ನವದೆಹಲಿ: ದೇಶದಲ್ಲಿನ ಬ್ಯಾಂಕ್ಗಳು ಮಂದಗತಿಯ ಠೇವಣಿ ಬೆಳವಣಿಗೆಯ ಸವಾಲನ್ನು ಎದುರಿಸುತ್ತಿದೆ ಎಂದು ಇತ್ತೀಚಿನ ಎಸ್ಬಿಐ ಸೆಕ್ಯೂರಿಟಿ ವರದಿ ತಿಳಿಸಿದೆ. ಈ ಠೇವಣಿ ಬೆಳವಣಿಗೆಯಲ್ಲಿನ ಮಂದಗತಿ ಪರಿಣಾಮವಾಗಿ ಬ್ಯಾಂಕ್ಗಳು ಬಂಡವಾಳದ ಅವಶ್ಯಕತೆ ಪೂರೈಕೆಗೆ ಹೊರಗಿನ ಮಾರುಕಟ್ಟೆಯಿಂದ ಬಾಹ್ಯ ಸಾಲ ಪಡೆಯುವಂತೆ ಆಗಿದೆ. ಮಾರುಕಟ್ಟೆಯ ಬಾಹ್ಯ ಸಾಲಗಳ ಮೇಲೆ ಬೆಳೆಯುತ್ತಿರುವ ಅವಲಂಬನೆ ಜೊತೆಗೆ ಬ್ಯಾಂಕ್ ಠೇವಣಿ ಆಕರ್ಷಿಸುವಲ್ಲಿನ ಸ್ಪರ್ಧೆಯ ತೀವ್ರತೆ ನಿವ್ವಳ ಬಡ್ಡಿ ಮಾರ್ಜಿನ್ (ಎನ್ಐಎಂ) ಮೇಲೆ ಒತ್ತಡ ಹೆಚ್ಚಿಸಿದೆ ಎಂದು ತಿಳಿಸಲಾಗಿದೆ.
ಎನ್ಐಎಂ ಎಂಬುದು ಬ್ಯಾಂಕುಗಳಿಂದ ಉತ್ಪತ್ತಿಯಾಗುವ ಬಡ್ಡಿ ಆದಾಯ ಮತ್ತು ಠೇವಣಿದಾರರಿಗೆ ಪಾವತಿಸುವ ಬಡ್ಡಿ ನಡುವಿನ ವ್ಯತ್ಯಾಸವನ್ನು ಪ್ರತಿನಿಧಿಸುತ್ತದೆ. ಬ್ಯಾಂಕ್ನ ಲಾಭಕ್ಕೆ ಇದು ಪ್ರಮುಖವಾದ ಅಂಶವೂ ಆಗಿದೆ. ಬಾಹ್ಯ ಸಾಲ ನಿಧಿ ಹೆಚ್ಚಾದಂತೆ ಬ್ಯಾಂಕ್ಗಳು ತಮ್ಮ ಮಾರ್ಜಿನ್ ನಿರ್ವಹಣೆಯ ಕಾಪಾಡಿಕೊಳ್ಳಲು ಕಷ್ಟಪಡುವಂತೆ ಆಗುತ್ತದೆ ಎಂಬುದನ್ನು ಇದು ತೋರಿಸುತ್ತದೆ.
ಈ ವರದಿಯು ಜೂನ್ 2024ರವರೆಗೆ ವಲಯದ ಸಾಲ ನಿಯೋಜನೆಯ ಒಳನೋಟವನ್ನು ನೀಡುತ್ತದೆ. ಸಾಲದ ಬೆಳೆವಣಿಗೆಯಿಂದ ಕೃಷಿ ಮತ್ತು ಸಂಬಂಧಿಸಿದ ಚಟುವಟಿಕೆ ಕುಗ್ಗಿದೆ ಎಂಬುದು ವರದಿಯಲ್ಲಿ ಗಮನಿಸಬೇಕಾದ ಗಮನಾರ್ಹ ಅಂಶ. ಜೊತೆಗೆ ಈ ಬೆಳವಣಿಗೆ 2023ರಲ್ಲಿ 19.7ರಷ್ಟಿದ್ದು, ಜೂನ್ 2024ರಲ್ಲಿ 17.4ಕ್ಕೆ ಇಳಿಕೆ ಕಂಡಿದೆ.
