಒಟ್ಟಾಗಿ ಲಾಯರ್​ ಜಗದೀಶ್​ ವಿರುದ್ಧ ತಿರುಗಿಬಿದ್ದಿದ್ದು, ಮನೆ ಅಕ್ಷರಶಃ ರಣರಂಗವಾಗಿದೆ.

ತಳ್ಳಾಟ ನಡೆಸಿದ ಸ್ಪರ್ಧಿಗಳು: ಗೋಲ್ಡ್​ ಸುರೇಶ್​ ಜೊತೆಗೆ ಸಂಭಾಷಣೆ ನಡೆಸುತ್ತಿದ್ದ ಲಾಯರ್​ ಜಗದೀಶ್​​ ಹಂಸ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದು, ಸುರೇಶ್​ ಇದನ್ನು ಖಂಡಿಸಿದ್ದಾರೆ. ಅಲ್ಲದೇ, ಈ ಕುರಿತು ಮನೆಯ ಇತರ ಸದಸ್ಯರಿಗೆ ತಿಳಿಸಿದಾಗ ಅಸಲಿ ಆಟ ಆರಂಭವಾಗಿದೆ. ಲಾಯರ್​ ಜಗದೀಶ್​ ಮಾತಿನಿಂದ ಆಕ್ರೋಶಗೊಂಡ ಮನೆಯ ಇತರ ಸದಸ್ಯರು ಈ ರೀತಿ ಮಾತನಾಡುವುದು ಸರಿಯಲ್ಲ ಎಂದು ಧ್ವನಿ ಏರಿಸಿದ್ದಾರೆ. ಈ ವೇಳೆ ಆರಂಭವಾದ ಕಿತ್ತಾಟ ಕಡೆಗೆ ಪರಿಸ್ಥಿತಿ ಕೈ ಮೀರುವ ಹಂತಕ್ಕೆ ಹೋಗಿದೆ.

ಈ ವೇಳೆ ಸಿಟ್ಟಿನ ಆವೇಶದಲ್ಲಿ ರಂಜಿತ್​, ಲಾಯರ್​ ಜಗದೀಶ್​ ಅವರನ್ನು ತಳ್ಳಿದ್ದಾರೆ. ಈ ವೇಳೆ ಕೈ ಕೈ ಮಿಲಾಯಿಸಿರುವುದನ್ನು ಕಂಡ ಬಿಗ್​ ಬಾಸ್​ ಇಬ್ಬರು ಅಭ್ಯರ್ಥಿಗಳನ್ನು ಮನೆಯಿಂದ ಹೊರ ಹೋಗುವಂತೆ ತಾಕೀತು ಮಾಡಿದ್ದಾರೆ. ಸಿಟ್ಟಿನ ಭರದಲ್ಲಿ ಆದ ತಪ್ಪಿನಿಂದ ಮತ್ತೊಂದು ಅವಕಾಶ ನೀಡುವಂತೆ ರಂಜಿತ್​ ಬಿಗ್​ ಬಾಸ್​ಗೆ ಮನವಿ ಮಾಡಿದರೆ, ಲಾಯರ್​ ಜಗದೀಶ್​ ತಮ್ಮ ಬಟ್ಟೆ ಬರೆಗಳನ್ನು ಸೂಟ್​ಕೇಸ್​ನಲ್ಲಿ ತುಂಬಿಕೊಂಡು ಮನೆಯಿಂದ ಹೊರಡಲು ಸಜ್ಜಾಗಿದ್ದಾರೆ.

ರಂಜಿತ್​ ಪರ ಮನೆಯ ಇತರ ಸ್ಪರ್ಧಿಗಳು ಕೂಡ ಇದು ಸಿಟ್ಟಿನ ಭರದಲ್ಲಿ ಆದ ಅಚಾತುರ್ಯ ಕ್ಷಮಿಸಿ, ಒಂದು ಅವಕಾಶ ನೀಡುವಂತೆ ಕಣ್ಣೀರಿಟ್ಟು ಮನವಿ ಮಾಡಿದ್ದಾರೆ.

ಗೇಟ್​ ಪಾಸ್​ ಖಚಿತವೇ?: ಒಂದು ವೇಳೆ ಪ್ರೋಮೋದಲ್ಲಿ ತೋರಿಸಿರುವಂತೆ ಬಿಗ್​ಬಾಸ್​ ಮನೆಯಿಂದ ಲಾಯರ್​ ಜಗದೀಶ್​ ಹೊರ ನಡೆಯುತ್ತಾರಾ ಎಂಬ ಕುತೂಹಲ ಹಲವರಲ್ಲಿದೆ. ಕಾರಣ, ಬಿಗ್​ ಬಾಸ್​ನ ಪ್ರಮುಖ ಆಕರ್ಷಣೆಯಾಗಿ ಈಗಾಗಲೇ ಲಾಯರ್​ ಜಗದೀಶ್​ ರೂಪುಗೊಂಡಿದ್ದು, ಸಾಕಷ್ಟು ಅಭಿಮಾನಿಗಳನ್ನು ಸಂಪಾದಿಸಿದ್ದಾರೆ. ಇದರಿಂದ ಲಾಯರ್​ ಜಗದೀಶ್​ ಮತ್ತು ರಂಜಿತ್​ ಅವರನ್ನು ಸಂಪೂರ್ಣವಾಗಿಯೇ ಮನೆಯಿಂದ ಹೊರ ಹಾಕಲಾಗುವುದಾ ಅಥವಾ ಅವರಿಗೆ ಬುದ್ದಿ ಬರಲಿ ಎಂದು ಸೀಕ್ರೆಟ್​ ರೂಮ್​ಗೆ ಕಳುಹಿಸುತ್ತಾರಾ ಎಂಬ ಅನುಮಾನ ಕೂಡ ವ್ಯಕ್ತವಾಗಿದ್ದು, ಈ ಎಲ್ಲಾ ಪ್ರಶ್ನೆಗಳಿಗೆ ಇಂದಿನ ಸಂಚಿಕೆಯಲ್ಲಿ ಉತ್ತರ ದೊರೆಯಲಿದೆ.

ಇದನ್ನೂ ಓದಿ: 'ಸದ್ದು', ಯಾರೂ ತುಟಿಕ್​ ಪಿಟಿಕ್​ ಅನ್ನೋ ಹಾಗಿಲ್ಲ! ತಾಳ್ಮೆ ಕಳೆದುಕೊಂಡ ಬಿಗ್ ​​ಬಾಸ್​: ಸ್ಪರ್ಧಿಗಳ ಬಗ್ಗೆ ನಿಮ್ಮ ಅಭಿಪ್ರಾಯವೇನು?

ETV Bharat Logo

Copyright © 2025 Ushodaya Enterprises Pvt. Ltd., All Rights Reserved.