ಈ ಮಂದಗತಿಯು ವಲಯದಲ್ಲಿ ಸಾಲ ನೀಡುವ ಕುರಿತು ಅದರಲ್ಲೂ ಸಾಲ ಮರುಪಾವತಿ ಅಪಾಯ ಅಥವಾ ಸಾಲದ ವೇಡಿಕೆಯನ್ನು ಕಡಿಮೆ ಮಾಡುವ ಕುರಿತು ಎಚ್ಚರಿಕೆಯಿಂದ ಇರುವಂತೆ ಸೂಚಿಸುತ್ತದೆ. ಇದಕ್ಕೆ ವಿರುದ್ಧವಾಗಿ ವರದಿಯಲ್ಲಿ, ಕೈಗಾರಿಕೆ ಸಾಲವೂ ಸಾಧಾರಣ ಹೆಚ್ಚಳ ಕಂಡಿದೆ. ವರ್ಷದಿಂದ ವರ್ಷಕ್ಕೆ 8.1ರಷ್ಟು ಏರಿಕೆಯಾಗಿದೆ ಎಂದು ವರದಿ ತಿಳಿಸಿದೆ.
ಜೂನ್ 24ಕ್ಕೆ ವಲಯದ ನಿಯೋಜನೆ ದತ್ತಾಂಶ, ಕೃಷಿಯಲ್ಲಿನ ಸಾಲದ ಬೆಳವಣಿಗೆ ಮತ್ತು ಸಂಬಂಧಿಸಿದ ಚಟುವಟಿಕೆ ಜೂನ್ 2023ರಲ್ಲಿ 19.7ಇದ್ದು, 2024ರಲ್ಲಿ 17.4ರಷ್ಟಿದೆ ಎಂದು ತೋರಿಸಿದೆ. ಕೈಗಾರಿಕೆ ಸಾಲದ ಬೆಳವಣಿಗೆ ವರ್ಷದಿಂದ ವರ್ಷಕ್ಕೆ 8.1ರಷ್ಟು ಹೆಚ್ಚಾಗಿದೆ ಎಂದು ವರದಿಯಲ್ಲಿ ಹೇಳಲಾಗಿದೆ.
ಡಿಜಿಟಲ್ ಪಾವತಿ ಸಮಯದಲ್ಲಿ, ಯುಪಿಐ ನಿರಂತರವಾಗಿ ಬಲವಾದ ಪ್ರದರ್ಶನ ತೋರಿದೆ. 2024ರ ಜುಲೈನಲ್ಲಿ ಯುಪಿಐ ವರ್ಗಾವಣೆ 14.4 ಬಿಲಿಯನ್ ತಲುಪಿದ್ದು, ವರ್ಷದಿಂದ ವರ್ಷಕ್ಕೆ ಶೇ45ರಷ್ಟು ಪ್ರತಿನಿಧಿಸುತ್ತಿದೆ. ಈ ವರ್ಗಾವಣೆಯ ಮೌಲ್ಯವೂ ದೃಢವಾಗಿ ಉಳಿದಿದೆ. ವರ್ಷದಿಂದ ವರ್ಷಕ್ಕೆ ಶೇ 35ರಷ್ಟು ನೋಂದಣಿ ನಡೆಸುವ ಮೂಲಕ 20.0 ಟ್ರಿಲಿಯನ್ ದಾಟಿದೆ.
ಆದಾಗ್ಯೂ ವರದಿಯಲ್ಲಿ, ವರ್ಷದಿಂದ ವರ್ಷಕ್ಕೆ ವರ್ಗಾವಣೆ ಮೌಲ್ಯ ಮತ್ತು ಪರಿಮಾಣವೂ 2024ರ ಮಾರ್ಚ್ನಿಂದ ಮಂದಗತಿ ಆಗಿದೆ ಎಂದು ತಿಳಿಸಲಾಗಿದೆ.
ಇದನ್ನೂ ಓದಿ: ಸಾರ್ವಕಾಲಿಕ ದಾಖಲೆ ಬರೆದ ಭಾರತ ವಿದೇಶಿ ವಿನಿಮಯ ಮೀಸಲು: ದೇಶದ ಆರ್ಥಿಕತೆಗೆ ಬಂತು ಭಾರಿ ಬಲ